ಕನ್ನಡ ಸುದ್ದಿ  /  Lifestyle  /  Neyyappam Recipe For Varamahalaskhmi Festival

Traditional Recipe: ವರಮಹಾಲಕ್ಷ್ಮಿ ಹಬ್ಬಕ್ಕೆ ಸಾಂಪ್ರದಾಯಿಕ ನೈಯಪ್ಪ ತಯಾರಿಸಿ...ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವರಮಹಾಲಕ್ಷ್ಮಿ ಹಬ್ಬದಂದು ಒಬ್ಬೊಬ್ಬರು ಒಂದೊಂದು ರೀತಿಯ ನೈವೇದ್ಯ ಮಾಡಿ ಲಕ್ಷ್ಮಿಗೆ ಅರ್ಪಿಸುತ್ತಾರೆ. ಈ ದಿನದಂದು ಮಹಾಲಕ್ಷ್ಮಿಗೆ ತಯಾರಿಸುವ ಪ್ರಸಾದಗಳಲ್ಲಿ ನೈಯಪ್ಪ ಕೂಡಾ ಒಂದು. ಇದನ್ನ ನೈಯಪ್ಪಂ ಎಂದೂ ಕರೆಯಲಾಗುತ್ತೆ. ಇದೊಂದು ಸಾಂಪ್ರದಾಯಿಕ ತಿಂಡಿ.

ವರಮಹಾಲಕ್ಷ್ಮಿ ಹಬ್ಬಕ್ಕೆ ನೈಯಪ್ಪ ರೆಸಿಪಿ ( PC: ಚೈತ್ರಾಸ್ ಅಭಿರುಚಿ)
ವರಮಹಾಲಕ್ಷ್ಮಿ ಹಬ್ಬಕ್ಕೆ ನೈಯಪ್ಪ ರೆಸಿಪಿ ( PC: ಚೈತ್ರಾಸ್ ಅಭಿರುಚಿ)

ವರಮಹಾಲಕ್ಷಿ ಹಬ್ಬಕ್ಕೆ ಇನ್ನು 3 ದಿನಗಳಷ್ಟೇ ಬಾಕಿ ಇದೆ. ಈ ವಿಶೇಷ ಹಬ್ಬಕ್ಕಾಗಿ ಹಲವರು ತಿಂಗಳಿನಿಂದಲೇ ತಯಾರಿ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಮಾರುಕಟ್ಟೆಗೆ ತೆರಳಿ ಹಬ್ಬಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ಖರೀದಿಸಿ ತಂದಿದ್ದಾರೆ.

ಇನ್ನು ವರಮಹಾಲಕ್ಷ್ಮಿ ಹಬ್ಬದಂದು ಒಬ್ಬೊಬ್ಬರು ಒಂದೊಂದು ರೀತಿಯ ನೈವೇದ್ಯ ಮಾಡಿ ಲಕ್ಷ್ಮಿಗೆ ಅರ್ಪಿಸುತ್ತಾರೆ. ಈ ದಿನದಂದು ಮಹಾಲಕ್ಷ್ಮಿಗೆ ತಯಾರಿಸುವ ಪ್ರಸಾದಗಳಲ್ಲಿ ನೈಯಪ್ಪ ಕೂಡಾ ಒಂದು. ಇದನ್ನ ನೈಯಪ್ಪಂ ಎಂದೂ ಕರೆಯಲಾಗುತ್ತೆ. ಇದೊಂದು ಸಾಂಪ್ರದಾಯಿಕ ತಿಂಡಿ. ತಯಾರಿಸುವುದು ಕೂಡಾ ಬಹಳ ಸುಲಭ. ಬಹಳ ಕಡಿಮೆ ಸಾಮಗ್ರಿಗಳಲ್ಲಿ ಹಾಗೂ ಕಡಿಮೆ ಅವಧಿಯಲ್ಲಿ ನೈಯಪ್ಪ ತಯಾರಿಸುವುದು ಹೇಗೆ ಅನ್ನೋದನ್ನು ಚೈತ್ರ ಹೇಳಿಕೊಡುತ್ತಾರೆ.

ಬೇಕಾಗುವ ಸಾಮಗ್ರಿಗಳು

ಮಾವಿನ ಹಣ್ಣು - 1

ಮೈದಾಹಿಟ್ಟು/ಗೋಧಿಹಿಟ್ಟು - 1 1/2 ಕಪ್

ಸಕ್ಕರೆ - 1/2 ಕಪ್

ಹಾಲು - 1 ಕಪ್

ಎಣ್ಣೆ - ಕರಿಯಲು

ಉಪ್ಪು - ಚಿಟಿಕೆ

ತಯಾರಿಸುವ ವಿಧಾನ

ಮಾವಿನ ಹಣ್ಣು ಸಿಪ್ಪೆ ಬಿಡಿಸಿ ತಿರುಳನ್ನು ಮಿಕ್ಸಿಯಲ್ಲಿ ಗ್ರೈಂಡ್ ಮಾಡಿಕೊಳ್ಳಿ.

ಒಂದು ಬೌಲ್​​​ನಲ್ಲಿ ಮೈದಾ/ಗೋಧಿಹಿಟ್ಟು, ಉಪ್ಪು, ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ.

ಇದರೊಂದಿಗೆ 1 ಸ್ಪೂನ್ ಎಣ್ಣೆ ಸೇರಿಸಿ ಮತ್ತೆ ಮಿಕ್ಸ್ ಮಾಡಿ

ಜೊತೆಗೆ ಮಾವಿನ ಹಣ್ಣಿನ ಪ್ಯೂರಿ ಸೇರಿಸಿ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ, ಮಿಶ್ರಣ ಗಟ್ಟಿಯಾದರೆ ಸ್ವಲ್ಪ ಹಾಲು ಸೇರಿಸಿಕೊಳ್ಳಿ.

ಮಿಶ್ರಣ ರೆಡಿಯಾಗುತ್ತಿದ್ದಂತೆ ಒಂದು ಸೌಟು ಅಥವಾ ದೊಡ್ಡ ಸ್ಪೂನ್ ಸಹಾಯದಿಂದ ಬ್ಯಾಟರನ್ನು ಎಣ್ಣೆಗೆ ಬಿಟ್ಟು ಕರಿಯಿರಿ.

ಎರಡೂ ಕಡೆ ಕಂದು ಬಣ್ಣ ಬರುವವರೆಗೂ ಕರಿದು ಪ್ಲೇಟ್​​​ಗೆ ವಗಾಯಿಸಿ

ವರಮಹಾಲಕ್ಷ್ಮಿ ಹಬ್ಬಕ್ಕೆ ಸಾಂಪ್ರದಾಯಿಕ ನೈಯಪ್ಪ ರೆಡಿ

ಗಮನಿಸಿ: ಮನೆಯಲ್ಲಿ ಮಾವಿನ ಹಣ್ಣು ಇರದಿದ್ದರೆ ಬಾಳೆಹಣ್ಣಿನಿಂದ ಕೂಡಾ ನೈಯಪ್ಪ ಮಾಡಬಹುದು.

ಇದನ್ನು ನೈವೇದ್ಯವಾಗಿ ಬಳಸುವುದರಿಂದ ಕೆಲವರು ಬೇಕಿಂಗ್ ಸೋಡಾ ಬಳಸುವುದಿಲ್ಲ, ಅದು ನಿಮ್ಮ ಆಯ್ಕೆಗೆ ಬಿಟ್ಟದ್ದು

ಸಕ್ಕರೆ ಬದಲಿಗೆ ಬೆಲ್ಲದಿಂದ ಕೂಡಾ ನೈಯಪ್ಪ ತಯಾರಿಸಬಹುದು

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ನೋಡಿ

https://www.youtube.com/watch?v=iTlDGq0RA5s

ವಿಭಾಗ