ನೀವು ಎಷ್ಟೇ ಬ್ಯುಸಿ ಆಗಿದ್ದರೂ ನಿಮ್ಮ ಮಕ್ಕಳನ್ನು ಈ ವಿಷಯದಲ್ಲಿ ಮಾತ್ರ ಕಡೆಗಣಿಸಬೇಡಿ, ಅವರ ಬದುಕನ್ನು ನೀವೇ ಹಾಳು ಮಾಡಬೇಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಎಷ್ಟೇ ಬ್ಯುಸಿ ಆಗಿದ್ದರೂ ನಿಮ್ಮ ಮಕ್ಕಳನ್ನು ಈ ವಿಷಯದಲ್ಲಿ ಮಾತ್ರ ಕಡೆಗಣಿಸಬೇಡಿ, ಅವರ ಬದುಕನ್ನು ನೀವೇ ಹಾಳು ಮಾಡಬೇಡಿ

ನೀವು ಎಷ್ಟೇ ಬ್ಯುಸಿ ಆಗಿದ್ದರೂ ನಿಮ್ಮ ಮಕ್ಕಳನ್ನು ಈ ವಿಷಯದಲ್ಲಿ ಮಾತ್ರ ಕಡೆಗಣಿಸಬೇಡಿ, ಅವರ ಬದುಕನ್ನು ನೀವೇ ಹಾಳು ಮಾಡಬೇಡಿ

Parenting: ನಿಮ್ಮ ಮಕ್ಕಳ ಅಗತ್ಯತೆ ಏನಿದೆ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು. ಕೆಲಸ ಅಥವಾ ಇತರ ಜವಾಬ್ದಾರಿಗಳಲ್ಲಿ ನೀವು ಮುಳುಗಿ ಹೋಗಿದ್ದರೂ ನಿಮ್ಮ ಮಕ್ಕಳಿಗಾಗಿ ಕೆಲ ಸಮಯವನ್ನು ಮೀಸಲಿಡಲೇಬೇಕು. ಇಲ್ಲವಾದರೆ ಮಕ್ಕಳ ಖಿನ್ನತೆಗೆ ನೀವೇ ಕಾರಣರಾಗುತ್ತೀರಿ.

ಅಳುತ್ತಿರುವಾಗ ಮಕ್ಕಳನ್ನು ನಿರ್ಲಕ್ಷಿಸುವುದು ಸರಿಯಲ್ಲ
ಅಳುತ್ತಿರುವಾಗ ಮಕ್ಕಳನ್ನು ನಿರ್ಲಕ್ಷಿಸುವುದು ಸರಿಯಲ್ಲ

ಪೋಷಕರು ಕೆಲಸ ಅಥವಾ ಇತರ ಜವಾಬ್ದಾರಿಗಳಲ್ಲಿ ಮುಳುಗಿ ಹೋಗಿ ತಮ್ಮ ಮಕ್ಕಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಬೇಕು ಎಂದರೂ ಕೆಲವರಿಗೆ ತಮ್ಮ ಮಕ್ಕಳಿಗಾಗಿ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅವರ ಕಾಳಜಿ ಮಾಡಬೇಕು ಎಂದು ಅಂದುಕೊಳ್ಳುವುದು ಬಿಟ್ಟರೆ ಮತ್ತೇನು ಮಾಡಲಾಗದ ಪರಿಸ್ಥಿತಿಯಲ್ಲಿ ಹಲವರಿದ್ದಾರೆ. ತಂದೆ, ತಾಯಿಯರಿಗೆ ಎಷ್ಟೇ ಕೆಲಸ ಇದ್ದರೂ ಕೆಲವೊಂದು ವಿಚಾರವನ್ನು ನೆಗ್ಲೆಕ್ಟ್‌ ಮಾಡಬಾರದು.

ಪೋಷಕರು ತಮ್ಮ ಮಕ್ಕಳ ಯಾವುದೇ ಬೇಡಿಕೆಗಳನ್ನೂ ತಿರಸ್ಕರಿಸದೇ ಅವರಿಗೆ ಏನು ಬೇಕು ಎಂಬುದನ್ನು ಅರಿತುಕೊಂಡು ಅವರ ಜೊತೆ ಬಾಳುವುದು ತುಂಬಾ ಮುಖ್ಯ. ಮಕ್ಕಳಿಗೂ ತಮ್ಮ ತಂದೆ ಹಾಗೂ ತಾಯಿ ತಮ್ಮ ಮಾತು ಕೇಳಬೇಕು, ನಮ್ಮ ಜೊತೆ ಸಮಯ ಕಳೆಯಬೇಕು ಎಂಬ ಆಸೆ ಇರುತ್ತದೆ. ಈ ಎಲ್ಲ ಆಸೆಗಳು ನಿರಾಸೆಯಾದಾಗ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ. ತಮ್ಮ ಆಸೆಗಳನ್ನು ತಮ್ಮೊಳಗೇ ಇಟ್ಟುಕೊಂಡು ಕೊರಗಲು ಆರಂಭಿಸುತ್ತಾರೆ. ಯಾವಾಗಲೂ ನಿಮ್ಮನ್ನು ಕಂಡರೆ ಭಯವಾದಂತೆ ಇರುತ್ತಾರೆ. ಈ ರೀತಿ ನಿಮ್ಮ ಮಕ್ಕಳು ಆಗುವ ಮೊದಲು ನೀವು ಎಚ್ಚೆತ್ತುಕೊಳ್ಳಬೇಕು.

ಅಳುತ್ತಿರುವಾಗ ಮಕ್ಕಳನ್ನು ನಿರ್ಲಕ್ಷಿಸುವುದು ಸರಿಯಲ್ಲ:
ನಿಮ್ಮ ಮಕ್ಕಳು ಅಳುತ್ತಿದ್ದಾರೆ ಎಂದರೆ ಆ ಸಮಯದಲ್ಲಿ ನೀವು ಅವರನ್ನು ಸಮಾಧಾನ ಮಾಡಬೇಕು. ಏನಾಯಿತು? ಎಂದು ಪ್ರಶ್ನೆ ಮಾಡಬೇಕು. ಅವರಿಗೆ ಉಂಟಾದ ನೋವು ಏನು ಎಂಬುದನ್ನು ಕೇಳಿ ತಿಳಿದುಕೊಳ್ಳಬೇಕು. ಅವರಿಗೆ ಮಾನಸಿಕವಾಗಿ ನೋವುಂಟಾಗಿದೆಯೋ ಅಥವಾ ದೈಹಿಕವಾಗಿ ನೋವಾಗಿದೆಯೋ? ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು.

ಮಾತುಗಳನ್ನು ಆಲಿಸದೇ ಇರುವುದು:
ನಿಮ್ಮ ಮಗು ತುಂಬಾ ಆಸಕ್ತಿಯಿಂದ ಒಂದ ವಿಚಾರವನ್ನು ಹೇಳಲು ಬಂದರೆ ನೀವು ಅವರ ಮಾತನ್ನು ಕೇಳಬೇಕು. ಹೌದಾ! ವಾವ್! ಈ ರೀತಿ ಮಾತುಗಳಿಂದ ನೀವು ಅವರನ್ನು ಸಂತೋಷಪಡಿಸಬೇಕು. ಎಲ್ಲ ಮಾತುಗಳಿಗೂ ನಾನು ಸಪೋರ್ಟಿವ್ ಆಗಿ ಇದ್ದೇನು ನೀನು ಒಳ್ಳೆಯ ಮಾತುಗಾರ ಎಂದೆಲ್ಲ ಅವರನ್ನು ಹುರಿದುಂಬಿಸಬೇಕು. ಅವರೇನಾದರೂ ಕೆಟ್ಟ ಮಾತನ್ನು ಕಲಿತಿದ್ದರೆ ಅದನ್ನು ಆಗಲೇ ಸರಿಪಡಿಸಬೇಕು.

ಇದನ್ನೂ ಓದಿ: Monday Motivation: ಕೋಪವನ್ನು ನಿಯಂತ್ರಿಸುವುದು ಹೇಗೆ? ಕ್ರೋಧಾದ್ಭವತಿ ಸಮ್ಮೋಹಃ... ವಿಪರೀತ ಕೋಪಿಷ್ಠರಿಗೆ ಸೋಮವಾರದ ಸ್ಪೂರ್ತಿದಾಯಕ ಮಾತು

ಅವರ ಆಸಕ್ತಿಗಳನ್ನು ಕಡೆಗಣಿಸುವುದು:
ನಿಮ್ಮ ಮಕ್ಕಳಿಗೆ ಚಿತ್ರ ಬಿಡಿಸುವುದರಲ್ಲಿ ಆಸಕ್ತಿ ಇದೆ ಎಂದರೆ ಅವರ ಆ ಕಲೆಗೆ ಉತ್ತೇಜನ ನೀಡಬೇಕು. ಅಥವಾ ಅವರು ಹಾಡುವುದನ್ನು, ನೃತ್ಯ ಮಾಡುವುದನ್ನು ಇಷ್ಟಪಟ್ಟರೆ ಅದಕ್ಕೂ ನೀವು ಆದ್ಯತೆ ನೀಡಬೇಕು. ಯಾವಾಗಲೂ ಓದು, ಓದು ಎಂದು ಒತ್ತಾಯ ಮಾಡುವುದಷ್ಟೇ ನಿಮ್ಮ ಜವಾಬ್ಧಾರಿ ಎಂದು ನೀವು ತಿಳಿದುಕೊಂಡು ಅವರ ಪ್ರತಿಭೆಯನ್ನು ಕಡೆಗಣಿಸುವುದು ಸರಿ ಅಲ್ಲ.

ಅನಾರೋಗ್ಯದ ಸಂದರ್ಭದಲ್ಲಿ ಕೇರ್ ಮಾಡದೇ ಇರುವುದು
ಮಕ್ಕಳ ಅನಾರೋಗ್ಯದ ಸಂದರ್ಭದಲ್ಲಿ ನೀವು ಅವರ ಜೊತೆಗೇ ಇದ್ದು ನೋಡಿಕೊಳ್ಳಬೇಕು. ಕೇವಲ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಂದರೆ ಸಾಲದು. ಅವರನ್ನು ಹತ್ತಿರದಿಂದ ನೋಡಿಕೊಳ್ಳಬೇಕು. ಅವರಿಗೆ ಭಯವಾದ ಸಂದರ್ಭದಲ್ಲಿ ನೀವು ಅವರಿಗೆ ಧೈರ್ಯ ತುಂಬುತ್ತಿರಬೇಕು.

ಮಗುವಿನ ಅಗತ್ಯತೆಗಳಿಗೆ ಸ್ಪಂದಿಸದೇ ಇರುವುದು
ನಿಮ್ಮ ಮಗುವಿಗೆ ಏನು ಅಗತ್ಯವಿದೆ ಎಂದು ನೀವು ಅವರಿಂದ ಕೇಳಿ ತಿಳಿದುಕೊಳ್ಳಿ. ಶಾಲಾ ಕಾರ್ಯಕ್ರಮಗಳು ಮತ್ತು ಪೋಷಕ-ಶಿಕ್ಷಕರ ಸಮ್ಮೇಳನಗಳನ್ನು ಮಿಸ್‌ ಮಾಡದೆ ಅಟೆಂಡ್ ಆಗಿ. ಆಗ ನಿಮ್ಮ ಮಕ್ಕಳು ನಿಮಗೆ ಹೇಳದೆ ಏನನ್ನಾದರೂ ಮುಚ್ಚಿಟ್ಟರೂ ಅದು ನಿಮಗೆ ತಿಳಿಯುತ್ತದೆ.

Whats_app_banner