ಎಷ್ಟೇ ಉಜ್ಜಿದರೂ ಅಡುಗೆ ಮನೆಯ ಟೈಲ್ಸ್‌ ಕ್ಲೀನ್‌ ಆಗ್ತಾ ಇಲ್ಲ? ಶುಚಿಗೊಳಿಸಲು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್‌
ಕನ್ನಡ ಸುದ್ದಿ  /  ಜೀವನಶೈಲಿ  /  ಎಷ್ಟೇ ಉಜ್ಜಿದರೂ ಅಡುಗೆ ಮನೆಯ ಟೈಲ್ಸ್‌ ಕ್ಲೀನ್‌ ಆಗ್ತಾ ಇಲ್ಲ? ಶುಚಿಗೊಳಿಸಲು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್‌

ಎಷ್ಟೇ ಉಜ್ಜಿದರೂ ಅಡುಗೆ ಮನೆಯ ಟೈಲ್ಸ್‌ ಕ್ಲೀನ್‌ ಆಗ್ತಾ ಇಲ್ಲ? ಶುಚಿಗೊಳಿಸಲು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್‌

ಅಡುಗೆ ಮನೆಯ ಟೈಲ್ಸ್‌ ಕಲೆಗಳನ್ನು ಹೋಗಲಾಡಿಸಲು ತುಂಬಾ ಕಷ್ಟ ಪಡುತ್ತಿದ್ದೀರಾ? ಹಾಗಾದ್ರೆ ಇಲ್ಲಿ ಕೆಲವೊಂದಷ್ಟು ಸರಳ ಹಾಗೂ ಸುಲಭವಾದ ಐಡಿಯಾ ಇದೆ. ನೀವು ಇದನ್ನು ನಿಮ್ಮ ಮನೆಯಲ್ಲಿ ಟ್ರೈ ಮಾಡಿ. ಈ ಕಲೆಗಳನ್ನು ಹೋಗಲಾಡಿಸಲು ಹೆಚ್ಚು ಹುಳಿಯಾದ ಪದಾರ್ಥಗಳನ್ನು ಬಳಸಿ.

 ಟೈಲ್ಸ್‌
ಟೈಲ್ಸ್‌

ಅಡುಗೆ ಮನೆಯ ಗೋಡೆಗಳ ಟೈಲ್ಸ್ ಬೇಗ ಹಾಳಾಗುತ್ತದೆ. ಯಾಕೆಂದರೆ ಅಡುಗೆ ಮಾಡುವಾಗ ಗೋಡೆಗಳಿಗೆ ಪದಾರ್ಥಗಳು ಅಂಟಿಕೊಳ್ಳುತ್ತವೆ. ಒಗ್ಗರಣೆ ಮಾಡುವ ಸಂದರ್ಭದಲ್ಲಿ ಮತ್ತು ಮಿಕ್ಸಿ ಜಾರ್‌ನಲ್ಲಿ ಬೀಸುವಾಗ ಅದರಿಂದ ಹೊರಬಂದ ಕೆಲ ಪದಾರ್ಥಗಳು ಗೋಡೆಗೆ ಸಿಡಿಯುತ್ತದೆ. ಗೋಡೆಗೆ ಅಂಟಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಟೈಲ್ಸ್‌ ಬೇಗ ಹಾಳಾಗುತ್ತದೆ. ಹೀಗೆಲ್ಲ ಆದರೆ ನಿಮ್ಮ ಮನೆಯ ಅಂದ ಹಾಲಾಗುತ್ತದೆ. ಹಣ ಖರ್ಚು ಮಾಡಿ ಮಾಡಿಸಿಕೊಂಡ ಸೌಕರ್ಯಗಳು ಬೇಡ ಎನಿಸಲು ಆರಂಭವಾಗುತ್ತದೆ. ಕ್ಲೀನ್ ಮಾಡಲು ನೀವು ಹೆಣಗಾಡುತ್ತೀರಾ.

ವಿನೆಗರ್ ಮತ್ತು ನೀರು

ಗೋಡೆಗೆ ಟೈಲ್ಸ್ ಹಾಳಾಗಬಾರದು ಎಂದರೆ ನೀವು ಅದನ್ನು ಆಗಾಗ ಕ್ಲೀನ್ ಮಾಡುತ್ತಾ ಇರಬೇಕು. ಆದರೆ ಯಾವ ರೀತಿ ಕ್ಲೀನ್ ಮಾಡಿದರು ಅದು ಸ್ವಚ್ಛವಾಗುತ್ತಿಲ್ಲ ಎಂದು ನಿಮಗೆ ಅನಿಸಿದರೆ, ನಾವು ಇಲ್ಲಿ ನೀಡಿದ ಕೆಲವು ಟಿಪ್ಸ್‌ಗಳನ್ನು ನೀಡಿದ್ದೇವೆ ಟ್ರೈ ಮಾಡಿ ನೋಡಿ. ಇವುಗಳು ನಿಮಗೆ ಖಂಡಿತ ಪ್ರಯೋಜನಕ್ಕೆ ಬರುತ್ತವೆ. ಸಾಮಾನ್ಯವಾಗಿ ಟೈಲ್ಸ್‌ಗಳು ಹುಳಿ ಪದಾರ್ಥಗಳು ತಾಗಿದಾಗ ಕ್ಲೀನ್ ಆಗುತ್ತದೆ. ಬೇಕಿಂಗ್ ಸೋಡಾ ಮತ್ತು ನೀರನ್ನು ಬಳಸಿ ನೀವು ಟೈಲ್ಸ್ ಗಳನ್ನು ಸ್ವಚ್ಛ ಮಾಡಬಹುದು. ಬೇಕಿಂಗ್ ಸೋಡಾ ಮತ್ತು ನೀರನ್ನು ಮಿಕ್ಸ್ ಮಾಡಿ ಅದನ್ನು ಸ್ಕ್ರಬ್ಬರ್ ನಿಂದ ಗೋಡೆಗೆ ಹಚ್ಚಿ 30 ನಿಮಿಷಗಳ ಕಾಲ ಹಾಗೆ ಬಿಡಿ. ಅದಾದ ನಂತರ ಮತ್ತೊಮ್ಮೆ ಸ್ಕ್ರಬ್ ಮಾಡಿ. ಈಗ ತೊಳೆಯಿರಿ. ಗೋಡೆ ಮೇಲಿನ ಕಲೆಗಳು ಮಾಯವಾಗುತ್ತದೆ.

ಪಾತ್ರೆ ತೊಳೆಯುವ ಸೋಪ್

ನೀವು ಪಾತ್ರೆ ತೊಳೆಯುವ ಸೋಪನ್ನು ಸ್ಕ್ರಬ್ಬರ್ ಗೆ ಹಾಕಿ ನಂತರ ಅದೇ ಸ್ಕ್ರಬ್ಬರ್ ನಲ್ಲಿ ಗೋಡೆಗಳನ್ನು ಉಚ್ಚಿ. ಉಚ್ಚಿದ ನಂತರ ಒಂದು ಬಟ್ಟೆಯನ್ನು ತೆಗೆದುಕೊಂಡು ಎಲ್ಲವನ್ನು ಒರೆಸಿ. ನಂತರ ನೀರು ಹಾಕಿ ತೊಳೆಯಿರಿ. ಇಷ್ಟು ಮಾಡಿದರೂ ಟೈಲ್ಸ್‌ ಕ್ಲೀನ್ ಆಗುತ್ತದೆ. ಆದರೆ ನೀವು ನಿಮ್ಮ ಕೈ ಸುರಕ್ಷತೆಯನ್ನು ಕಾಪಾಡಿಕೊಳ್ಳಿ. ಪರಿಮಳದಾಯಕ ಸೋಪ್ ಬಳಸಿ ಕೈ ತೊಳೆದುಕೊಳ್ಳಿ.

ತುಂಬಾ ಉಜ್ಜಬೇಡಿ

ಯಾವಾಗಲೂ ತುಂಬಾ ಉಜ್ಜಿದರೆ ಗ್ಲೇಜ್ ಹಾಳಾಗುತ್ತದೆ. ನಂತರ ಅದು ಎಷ್ಟೇ ಸ್ವಚ್ಛವಾದರೂ ಚಂದ ಕಾಣುವುದಿಲ್ಲ. ನೀವು ಎಷ್ಟೋ ದಿನಗಳ ನಂತರ ಇದನ್ನು ಕ್ಲೀನ್ ಮಾಡಿದರೆ ಹಳೆ ಕಲೆಗಳು ಹಾಗೆ ಗಟ್ಟಿಯಾಗಿ ಉಳಿದುಕೊಂಡು ಬಿಡುತ್ತವೆ. ಆ ಕಾರಣಕ್ಕಾಗಿ ನೀವು ತಿಂಗಳಿಗೆ ಒಮ್ಮೆಯಾದರೂ ನಿಮ್ಮ ಮನೆಯ ಕಿಚನ್ ಟೈಲ್ಸ್ ಕ್ಲೀನ್ ಮಾಡಲೇಬೇಕು.

ಲಿಂಬು ಬಳಸಿ
ಆಗಲೇ ತಿಳಿಸಿದಂತೆ ಹುಳಿ ಅಂಶ ಇದ್ದಲ್ಲಿ ಟೈಲ್ಸ್‌ ಬೇಗ ಕ್ಲೀನ್ ಆಗುತ್ತದೆ. ಆ ಕಾರಣದಿಂದ ನೀವು ಬಳಸಿದ ಲಿಂಬು ಸಿಪ್ಪೆ ಇದ್ದರೆ ಅದನ್ನು ಉಪ್ಪಿನಲ್ಲಿ ನೆನೆಸಿಟ್ಟು ನಂತರ ಅದನ್ನು ನೀವು ಟೈಲ್ಸ್‌ಗೆ ಹಾಕಿ ಸ್ವಚ್ಛ ಮಾಡಿ. ಹೀಗೆ ಮಾಡುವುದರಿಂದಲೂ ಕ್ಲೀನ್ ಆಗುತ್ತದೆ. ಇನ್ನು ಹುಳಿಯಾದ ಮಜ್ಜಿಗೆ ಇದ್ದರೆ ಅದನ್ನೂ ಉಪಯೋಗಿಸಬಹುದು. ಇದು ಕೂಡ ಉತ್ತಮ ರಿಸಲ್ಟ್ ಕೊಡುತ್ತದೆ.

Whats_app_banner