ಎಷ್ಟು ಸರಿಯಾಗಿ ಜೋಡಿಸಿಟ್ರೂ ಬೇಕಾದಾಗ ನೀವು ಅಂದುಕೊಂಡ ಬಟ್ಟೆ ಕೈಗೆ ಸಿಗ್ತಾ ಇಲ್ವ? ಹಾಗಾದ್ರೆ ಇದೊಂದು ವಿಧಾನ ತಿಳಿಸಿ
ನೀವು ಆಫೀಸ್‌ಗೆ ಹೋಗುವಾಗ ದಿನವೂ ನಿಮಗೆ ಬೇಕಾದ ಬಟ್ಟೆಗಳನ್ನು ಹುಡುಕೋದ್ರಲ್ಲೇ ಸಮಯ ಆಗ್ತಾ ಇದ್ಯ? ಹಾಗಾದ್ರೆ ನಿಮ್ಮ ಬಟ್ಟೆಗಳನ್ನು ಈ ರೀತಿ ಜೋಡಿಸಿಡಿ. ಆಗ ಬಟ್ಟೆಗಳು ಬಹಳ ಬೇಗ ಸಿಗುತ್ತದೆ.
ಎಷ್ಟೇ ಚೆನ್ನಾಗಿ ಪ್ಯಾಕ್ ಮಾಡಿದರೂ ಅಗತ್ಯ ಬಟ್ಟೆ, ವಸ್ತುಗಳು ಸಿಗುವುದು ಕಷ್ಟ. ಈ ಸಮಸ್ಯೆ ಪ್ರತಿ ಮನೆಯಲ್ಲೂ ಇರುತ್ತದೆ. ವಾರ್ಡ್‌ರೋಬ್‌ನಲ್ಲಿ ಪ್ಯಾಕ್ ಮಾಡಿದ ಬಟ್ಟೆಗಳನ್ನು ಮತ್ತೆ ಹುಡುಕುವುದೇ ಒಂದು ದೊಡ್ಡ ತಲೆನೋವು. ಬಟ್ಟೆ ಜೋಡಿಸಿ ಇಡುವಾಗಲೂ ಆಗದಷ್ಟು ಕಷ್ಟ ಮತ್ತೆ ಆ ಬಟ್ಟೆಗಳನ್ನು ಹುಡುಕಿ ಹೊರ ತೆಗೆಯುವಾಗ ಆಗುತ್ತದೆ. ಅಗತ್ಯವಿದ್ದಲ್ಲಿ ನೀಟಾಗಿ ಜೋಡಿಸಿದ ಬಟ್ಟೆಗಳೆಲ್ಲ ಅಸ್ತವ್ಯಸ್ತವಾಗುತ್ತವೆ. ಹಳೆ ಬಟ್ಟೆಯಂತಿದ್ದರೆ ನಾವು ಆ ಜಾಗವನ್ನು ಎಂದು ನೋಡುವುದೇ ಇಲ್ಲ. ಆದರೆ ಅದರ ಮಧ್ಯದಲ್ಲೇ ಎಲ್ಲೋ ನಮಗೆ ಬೇಕಾದ ಬಟ್ಟೆ ಸಿಕ್ಕಿಹಾಕಿಕೊಂಡಿರುತ್ತದೆ. ಈ ರೀತಿ ಸಮಸ್ಯೆ ದಿನ ನಿತ್ಯ ಆಗುತ್ತದೆ.
ಸಮಸ್ಯಗೆ ಇಲ್ಲಿದೆ ಪರಿಹಾರ
ಈ ಸಮಸ್ಯೆಯನ್ನು ತಪ್ಪಿಸಲು ಇಲ್ಲಿ ಕೆಲವು ಸಲಹೆಗಳಿವೆ. ನಾವು ನಾಲ್ಕೈದು ಸಾಲುಗಳಲ್ಲಿ ಬಟ್ಟೆಗಳನ್ನು ಅಕ್ಕಪಕ್ಕದಲ್ಲಿ ಜೋಡಿಸುತ್ತೇವೆ. ಆ ರೀತಿ ಮಾಡುವುದಕ್ಕಿಂದ ಮಧ್ಯದಲ್ಲಿ ಡಿವೈಡರ್ ಬಳಕೆ ಮಾಡುವುದು ಉತ್ತಮ. ಆಗ ನಿಮಗೆ ಯಾವ ಸಾಲಿನಲ್ಲಿ ಇರುವ ಬಟ್ಟೆ ಬೇಕು ಎಂದು ನೀವು ಅದೇ ಸಾಲಿನ ಬಟ್ಟೆಗಳನ್ನು ಮಾತ್ರ ತೆಗೆದುಕೊಂಡರೆ ಆಯಿತು. ಉಳಿದ ಸಾಲಿನ ಬಟ್ಟೆಗಳು ನೀವು ಈ ಮೊದಲು ಯಾವ ರೀತಿ ಇಟ್ಟಿರುತ್ತೀರೋ ಅದೇ ರೀತಿಯಲ್ಲಿ ಇರುತ್ತದೆ.
200 ರೂಪಾಯಿಗೆ ಹತ್ತು ಕಡಿಮೆ ಗುಣಮಟ್ಟದ ಡಿವೈಡರ್‌ಗಳು ನಿಮಗೆ ಆನ್‌ಲೈನ್‌ನಲ್ಲಿ ಸಿಗುತ್ತವೆ. ಇವುಗಳನ್ನು ಬಟ್ಟೆಯ ಸಾಲಿನ ಮಧ್ಯದಲ್ಲಿ ಇರಿಸಿದರೆ ಆಯಿತು. ಅದರ ಕೆಳ ಭಾಗದಲ್ಲಿ ಕೊಕ್ಕೆ ಇರುತ್ತದೆ. ಅದನ್ನು ಬಳಸಿಕೊಂಡು ನೀವು ಇನ್ನಿತರ ವಸ್ತುಗಳನ್ನು ಅದಕ್ಕೆ ಹೊಂದಿಸಿ ಇಡಬಹುದು.
ಚಿಕ್ಕ ಬಟ್ಟೆಗಳನ್ನು ಬೇರೆ ಕಡೆ ಇಡಿ
ನಿಮ್ಮ ಒಳ ಉಡುಪುಗಳು ಅಥವಾ ಚಿಕ್ಕ ಚಿಕ್ಕ ಬಟ್ಟೆಗಳನ್ನು ಬೇರೆ ಜಾಗದಲ್ಲಿ ಇಡಿ. ಅಂದರೆ ಬಾಗಿಲಿನ ಸಮೀಪದಲ್ಲಿ ಇಡಿ. ಆಗ ನಿಮಗೆ ಅವುಗಳು ಬಹಳ ಬೇಗ ಸಿಗುತ್ತದೆ. ಕರ್ಚೀಫ್ಗಳು, ಸಣ್ಣ ಪ್ರಮುಖ ವಸ್ತುಗಳು ಇತ್ಯಾದಿಗಳನ್ನು ಬಾಗಿಲ ಹತ್ತಿರ ಹಾಕಬಹುದು. ಸಣ್ಣ ವಸ್ತುಗಳನ್ನು ಸಾಮಾನ್ಯವಾಗಿ ಹುಡುಕಲಾಗುವುದಿಲ್ಲ. ಹುಡುಗರ ಶರ್ಟ್ ಮತ್ತು ಟೀ ಶರ್ಟ್ಗಳನ್ನು ನೀಟಾಗಿ ಇಸ್ತ್ರಿ ಮಾಡಿ ಹ್ಯಾಂಗರ್‌ಗೆ ಹಾಕಿ ನೇತುಹಾಕಿ.
ಹ್ಯಾಂಗರ್ ಬಳಕೆ ಮಾಡಿ
ಒಂದರ ಮೇಲೊಂದರಂತೆ ಇಡುವುದನ್ನು ನಿಲ್ಲಿಸಿ. ಯಾವಾಗಲೂ ಇವುಗಳನ್ನು ಇಡಲು ಹ್ಯಾಂಗರ್ ಮಾತ್ರ ಬಳಕೆ ಮಾಡಿ. ನೀವು ಒಂದೇ ಕಡೆ ಎಲ್ಲವನ್ನೂ ಇಟ್ಟರೆ ಅದು ಸಿಕ್ಕು ಗಂಟಿನಂತಾಗುತ್ತದೆ. ಒಂದಕ್ಕೊಂದು ಹೊಂದಿಕೊಂಡು ಬೇಕು ಎಂದರೂ ಅದನ್ನು ಬಿಡಿಸಲು ಸಾಧ್ಯವಾಗುವುದಿಲ್ಲ. ದುಬಾರಿ ಬೆಲೆಯ ರೇಷ್ಮೆ ಸೀರೆ , ಡ್ರೆಸ್ ವ್ಯವಸ್ಥೆ ಮಾಡುವುದು ಕಷ್ಟದ ಕೆಲಸ. ಅದರಲ್ಲೂ ರೇಷ್ಮೆ ಸೀರೆಗಳನ್ನು ಒಂದರ ಮೇಲೊಂದರಂತೆ ಇಟ್ಟಾಗ ಮೇಲಿನ ಸೀರೆಯ ಭಾರ ಕೆಳ ಸೀರೆಯ ಮೇಲೆ ಬೀಳುತ್ತದೆ. ಇದು ಹಲವಾರು ಸುಕ್ಕುಗಳನ್ನು ಮತ್ತು ಕಲೆಗಳನ್ನು ಉಂಟು ಮಾಡುತ್ತದೆ.
ರೇಷ್ಮೆ ಸೀರೆಗಳನ್ನು ಹೀಗೆ ಇಡಿ
ನೀವು ರೇಷ್ಮೆ ಸೀರೆಗಳನ್ನು ಇಡಲು ಎಂದೇ ಬೇರೆ ರೀತಿಯ ಜಾಗವನ್ನು ಮಾಡಿಕೊಳ್ಳಿ. ಅಂದರೆ ಅದಕ್ಕಾಗಿ ಬೇರೆ ಒಂದು ಕಾಟನ್ ಬಟ್ಟೆಯ ಬ್ಯಾಗ್ ಹೊಲಿಸಿಕೊಳ್ಳಿ. ಅದರಲ್ಲಿ ಡಿವೈಡರ್ ಇರಲಿ. ಒಂದು ಸೀರೆ ಆದ ಮೇಲೆ ಒಂದು ಬಟ್ಟೆ ಬರುವ ರೀತಿಯಲ್ಲಿ ಆ ಬ್ಯಾಗ್ ಇರಲಿ. ಇಲ್ಲವಾದರೆ ನೀವು ಯಾವುದಾದರೂ ಒಂದು ಕಾಟನ್ ಪಂಚೆಯಲ್ಲಿ ಆ ಸೀರೆಯನ್ನು ಕಟ್ಟಿ ಇಡಬಹುದು.
ವಿಭಾಗ