ಕನ್ನಡ ಸುದ್ದಿ  /  Lifestyle  /  Non Vegetarian Recipe How To Prepare Mouth Watering Garlic Chicken Recipe Tasty Food Recipes Rsa

Garlic Chicken Recipe: ಬೆಳ್ಳುಳ್ಳಿ ಕಬಾಬ್‌ ಅಲ್ಲ ಇದು ಬೆಳ್ಳುಳ್ಳಿ ಚಿಕನ್‌; ಗಾರ್ಲಿಕ್‌ ಚಿಕನ್‌ ತಯಾರಿಸುವ ವಿಧಾನ ಹೀಗಿದೆ

Garlic Chicken Recipe: ಕೆಲವು ದಿನಗಳಿಂದ ಬೆಳ್ಳುಳ್ಳಿ ಕಬಾಬ್ ಭಾರೀ ಸುದ್ದಿಯಲ್ಲಿತ್ತು. ಬೆಳ್ಳುಳ್ಳಿಯಿಂದ ಕೇವಲ ಕಬಾಬ್ ಮಾತ್ರವಲ್ಲ ಇನ್ನೂ ಅನೇಕ ಚಿಕನ್ ಭಕ್ಷ್ಯಗಳನ್ನು ತಯಾರಿಸಬಹುದು. ಅವುಗಳಲ್ಲಿ ರೆಸ್ಟಾರೆಂಟ್ ಶೈಲಿಯಲ್ಲಿ ತಯಾರಿಸಬಹುದಾದ ಗಾರ್ಲಿಕ್ ಚಿಕನ್ ಮಾಡುವ ವಿಧಾನ ಇಲ್ಲಿದೆ ನೋಡಿ

ಗಾರ್ಲಿಕ್‌ ಚಿಕನ್‌ ರೆಸಿಪಿ ( ಪ್ರಾತಿನಿಧಿಕ ಚಿತ್ರ)
ಗಾರ್ಲಿಕ್‌ ಚಿಕನ್‌ ರೆಸಿಪಿ ( ಪ್ರಾತಿನಿಧಿಕ ಚಿತ್ರ) (PC: Pixabay)

Garlic Chicken Recipe: ಚಿಕನ್ ಎಂದರೆ ಸಾಕು ನಾನ್‌ವೆಜಿಟೆರಿಯನ್‌ಗಳ ಬಾಯಲ್ಲಿ ನೀರೂರುತ್ತದೆ. ಆದರೆ ಅನೇಕರಿಗೆ ಮನೆಯಲ್ಲಿ ಚಿಕನ್ ಸಾಂಬಾರು, ಚಿಕನ್‌ ಚಾಪ್ಸ್‌, ಚಿಕನ್‌ ಸುಕ್ಕಾ ಇವುಗಳನ್ನಷ್ಟೇ ತಿಂದು ಬೇಸರ ಎನಿಸಿರಬಹುದು. ಪ್ರತಿ ಬಾರಿ ಚಿಕನ್ಗಾಗಿ ಹೋಟೆಲ್ಗೆ ಹೋಗಿ ದುಬಾರಿ ಬೆಲೆಯನ್ನು ತೆರುವುದು ಎಲ್ಲರಿಂದ ಸಾಧ್ಯವಿಲ್ಲ. ಆದರೆ ನೀವು ಮನಸ್ಸು ಮಾಡಿದರೆ ಮನೆಯಲ್ಲಿಯೇ ರೆಸ್ಟೋರೆಂಟ್‌ ಶೈಲಿಯ ಚಿಕನ್ ತಯಾರಿಸಬಹುದಾಗಿದೆ.

ಹೋಟೆಲ್‌ಗಳಲ್ಲಿ ಬಾಯಲ್ಲಿ ನೀರೂರಿಸುವ ಗಾರ್ಲಿಕ್ ಚಿಕನ್ ತಿನಿಸನ್ನು ನೀವು ಸವಿದಿರಬಹುದು. ಬೆಳ್ಳುಳ್ಳಿ ಹಾಗೂ ಕೋಳಿ ಮಾಂಸವನ್ನು ಮುಖ್ಯವಾಗಿ ಬಳಸಿ ತಯಾರಿಸುವಂತಹ ಈ ಭಕ್ಷ್ಯವನ್ನು ಮಾಡಲು ಕೇವಲ 30 ನಿಮಿಷದ ಅವಧಿ ಸಾಕು. ಹಾಗಾದರೆ ಇನ್ಯಾಕೆ ತಡ ರುಚಿ ರುಚಿಯಾದ , ಬಾಯಲ್ಲಿ ನೀರೂರಿಸುವಂತಹ, ಥಟ್ ಅಂತಾ ತಯಾರಾಗಬಲ್ಲ ಬೆಳ್ಳುಳ್ಳಿ ಚಿಕನ್ ತಯಾರಿಸುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

ಬೆಳ್ಳುಳ್ಳಿ ಚಿಕನ್ ತಯಾರಿಸಲು ಬೇಕಾಗುವ ಸಾಮಗ್ರಿಗಗಳು

ಅಡುಗೆ ಎಣ್ಣೆ 5 ಮಿಲೀ, ಒಣ ಮೆಣಸು 5 ಗ್ರಾಂ, ಕತ್ತರಿಸಿದ ಬೆಳ್ಳುಳ್ಳಿ ಎಸಳುಗಳು 20 ಗ್ರಾಂ, ಬೆಣ್ಣೆ 10 ಗ್ರಾಂ, ಓಯ್ಸ್ಟರ್ ಸಾಸ್( ಮಾರುಕಟ್ಟೆಯಲ್ಲಿ ಲಭ್ಯ) 15 ಗ್ರಾಂ, ಅಂಗಡಿಯಲ್ಲಿ ಲಭ್ಯವಿರುವ ಚಿಕನ್ ಆರೊಮ್ಯಾಟಿಕ್‌ ಪುಡಿ 5 ಗ್ರಾಂ, ಅಡುಗೆಗೆ ಬಳಸುವ ಚೈನೀಸ್ ವೈನ್ 10 ಮಿ.ಲೀ, ನೀರು 10 ಮಿಲೀ, ಕತ್ತರಿಸಿದ ಈರುಳ್ಳಿ 20 ಗ್ರಾಂ, ಈರುಳ್ಳಿ ಎಲೆಗಳು 5 ಗ್ರಾಂ, ದೊಡ್ಡ ಮೆಣಸು 10 ಗ್ರಾಂ, ಚಿಕನ್‌ ಬ್ರೆಸ್ಟ್‌ 200 ಗ್ರಾಂ, ಮೊಟ್ಟೆ 1/2, ಕಾರ್ನ್‌ಫ್ಲೋರ್‌ 40 ಗ್ರಾಂ, ಉಪ್ಪು 3 ಗ್ರಾಂ, ಸೋಯಾ ಸಾಸ್ 5 ಮಿಲೀ, ಕಾಳು ಮೆಣಸು 1 ಗ್ರಾಂ

ಬೆಳ್ಳುಳ್ಳಿ ಚಿಕನ್ ತಯಾರಿಸುವ ವಿಧಾನ

  • ಮೊದಲನೆಯದಾಗಿ ಚಿಕನ್ ಬ್ರೆಸ್ಟ್‌ಗಳನ್ನು ಕತ್ತರಿಸಿಕೊಳ್ಳಿ.
  • ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಅರ್ಧ ಮೊಟ್ಟೆ, ಉಪ್ಪು, ನೀರು ಹಾಗೂ ಕಾರ್ನ್‌ಫ್ಲೋರ್‌ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಈ ಮಿಶ್ರಣವನ್ನು ಚಿಕನ್ ತುಂಡುಗಳಿಗೆ ಲೇಪಿಸಿ ಮ್ಯಾರಿನೇಟ್‌ ಮಾಡಿ.
  • ಈಗ ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಮಧ್ಯಮ ಉರಿಯಲ್ಲಿಡಿ. ಪಾತ್ರೆಗೆ 200 ಮಿಲೀ ಅಡುಗೆ ಎಣ್ಣೆಯನ್ನು ಹಾಕಿ.
  • ಎಣ್ಣೆ ಬಿಸಿಯಾದ ಬಳಿಕ ಮ್ಯಾರಿನೇಟ್ ಮಾಡಿ ಇಟ್ಟುಕೊಂಡಿದ್ದ ಚಿಕನ್ ತುಂಡುಗಳನ್ನು 2 ನಿಮಿಷಗಳ ಕಾಲ ಫ್ರೈ ಮಾಡಿ.
  • ಚಿಕನ್ ಬ್ರೆಸ್ಟ್‌ ಮೃದುವಾಗಿ ಇರುವುದರಿಂದ ಬೇಗನೇ ಫ್ರೈ ಆಗುತ್ತದೆ.

ಇದನ್ನೂ ಓದಿ: ವೀಕೆಂಡ್​​ಗೆ ಹೇಳಿ ಮಾಡಿಸಿದ ರೆಸಿಪಿ ತಂದೂರಿ ಚಿಕನ್​ ವ್ರ್ಯಾಪ್ಸ್‌​​: ಸಿಂಪಲ್‌ ಆಗಿ ಮನೆಯಲ್ಲೇ ಮಾಡೋದ್‌ ಹೇಗೆ ನೋಡಿ

  • ಈಗ ಮತ್ತೊಂದು ಬಾಣಲೆಯನ್ನು ತೆಗೆದುಕೊಂಡು ಇದರಲ್ಲಿ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿ ಒಣ ಮೆಣಸು ಹಾಗೂ ಬೆಳ್ಳುಳ್ಳಿಯನ್ನು ಸುಮಾರು 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
  • ಈಗ ಇದಕ್ಕೆ ಬೆಣ್ಣೆ, ಸಾಸ್, ನೀರು, ಚಿಕನ್ ಆರೋಮ್ಯಾಟ್ ಪುಡಿ, ಚೈನೀಸ್ ವೈನ್ ಹಾಗೂ ಸೋಯಾ ಸಾಸ್‌ ಸೇರಿಸಿಕೊಳ್ಳುತ್ತಾ ಹೋಗಿ.
  • ಇವುಗಳು ಚೆನ್ನಾಗಿ ಮಿಶ್ರಣವಾದ ಬಳಿಕ ಫ್ರೈ ಮಾಡಿದ ಚಿಕನ್‌ ಸೇರಿಸಿಕೊಳ್ಳಿ.
  • ಇದಾದ ಬಳಿಕ ಈರುಳ್ಳಿ,ದೊಡ್ಡ ಮೆಣಸು, ಈರುಳ್ಳಿ ಎಲೆಗಳನ್ನೆಲ್ಲಾ ಸೇರಿಸಿ ಇನ್ನೂ ಎರಡು ನಿಮಿಷಗಳ ಕಾಲ ಹುರಿಯಿರಿ.
  • ಕೊನೆಯಲ್ಲಿ ಗಾರ್ನಿಶ್‌ ಮಾಡಿ ಗಾರ್ಲಿಕ್ ಚಿಕನ್‌ ಸವಿಯಲು ನೀಡಿ.

ಇದನ್ನೂ ಓದಿ: ಚಿಕನ್​ ಸಾಂಬಾರ್​ ತಿಂದು ಬೋರಾಗಿದ್ಯಾ? ಹಾಗಿದ್ರೆ ಮದ್ರಾಸ್​ ಚಿಕನ್ ಕರ್ರಿ ಟ್ರೈ ಮಾಡಿ; ಇಲ್ಲಿದೆ ರೆಸಿಪಿ

ವಿಭಾಗ