Curry Tree: ಮನೆಯಲ್ಲಿ ತುಂಬಾ ಸರಳವಾಗಿ ಕರಿಬೇವು ಬೆಳೆಯುವುದು ಹೇಗೆ? ಈ ವಿಧಾನವನ್ನು ಅನುಸರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Curry Tree: ಮನೆಯಲ್ಲಿ ತುಂಬಾ ಸರಳವಾಗಿ ಕರಿಬೇವು ಬೆಳೆಯುವುದು ಹೇಗೆ? ಈ ವಿಧಾನವನ್ನು ಅನುಸರಿಸಿ

Curry Tree: ಮನೆಯಲ್ಲಿ ತುಂಬಾ ಸರಳವಾಗಿ ಕರಿಬೇವು ಬೆಳೆಯುವುದು ಹೇಗೆ? ಈ ವಿಧಾನವನ್ನು ಅನುಸರಿಸಿ

ರುಚಿಗಷ್ಟೇ ಅಲ್ಲದೆ, ಆರೋಗ್ಯಕ್ಕೂ ಹಲವು ಪ್ರಯೋಜನಗಳನ್ನು ನೀಡುವ ಕರಿಬೇವಿನ ಗಿಡವನ್ನು ಮನೆಯಲ್ಲೇ ತುಂಬಾ ಸರಳವಾಗಿ ಬೆಳೆಯಬಹುದು. ಇದಕ್ಕೆ ಏನೇನು ಬೇಕು ಹಾಗೂ ಮನೆಯಲ್ಲೇ ಕರಿಬೇವಿನ ಗಿಡವನ್ನು ಬೆಳೆಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

ಮನೆಯಲ್ಲೇ ತುಂಬಾ ಸರಳವಾಗಿ ಕರಿಬೇವಿನ ಗಿಡವನ್ನು ಬೆಳೆಸುವುದು ಹೇಗೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ಮನೆಯಲ್ಲೇ ತುಂಬಾ ಸರಳವಾಗಿ ಕರಿಬೇವಿನ ಗಿಡವನ್ನು ಬೆಳೆಸುವುದು ಹೇಗೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಭಾರತೀಯ ಆಹಾರದಲ್ಲಿ ಕರಿಬೇವಿನ ಎಲೆಗಳಿಗೆ ತುಂಬಾ ಮಹತ್ವವಿದೆ. ಅದರಲ್ಲೂ ಕರಿಬೇವಿನ ಎಲೆಗಳನ್ನು ದಕ್ಷಿಣ ಭಾರತದ ಆಹಾರಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅಡುಗೆ ಪ್ರಕ್ರಿಯೆಯ ಪ್ರಾರಂಭದಲ್ಲಿ ಅಥವಾ ಕೊನೆಯಲ್ಲಿ ಹೆಚ್ಚುವರಿ ಸುವಾನೆಗಾಗಿ ಇದನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಕೇವಲ ರುಚಿಗಷ್ಟೇ ಅಲ್ಲ ಕರಿಬೇವಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಹೀಗಾಗಿಯೇ ಕರಿಬೇವನ್ನು ಹೆಚ್ಚಾಗಿ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ನೀವು ನಗರ ವಾಸಿಗಳಾಗಿದ್ದರೆ ಸಾಮಾನ್ಯವಾಗಿ ಮಾರುಕಟ್ಟೆಗೆ ಹೋಗಿ ತರಕಾರಿ, ಸೊಪ್ಪುಗಳೊಂದಿಗೆ ಕರಿಬೇವನ್ನು ಖರೀದಿಸುತ್ತೀರಿ. ಗ್ರಾಮೀಣ ಪ್ರದೇಶದಲ್ಲಿ ಮನೆಯ ಹಿತ್ತಲಿನಲ್ಲೇ ಬೆಳೆದುಕೊಂಡಿರುತ್ತಾರೆ. ಒಂದು ವೇಳೆ ನೀವೇನಾದರೂ ಕರಿಬೇವನ್ನು ಮನೆಯಲ್ಲೇ ಬೆಳೆದುಕೊಳ್ಳಬೇಕೆಂದು ಯೋಚಿಸಿದರೆ ನಿಮಗಾಗಿ ಸರಳ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಮನೆಯಲ್ಲೇ ಕರಿಬೇವು ಬೆಳೆಯುವುದು ಹೇಗೆ?

ಮನೆಯಲ್ಲಿ ತುಂಬಾ ಸುಲಭವಾಗಿ ಯಾವುದೇ ರಾಸಾಯನಿಕಗಳನ್ನು ಬಳಸದೆ ಕರಿಬೇವು ಗಿಡವನ್ನು ಬೆಳೆಸಿಕೊಳ್ಳಬಹುದು. ಇದಕ್ಕಾಗಿ ಒಂದು ಪಾಟ್, ಫಲವತ್ತಾದ ಮಣ್ಣು, ಕರಿಬೇವಿನ ಬೀಜ ಅಥವಾ ಸಸಿ ಬೇಕಾಗುತ್ತದೆ.

  • ಮೊದಲು 4 ರಿಂದ 6 ಇಂಚು ಎತ್ತರ, 3 ರಿಂದ 4 ಇಂಚು ಅಗಲ ಇರುವ ಒಂದು ಪಾಟ್ ತೆಗೆದುಕೊಳ್ಳಿ
  • ಈ ಪಾಟ್‌ಗೆ ಶೇಕಡಾ 60 ರಷ್ಟು ಫಲವತ್ತಾದ ಮಣ್ಣನ್ನು ತುಂಬಿ, ಇದಕ್ಕೆ ಸ್ವಲ್ಪ ಕಾಂಪೋಸ್ಟ್ ಗೊಬ್ಬರವನ್ನು ಮಿಶ್ರಣ ಮಾಡಿ
  • ಬಳಿಕ ಆ ಪಾಟ್‌ನಲ್ಲಿ ಕರಿಬೇವಿನ ಬೀಜ ಅಥವಾ ಸಸ್ಯವನ್ನು ನೆಡಿ
  • ಸಸ್ಯವನ್ನು ನೆಟ್ಟ ಬಳಿಕ ಪಾಟ್ ತುಂಬಾ ನೀರು ಹಾಕಿ
  • ಒಂದು ವಾರ ದಿನಕ್ಕೊಮ್ಮೆ ಸ್ವಲ್ಪ ನೀರು ಹಾಕುತ್ತಾ ಹೋಗಿ
  • ಒಂದು ವಾರದ ಬಳಿಕ ಎರಡು ದಿನಕ್ಕೊಮ್ಮೆ ನೀರು ಹಾಕಿ, ಆ ಬಳಿಕ ವಾತಾವರಣ ಆಧಾರದ ಮೇಲೆ ನೀರು ಹಾಕಿ
  • ಕರಿಬೇವಿನ ಸಸ್ಯ ಪಾಟ್‌ಗೆ ಹೊಂದಿಕೊಂಡು ಬೆಳೆಯಲಾರಂಭಿಸಿದಾಗ ಸ್ವಲ್ಪ ಗೊಬ್ಬರ ಹಾಕಿ
  • ಒಂದು ವೇಳೆ ಪಾಟ್‌ನಲ್ಲಿ ಬೀಜವನ್ನು ಹಾಕಿದ್ದರೆ ಮೊಳಕೆ ಬರುವವರಿಗೆ ದಿನ ಬಿಟ್ಟು ದಿನ ಅಗತ್ಯ ಪ್ರಮಾಣದಲ್ಲಿ ನೀರು ಹಾಕಿ
  • ಕೆಲವೇ ದಿನಗಳಲ್ಲಿ ನಿಮ್ಮ ಮನೆಯ ಮುಂದೆ ಪಾಟ್‌ನಲ್ಲಿ ಒಂದು ಸುಂದರವಾದ ಕರಿಬೇವಿನ ಸಸ್ಯವನ್ನು ನೀವು ಕಾಣುತ್ತೀರಿ
  • ನಿಮ್ಮ ಮನೆಯ ಬಳಿ ವಿಶಾಲವಾದ ಸ್ಥಳವಿದ್ದರೆ ಪಾಟ್ ಬಳಸುವ ಬದಲು ನೇರವಾಗಿ ನೆಲದಲ್ಲಿ ಕರಿಬೇವಿನ ಬೀಜ ಅಥವಾ ಸಸ್ಯವನ್ನು ನೆಡಬಹುದು
  • ತಾಪಮಾನ 32 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇದ್ದರೆ ನೆಲದಲ್ಲಿ ನೆಡುವ ಸಸ್ಯ ಉತ್ತಮವಾಗಿ ಬೆಳೆಯುತ್ತದೆ.

ಕರಿಬೇವಿನ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಿರುತ್ತವೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಹಲವು ಆರೋಗ್ಯ ಪ್ರಯೋಜಗಳನ್ನು ಹೊಂದಿರುವ ಕರಿಬೇವಿನ ಎಲೆಗಳನ್ನು ದಕ್ಷಿಣ ಭಾರತದ ಆಹಾರಗಳಲ್ಲಿ ನಿತ್ಯ ಬಳಸಲಾಗುತ್ತದೆ.

Whats_app_banner