ವರಮಹಾಲಕ್ಷ್ಮಿ ಹಬ್ಬದಂದು ನೈವೇದ್ಯಕ್ಕೆ ಮಾಡಬಹುದಾದ ಖಾದ್ಯಗಳ ರೆಸಿಪಿ ಇಲ್ಲಿದೆ, ಬಹಳ ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ವರಮಹಾಲಕ್ಷ್ಮಿ ಹಬ್ಬದಂದು ನೈವೇದ್ಯಕ್ಕೆ ಮಾಡಬಹುದಾದ ಖಾದ್ಯಗಳ ರೆಸಿಪಿ ಇಲ್ಲಿದೆ, ಬಹಳ ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಿ

ವರಮಹಾಲಕ್ಷ್ಮಿ ಹಬ್ಬದಂದು ನೈವೇದ್ಯಕ್ಕೆ ಮಾಡಬಹುದಾದ ಖಾದ್ಯಗಳ ರೆಸಿಪಿ ಇಲ್ಲಿದೆ, ಬಹಳ ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಿ

ನಾಳೆಯೇ ವರಮಹಾಲಕ್ಷ್ಮಿ ಹಬ್ಬವಿದೆ. ನೀವು ಮನೆಯಲ್ಲಿ ಪೂಜೆ ಇಟ್ಟುಕೊಂಡಿದ್ದರೆ ನೈವೇದ್ಯಕ್ಕೆ ದೇವಿಗೆ ಪ್ರಿಯವಾದ ನೈವೇದ್ಯಗಳನ್ನು ಮಾಡುತ್ತೀರಾ. ಪಾಯಸಾನ್ನ ಪ್ರಿಯೆ ದೇವಿ. ಹಾಗಾಗಿ ನಾವಿಲ್ಲಿ ಕೆಲವು ಪ್ರಸಾದಕ್ಕೆ ಮಾಡಬಹುದಾದ ರೆಸಿಪಿಗಳನ್ನು ನೀಡಿದ್ದೇವೆ ಗಮನಿಸಿ.

Varamahalakshmi
Varamahalakshmi (Canva)

ಶ್ರಾವಣ ಮಾಸದಲ್ಲಿ ಹೆಂಗಳೆಯರು, ಮುತ್ತೈದೆಯರು ಬಹಳ ಭಕ್ತಿಯಿಂದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾರೆ. ದೇವಿಯ ಆರಾಧನೆ ಮಾಡುತ್ತಾರೆ. ಸದಾ ಮುತ್ತೈದೆಯಾಗಲಿ ಎಂದು ಬೇಡಿಕೊಳ್ಳುತ್ತಾರೆ. ಪ್ರತಿ ಮನೆ ಮನೆಯಲ್ಲೂ ಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲಿ ನೀವು ಪೂಜೆಗೆ ನೈವೇದ್ಯಕ್ಕೆ ಮಾಡಬಹುದಾದ ಕೆಲವು ರೆಸಿಪಿಗಳನ್ನು ನಾವು ನಿಮಗಿಲ್ಲಿ ನೀಡಿದ್ದೇವೆ. ಬಹಳ ಕಡಿಮೆ ಸಮಯದಲ್ಲಿ ಮತ್ತು ತುಂಬಾ ಸುಲಭವಾಗಿ ಮಾಡಬಹುದಾದ ಕೆಲವು ಪ್ರಸಾದಗಳು ಇಲ್ಲಿದೆ.

ಅನ್ನದಿಂದಲೇ ಮಾಡಿ

ವರಮಹಾಲಕ್ಷ್ಮಿ ಹಬ್ಬದಂದು ದೇವಿಗೆ ನೈವೇದ್ಯ ಮಾಡಬಹುದಾದ ಖಾದ್ಯಗಳನ್ನು ನಾವಿಲ್ಲಿ ನೀಡಿದ್ದೇವೆ. ಮೊದಲಿಗೆ ನೀವು ಅನ್ನ ಮಾಡಿಕೊಳ್ಳಿ ಅದರಿಂದಲೇ ಇನ್ನೂ ನಾಲ್ಕು ವಿಧದ ಭಕ್ಷಗಳನ್ನ ತಯಾರಿಸಬಹುದು.

ಅಕ್ಕಿ ಪಾಯಸ: ಒಂದು ಸ್ವಲ್ಪ ಅನ್ನವನ್ನು ಬದಿಗೆ ತೆಗೆದಿಟ್ಟುಕೊಳ್ಳಿ. ನಂತರ ಅದಕ್ಕೆ ಬೆಲ್ಲ ಚಿಟಿಕೆ ಉಪ್ಪು ಹಾಗೂ ಬೇಯಿಸಿದ ಕಡಲೆ ಬೇಳೆ ಹಾಕಿ ಚೆನ್ನಾಗಿ ಸ್ಮಾಷ್ ಆಗುವ ರೀತಿ ಮಿಕ್ಸ್‌ ಮಾಡಿ. ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿ ಸೇರಿಸಿ ಇಷ್ಟು ಮಾಡಿದರೆ ಅಕ್ಕಿ ಪಾಯಸ ರೆಡಿಯಾಗುತ್ತದೆ.

ಪುಳಿಯೊಗರೆ
ಚಿತ್ರಾನ್ನ ಮತ್ತು ಪುಳಿಯೋಗರೆಯನ್ನು ಸಹ ಮಾಡಬಹುದು. ಇದು ಕೂಡ ಆಗಲೇ ತೆಗೆದಿಟ್ಟುಕೊಂಡ ಅನ್ನವನ್ನು ಅರ್ಧ ಪಾಯಸಕ್ಕೆ ಬಳಸಿದರೆ ಈಗ ಇನ್ನೊಂದು ಅರ್ಧ ಪುಳಿಯೋಗರೆ ಮಾಡಲು ಬಳಸಿಕೊಳ್ಳಿ. ಪುಳಿಯೋಗರೆ ಪೌಡರ್ ತನ್ನಿ. ಎಣ್ಣೆಯಲ್ಲಿ ಮಿಕ್ಸ್ ಮಾಡಿ ಬಿಸಿಯಾದ ನಂತರ ಅದನ್ನು ಎಣ್ಣೆಯಲ್ಲಿ ಹಾಕಿ. ಅನ್ನಕ್ಕೆ ಹಾಕಿ ಉಪ್ಪು ಹಾಗೂ ಸಕ್ಕರೆಯನ್ನು ರುಚಿಗೆ ತಕ್ಕಂತೆ ಮಿಕ್ಸ್ ಮಾಡಿಕೊಳ್ಳಿ ಹೇಗೆ ಮಾಡಿದರೆ ಪುಳಿಯೋಗರೆ ರೆಡಿಯಾಗುತ್ತದೆ.

ಕೊಕೊನಟ್ ರೈಸ್‌:

ಇದನ್ನೂ ಮಾಡಬಹುದು ಅನ್ನ ತಣ್ಣಗಾಗಲು ಬಿಡಿ. ನಂತರ ಒಗ್ಗರಣೆ ಪಾತ್ರೆಯಲ್ಲಿ ಸ್ವಲ್ಪ ತುಪ್ಪ ಹಾಗೂ ಸ್ವಲ್ಪ ಎಣ್ಣೆ ಮಿಕ್ಸ್ ಮಾಡಿ. ನಂತರ ಗೋಡಂಬಿ, ಕಡಲೆ ಬೇಳೆ, ಉದ್ದಿನ ಬೇಳೆ ಹಾಗೂ ಕರಿಬೇವಿನ ಸೊಪ್ಪು ಇವೆಲ್ಲವನ್ನು ಹಾಕಿ. ಹಸಿಮೆಣಸು ಹಾಕಿ ಆಡಿಸಿ. ಇದರ ಘಮ ಹರಡಿದ ಮೇಲೆ ಅದನ್ನು ಅನ್ನಕ್ಕೆ ಹಾಕಿ ಮೇಲಿಂದ ಉಪ್ಪು ಹಾಗೂ ತೆಂಗಿನ ತುರಿಯನ್ನು ಉದುರಿಸಿ ಮಿಕ್ಸ್ ಮಾಡಿ. ಇಷ್ಟು ಮಾಡಿದರೆ ಕೊಕೊನಟ್ ರೈಸ್ ರೆಡಿ.

ಚಿತ್ರಾನ್ನ

ಇನ್ನು ಚಿತ್ರಾನ್ನ ಮಾಡಬಹುದು ಮೊದಲಿಗೆ ಅನ್ನವನ್ನು ತೆಗೆದು ಪಕ್ಕಕೆ ಇಟ್ಟುಕೊಳ್ಳಿ. ನಂತರ ಒಗ್ಗರಣೆ ಹಾಕಿ. ಒಗ್ಗರಣೆಗೆ ಸಾಸಿವೆ ಜೀರಿಗೆ ಇಂಗು, ಕರಿಬೇವಿನ ಸೊಪ್ಪು ಇವು ಇಷ್ಟನ್ನು ಬಳಸಿ. ನಂತರ ಇದನ್ನು ಅನ್ನಕ್ಕೆ ಹಾಕಿ ನಂತರ ಮೇಲಿನಿಂದ ಉಪ್ಪು, ರುಚಿಗೆ ತಕ್ಕಷ್ಟು ಸಕ್ಕರೆ ಹಾಗೆ ಲಿಂಬುರಸ ಸೇರಿಸಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಈಗ ಚಿತ್ರಾನ್ನ ಸವಿಯಲು ಸಿದ್ಧ.

ಹೆಸರು ಕಾಳಿನ ಉಸುಳಿ

ಇನ್ನೊಂದು ಕಡೆಯಲ್ಲಿ ಹೆಸರುಕಾಳನ್ನು ಬೇಯಿಸಿಕೊಳ್ಳಿ. ಅದನ್ನು ಐದರಿಂದ ಆರು ಸೀಟಿ ಕೂಗಿಸಿಕೊಳ್ಳಿ. ಅದಕ್ಕೆ ಕಾಯಿತುರಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇನ್ನೊಂದು ಪಾತ್ರೆಯಲ್ಲಿ ಒಗ್ಗರಣೆ ಮಾಡಿ. ಎಣ್ಣೆ, ಅರಿಶಿನ, ಸಾಸಿವೆ, ಜೀರಿಗೆ ಹಾಗೂ ಹಸಿಮೆಣಸಿನಕಾಯಿಯನ್ನು ಬೇಯಿಸಿದ ಹೆಸರು ಕಾಳಿಗೆ ಹಾಕಿ. ಹೀಗೆ ಮಾಡಿದರೆ ಹೆಸರುಕಾಳಿ ಉಸುಳಿ ರೆಡಿಯಾಗುತ್ತದೆ.

ಬಾಳೆ ಹಣ್ಣಿನ ರಸಾಯನ

ಇನ್ನೊಂದು ಕಡೆ ಬಾಳೆಹಣ್ಣುಗಳನ್ನ ಹೆಚ್ಚಿಟ್ಟುಕೊಳ್ಳಿ. ಅದಕ್ಕೆ ಕಾಯಿ ಹಾಲು ಹಾಕಿ ಕಾಯಿ ಹಾಲು ಮಾಡಲು ನೀವು ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ಬೀಸಬೇಕು. ಅದಕ್ಕೆ ಸ್ವಲ್ಪ ಸಕ್ಕರೆ ಹಾಗೂ ಏಲಕ್ಕಿ ಪುಡಿಯನ್ನು ಹಾಕಬೇಕು ಇದನ್ನು ಬಾಳೆಹಣ್ಣಿನ ಮಿಶ್ರಣಕ್ಕೆ ಹಾಕಿದರೆ ಬಾಳೆಹಣ್ಣಿನ ರಸಾಯನ ರೆಡಿ ಆಗುತ್ತದೆ. ಬೆಲ್ಲ ಬೇಕಿದ್ದವರು ಬೆಲ್ಲ ಸೇರಿಸಿಕೊಳ್ಳಬಹುದು.

Whats_app_banner