ಇದಪ್ಪ ಐಟಿ ವರಸೆ, 10 ಸಾವಿರ ಸ್ಯಾಲರಿ ಬರೋ ಯುವಕನಿಗೆ 2 ಕೋಟಿ ಟ್ಯಾಕ್ಸ್ ನೋಟಿಸ್; ಕಟ್ಟೋರ ಜೊತೆಗೆ ಕೇಳೋರಿಗೂ ಶಾಕ್
ಬಿಹಾರ್‌ನಲ್ಲಿ ವಾಸಿಸುತ್ತಿರುವ ರಾಜೀವ್ ಕುಮಾರ್ ವರ್ಮಾ ಅವರಿಗೆ ಒಂದು ತಿಂಗಳಿಗೆ ಬರುವ ಸಂಬಳ ಕೇವಲ 10 ಸಾವಿರ ರೂಪಾಯಿ ಮಾತ್ರ. ಆದರೆ ಎರಡು ಹೊತ್ತಿನ ಊಟಕ್ಕೆ ಸಂಸಾರಕ್ಕೆ ಸಾಕಾಗದ ಸಂಬಳಕ್ಕೆ 2 ಕೋಟಿ ರೂಪಾಯಿ ಆದಾಯ ತೆರಿಗೆ ಕಟ್ಟುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ದೇಶದಲ್ಲಿ ಹಲವು ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ಪ್ರತಿದಿನವೂ ಅಬ್ಬಾ! ಎನಿಸುವ ಸಂಗತಿಗಳು ಕಿವಿಗೆ ಬೀಳುತ್ತವೆ. ಬಿಹಾರದಲ್ಲಿ ನಡೆದಿರುವ ಸುದ್ದಿಯೊಂದು ಈಗ ವೈರಲ್ ಆಗುತ್ತಿದೆ. ಸರಿಯಾಗಿ ಒಂದು ತಿಂಗಳ ಸಂಬಳವೂ ಸಿಗದ ಸಣ್ಣ ನೌಕರನಿಗೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ. ಎರಡು ಹೊತ್ತಿನ ಊಟಕ್ಕೆ ಸಂಸಾರಕ್ಕೆ ಸಾಕಾಗದ ಸಂಬಳಕ್ಕೆ 2 ಕೋಟಿ ರೂಪಾಯಿ ಆದಾಯ ತೆರಿಗೆ ಕಟ್ಟುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಅದಕ್ಕಿಂತ ವಿಚಿತ್ರ ಏನಪ್ಪಾ ಅಂದ್ರೆ 48 ಗಂಟೆಗಳ ಒಳಗೆ ನೀವು ತೆರಿಗೆ ಪಾವತಿಸಬೇಕು ಎಂದು ನೋಟಿಸ್‌ನಲ್ಲಿ ಇತ್ತು. ಈ ನಿಯಮ ನೋಡಿ ಯುವಕ ತಬ್ಬಿಬ್ಬಾಗಿದ್ದಾನೆ.
ಸಂತ್ರಸ್ತ ರಾಜೀವ್ ಕುಮಾರ್ ವರ್ಮಾ ಐಟಿ ಅಧಿಕಾರಿಗಳು ನೀಡಿದ ನೋಟಿಸ್ ನೋಡಿ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂದೇ ತಿಳಿಯದೆ ದಂಗಾಗಿದ್ದಾರೆ. ಸರಿಯಾದ ಕಾರಣ ಕೂಡ ಅವರಿಗೆ ಗೊತ್ತಾಗದೇ ಗೊಂದಲಕ್ಕೊಳಗಾಗಿದ್ದಾರೆ. ಆದಾಯ ತೆರಿಗೆ ಇಲಾಖೆ ಶ್ರೀಮಂತರಿಂದ ತೆರಿಗೆ ವಸೂಲಿ ಮಾಡುವುದು ಸಾಮಾನ್ಯ. ಆದರೆ ಬಡವನೊಬ್ಬನಿಗೆ ಇಷ್ಟೊಂದು ತೆರಿಗೆ ವಿಧಿಸುವುದು ಎಷ್ಟು ಸರಿ ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಸಂಬಳ 10 ಸಾವಿರ, ತೆರಿಗೆ 2 ಕೋಟಿ!
ಬಿಹಾರದಲ್ಲಿ ಎರಡು ಕೋಟಿ ರೂಪಾಯಿ ಆದಾಯ ತೆರಿಗೆ ಕಟ್ಟುವಂತೆ ಒಬ್ಬ ಸಾಮಾನ್ಯ ಉದ್ಯೋಗಿಗೆ ಹೇಳಲಾಗಿದೆ. ಐಟಿ ಅಧಿಕಾರಿಗಳು ನೋಟಿಸ್ ಕಳುಹಿಸಿದ್ದನ್ನು ನೋಡಿ ಅವರಿಗೆ ಅವಳುವುದೋ, ನಗುವುದೋ ತಿಳಿಯದಾಗಿದೆ. ಗಯಾ ಜಿಲ್ಲೆಯ ಗೋಡೌನ್‌ನಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಸಾಮಾನ್ಯ ಯುವಕನ ಬಳಿ ಇಷ್ಟೊಂದು ಹಣ ಹೇಗೆ ಬರಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ರಾಜೀವ್ ಕುಮಾರ್ ವರ್ಮಾ ಅವರ ಹೆಸರಿಗೆ ಈ ನೋಟಿಸ್ ನೀಡಲಾಗಿದೆ. 67 ಲಕ್ಷ ರೂಪಾಯಿ ತೆರಿಗೆಯನ್ನು 48 ಗಂಟೆಗಳಲ್ಲಿ ಅಂದರೆ ಎರಡು ದಿನಗಳಲ್ಲಿ ಪಾವತಿಸಬೇಕು ಎಂದಿದ್ದಾರಂತೆ.
ಕೊತ್ವಾಲಿ ಮಂಡಲದ ನೈಗೋಡೌನ್ ಪ್ರದೇಶದಲ್ಲಿ ವಾಸಿಸುತ್ತಿರುವ ರಾಜೀವ್ ಕುಮಾರ್ ವರ್ಮಾ ಅವರಿಗೆ ಒಂದು ತಿಂಗಳಿಗೆ ಬರುವ ಸಂಬಳ ಕೇವಲ 10 ಸಾವಿರ ರೂಪಾಯಿ ಮಾತ್ರ. 10 ಸಾವಿರ ಸಂಬಳ ಪಡೆಯುವವರು ಎರಡು ಕೋಟಿ ಆದಾಯ ತೆರಿಗೆಯನ್ನು ಹೇಗೆ ಪಾವತಿಸಲು ಸಾಧ್ಯ ಎಂಬ ಪ್ರಶ್ನೆ ಎಲ್ಲರಿಗೂ ಮೂಡುವುದು ಸಹಜ. ನಂತರ ಇದನ್ನು ಪ್ರಶ್ನಿಸಿದಾಗ ತಾಂತ್ರಿಕ ಸಮಸ್ಯೆಯಿಂದ ತೊಂದರೆಯಾಗಿದೆ ಎಂದು ಹೇಳಿದ್ದಾರಂತೆ.
ವಿಭಾಗ