ಈಗ ಶ್ರಾವಣದಲ್ಲೂ ನೀವು ಬರ್ಗರ್‌ ತಿನ್ನಬಹುದು, 'ನೋ ಈರುಳ್ಳಿ, ನೋ ಬೆಳ್ಳುಳ್ಳಿ' ಮೆಕ್ಡೊನಾಲ್ಡ್ಸ್ ಹೊಸ ಕೊಡುಗೆ-now you can eat burgers in shravan to no onion no garlic is mcdonalds new offer ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಈಗ ಶ್ರಾವಣದಲ್ಲೂ ನೀವು ಬರ್ಗರ್‌ ತಿನ್ನಬಹುದು, 'ನೋ ಈರುಳ್ಳಿ, ನೋ ಬೆಳ್ಳುಳ್ಳಿ' ಮೆಕ್ಡೊನಾಲ್ಡ್ಸ್ ಹೊಸ ಕೊಡುಗೆ

ಈಗ ಶ್ರಾವಣದಲ್ಲೂ ನೀವು ಬರ್ಗರ್‌ ತಿನ್ನಬಹುದು, 'ನೋ ಈರುಳ್ಳಿ, ನೋ ಬೆಳ್ಳುಳ್ಳಿ' ಮೆಕ್ಡೊನಾಲ್ಡ್ಸ್ ಹೊಸ ಕೊಡುಗೆ

ಮೆಕ್‌ಡೊನಾಲ್ಡ್ಸ್ ಇಂಡಿಯಾ ಶ್ರಾವಣ ಮಾಸಕ್ಕೆ ಜನರಿಗೊಂದು ಹೊಸ ಮೆನು ಪರಿಚಯಿಸಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕದ ಬರ್ಗರ್‌ ಲಭ್ಯವಿದೆ. ಈಗ ನೀವು ಶ್ರಾವಣದಲ್ಲೂ ಬರ್ಗರ್‌ ತಿನ್ನಬಹುದು. ಶ್ರಾವಣವನ್ನು ಅತ್ಯಂತ ಮಂಗಳಕರ ತಿಂಗಳು ಎಂದು ಪರಿಗಣಿಸಲಾಗಿದೆ. ಹಲವಾರು ಹಬ್ಬ ಹರಿದಿನಗಳು ಈಗಲೇ ಆರಂಭವಾಗುತ್ತದೆ.

ಶ್ರಾವಣಕ್ಕಾಗಿ ಮೆಕ್ಡೊನಾಲ್ಡ್ಸ್ ಹೊಸ ಕೊಡುಗೆ
ಶ್ರಾವಣಕ್ಕಾಗಿ ಮೆಕ್ಡೊನಾಲ್ಡ್ಸ್ ಹೊಸ ಕೊಡುಗೆ (Mcdonald's)

ಮೆಕ್‌ಡೊನಾಲ್ಡ್ಸ್ ಇಂಡಿಯಾ ಶ್ರಾವಣ ಮಾಸಕ್ಕೆ ಎಂದೇ ಒಂದು ಹೊಸ ಕೊಡುಗೆ ಕೊಟ್ಟಿದೆ. ಈ ಕೊಡುಗೆ ಸಾಕಷ್ಟು ಜನರಿಗೆ ಇಷ್ಟ ಆಗುತ್ತದೆ. ಹಿಂದೂಕ್ಯಾಲೆಂಡರ್‌ನಲ್ಲಿ ಶ್ರಾವಣವನ್ನು ಅತ್ಯಂತ ಮಂಗಳಕರ ತಿಂಗಳು ಎಂದು ಪರಿಗಣಿಸಲಾಗಿದೆ. ಹಲವಾರು ಹಬ್ಬ ಹರಿದಿನಗಳು ಈಗಲೇ ಆರಂಭವಾಗುತ್ತದೆ. ಶುಭಕಾರ್ಯಗಳಿಗೂ ಶುಭಾರಂಭ ಈ ತಿಂಗಳು. ಆ ಕಾರಣ ಈ ತಿಂಗಳಿನಲ್ಲಿ ಹಿಂದುಗಳು ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದ ಸಾತ್ವಿಕ ಆಹಾರವನ್ನು ಸೇವನೆ ಮಾಡುತ್ತಾರೆ.

ಶ್ರಾವಣ ಮಾಸಕ್ಕೆ ಸ್ಪೆಷಲ್‌ ಕೊಡುಗೆ

ಹಾಗಾಗಿ ಈ ದಿನಗಳಲ್ಲಿ ಹೆಚ್ಚಾಗಿ ಅವರನ್ನೇ ಟಾರ್ಗೆಟ್‌ ಮಾಡಿ ಮೆಕ್ಡೊನಾಲ್ಡ್ಸ್‌ ಒಂದು ಹೊಸ ಕೊಡುಗೆ ನೀಡಿದೆ. ಇದರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದ ಬರ್ಗರ್‌ ಲಭ್ಯವಿದೆ. ಶ್ರಾವಣದ ಸಮಯದಲ್ಲಿ, ಅನೇಕ ಹಿಂದೂಗಳು ಮಾಂಸ, ಮೀನು, ಮೊಟ್ಟೆ, ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಉಪವಾಸ ಮಾಡುವವರು ಕಟ್ಟುನಿಟ್ಟಾದ ಆಹಾರದ ನಿರ್ಬಂಧಗಳನ್ನು ಅನುಸರಿಸುತ್ತಾರೆ, ಗೋಧಿ, ಬೇಳೆಕಾಳುಗಳು, ದ್ವಿದಳ ಧಾನ್ಯಗಳು ಇವುಗಳನ್ನೇ ಹೆಚ್ಚಾಗಿ ಬಳಸುತ್ತಾರೆ.

ತಾಮಸ ಆಹಾರ

ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ತರಕಾರಿಗಳನ್ನು ತಾಮಸ ಆಹಾರ ಎಂದು ಪರಿಗಣಿಸಲಾಗುತ್ತದೆ. ಶ್ರಾವಣದ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದನ್ನು ತುಂಬಾ ಜನ ಬಿಡುವ ಕಾರಣ ವ್ಯಾಪಾರಕ್ಕೆ ಹೊಡೆತ ಬೀಳುಸ ಸಾಧ್ಯತೆಯೂ ಇರುತ್ತದೆ. ಇಂತಹ ಸಂದರ್ಭದಲ್ಲಿಯೂ ಲಾಭ ಕಂಡುಕೊಳ್ಳುವ ಉಪಾಯವನ್ನು ಮೆಕ್ಡೊನಾಲಡ್ಸ್‌ ಮಾಡಿದೆ.ವಿಶೇಷ ಮೆನುವನ್ನು ಪರಿಚಯಿಸುವ ಮೂಲಕ ಜನರಿಗೂ ಇದು ಖುಷಿ ಉಂಟುಮಾದಿದೆ.

ಬರ್ಗರ್‌ ಹೆಸರು ಇಲ್ಲಿದೆ

ಮೆಕ್‌ಚೀಸ್ ಬರ್ಗರ್ ಮತ್ತು ಮೆಕ್‌ಆಲೂ ಟಿಕ್ಕಿ ಬರ್ಗರ್‌ ಈ ಎರಡು ಬರ್ಗರ್‌ಅನ್ನು ನೀವು ಆಯ್ಕೆ ಮಾಡಿಕೊಂಡರೆ ಅದರಲ್ಲಿ ಯಾವುದೇ ಈರುಳ್ಳಿ ಹಾಗೂ ಬೆಳ್ಳುಳ್ಳಿ ಇರುವುದಿಲ್ಲ. ಶ್ರಾವಣ ಮಾಸದಲ್ಲಿ ನೀವೂ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದಿಲ್ಲ ಎಂದಾದರೆ ಈ ಬರ್ಗರ್‌ ಆರ್ಡರ್‌ ಮಾಡಿ ತಿನ್ನಬಹುದು.