ಕನ್ನಡ ಸುದ್ದಿ  /  Lifestyle  /  Oil For Eyebrow Growth

Oil for Eyebrow growth: ನಿಮ್ಮ ಹುಬ್ಬುಗಳು ತೆಳುವಾಗಿದ್ಯಾ..ದಟ್ಟವಾಗಿ ಬೆಳೆಯಲು ಈ ಎಣ್ಣೆ ಹಚ್ಚಿ

ಕೆಲವರಿಗೆ ಹುಬ್ಬು ಬಹಳ ತೆಳುವಾಗಿರುತ್ತದೆ. ಈ ಕಾರಣಕ್ಕಾಗೇ ಅವರು ಐಬ್ರೋಗೆ ಪೆನ್ಸಿಲ್‌ ಹಚ್ಚಿಕೊಳ್ಳುತ್ತಾರೆ. ಆದರೆ ಇದು ಶಾಶ್ವತವಾದ ಸಮಸ್ಯೆ ಅಲ್ಲ. ಹುಬ್ಬುಗಳು ದಟ್ಟವಾಗಿ ಕಾಣಬೇಕೆಂದರೆ 24 ಗಂಟೆಗಳ ಕಾಲವೂ ಪೆನ್ಸಿಲ್‌ ಹಚ್ಚಿ ಕೂರಲು ಸಾಧ್ಯವಿಲ್ಲ. ಅದರೆ ನೀವು ಕೆಲವೊಂದು ಎಣ್ಣೆ ಹಚ್ಚಿಕೊಂಡು ಮಸಾಜ್‌ ಮಾಡಿದರೆ ಐಬ್ರೋ ದಟ್ಟವಾಗಿ ಬೆಳೆಯುತ್ತದೆ.

ಐಬ್ರೋ ದಟ್ಟವಾಗಿ ಬೆಳೆಯಲು ಸಹಾಯಕಾರಿಯಾದ ಎಣ್ಣೆ
ಐಬ್ರೋ ದಟ್ಟವಾಗಿ ಬೆಳೆಯಲು ಸಹಾಯಕಾರಿಯಾದ ಎಣ್ಣೆ (PC: Freepik)

ಕಣ್ಣುಗಳ ಸೌಂದರ್ಯ ಎಷ್ಟು ಮುಖ್ಯವೋ ಹುಬ್ಬುಗಳು ಕೂಡಾ ಅಷ್ಟೇ ಮುಖ್ಯವಾಗಿರುತ್ತದೆ. ಅದರಲ್ಲೂ ಮಹಿಳೆಯರಿಗೆ ಕಾಮನಬಿಲ್ಲಿನಂತ ಹುಬ್ಬುಗಳಿದ್ದರೆ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ. ಹುಬ್ಬಿಗೆ ಶೇಪ್‌ ಕೊಡಲೇಂದೇ ಬಹಳ ಜನರು ಬ್ಯೂಟಿ ಪಾರ್ಲರ್‌ಗೆ ತೆರಳಿ ಐಬ್ರೋ ಥ್ರೆಡ್ಡಿಂಗ್‌ ಮಾಡಿಸಿಕೊಳ್ಳುತ್ತಾರೆ.

ಆದರೆ ಕೆಲವರಿಗೆ ಹುಬ್ಬು ಬಹಳ ತೆಳುವಾಗಿರುತ್ತದೆ. ಈ ಕಾರಣಕ್ಕಾಗೇ ಅವರು ಐಬ್ರೋಗೆ ಪೆನ್ಸಿಲ್‌ ಹಚ್ಚಿಕೊಳ್ಳುತ್ತಾರೆ. ಆದರೆ ಇದು ಶಾಶ್ವತವಾದ ಸಮಸ್ಯೆ ಅಲ್ಲ. ಹುಬ್ಬುಗಳು ದಟ್ಟವಾಗಿ ಕಾಣಬೇಕೆಂದರೆ 24 ಗಂಟೆಗಳ ಕಾಲವೂ ಪೆನ್ಸಿಲ್‌ ಹಚ್ಚಿ ಕೂರಲು ಸಾಧ್ಯವಿಲ್ಲ. ಅದರೆ ನೀವು ಕೆಲವೊಂದು ಎಣ್ಣೆ ಹಚ್ಚಿಕೊಂಡು ಮಸಾಜ್‌ ಮಾಡಿದರೆ ಐಬ್ರೋ ದಟ್ಟವಾಗಿ ಬೆಳೆಯುತ್ತದೆ. ಆಗ ನಿಮ್ಮ ಮುಖ ನೋಡಲು ಬಹಳ ಆಕರ್ಷಕವಾಗಿ ಕಾಣುತ್ತದೆ.

1 ಚಮಚ ಆಲಿವ್ ಎಣ್ಣೆಗೆ ಒಂದು ಚಮಚ ಹರಳೆಣ್ಣೆ ಸೇರಿಸಿ. ಈಗ ಅದೇ ಮಿಶ್ರಣಕ್ಕೆ 1 ಚಮಚ ತೆಂಗಿನ ಎಣ್ಣೆ ಹಾಗೂ 1 ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ ಎಲ್ಲಾ ಹೊಂದಿಕೊಳ್ಳುವಂತೆ ಮಿಶ್ರಣ ಮಾಡಿ. ಈ ಎಣ್ಣೆಯನ್ನು ಒಂದು ಗಾಜಿನ ಬಾಟಲಿಗೆ ಸಂಗ್ರಹಿಸಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದೆರಡು ಹನಿ ಎಣ್ಣೆಯನ್ನು ನಿಮ್ಮ ಬೆರಳಿನಲ್ಲಿ ತೆಗೆದುಕೊಂಡು ಅದನ್ನು ಎರಡೂ ಹುಬ್ಬುಗಳ ಮೇಲೆ ಹಚ್ಚಿ ಒಂದೆರಡು ನಿಮಿಷ ಮಸಾಜ್‌ ಮಾಡಿ. ಆದರೆ ಮೃದುವಾಗಿ ಮಸಾಜ್‌ ಮಾಡಿ, ರಭಸವಾಗಿ ಮಾಡಬೇಡಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ನೀವೇ ಫಲಿತಾಂಶ ಗಮನಿಸಲಿದ್ದೀರಿ.

ಹೀಗೆ ಕೆಲವೊಂದು ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಹುಬ್ಬುಗಳು ಸುಂದರವಾಗಿ ಬೆಳೆಯುವಂತೆ ಮಾಡಬಹುದು. ಈ ಎಣ್ಣೆಗಳನ್ನು ಪ್ರತ್ಯೇಕವಾಗಿ ಕೂಡಾ ಹಚ್ಚಬಹುದು. ಆದರೆ ಎಲ್ಲವನ್ನೂ ಒಟ್ಟಾಗಿ ಸೇರಿಸಿ ಹಚ್ಚುವುದು ಒಳ್ಳೆಯದು. ಹುಬ್ಬು ವೇಗವಾಗಿ ಬೆಳೆಯಬೇಕು ಎಂಬ ಕಾರಣಕ್ಕೆ ಹೆಚ್ಚು ಎಣ್ಣೆ ಹಚ್ಚಬೇಡಿ, ದಿನಕ್ಕೆ ಒಂದೆರಡು ಹನಿ ಹಚ್ಚಿದರೆ ಸಾಕು.

ಈ ಎಣ್ಣೆ ಮಾತ್ರವಲ್ಲದೆ ಐಬ್ರೋ ಬೆಳವಣಿಗೆಗೆ ವ್ಯಾಸಲಿನ್‌ ಕೂಡಾ ಬಳಸಬಹುದು. ಇದು ಕೇವಲ ಹುಬ್ಬುಗಳಿಗೆ ಮಾತ್ರವಲ್ಲ, ರೆಪ್ಪೆಗಳ ಬೆಳವಣಿಗೆಗೆ ಕೂಡಾ ಒಳ್ಳೆಯದು. ಆದರೆ ಇದನ್ನು ಬಳಸುವ ಮುನ್ನ ಪ್ಯಾಚ್‌ ಟೆಸ್ಟ್‌ ಮಾಡಿದರೆ ಉತ್ತಮ. ಏಕೆಂದರೆ ಕೆಲವೊಂದು ಪದಾರ್ಥಗಳು ಕೆಲವರಿಗೆ ಒಗ್ಗುವುದಿಲ್ಲ. ಒಂದೇ ಬಾರಿ ಇದನ್ನು ಬಳಸಿ ಸಮಸ್ಯೆಗೆ ಒಳಗಾಗುವ ಮುನ್ನ ಪ್ಯಾಚ್‌ ಟೆಸ್ಟ್‌ ಮಾಡಿ

.

ವಿಭಾಗ