Oil Free Cooking; ಒಂದು ಹನಿ ಎಣ್ಣೆಯೂ ಇಲ್ದೇ ಗರಿಗರಿ ಹಪ್ಪಳ ಸಂಡಿಗೆ ಹುರಿಯಿರಿ, ಇಲ್ಲಿದೆ ಪ್ರಾಚೀನ, ಆಧುನಿಕ ಸೀಕ್ರೆಟ್ ಟಿಪ್ಸ್‌-oil free cooking how to make crispy papad fries and chips ancient and modern without oil easy methods explained uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Oil Free Cooking; ಒಂದು ಹನಿ ಎಣ್ಣೆಯೂ ಇಲ್ದೇ ಗರಿಗರಿ ಹಪ್ಪಳ ಸಂಡಿಗೆ ಹುರಿಯಿರಿ, ಇಲ್ಲಿದೆ ಪ್ರಾಚೀನ, ಆಧುನಿಕ ಸೀಕ್ರೆಟ್ ಟಿಪ್ಸ್‌

Oil Free Cooking; ಒಂದು ಹನಿ ಎಣ್ಣೆಯೂ ಇಲ್ದೇ ಗರಿಗರಿ ಹಪ್ಪಳ ಸಂಡಿಗೆ ಹುರಿಯಿರಿ, ಇಲ್ಲಿದೆ ಪ್ರಾಚೀನ, ಆಧುನಿಕ ಸೀಕ್ರೆಟ್ ಟಿಪ್ಸ್‌

Oil Free Methods in Cooking; ಆಧುನಿಕ ಬದುಕಿನಲ್ಲಿ ಎಲ್ಲರಿಗೂ ಆರೋಗ್ಯದ ಕಾಳಜಿ. ಎಣ್ಣೆಯಲ್ಲಿ ಕರಿಯದ ಆಹಾರೋತ್ಪನ್ನಗಳ ಕಡೆಗೆ ಒಲವು ತೋರತೊಡಗಿದ್ದಾರೆ. ಹಿಂದಿನ ಕಾಲದಲ್ಲೂ ಇತ್ತು ಇಂತಹ ಆರೋಗ್ಯ ಕಾಳಜಿ. ಪ್ರಾಚೀನ, ಆಧುನಿಕ ಸೀಕ್ರೆಟ್ ಟಿಪ್ಸ್‌ ವಿವರ ಈ ವರದಿಯಲ್ಲಿದೆ. ಅದನ್ನು ತಿಳ್ಕೊಂಡು ಒಂದು ಹನಿ ಎಣ್ಣೆಯೂ ಇಲ್ದೇ ಗರಿಗರಿ ಹಪ್ಪಳ ಸಂಡಿಗೆ ಹುರಿಯರಿ.

ಒಂದು ಹನಿ ಎಣ್ಣೆಯೂ ಇಲ್ದೇ ಹಪ್ಪಳ ಸಂಡಿಗೆ ಹುರಿಯರಿ (ಸಾಂಕೇತಿಕ ಚಿತ್ರ)
ಒಂದು ಹನಿ ಎಣ್ಣೆಯೂ ಇಲ್ದೇ ಹಪ್ಪಳ ಸಂಡಿಗೆ ಹುರಿಯರಿ (ಸಾಂಕೇತಿಕ ಚಿತ್ರ) (Canva)

ಕುರುಕಲು ತಿಂಡಿ ತಿನಿಸು ಯಾರಿಗಿಷ್ಟ ಇಲ್ಲ ಹೇಳಿ, ಆದರೆ ಬೊಜ್ಜು ಬರುತ್ತೆ ಎಂಬ ಕಾರಣಕ್ಕೆ ಬಹುತೇಕರು ಈಗ ಆಯಿಲ್ ಫ್ರೀ ಅಥವಾ ವಿತೌಟ್ ಆಯಿಲ್ ಕುರುಕಲು ತಿಂಡಿ ತಿನಿಸುಗಳನ್ನು ಇಷ್ಟ ಪಡ್ತಾರೆ. ಅದು ಹಪ್ಪಳ- ಸಂಡಿಗೆಯೇ ಇರಬಹುದು ಅಥವಾ ಚಿಪ್ಸ್‌, ಫ್ರೈ ಯಾವುದೇ ಆದರೂ ಎಣ್ಣೆಯಲ್ಲಿ ಕರಿಯೋದು ಬೇಡ ಅನ್ನೋರೇ ಹೆಚ್ಚು.

ಹಪ್ಪಳ- ಸಂಡಿಗೆ, ಚಿಪ್ಸ್‌, ಫ್ರೈಸ್ ಮುಂತಾದ ಕುರುಕಲು ತಿನಿಸುಗಳಿಲ್ಲದೇ ಬಹುತೇಕರ ದಿನ ಕಳೆಯಲ್ಲ. ಊಟಕ್ಕೂ ಬೇಕು, ಉಪಾಹಾರಕ್ಕೂ ಇರಲಿ ಎನ್ನುವವರು ಈಗೀಗ ಎಣ್ಣೆಯಲ್ಲಿ ಕರಿದುದಾದರೆ ಬೇಡ ಎಂದು ಹೇಳತೊಡಗಿದ್ದಾರೆ. ಜೀವನಶೈಲಿ ಕಾರಣಕ್ಕಾಗಿ ಉಂಟಾಗಿರುವ ಆರೋಗ್ಯ ಸಮಸ್ಯೆಗಳು ಮನೆಯ ವಾತಾವರಣ, ಆಹಾರ ಕ್ರಮದ ಕುರಿತಾದ ಆಲೋಚನೆಗಳನ್ನು ಬದಲಾಯಿಸಿದೆ. ಇರಲಿ, ಅದು ಬೇರೆ ವಿಚಾರ. ಈಗ ಒಂದು ಹನಿ ಎಣ್ಣೆಯನ್ನೂ ಬಳಸದೆ ಕರುಂಕುರುಂ ಆಗಿರುವ ಕ್ರಿಸ್ಪಿ ಹಪ್ಪಳ ಸಂಡಿಗೆ, ಚಿಪ್ಸ್, ಫ್ರೈಸ್ ಅನ್ನು ರುಚಿಕರವಾಗಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ಉಪ್ಪು ಬಳಸಿಕೊಂಡು ಕುರುಕಲು ತಿಂಡಿ ತಯಾರಿಸುವುದು, ಕಾಯಿಸುವುದು, ಸುಟ್ಟುಹಾಕುವುದು

ಒಂದು ದೊಡ್ಡ ಕಡಾಯಿ ತಗೊಂಡು ಅದರಲ್ಲಿ ಕಲ್ಲುಪ್ಪು ಹಾಕಿ. ಮಧ್ಯಮ ಉರಿಯಲ್ಲಿ ಅದನ್ನು ಬಿಸಿ ಮಾಡಿ. ಉಪ್ಪು ಚೆನ್ನಾಗಿ ಕಾದ ನಂತರ ಅದಕ್ಕೆ ಹಪ್ಪಳ, ಸಂಡಿಗೆ ಇತ್ಯಾದಿಗಳನ್ನು ಹಾಕಿ ಎಣ್ಣೆಯಲ್ಲಿ ಅವುಗಳನ್ನು ಕರಿಯುವಾಗ ಮಾಡುವ ಅದೇ ರೀತಿ ಅಡಿಮೇಲುಮಾಡುತ್ತಿರಿ. ಹಪ್ಪಳ-ಸಂಡಿಗೆಗಳು ಉಪ್ಪಿನಲ್ಲಿ ಮುಳುಗೇಳಬೇಕು. ಅವು ಎಣ್ಣೆಯಲ್ಲಿ ಅರಳುವಂತೆಯೇ ಉಪ್ಪಿನಲ್ಲೂ ಅರಳುತ್ತವೆ. ಈ ಉಪ್ಪನ್ನು ತಣಿಸಿ ಶೇಖರಿಸಿ ಇಟ್ಟುಕೊಂಡರೆ ಮರುಬಳಕೆಗೂ ಯೋಗ್ಯವಾಗಿದೆ. ಬಿಸ್ಕತ್ತು, ಕೇಕ್ ತಯಾರಿಸುವಾಗ ಅದನ್ನು ಬೇಯಿಸಲು ಕೂಡ ಈ ಉಪ್ಪನ್ನು ಬಳಸಬಹುದು.

ಕಾಯಿಸುವುದು, ಸುಡುವುದು: ಅಕ್ಕಿ ಹಪ್ಪಳ, ಉದ್ದಿನ ಹಪ್ಪಳ, ಹಲಸಿನ ಹಪ್ಪಳ ಮುಂತಾದವುಗಳನ್ನು ಸುಟ್ಟುಹಾಕಿ ತಿನ್ನುವ ಕ್ರಮವೂ ಇದೆ. ಹಳ್ಳಿ ಕಡೆ ಸೌದೆ ಒಲೆಯ ಕೆಂಡದಲ್ಲಿ ಈ ರೀತಿ ಹಪ್ಪಳ ಸುಡುತ್ತಾರೆ. ಇನ್ನು ಸ್ವಲ್ಪ ನಗರದ ಕಡೆಗೆ ಬಂದರೆ ಇದ್ದಿಲು ಗ್ರಿಲ್‌ಗಳನ್ನು ಬಳಸಿಕೊಂಡು, ಗ್ಯಾಸ್ ಸ್ಟವ್ ಮೇಲೆ ಕೂಡ ಗ್ರಿಲ್ ಇಟ್ಟು ಹಪ್ಪಳ ಸುಡುತ್ತಾರೆ. ಇಂತಹ ಸುಟ್ಟ ಹಪ್ಪಳಕ್ಕೆ ತರಕಾರಿ ಹಚ್ಚಿ, ನಿಂಬೆ ರಸ ಹಿಂಡಿ, ಚಿಟಿಕೆ ಉಪ್ಪು, ಕಾಳುಮೆಣಸಿನ ಹುಡಿ ಹರಡಿ ತಿಂದರೆ ಅದರ ರುಚಿ ಅದ್ಬುತವಾಗಿರುತ್ತದೆ. ಮಸಾಲಾ ಪಾಪಡ್‌ ಅನ್ನು ಈ ರೀತಿ ಸುಟ್ಟು ತಿನ್ನುವವರು ಅನೇಕರು.

ಆಧುನಿಕ ಅಡುಗೆಯಲ್ಲಿ ಏರ್‌ ಫ್ರೈಯರ್‌, ಓವನ್‌

ಮನೆಯಲ್ಲಿ ಏರ್‌ ಫ್ರೈಯರ್ ಇದ್ದರೆ ಉಪ್ಪು ಬಳಸಿ ಹಪ್ಪಳ ಸಂಡಿಗೆ ಕರಿಯುವ ಟ್ರಿಕ್ ಬೇಡ ಬಿಡಿ. ಇದರಲ್ಲೂ ಅಷ್ಟೆ ಎಣ್ಣೆ ಬೇಡವೇ ಬೇಡ. ಬೆಂಡೆಕಾಯಿ, ಆಲೂಗಡ್ಡೆ, ಹಪ್ಪಳ ಸಂಡಿಗೆ, ಕಬಾಬ್‌, ಚಿಪ್ಸ್‌, ಫ್ರೈಸ್ ಹೀಗೆ ಎಲ್ಲವನ್ನೂ ಫ್ರೈ ಮಾಡಬಹುದು.

ಇನ್ನು ಮನೆಯಲ್ಲಿ ಓವನ್‌ ಇದ್ದರೆ, ಒಂದು ತಟ್ಟೆಯಲ್ಲಿ ಹಪ್ಪಳ, ಸಂಡಿಗೆ ಅಥವಾ ಯಾವುದನ್ನು ಫ್ರೈ ಮಾಡಬೇಕೋ ಅದನ್ನು ಇರಿಸಿ, ಅವುಗಳನ್ನು ಕರಿಯುವುದಕ್ಕೆ ಅಗತ್ಯ ತಾಪವನ್ನು ಅದರಲ್ಲಿ ಸೆಟ್ ಮಾಡಿದರೆ ಸಾಕು. 10 ಸೆಕೆಂಡ್‌ನಲ್ಲಿ ಹಪ್ಪಳ, ಸಂಡಿಗೆ, ಫ್ರೈ ಸಿದ್ಧವಾಗಿರುತ್ತದೆ. 10 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ಒಟ್ಟರೆ ಅವು ಸುಟ್ಟು ಕಪ್ಪಾಗಿ ಬಿಡುತ್ತವೆ. ರುಚಿ ಕೆಡುತ್ತವೆ ಎಂಬುದು ನೆನಪಿರಲಿ.