Optical illusion: ನಿಮ್ಮ ಕಣ್ಣಿಗೊಂದು ಸವಾಲು; ಚಿತ್ರದಲ್ಲಿ ಒಬ್ಬ ಮಾತ್ರ ಹಣೆಗೆ ಮುತ್ತಿಡುತ್ತಿದ್ದಾನೆ, 7 ಸೆಕೆಂಡ್‌ಗಳಲ್ಲಿ ಗುರುತಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Optical Illusion: ನಿಮ್ಮ ಕಣ್ಣಿಗೊಂದು ಸವಾಲು; ಚಿತ್ರದಲ್ಲಿ ಒಬ್ಬ ಮಾತ್ರ ಹಣೆಗೆ ಮುತ್ತಿಡುತ್ತಿದ್ದಾನೆ, 7 ಸೆಕೆಂಡ್‌ಗಳಲ್ಲಿ ಗುರುತಿಸಿ

Optical illusion: ನಿಮ್ಮ ಕಣ್ಣಿಗೊಂದು ಸವಾಲು; ಚಿತ್ರದಲ್ಲಿ ಒಬ್ಬ ಮಾತ್ರ ಹಣೆಗೆ ಮುತ್ತಿಡುತ್ತಿದ್ದಾನೆ, 7 ಸೆಕೆಂಡ್‌ಗಳಲ್ಲಿ ಗುರುತಿಸಿ

ಇಲ್ಲಿ ನೀಡಲಾಗಿರುವ ಹಳದಿ ಬಣ್ಣದ ಚಿತ್ರದಲ್ಲಿ ಕಪ್ಪು ಬಣ್ಣದಲ್ಲಿ ಕಾಣಿಸುತ್ತಿರುವ ಕಪಲ್ಸ್ ತಮ್ಮ ಸಂಗಾತಿಯನ್ನು ಮುದ್ದು ಮಾಡುತ್ತಿದ್ದಾರೆ. ಎಲ್ಲರೂ ಲಿಪ್ ಕಿಸ್ ಮಾಡುತ್ತಿದ್ದರೆ, ಒಬ್ಬ ವ್ಯಕ್ತಿ ಮಾತ್ರ ತನ್ನ ಸಂಗಾತಿಯ ಹಣೆಗೆ ಮುತ್ತಿಡುತ್ತಿದ್ದಾರೆ. 7 ಸೆಕೆಂಡ್‌ಗಳಲ್ಲಿ ಆ ಕಪಲ್ ಅನ್ನು ಗುರುತಿಸಿ.

ನಿಮ್ಮ ಕಣ್ಣಿಗೊಂದು ಸವಾಲು; ಚಿತ್ರದಲ್ಲಿ ಒಬ್ಬ ಮಾತ್ರ ಹಣೆಗೆ ಮುತ್ತಿಡುತ್ತಿದ್ದಾನೆ, 7 ಸೆಕೆಂಡ್‌ಗಳಲ್ಲಿ ಗುರುತಿಸಿ
ನಿಮ್ಮ ಕಣ್ಣಿಗೊಂದು ಸವಾಲು; ಚಿತ್ರದಲ್ಲಿ ಒಬ್ಬ ಮಾತ್ರ ಹಣೆಗೆ ಮುತ್ತಿಡುತ್ತಿದ್ದಾನೆ, 7 ಸೆಕೆಂಡ್‌ಗಳಲ್ಲಿ ಗುರುತಿಸಿ

ಕೆಲವೊಮ್ಮೆ ನಮ್ಮ ಕಣ್ಣು ನೋಡಿದ್ದೇ ಸತ್ಯ ಅಂತ ಅನಿಸಿದರೂ ಅದರಲ್ಲಿ ಏನೋ ಬದಲಾವಣೆ, ವಿಶೇಷ ಇರುತ್ತೆ. ಆದರೆ ಆ ತಕ್ಷಣಕ್ಕೆ ನಮಗೆ ಕಾಣಿಸುವುದಿಲ್ಲ. ನಾವು ಎಲ್ಲಾ ಒಂದೇ ಅಂತ ಭಾವಿಸಿದರೂ ಒಂದೇ ಆಗಿರುವುದಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಬದಲಾವಣೆಗಳು ಕಾಣುತ್ತವೆ. ಅಯ್ಯೋ ಹೌದಲ್ಲ ಅಂತೇಳಿ ನಕ್ಕು ಸುಮ್ಮನಾಗುತ್ತೇವೆ. ಆಪ್ಟಿಕಲ್ ಇಲ್ಯೂಷನ್ ನಮ್ಮ ಗ್ರಹಿಕೆ, ಆಲೋಚನೆಯನ್ನು ಹೆಚ್ಚಿಸುತ್ತದೆ. ಮೆದುಳಿಗೆ ಕೆಲಸ ಕೊಡುವ ಈ ವಿಧಾನ ಮನಸ್ಸಿನ ಏಕಾಗ್ರತೆಯ ಪರೀಕ್ಷೆಯೂ ಆಗಿದೆ. ಆಪ್ಟಿಕಲ್ ಇಲ್ಯೂಷನ್‌ಗೆ (Optical illusion) ಸಂಬಂಧಿಸಿದ ಇಲ್ಲೊಂದು ಫೋಟೊ ಇದೆ. ಹಳದಿ ಬಣ್ಣದ ಈ ಚಿತ್ರದಲ್ಲಿ ಕಪಲ್ಸ್ ಇವೆ. ಇದರಲ್ಲಿ ಎಲ್ಲರೂ ತಮ್ಮ ಸಂಗಾತಿಯ ತುಟಿಗೆ ಕಿಸ್ ಮಾಡುತ್ತಿದ್ದಾರೆ. ಆದರೆ ಒಬ್ಬ ಮಾತ್ರ ಹಣೆಗೆ ಮುತ್ತಿಡುತ್ತಿದ್ದಾನೆ.

ನೋಡಲು ಎಲ್ಲಾ ಒಂದೇ ರೀತಿ ಕಂಡರೂ ಎಲ್ಲೋ ಒಂದು ಕಡೆ ವ್ಯಕ್ತಿ ತನ್ನ ಸಂಗಾತಿಯ ಹಣೆಗೆ ಕಿಸ್ ಮಾಡುತ್ತಿದ್ದಾನೆ. ಇದು ನಿಮ್ಮ ಕಣ್ಣಿಗೆ ಸವಾಲ್ ಆಗಿದ್ದು, ಕೇವಲ 7 ನಿಮಿಷಗಳಲ್ಲಿ ಈ ಚಿತ್ರದಲ್ಲಿ ಹಣೆಗೆ ಮುತ್ತಿಡುತ್ತಿರುವ ವ್ಯಕ್ತಿಯನ್ನು ಪತ್ತೆಹಚ್ಚಿ.

ಈ ರೀತಿಯ ಭ್ರಮೆ-ಆಧಾರಿತ ಸವಾಲುಗಳು ದೃಶ್ಯ ಮಾಹಿತಿಯನ್ನು ತೆಗೆದುಕೊಂಡಾಗ ನಮ್ಮ ಅರಿವಿನ ಸಾಮರ್ಥ್ಯಗಳನ್ನು ಸುಧಾರಿಸುವಂತೆ ಮಾಡುತ್ತವೆ. ಮೆದುಳನ್ನು ಹೆಚ್ಚು ಸೃಜನಾತ್ಮಕವಾಗಿ ಯೋಚಿಸಲು ಉತ್ತೇಜಿಸುತ್ತದೆ. ಈ ಚಟುವಟಿಕೆಯು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಏಕೆಂದರೆ ನಿರ್ದಿಷ್ಟ ಸಮಯವನ್ನು ಗಮನಿಸಲು ಮತ್ತು ಕಾರ್ಯವನ್ನು ಪರಿಹರಿಸಲು ನೆರವಾಗುತ್ತದೆ.

ಸರಿ ನಿಮ್ಮ 7 ಸೆಕೆಂಡುಗಳ ಸಮಯ ಮುಗಿದಿದೆ. ನೀವು ಈಗಾಗಲೇ ಹಣೆಗೆ ಮುತ್ತಿಡುತ್ತಿರುವ ವ್ಯಕ್ತಿಯನ್ನು ಪತ್ತೆಹಚ್ಚಿದ್ದರೆ ನಿಮಗೆ ಅಭಿನಂದನೆಗಳು, ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳಿ. ಒಂದು ವೇಳೆ ನಿಮಗೆ ಆ ವ್ಯಕ್ತಿಯನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದರೆ ಬೇಸರಗೊಳ್ಳಬೇಡಿ ನಿಮಗಾಗಿ ನಾವು ಆ ಗುರುತನ್ನು ತಿಳಿಸುತ್ತೇವೆ. ಈ ಫೋಟೊದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಎಡಗಡೆಯಿಂದ ಎರಡನೇ ಸಾಲಿನ ಎರಡನೇ ಕಪಲ್ ಅನ್ನು ಸೂಕ್ಷ್ಮವಾಗಿ ಗಮನಿಸಿ.

ಚಿತ್ರದಲ್ಲಿ ಒಬ್ಬ ಮಾತ್ರ ಹಣೆಗೆ ಮುತ್ತಿಡುತ್ತಿದ್ದಾನೆ
ಚಿತ್ರದಲ್ಲಿ ಒಬ್ಬ ಮಾತ್ರ ಹಣೆಗೆ ಮುತ್ತಿಡುತ್ತಿದ್ದಾನೆ

ಈ ಕಪಲ್ಸ್‌ಗಿಂತ ಈ ಕಪಲ್ ಮಾತ್ರ ಸ್ವಲ್ಪ ಭಿನ್ನವಾಗಿದೆ. ಎಲ್ಲ ಕಪಲ್ ತುಟಿಗೆ ಕಿಸ್ ಮಾಡುತ್ತಿದ್ದು, ಎರಡನೇ ಸಾಲಿನ ಎರಡನೇ ಕಪಲ್ ಮಾತ್ರ ಹಣೆಗೆ ಮುತ್ತಿಡುತ್ತಿರುವುದನ್ನು ಕಾಣಬಹುದು. ಇಂತಹ ಆಪ್ಟಿಕಲ್ ಇಲ್ಯೂಷನ್ ಮನಸ್ಸಿನ ವ್ಯಾಯಾಮದ ಕೆಲಸವಾಗಿದ್ದು, ಸೃಜನಶೀಲತೆ ಮತ್ತು ವಿಶ್ಲೇಷಣಾತ್ಮಕ ಚಿಂತನೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಮನಸ್ಸನ್ನು ರಿಲ್ಯಾಕ್ಸ್ ಮಾಡಿಸುತ್ತದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner