ಕನ್ನಡ ಸುದ್ದಿ  /  Lifestyle  /  Optical Illusion Find Out The Frong In The Aquarium In 5 Seconds Viral News Mind And Brain Teaser Mgb

Optical Illusion: ನಿಮಗೆ 5 ಸೆಕೆಂಡ್​ ಟೈಂ ಕೊಡ್ತೀವಿ, ಈ ಚಿತ್ರದಲ್ಲಿ ಅವಿತಿರುವ ಕಪ್ಪೆಯನ್ನು ಹುಡುಕಿ

Mind and brain teaser: ಈ ಅಕ್ವೇರಿಯಂ ಒಳಗಿರುವ ಕಲ್ಲುಗಳ ನಡುವೆ ಕಪ್ಪೆಯೊಂದು ಇದೆ. ಈ ಚಿತ್ರ ನೋಡಿ ಕೇವಲ 5 ಸೆಕೆಂಡ್​​ನಲ್ಲಿ ನೀವು ಕಲ್ಲುಗಳ ನಡುವೆ ಅವಿತಿರುವ ಕಪ್ಪೆಯನ್ನು ಹುಡುಕಬೇಕು.

ಕಲ್ಲುಗಳ ನಡುವೆ ಇರುವ ಕಪ್ಪೆ ಹುಡುಕಿ (PC: TIKTOK/MALACHISJUNGLE)
ಕಲ್ಲುಗಳ ನಡುವೆ ಇರುವ ಕಪ್ಪೆ ಹುಡುಕಿ (PC: TIKTOK/MALACHISJUNGLE)

ದೃಷ್ಟಿ ಭ್ರಮಣೆ ಅಥವಾ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಕೇಲವ ನಿಮ್ಮ ಮೆದುಳಿಗೆ ಕೆಲಸ ನೀಡುವುದಿಲ್ಲ, ನಿಮ್ಮ ತಲೆ ಕೆರೆದುಕೊಳ್ಳುವಂತೆಯೂ ಮಾಡುತ್ತವೆ. ನಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಏನೂ ಇಲ್ಲದಂತೆ ಅಥವಾ ಏನೋ ಇದ್ದಂತೆ ತೋರಿಸುತ್ತದೆ. ಕೆಲವೊಮ್ಮೆ ಎಷ್ಟೇ ಬ್ರೇನ್​ ಉಪಯೋಗಿಸಿದರೂ ಉತ್ತರ ಕಂಡು ಹಿಡಿಯಲು ಆಗೋದೇ ಇಲ್ಲ. ಉತ್ತರ ಬೇಕಂದ್ರೆ ನಿಮಗೆ ಸ್ವಲ್ಪ ನಿಮಗೆ ತಾಳ್ಮೆ ಇರಬೇಕು. ಉತ್ತರವನ್ನ ಹುಡುಕುವುದೇ ಒಂದು ರೀತಿಯಲ್ಲಿ ಮಜಾ ಎನ್ನಿಸುತ್ತದೆ. ಈಗ ಅಂತಹದ್ದೇ ಒಂದು ಇಮೇಜ್​ ನಿಮ್ಮ ಮುಂದಿದೆ.

ಈ ಚಿತ್ರದಲ್ಲಿ ಅಕ್ವೇರಿಯಂ ಕಾಣಿಸ್ತಾ ಇದೆ ಅಲ್ವಾ? ಅಕ್ವೇರಿಯಂ ಒಳಗೆ ಮೀನುಗಳು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೆಂಬುದೇನೋ ಹೌದು. ಆದ್ರೆ ಅಕ್ವೇರಿಯಂ ಒಳಗೆ ಅಲಂಕಾರಕ್ಕಾಗಿ ಇಟ್ಟ ಬೆಣಚು ಮುಂತಾದ ಕಲ್ಲುಗಳು ಕಾಣಿಸ್ತಿದೆ ಅಲ್ವಾ? ಇಲ್ಲಿ ನಿಮ್ಮ ತಲೆಗೆ ಹುಳ ಬಿಡುವ ನಮ್ಮ ಕೆಲಸ ಏನು ಗೊತ್ತಾ? ಈ ಅಕ್ವೇರಿಯಂ ಒಳಗಿರುವ ಕಲ್ಲುಗಳ ನಡುವೆ ಕಪ್ಪೆಯೊಂದು ಇದೆ. ಈ ಚಿತ್ರ ನೋಡಿ ಕೇವಲ 5 ಸೆಕೆಂಡ್​​ನಲ್ಲಿ ನೀವು ಕಲ್ಲುಗಳ ನಡುವೆ ಅವಿತಿರುವ ಕಪ್ಪೆಯನ್ನು ಹುಡುಕಬೇಕು.

ನಿಮ್ಮ ಸಮಯ ಈಗ ಶುರು. ರೆಡಿ.. ಒಂದು, ಎರಡು, ಮೂರು, ನಾಲ್ಕು... ಮತ್ತು ಐದು. ನಿಮ್ಮ ಟೈಂ ಔಟ್​. ಕಪ್ಪೆ ಕಾಣಿಸ್ತಾ? ಹಾಗಾದ್ರೆ ನಿಮ್ಮ ಕಣ್ಣು ತುಂಬಾ ಶಾರ್ಪ್​ ಮರ್ರೆ.. ಗೊತ್ತಾಗದೇ ಇದ್ದವರಿಗೆ ನಾವೊಂದು ಸುಳಿವು ಕೊಡ್ತೀವಿ. ಆ ಕಪ್ಪೆ ಕಂದು ಬಣ್ಣದಲ್ಲಿದೆ. ಈಗ ಗೊತ್ತಾಯ್ತು ಅನ್ನಿಸುತ್ತೆ ಅಲ್ವಾ? ಕಪ್ಪೆಯು ಕಲ್ಲಿನಂತೆಯೇ ಕಾಣಿಸುತ್ತಿದೆ. ಆದರೆ ಅದರ ಕಾಲುಗಳನ್ನು ನೋಡಿ ನಾವು ಅದನ್ನು ಇಲ್ಲಿ ಗುರುತಿಸಬಹುದಾಗಿದೆ.

ದೃಷ್ಟಿಭ್ರಮೆಯ ಇಂತಹ ಚಿತ್ರಗಳು ಯಾವಾಗಲೂ ಮೊಬೈಲ್​ನಲ್ಲಿಯೇ ಕಾಲ ಕಳೆಯುವವರಿಗೆ ಟೈಮ್​ ಪಾಸ್​ ಮಾಡಲು ಸಹಾಯ ಮಾಡುವುದರ ಜೊತೆಯಲ್ಲಿ ಅವರ ವ್ಯಕ್ತಿತ್ವ ಎಂಥಾದ್ದು ಎಂಬುದನ್ನೂ ತಿಳಿಸುತ್ತವೆ. ನಿಮ್ಮ ಐಕ್ಯೂ ಯಾವ ಮಟ್ಟದಲ್ಲಿದೆ? ನಿಮ್ಮ ಕಣ್ಣಿನ ಸೂಕ್ಷ್ಮತೆ ಎಷ್ಟಿದೆ? ನಿಮ್ಮ ಏಕಾಗ್ರತೆ ಎಂಥಾದ್ದು? ಕೊಟ್ಟ ಸಮಯವನ್ನು ನೀವು ಹೇಗೆ ಬಳಸಿಕೊಳ್ಳುತ್ತೀರಿ? ಹೀಗೆ ತುಂಬಾ ಪ್ರಶ್ನೆಗಳಿಗೆ ಇಂಥಹ ಚಟುವಟಿಕೆಗಳು ಉತ್ತರ ನೀಡುತ್ತವೆ.

ವಿಭಾಗ