ಕನ್ನಡ ಸುದ್ದಿ  /  ಜೀವನಶೈಲಿ  /  Optical Illusion: ನಿಮ್ಮ ಕಣ್ಣಿಗೊಂದು ಸವಾಲು; ಈ ಹಸುಗಳ ಹಿಂಡಿನ ನಡುವೆ ಅವಿತಿರುವ ಕರಡಿಯನ್ನು 7 ಸೆಕೆಂಡ್‌ ಒಳಗೆ ಪತ್ತೆ ಹಚ್ಚಿ..!

Optical Illusion: ನಿಮ್ಮ ಕಣ್ಣಿಗೊಂದು ಸವಾಲು; ಈ ಹಸುಗಳ ಹಿಂಡಿನ ನಡುವೆ ಅವಿತಿರುವ ಕರಡಿಯನ್ನು 7 ಸೆಕೆಂಡ್‌ ಒಳಗೆ ಪತ್ತೆ ಹಚ್ಚಿ..!

Optical Illusion: ನಿಮ್ಮ ಕಣ್ಣು ಸೂಕ್ಷ್ಮವಿದೆ ಎಂದು ನಿಮಗನಿಸಿದ್ದರೆ ಇದನ್ನು ಸಾಬೀತುಪಡಿಸೋಕೆ ಇಲ್ಲೊಂದು ಸವಾಲನ್ನು ನಿಮಗೆ ನೀಡಲಾಗಿದೆ. ಈ ಸವಾಲಿಗೆ ಉತ್ತರವನ್ನು ಕೇವಲ 7 ಸೆಕೆಂಡುಗಳ ಒಳಗಾಗಿ ನೀವು ನೀಡಿದರೆ ನಿಮ್ಮ ಕಣ್ಣು ಬಹಳ ತೀಕ್ಷ್ಣ ಎನ್ನುವಲ್ಲಿ ಎರಡು ಮಾತಿಲ್ಲ.

ಹಸುವಿನ ಹಿಂಡಿನ ನಡುವೆ ಇರುವ ಕರಡಿಯನ್ನು ಗುರುತಿಸಿ
ಹಸುವಿನ ಹಿಂಡಿನ ನಡುವೆ ಇರುವ ಕರಡಿಯನ್ನು ಗುರುತಿಸಿ (PC: Th Sun)

Brain Teaser: ನಿಮ್ಮ ಕಣ್ಣು ಎಷ್ಟು ಸೂಕ್ಷ್ಮವಾಗಿದೆ ಎಂದು ತಿಳಿದುಕೊಳ್ಳಬೇಕು ಎಂದು ಎಂದಾದರೂ ಎನಿಸಿದೆಯೇ..? ಹೌದು ಎಂದಾದಲ್ಲಿ ನಿಮಗೊಂದು ಸವಾಲು ಇಲ್ಲಿದೆ. ಕೇವಲ 7 ಸೆಕೆಂಡುಗಳ ಒಳಗಾಗಿ ಉತ್ತರ ಕೊಡಿ. ಇಲ್ಲಿರುವ ದೃಷ್ಟಿ ಭ್ರಮೆಯ ಚಿತ್ರದಲ್ಲಿ ನಾವು ಕೇಳಲಾದ ಸವಾಲುಗಳಿಗೆ ಉತ್ತರಿಸುವ ಸಾಮರ್ಥ್ಯ ನಿಮಗಿದ್ದರೆ ನಿಮ್ಮ ಕಣ್ಣು ಸೂಕ್ಷ್ಮವಾಗಿದೆ ಎಂಬುದಕ್ಕೆ ಬೇರೆ ಪ್ರಮಾಣ ಪತ್ರವೇ ಬೇಕಿಲ್ಲ.

ಟ್ರೆಂಡಿಂಗ್​ ಸುದ್ದಿ

ಇಲ್ಲಿ ನೀಡಲಾದ ಚಿತ್ರದಲ್ಲಿ ಒಂದು ಬಿಳಿ ಕುದುರೆ ಹಾಗೂ ಹಲವು ಕಂದು ಬಣ್ಣದ ಹಸುಗಳು ಮೇಯುತ್ತಿರುವುದನ್ನು ನೀವು ಕಾಣಬಹುದು. ಮೊದಲ ನೋಟದಲ್ಲಿ ನಿಮಗೆ ಈ ಚಿತ್ರವನ್ನು ನೋಡಿದಾಗ ಇಷ್ಟೇ ಕಾಣುತ್ತದೆ. ಆದರೆ ಈ ಚಿತ್ರವನ್ನು ಇನ್ನೂ ಗಮನಿಸಿ ನೋಡಿದಾಗ ಇಲ್ಲಿ ಕೇವಲ ಹಸು, ಕುದುರೆ ಹಾಗೂ ಕುದುರೆ ಮೇಲೆ ಕುಳಿತ ವ್ಯಕ್ತಿಯನ್ನು ಬಿಟ್ಟು ಇನ್ನೂ ಒಂದು ಪ್ರಾಣಿ ಇದೆ ಎಂಬುದು ತಿಳಿಯುತ್ತದೆ.

ಹಸುಗಳ ರಾಶಿಯ ನಡುವೆ ಇರುವ ಕರಡಿ

ಇಲ್ಲಿರುವ ಕಂದು ಬಣ್ಣದ ಹಸುಗಳ ರಾಶಿಯ ನಡುವೆ ಕರಡಿ ಕೂಡ ಇದೆ. ಆ ಕರಡಿ ಎಲ್ಲಿದೆ ಎಂಬುದನ್ನು ಕೇವಲ 7 ಸೆಕೆಂಡುಗಳಲ್ಲಿ ಪತ್ತೆ ಮಾಡಲು ನಿಮ್ಮಿಂದ ಸಾಧ್ಯವಿದೆಯೇ..? ಏಳು ಸೆಕೆಂಡುಗಳಲ್ಲಿ ನೀವು ಈ ಸವಾಲಿನಲ್ಲಿ ಗೆದ್ದರೆ ನಿಮ್ಮ ಕಣ್ಣು ಸೂಕ್ಷ್ಮವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅಂದಹಾಗೆ ಈ ಸವಾಲಿಗೆ ಉತ್ತರ ಕಂಡು ಹಿಡಿಯುವುದು ನೀವಂದುಕೊಂಡಷ್ಟು ಸುಲಭವಲ್ಲ. ಯಾರ ಕಣ್ಣು ಸೂಕ್ಷ್ಮವಾಗಿದ್ದು , ಏಕಾಗ್ರತೆ ಬಹಳ ಜಾಸ್ತಿ ಇರುತ್ತದೆಯೋ ಅವರಿಗೆ ಮಾತ್ರ ಈ ಸವಾಲನ್ನು ಗೆಲ್ಲಲು ಸಾಧ್ಯವಿದೆ. ಒಂದೇ ಪ್ರಯತ್ನದಲ್ಲಿ ನೀವು ಗೆಲ್ಲುವಲ್ಲಿ ಸಾಧ್ಯವಾದರೆ ನಿಮಗೊಂದು ಪ್ರಶಸ್ತಿ ಕೊಡಬೇಕು..!

ಮೆದುಳಿಗೆ ಒಳ್ಳೆಯ ಚಟುವಟಿಕೆ

ದೃಷ್ಟಿಭ್ರಮೆಯ ಚಿತ್ರಗಳಿಗೆ ಉತ್ತರ ಕಂಡುಹಿಡಿಯುವುದು ಮಾತನಾಡಿದಷ್ಟು ಸುಲಭವಲ್ಲ..! ಇವುಗಳು ನಿಮ್ಮ ಮೆದುಳಿಗೆ ದೊಡ್ಡ ಮಟ್ಟದ ಕೆಲಸ ಕೊಡುತ್ತವೆ. ಇವು ಮೆದುಳಿಗೆ ಹಾಗೂ ಕಣ್ಣುಗಳಿಗೆ ಚಟುವಟಿಕೆ ನೀಡುವ ಜೊತೆಯಲ್ಲಿ ಒಳ್ಳೆಯ ಮನರಂಜನೆಯನ್ನೂ ನೀಡುತ್ತದೆ. ಈಗ ನೀವು ಕೂಡಾ ಮೆದುಳು ಹಾಗೂ ಕಣ್ಣುಗಳಿಗೆ ಕೆಲಸ ನೀಡುತ್ತಾ ಹಸುಗಳ ಹಿಂಡಿನ ನಡುವೆ ಇರುವ ಕರಡಿಯನ್ನು ಪತ್ತೆ ಮಾಡಬೇಕಿದೆ.. ನಿಮ್ಮ ಸಮಯ ಈಗ ಶುರು..!

ಇಲ್ಲಿ ಅವಿತಿದೆ ನೋಡಿ ಕರಡಿ
ಇಲ್ಲಿ ಅವಿತಿದೆ ನೋಡಿ ಕರಡಿ (PC: Th Sun)

ಈ ಸವಾಲಿಗೆ ಕೇವಲ ಏಳು ಸೆಕೆಂಡುಗಳಲ್ಲಿ ಉತ್ತರ ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವಾಯ್ತೇ..? ಹೌದು ಎಂದಾದರೆ ಈ ಸವಾಲನ್ನು ನೀವು ಗೆದ್ದಂತೆ..! ಆದರೆ ಯಾರ್ಯಾರಿಗೆ ಎಷ್ಟೇ ಹುಡುಕಿದರೂ ಕರಡಿ ಕಾಣಲೇ ಇಲ್ಲ ಎಂದು ಯೋಚಿಸುತ್ತಿದ್ದೀರೋ..ನಿಮ್ಮ ಸಮಯ ಇಲ್ಲಿಗೆ ಮುಗೀತು. ಈ ಕೆಳಗೆ ನೀಡಲಾದ ಚಿತ್ರದಲ್ಲಿ ಹಸುಗಳ ಹಿಂಡುಗಳ ನಡುವೆ ಇದ್ದ ಕರಡಿ ಮುಖವನ್ನು ತೋರಿಸಲಾಗಿದೆ. ಈಗ ಹೇಳಿ..! ಇಲ್ಲಿ ಕರಡಿ ಇದ್ದಿರಬಹುದು ಎಂದು ಒಮ್ಮೆಯಾದರೂ ನಿಮಗೆ ಸಂಶಯ ಮೂಡಿತ್ತೇ..?

ವಿಭಾಗ