Optical Illusion: ನಿಮಗಿದೆ 10 ಸೆಕೆಂಡ್ ಟೈಂ; ಈ ಚಿತ್ರದಲ್ಲಿ ಸ್ವಲ್ಪ ಭಿನ್ನವಾಗಿ ಕಾಣುವ ಜಿರಾಫೆ ಯಾವುದು ಹೇಳಿ
Viral Optical Illusion: ಇಲ್ಲಿ ನಿಮ್ಮ ಕೆಲಸ ಏನಪ್ಪಾ ಅಂದ್ರೆ, ಈ ಇಮೇಜ್ನಲ್ಲಿರುವ ಜಿಂಕೆಗಳಲ್ಲಿ ಒಂದು ಜಿರಾಫೆ ಉಳಿದ ಜಿರಾಫೆಗಳಿಗಿಂತ ಭಿನ್ನವಾಗಿದೆ. ಆ ಜಿರಾಫೆ ಯಾವುದು ಎಂಬುದನ್ನು ನೀವು ಹುಡುಕಬೇಕು.
ದೃಷ್ಟಿ ಭ್ರಮಣೆ ಅಥವಾ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಕೇವಲ ನಿಮ್ಮ ಮೆದುಳಿಗೆ ಕೆಲಸ ನೀಡುವುದಿಲ್ಲ, ನಿಮ್ಮ ತಲೆ ಕೆರೆದುಕೊಳ್ಳುವಂತೆಯೂ ಮಾಡುತ್ತವೆ. ನಿಮ್ಮ ಕಣ್ಣಿನ ಸೂಕ್ಷ್ಮತೆ ಎಷ್ಟಿದೆ ಎಂಬುದನ್ನು ಪರೀಕ್ಷೆ ಮಾಡುತ್ತದೆ. ನಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಏನೂ ಇಲ್ಲದಂತೆ ಅಥವಾ ಏನೋ ಇದ್ದಂತೆ ತೋರಿಸುತ್ತದೆ. ಕೆಲವೊಮ್ಮೆ ಎಷ್ಟೇ ಬ್ರೇನ್ ಉಪಯೋಗಿಸಿದರೂ ಉತ್ತರ ಕಂಡು ಹಿಡಿಯಲು ಆಗೋದೇ ಇಲ್ಲ. ಉತ್ತರ ಬೇಕಂದ್ರೆ ನಿಮಗೆ ಸ್ವಲ್ಪ ನಿಮಗೆ ತಾಳ್ಮೆ ಇರಬೇಕು. ಉತ್ತರವನ್ನ ಹುಡುಕುವುದೇ ಒಂದು ರೀತಿಯಲ್ಲಿ ಮಜಾ ಎನ್ನಿಸುತ್ತದೆ. ಈಗ ಅಂತಹದ್ದೇ ಒಂದು ಚಿತ್ರ ನಿಮ್ಮ ಮುಂದಿದೆ.
ದಿ ಡುಡಾಲ್ಫ್ (The Dudolf) ವೆಬ್ಸೈಟ್ನಲ್ಲಿ ಹಂಚಿಕೊಳ್ಳಲಾಗಿರುವ ಈ ಚಿತ್ರದಲ್ಲಿ ಒಟ್ಟು 19 ಜಿರಾಫೆಗಳಿವೆ. ಇಲ್ಲಿ ನಿಮ್ಮ ಕೆಲಸ ಏನಪ್ಪಾ ಅಂದ್ರೆ, ಈ ಇಮೇಜ್ನಲ್ಲಿರುವ ಜಿಂಕೆಗಳಲ್ಲಿ ಒಂದು ಜಿರಾಫೆ ಉಳಿದ ಜಿರಾಫೆಗಳಿಗಿಂತ ಭಿನ್ನವಾಗಿದೆ. ಆ ಜಿರಾಫೆ ಯಾವುದು ಎಂಬುದನ್ನು ನೀವು ಹುಡುಕಬೇಕು.
ಇದಕ್ಕಾಗಿ ನೀವು ಹೆಚ್ಚಿಗೆ ಸಮಯ ತೆಗೆದುಕೊಳ್ಳುವಂತಿಲ್ಲ. ನಿಮಗಿರುವುದು ಕೇವಲ 10 ಸೆಕೆಂಡ್ ಮಾತ್ರ. ಅಷ್ಟರಲ್ಲಿ ಆ ವಿಭಿನ್ನ ಜಿರಾಫೆಯನ್ನ ಹುಡುಕಿ. ನಿಮ್ಮ ಕಣ್ಣು ಎಷ್ಟು ಶಾರ್ಪ್ ಇದೆ ಅಂತ ಪರೀಕ್ಷೆ ಮಾಡಿಯೇ ಬಿಡೋಣ ಬನ್ನಿ.
ನಿಮ್ಮ ಕಣ್ಣುಗಳನ್ನು ಪರೀಕ್ಷಿಸಲು ನೀವು ಸಿದ್ಧರಿದ್ದೀರಾ? ಹಾಗಿದ್ರೆ ನಿಮ್ಮ ಸಮಯ ಈಗ ಶುರು. ಚಿತ್ರವನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ರೆಡಿ ಒನ್, ಟು, ಥ್ರೀ., ಫೋರ್, ಫೈವ್, ಸಿಕ್ಸ್... ಕೊನೆಯ ಬಾರಿಗೆ ಚಿತ್ರವನ್ನು ಅತ್ಯಂತ ಗಮನದಿಂದ ನೋಡಿ ಮತ್ತು ನೀವು ಜಿರಾಫೆಯನ್ನು ಪತ್ತೆ ಮಾಡಬಹುದೇ ಎಂದು ನೋಡಿ. ಸೆವೆನ್, ಎಯ್ಟ್, ನೈನ್, ಟೆನ್.
ನಿಮಗೆ ನೀಡಿದ್ದ ಟೈಂ ಮುಗಿತು. ಆ ಡಿಫರೆಂಟ್ ಜಿರಾಫೆಯನ್ನು ಹುಡುಕಿದ್ರಾ? ಹಾಗಿದ್ರೆ ನೀವೇ ಜಾಣರು. ಈ ಟಾಸ್ಟ್ ನಿಮಗೆ ಇಷ್ಟ ಆಗಿದ್ರೆ ನಿಮ್ಮ ಸ್ನೇಹಿತರಿಗೂ ಇದನ್ನು ಕಳಿಸಿ ಹುಡುಕಲು ಹೇಳಿ. ಅವರೆಷ್ಟು ಶಾರ್ಪ್ ಎಂದು ಪರೀಕ್ಷೆ ಮಾಡಿಬಿಡಿ.
ವಿಭಾಗ