Optical Illusion: ನಿಜವಾದ ಪ್ರೇಮಿಗಳಿಗೊಂದು ಸವಾಲ್; 10 ಸೆಕೆಂಡ್‌ಗಳಲ್ಲಿ ಈ ಚಿತ್ರದಲ್ಲಿರುವ ಲವ್ ಪದ ಕಂಡು ಹಿಡಿಯಿರಿ
ನಿಜವಾದ ಪ್ರೇಮಿಗಳಿಗೆ ಒಂದು ಸವಾಲಿದೆ. 10 ಸೆಕೆಂಡ್‌ಗಳಲ್ಲಿ ಈ ಚಿತ್ರದಲ್ಲಿ ಲವ್ ಎನ್ನುವ ಪದ ಎಲ್ಲಿದೆ ಕಂಡುಹಿಡಿಯಿರಿ ನೋಡೋಣ.
ಆಪ್ಟಿಕಲ್ ಇಲ್ಯೂಷನ್ (Optical Illusion) ಎಂದರೆ ಸತ್ಯವು ನಮ್ಮ ಕಣ್ಣ ಮುಂದೆ ಇರುತ್ತದೆ. ಆದರೆ ಆ ಕ್ಷಣಕ್ಕೆ ಕಾಣುವುದಿಲ್ಲ. ಅದನ್ನು ಕಂಡು ಹಿಡಿಯುವುದು ಸವಾಲಿನ ಕೆಲಸ. ಇದೇ ಆಪ್ಟಿಕಲ್ ಇಲ್ಯೂಷನ್. ಕಣ್ಣು ಮತ್ತು ಮನಸ್ಸಿಗೆ ಸ್ವಲ್ಪ ಕೆಲಸ ಕೊಡಬೇಕಾಗುತ್ತದೆ. ಇದೊಂದು ರೀತಿಯ ಆಟದ ಜೊತೆಗೆ ನಮ್ಮ ದೃಷ್ಟಿ ಹಾಗೂ ಜ್ಞಾನದ ಸಾಮರ್ಥ್ಯವನ್ನು ನಾವೇ ಪರೀಕ್ಷಿಸಿಕೊಳ್ಳುವಂತೆ ಮಾಡುತ್ತದೆ.
ಮುಖ್ಯವಾಗಿ ದೃಷ್ಟಿ ಆಧಾರಿತ ಆಪ್ಟಿಕಲ್ ಇಲ್ಯೂಷನ್‌ನಲ್ಲಿ ಎಲ್ಲರೂ ಯಶಸ್ವಿಯಾಗುವುದಿಲ್ಲ. ಹೆಚ್ಚಿನ ಗ್ರಹಿಕಾ ಸಾಮರ್ಥ್ಯ ಇರುವವರು ಮಾತ್ರ ಇದರಲ್ಲಿ ಗೆಲುವು ಕಾಣುತ್ತಾರೆ. ನಿಜವಾದ ಪ್ರೇಮಿಗಳಿಗೆ ಇಲ್ಲೊಂದು ಸವಾಲನ್ನು ನೀಡುತ್ತಿದ್ದೇವೆ. ಈ ಮೇಲಿನ ಚಿತ್ರದಲ್ಲಿ ‘ಲೋನ್’ ಎಂಬ ಪದಗಳನ್ನು ಬರೆಯಲಾಗಿದೆ. ಇದರ ನಡುವೆ ಎಲ್ಲೋ ಒಂದು ಕಡೆ ‘ಲವ್’ ಎಂಬ ಪದ ಸೇರಿಕೊಂಡಿದೆ. ಚಿತ್ರ ನೋಡಿದ 10 ಸೆಕೆಂಡ್‌ಗಳಲ್ಲಿ ‘ಲವ್’ ಪದ ಎಲ್ಲಿದೆ ಅನ್ನೋದನ್ನ ನೀವು ಪತ್ತೆ ಹಚ್ಚಬೇಕು. ನಿಮಗೆ ಉತ್ತರ ಸಿಗದಿದ್ದರೆ ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ನಾವು ನಿಮಗೆ ಲವ್ ಪದ ಎಲ್ಲಿದೆ ಅನ್ನೋದ ತೋರಿಸುತ್ತೇವೆ. ಅದಕ್ಕೂ ಮುನ್ನ ನಿಮ್ಮ ಕಣ್ಣು ಮತ್ತು ಜ್ಞಾನಕ್ಕೆ ನೀವು ಸ್ವಲ್ಪ ಕೆಲಸ ಕೊಡಬೇಕು ಅಷ್ಟೆ.
ಚಿತ್ರದಲ್ಲಿ ಲವ್ ಎಂಬ ಪದ ಇಲ್ಲವೇ ಇಲ್ಲ ಅಂತ ಹೇಳಬಹುದು. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಆ ಪದ ಎಲ್ಲಿದೆ ಅನ್ನೋದು ಗೊತ್ತಾಗುತ್ತದೆ. ಇದು ಒಂದು ರೀತಿಯಲ್ಲಿ ನಮ್ಮ ಕಣ್ಣಿನ ಸಾಮರ್ಥ್ಯವನ್ನು ಪರೀಕ್ಷೆ ಮಾಡಿದಂತೆ ಆಗುತ್ತದೆ. ಇಂತಹ ಹತ್ತಾರು ಆಪ್ಟಿಕಲ್ ಇಲ್ಯೂಷನ್‌ಗಳನ್ನು ನೀವು ನೋಡಿರುತ್ತೀರಿ. ಚಿತ್ರದಲ್ಲಿ ವ್ಯತ್ಯಾಸಗಳು, ಚಿತ್ರದಲ್ಲಿ ಪದಗಳನ್ನು ಹುಡುಕುವುದು, ಚಿತ್ರದಲ್ಲಿ ಅಡಗಿರುವ, ಪ್ರಾಣಿ, ಪಕ್ಷಿ, ಹಣ್ಣುಗಳು, ಬಣ್ಣ, ಗುರುತುಗಳನ್ನ ಪತ್ತೆ ಹಚ್ಚುವುದು ಹೀಗೆ ನಾನಾ ರೀತಿಯ ಆಪ್ಟಿಕಲ್ ಇಲ್ಯೂಷನ್‌ಗಳು ನಿಮ್ಮನ್ನು ಆಕರ್ಷಿಸುತ್ತವೆ.
ಚಿತ್ರದಲ್ಲಿರುವ ಕೊನೆಯಿಂದ 2ನೇ ಸಾಲಿನ ಲವ್ ಎನ್ನುವ ಪದವಿದೆ. ಒಂದು ವೇಳೆ ನೀವು 10 ಸೆಕೆಂಡ್‌ಗಳಲ್ಲಿ ಈ ಪದವನ್ನು ಕಂಡು ಹಿಡಿದಿದ್ದರೆ ನಿಮಗೆ ಧನ್ಯವಾದಗಳು. ಇಂತಹ ಮತ್ತಷ್ಟು ಆಪ್ಟಿಕಲ್ ಇಲ್ಯೂಷನ್‌ಗಳಿಗಾಗಿ ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ನ್ಯೂಸ್ ಸೈಟ್‌ಗೆ ಭೇಟಿ ಕೊಡಿ. (This copy first appeared in Hindustan Times Kannada website. To read more like this please logon to kannada.hindustantime.com)
ವಿಭಾಗ