Optical illusion: ಈ ಕೆಂಪು ವೃತ್ತದಲ್ಲಿ ಎಷ್ಟು ಅಂಕಿ ಕಾಣುತ್ತಿದೆ? 5 ಸೆಕೆಂಡ್‌ನಲ್ಲಿ ಉತ್ತರಿಸಿ, ನಿಮ್ಮ ಕಣ್ಣುಗಳಿಗಿದು ಸವಾಲ್
Optical illusion: ಇಲ್ಲಿ ಕಾಣುತ್ತಿರುವ ಕೆಂಪು ವೃತ್ತದ ನಡುವೆ ಒಂದು ಸಂಖ್ಯೆ ಇದೆ. 5 ಸೆಕೆಂಡ್‌ನಲ್ಲಿ ಆ ಸಂಖ್ಯೆ ಯಾವುದು ಹೇಳಲು ಸಾಧ್ಯಾನಾ? ಎಕ್ಸ್ ಯೂಸರ್‌ವೊಬ್ಬರು ಹಂಚಿಕೊಂಡಿರುವ ಈ ಆಪ್ಟಿಕಲ್ ಇಲ್ಯೂಷನ್ ಪೋಸ್ಟರ್ ವೈರಲ್ ಆಗುತ್ತಿದೆ. ನೀವೂ ಗಮನಿಸಿ, ಕಾಮೆಂಟ್ ಮಾಡಿ.
Optical illusion: ಬ್ರೈನ್ ಟೀಸರ್, ನಮ್ಮ ಮೆದುಳಿಗೆ ಕೆಲಸ ಕೊಡುವ ಗೇಮ್. ಕೆಲವೊಮ್ಮೆ ಈ ರೀತಿಯ ಬ್ರೈನ್ ಟೀಸರ್‌ಗಳನ್ನು ಬಿಡಿಸಲು ನಮ್ಮ ಮೆದುಳನ್ನಲ್ಲ ಕಣ್ಣನ್ನು ಬಳಸಬೇಕಿರುತ್ತದೆ. ಈ ಚಿತ್ರವನ್ನೇ ಗಮನಿಸಿ. ನಿಮಗೆ ತಕ್ಷಣ ಕಾಣುವುದು ಏನು? ಒಂದು ದೊಡ್ಡ ಕೆಂಪು ವೃತ್ತ ಅಲ್ಲವೇ? ಆದರೆ ಅದರ ಒಳಗೆ ಸಂಖ್ಯೆಗಳಿರುವುದು ನಿಮಗೆ ಕಾಣುತ್ತಿದ್ಯಾ?
ಎಕ್ಸ್ ಯೂಸರ್ ಒಬ್ಬರು ಈ ಪೋಸ್ಟನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಿಮಗೆ ಏನು ಕಾಣುತ್ತಿದೆ? ಕೇವಲ ಕೆಂಪು ವೃತ್ತ ಮಾತ್ರ ಕಾಣುಸುತ್ತಿದೆಯೇ? ಅಥವಾ ಅದರಲ್ಲಿ ಯಾವುದಾದರೂ ಸಂಖ್ಯೆಗಳು ಕಾಣುತ್ತಿದೆಯೇ? ನಿಮಗೆ ಇದು ಕಣ್ಣುಗಳನ್ನು ಪರೀಕ್ಷೆ ಮಾಡಲು ನೀಡಲಾಗುತ್ತಿರುವ ಪ್ರಶ್ನೆ. ಚಾಲೆಂಜ್ ಬಹಳ ಸುಲಭವಾದುದ್ದಾಗಿದೆ. ಬಿಳಿ ಬಣ್ಣದ ಹಿನ್ನೆಲೆಯಲ್ಲಿ ಕಾಣುತ್ತಿರುವ ಕೆಂಪು ವೃತ್ತಾಕಾರದ ಮಧ್ಯೆ ಎರಡು ಅಂಕಿಗಳಿವೆ. ಆ ಅಂಕಿಗಳು ಯಾವುವು ಎಂದು ಕಂಡುಹಿಡಿಯಿರಿ ಎಂದು ಎಕ್ಸ್ ಬಳಕೆದಾರ ಮಸ್ಸಿಮೋ ಎನ್ನುವವರು ಬರೆದುಕೊಂಡಿದ್ದಾರೆ.
ವೈರಲ್ ಆಯ್ತು ಎಕ್ಸ್ ಯೂಸರ್ ಹಂಚಿಕೊಂಡ ಪೋಸ್ಟ್
ಮಸ್ಸಿಮೋ ಹಂಚಿಕೊಂಡಿರುವ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿ ಒಂದೊಂದು ನಂಬರ್ ಉತ್ತರ ಹೇಳುತ್ತಿದ್ದಾರೆ. ಕೆಂಪು ವೃತ್ತದ ಒಳಗೆ 88 ಕಾಣುತ್ತಿದೆ ಎಂದು ಕೆಲವರು ಉತ್ತರಿಸಿದರೆ ಇನ್ನೂ ಕೆಲವರು 38 ಎಂದು ಕಾಮೆಂಟ್ ಮಾಡಿದ್ದಾರೆ. ನೀವು ನೋಡಿದ್ರಾ? ನಿಮಗೆ ಆ ವೃತ್ತದಲ್ಲಿ ಯಾವ ನಂಬರ್ ಕಾಣಿಸುತ್ತಿದೆ? ಹಾಗಂತ ಅದನ್ನೇ ದಿಟ್ಟಿಸುತ್ತಾ ಕೂರಬೇಡಿ. ನಿಮಗೆ ಇರುವುದು 5 ಸೆಕೆಂಡ್ ಸಮಯವಷ್ಟೇ. 2 ದಿನಗಳ ಹಿಂದಷ್ಟೇ ಹಂಚಿಕೊಂಡಿರುವ ಈ ಪೋಸ್ಟ್‌ಗೆ 11.2 ಮಿಲಿಯನ್ ವ್ಯೂವ್ಸ್ ಬಂದಿದೆ.
ಎಕ್ಸ್ ಯೂಸರ್‌ಗಳು ಈ ಪೋಸ್ಟ್‌ಗೆ ತಮಗೆ ತೋಚಿದ ಉತ್ತರ ನೀಡಿದ್ದಾರೆ. ಆ ವೃತ್ತದಲ್ಲಿ ಸೊನ್ನೆ ಕಾಣುತ್ತಿದೆ ಎಂದರೆ ಮತ್ತೊಬ್ಬರು 38 ಎಂದಿದ್ದಾರೆ. ವೃತ್ತದಲ್ಲಿ ಯಾವ ಅಂಕೆ ಇದೆ ಎಂದು ತಿಳಿಯಲು ನನಗೆ ಹೆಚ್ಚು ಸಮಯವೇನೋ ಬೇಕಾಗಲಿಲ್ಲ. ಆದರೂ ಈ ಪೋಸ್ಟ್‌ನಲ್ಲಿ ಏನೋ ವಿಶೇಷವಾದದ್ದು ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ವೃತ್ತದಲ್ಲಿ ಯಾವ ಸಂಖ್ಯೆ ಇದೆ ಎಂದು ತಿಳಿಯಲು ನಾನು 3 ವಿವಿಧ ರೀತಿಯಲ್ಲಿ ಪ್ರಯತ್ನ ಪಟ್ಟೆ. ಆದರೆ ಇದುವರೆಗೂ ಏನನ್ನೂ ನೋಡಲಾಗಲಿಲ್ಲ ಎಂದು ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ನನಗಂತೂ ಈ ಬ್ರೈನ್ ಟೀಸರ್ ಗೊಂದಲ ಉಂಟು ಮಾಡುತ್ತಿದೆ, ನನಗೆ ಒಮ್ಮೆ 38 ಮತ್ತೊಮ್ಮೆ 88 ಕಾಣುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಹಾಗಾದರೆ ನಿಮಗೆ ಅಲ್ಲಿ ಯಾವ ಸಂಖ್ಯೆ ಕಾಣುತ್ತಿದೆ 38 ಅಥವಾ 88? ಕಾಮೆಂಟ್ ಮಾಡಿ. ನೆನಪಿರಲಿ ನಿಮಗೆ ಇರುವುದು 5 ಸೆಕೆಂಡ್ ಸಮಯ ಅಷ್ಟೇ.
ವಿಭಾಗ