ಅಪ್ಪ-ಅಮ್ಮನಿಗೆ ಮಕ್ಕಳೆಲ್ಲ ಒಂದೇ ಎನ್ನುವುದು ನಿಜವೇ? ಅವರಿಗೆ ಹಿರಿ ಮಗ, ಇವರಿಗೆ ಕಿರಿ ಮಗಳು ಇಷ್ಟವಂತೆ -ಏಕೆ ಹೀಗೆ?
ಕನ್ನಡ ಸುದ್ದಿ  /  ಜೀವನಶೈಲಿ  /  ಅಪ್ಪ-ಅಮ್ಮನಿಗೆ ಮಕ್ಕಳೆಲ್ಲ ಒಂದೇ ಎನ್ನುವುದು ನಿಜವೇ? ಅವರಿಗೆ ಹಿರಿ ಮಗ, ಇವರಿಗೆ ಕಿರಿ ಮಗಳು ಇಷ್ಟವಂತೆ -ಏಕೆ ಹೀಗೆ?

ಅಪ್ಪ-ಅಮ್ಮನಿಗೆ ಮಕ್ಕಳೆಲ್ಲ ಒಂದೇ ಎನ್ನುವುದು ನಿಜವೇ? ಅವರಿಗೆ ಹಿರಿ ಮಗ, ಇವರಿಗೆ ಕಿರಿ ಮಗಳು ಇಷ್ಟವಂತೆ -ಏಕೆ ಹೀಗೆ?

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್‌ ಆದ ವಿಚಾರವೊಂದು ನಿಜಕ್ಕೂ ನಮ್ಮಲ್ಲಿ ಪ್ರಶ್ನೆ ಮೂಡುವಂತೆ ಮಾಡುತ್ತಿದೆ. ತಂದೆ-ತಾಯಿಗೆ ಎಲ್ಲಾ ಮಕ್ಕಳು ಸಮಾನರು ಎನ್ನುತ್ತಾರೆ. ಆದರೆ ಕೆಲವರಿಗೆ ದೊಡ್ಡ ಮಗಳು ಇಷ್ಟ ಆದ್ರೆ ಇನ್ನೂ ಕೆಲವರಿಗೆ ಚಿಕ್ಕ ಮಗ ಇಷ್ಟ ಆಗ್ತಾನೆ. ಇದು ನಿಜನಾ, ಪೋಷಕರು ಮಕ್ಕಳಲ್ಲಿ ಭೇದಭಾವ ಮಾಡ್ತಾರಾ, ಇಲ್ಲಿದೆ ಉತ್ತರ.

ಅಪ್ಪ-ಅಮ್ಮನಿಗೆ ಮಕ್ಕಳೆಲ್ಲ ಒಂದೇ ಎನ್ನುವುದು ನಿಜವೇ? ಅವರಿಗೆ ಹಿರಿ ಮಗ, ಇವರಿಗೆ ಕಿರಿ ಮಗಳು ಇಷ್ಟವಂತೆ -ಏಕೆ ಹೀಗೆ?
ಅಪ್ಪ-ಅಮ್ಮನಿಗೆ ಮಕ್ಕಳೆಲ್ಲ ಒಂದೇ ಎನ್ನುವುದು ನಿಜವೇ? ಅವರಿಗೆ ಹಿರಿ ಮಗ, ಇವರಿಗೆ ಕಿರಿ ಮಗಳು ಇಷ್ಟವಂತೆ -ಏಕೆ ಹೀಗೆ?

ಪೇರೆಂಟಿಂಗ್‌ ಎನ್ನುವುದು ಸುಲಭದ ಜವಾಬ್ದಾರಿಯಲ್ಲ. ಪೋಷಕರು ಎನ್ನಿಸಿಕೊಂಡ ಮೇಲೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮಕ್ಕಳನ್ನು ಹೊಂದುವುದು ತಂದೆ-ತಾಯಿಗೆ ಅದೆಷ್ಟೋ ಖುಷಿಯ ವಿಚಾರ. ಆದರೆ ಇದರೊಂದಿಗೆ ಬರುವ ಸವಾಲುಗಳನ್ನು ಎದುರಿಸಲು ಅವರು ತಯಾಗಿರಬೇಕು. ನಮ್ಮಲ್ಲಿ ಹಲವು ತಂದೆ-ತಾಯಿಗಳು ಒಂದು ಮಗುವಾದ ಬಳಿಕ ಇನ್ನೊಂದು ಮಗು ಪಡೆಯಲು ಯೋಚಿಸುತ್ತಾರೆ. ಎರಡನೇ ಮಗು ಮಾಡಿಕೊಂಡರೆ ಎಲ್ಲಿ ಮೊದಲ ಮಗುವಿನ ಮೇಲೆ ಪ್ರೀತಿ ಕಡಿಮೆಯಾಗುತ್ತದೋ ಎಂಬುದು ಅವರ ಭಯ. ನಾವು ಇನ್ನೊಂದು ಮಗು ಮಾಡಿಕೊಂಡರೆ ಮೊದಲು ಮಗುವಿನ ಮೇಲೆ ತೋರುವ ಕಾಳಜಿ, ಮಮಕಾರ ಮೇಲೆ ಪರಿಣಾಮ ಬೀರಬಹುದು ಎಂದು ಹಲವು ತಂದೆತಾಯಿಗಳು ಯೋಚಿಸುತ್ತಾರೆ. ಈ ಕಾರಣದಿಂದಲೇ ಹಲವರು ಎರಡನೇ ಮಗು ಮಾಡಿಕೊಳ್ಳುವ ಬಗ್ಗೆ ಹಿಂದೇಟು ಹಾಕುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಪೋಸ್ಟ್‌ವೊಂದು ಪೋಷಕರ ಮನದಲ್ಲಿ ಪ್ರಶ್ನೆ ಮೂಡುವಂತೆ ಮಾಡಿದೆ. ಅಂಥದ್ದೇನಿದೆ ಆ ಪೋಸ್ಟ್‌ನಲ್ಲಿ ಎಂದರೆ ತಂದೆಯೊಬ್ಬರು ʼನಾನು ನನ್ನ ಎರಡನೇ ಮಗುವನ್ನು ಹೆಚ್ಚು ಪ್ರೀತಿಸುವುದಿಲ್ಲʼ ಎಂದು ಬರೆದುಕೊಂಡಿದ್ದರು. ರೆಡ್ಡಿಟ್‌ನಲ್ಲಿ ಇವರು ಹಂಚಿಕೊಂಡ ಪೋಸ್ಟ್‌ ಈಗ ಸಾಕಷ್ಟು ವೈರಲ್‌ ಆಗುತ್ತಿದೆ. ಮಾತ್ರವಲ್ಲ, ಪೋಷಕರು ತಮ್ಮಲ್ಲಿಯೇ ತಾವು ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಎರಡು ಮಕ್ಕಳಿದ್ರೆ ಒಬ್ಬರನ್ನು ಹೆಚ್ಚು, ಒಬ್ಬರನ್ನು ಕಡಿಮೆ ಪ್ರೀತಿ ಮಾಡಲು ಸಾಧ್ಯವೇ, ತಂದೆ-ತಾಯಿಗಳಿಗೆ ಮಕ್ಕಳೆಲ್ಲರೂ ಒಂದೇ ಅಲ್ಲವೇ ಎಂದೆಲ್ಲಾ ಯೋಚಿಸುತ್ತಿದ್ದಾರೆ.

ಅವರ ಪೋಸ್ಟ್‌ ಹೀಗಿದೆ

ʼನನಗೆ ಎರಡನೇ ಬಾರಿ ಹುಟ್ಟಿದ್ದು ಮಗ, ಮೊದಲು ಹುಟ್ಟಿದ್ದು ಮಗಳು. ನನಗೆ ಅವಳನ್ನು ನೋಡಿದ ಮೊದಲ ನೋಟದಲ್ಲೇ ಪ್ರೀತಿಯಾಗಿತ್ತು. ಅವಳು ನನಗೆ ದೇವತೆಯಂತೆ ಕಂಡಿದ್ದಳು. ಅವಳೀಗ 2 ವರ್ಷ ಹುಡುಗಿ. ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ. ಕೆಲವೊಮ್ಮೆ ನನಗೆ ಬೇಸರವಾಗುತ್ತದೆ. ನಾನು ಮಾಡುವುದು ಸರಿಯಲ್ಲ ಎನ್ನಿಸುತ್ತದೆ. ಆದರೆ ಅವಳ ಮುಂದೆ ನನಗೆ ಎಲ್ಲವೂ ನಶ್ವರ ಎನ್ನಿಸುತ್ತದೆ. ಆದರೆ ನನ್ನ ಮಗನ ಜೊತೆ ನಾನು ಈ ರೀತಿಯ ಅನುಬಂಧ ಇರಿಸಿಕೊಂಡಿಲ್ಲ. ಅವನೊಂದಿಗೆ ನನ್ನದು ಸಂಪೂರ್ಣ ವಿಭಿನ್ನ ಅನುಭವ. ಹಾಗಂತ ನಾನು ಅವನನ್ನು ದ್ವೇಷಿಸುತ್ತಿಲ್ಲ. ಆದರೆ ನನಗೆ ಮಗಳಷ್ಟು ಮಗನನ್ನು ಪ್ರೀತಿಸಲು ಸಾಧ್ಯವಾಗುತ್ತಿಲ್ಲ. ಮಗಳ ಮೇಲೆ ಪ್ರೀತಿಯ ಸಾಮ್ರಾಜ್ಯ ಬೆಳೆದು ಅಗಾಧವಾಗಿದೆ. ಸಾಮ್ರಾಜ್ಯದಲ್ಲಿ ಮಗನಿಗೆ ಸಂಪೂರ್ಣ ಜಾಗ ಕೊಡಲು ನನ್ನಿಂದ ಸಾಧ್ಯವಾಗುತ್ತಿಲ್ಲʼ ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದು ಅವರೊಬ್ಬರ ಕಥೆಯಲ್ಲ, ಬಹುತೇಕ ಪೋಷಕರ ಕಥೆ. ಕೆಲವರು ಮೊದಲ ಮಗುವನ್ನು ಹೆಚ್ಚು ಇಷ್ಟಪಟ್ಟರೆ, ಇನ್ನೂ ಕೆಲವರು ಎರಡನೇ ಮಗುವನ್ನು ಹೆಚ್ಚು ಇಷ್ಟಪಡುತ್ತಾರೆ.

ಮಾನಸಿಕ ಸಿದ್ಧತೆ ಅವಶ್ಯ

ಎರಡನೇ ಮಗುವನ್ನು ಹೊಂದಲು ಬಯಸುವ ಪೋಷಕರು ಸಾಕಷ್ಟು ತಯಾರಿ ನಡೆಸುವುದು ಅವಶ್ಯ, ಮೊದಲ ಮಗುವನ್ನು ಹೊಂದಿದ ಸಮಯದಲ್ಲಿ ನೀವು ಎಷ್ಟೇ ತಯಾರಿ ನಡೆಸಿದ್ದರೂ ಎರಡನೇ ಮಗುವಾಗ ಸಿದ್ಧತೆ ಅದಕ್ಕಿಂತ ಒಂದು ಕೈ ಹೆಚ್ಚೇ ಬೇಕು ಎನ್ನುವುದು ಸುಳ್ಳಲ್ಲ. ಕೆಲವೊಮ್ಮೆ ಮಕ್ಕಳಲ್ಲಿ ಪ್ರೀತಿಯನ್ನು ಹಂಚುವುದು ಕೂಡ ಕಷ್ಟ ಎನ್ನಿಸಬಹುದು. ಅದಕ್ಕಾಗಿ ಮಾನಸಿಕ ಸಿದ್ಧತೆ ಸಾಕಷ್ಟು ಅವಶ್ಯ.

ರೆಡ್ಡಿಟ್‌ನಲ್ಲಿ ಈ ವ್ಯಕ್ತಿ ಯಾವುದನ್ನೂ ಮುಚ್ಚಿಟ್ಟುಕೊಳ್ಳದೇ ಮಗನಿಗಿಂತ ಮಗಳನ್ನು ಹೆಚ್ಚು ಪ್ರೀತಿ ಮಾಡುತ್ತೇನೆ ಎಂದು ಹೇಳಿರುವುದಕ್ಕೆ ಕೆಲವರು ಮೆಚ್ಚಿಕೊಂಡಿದ್ದಾರೆ. ಆ ವ್ಯಕ್ತಿಯ ಪ್ರಾಮಾಣಿಕತೆಯ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಪೋಸ್ಟ್‌ಗೆ 450ಕ್ಕೂ ಹೆಚ್ಚ ಕಾಮೆಂಟ್‌ಗಳು ಬಂದಿವೆ.

ಕಾಮೆಂಟ್‌ಗಳು ಹೀಗಿವೆ

ʼಪ್ರತಿ ತಂದೆ-ತಾಯಿಗೂ ಮೊದಲ ಮಗುವನ್ನು ಪಡೆಯುವ ಕ್ಷಣ ನಿಜಕ್ಕೂ ಅದ್ಭುತ. ಇದು ನಮ್ಮ ಜಗವನ್ನೇ ಬದಲಿಸುವ ಖುಷಿ ನೀಡುತ್ತದೆ. ಆಗ ನೀವು ಸಾಕಷ್ಟು ವಿಚಾರಗಳಲ್ಲಿ ಸ್ವಯಂ ತ್ಯಾಗ ಮಾಡುವುದನ್ನು ಕಲಿಯಬೇಕಾಗುತ್ತದೆ. ಮೊದಲ ಮಗುವನ್ನು ಕೈಯಲ್ಲಿ ಹಿಡಿದಾಗ ಪ್ರಪಂಚವೇ ನಮ್ಮ ಕೈಯಲ್ಲಿ ಬಂದು ಕುಳಿತಿದೆ ಅನ್ನಿಸುವುದು ಸಹಜ. ಆದರೆ ಎರಡನೇ ಮಗುವಾಗುವಾಗ ಮೊದಲಿನಷ್ಟು ಉತ್ಸಾಹ, ಕಾತುರ ಇರುವುದಿಲ್ಲ ಎಂಬುದು ಸುಳ್ಳಲ್ಲ. ಆದರೆ ಅದೇನೇ ಆದರೂ ನೀವು ಎರಡೂ ಮಕ್ಕಳಿಗೂ ಸಮಾನ ಪ್ರೀತಿ ತೋರಬೇಕು, ಮಕ್ಕಳೊಂದಿಗೆ ಆತ್ಮೀಯತೆ ಬೆಳೆಯಲು ಇಬ್ಬರೊಂದಿಗೂ ಸಮಾನ ಮನಸ್ಕರಾಗಿ ಇರುವುದು ಮುಖ್ಯವಾಗುತ್ತದೆ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼನಾನು ಕೂಡ ಇದನ್ನು ಅನುಭವಿಸಿದ್ದೇನೆ, ಅಲ್ಲದೇ ನನಗೆ ಎರಡನೇ ಮಗುವಾಗುವಾಗ ನಾನು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದೆʼ ಎಂದು ರೆಡ್ಡಿಟ್‌ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼನಿಮಗೆ ಈಗಿನ್ನೂ ಎರಡನೇ ಮಗುವಾಗಿದೆ. ಅವನೊಂದಿಗೆ ಹೊಂದಿಕೊಳ್ಳಲು ಕೊಂಚ ಸಮಯ ಬೇಕು. ನಂತರ ತಾನಾಗಿಯೇ ನೀವು ಇಬ್ಬರನ್ನೂ ಪ್ರೀತಿಸಲು ಆರಂಭಿಸುತ್ತೀರಿ. ನಿಮ್ಮ ಮಗನ ವ್ಯಕ್ತಿತ್ವ ನಿಮಗಿನ್ನೂ ತಿಳಿದಿಲ್ಲ. ಅದಕ್ಕಾಗಿ ನಿಮಗೆ ಸ್ವಲ್ಪ ಕಲಾವಕಾಶ ಖಂಡಿತ ಬೇಕು. ಅವನು ಬೆಳೆದು ಸ್ವಲ್ಪ ದೊಡ್ಡವನಾದ ಮೇಲೆ ನಿಮಗೆ ಅವನ ಮೇಲಿರುವ ಅಭಿಪ್ರಾಯ ಬದಲಾಗುತ್ತದೆ ಎಂದು ಮೂರನೇ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ.

ʼಕೆಲವೊಮ್ಮೆ ಎರಡು ಮಕ್ಕಳಿರುವ ಪೋಷಕರ ಜಾಗದಲ್ಲಿ ನಿಂತು ಯೋಚಿಸಿದಾಗ ಎರಡು ಮಕ್ಕಳನ್ನು ಸಾಮಾನವಾಗಿ ಪ್ರೀತಿಸುವ ವಿಚಾರದಲ್ಲಿ ಇದು ಎಂದಿಗೂ ಮುಗಿಯದ ಸ್ಪರ್ಧೆ ಎನ್ನಿಸುವುದು ಸುಳ್ಳಲ್ಲ. ಆದರೆ ಸಮಯ ಕಳೆದಂತೆ ಪೋಷಕರು ಎರಡೂ ಮಕ್ಕಳನ್ನೂ ಪ್ರೀತಿಸಲು ಆರಂಭಿಸುತ್ತಾರೆ, ಅವರೊಂದಿಗೆ ಹೊಂದಿಕೊಳುತ್ತಾರೆʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಮನೋಶಾಸ್ತ್ರಜ್ಞರ ಸಲಹೆ

ʼಮಕ್ಕಳನ್ನು ಪ್ರೀತಿ ಮಾಡುವ ವಿಚಾರದಲ್ಲಿ ಎರಡೂ ಮಕ್ಕಳನ್ನೂ ಒಂದೇ ತಕ್ಕಡಿಯಲ್ಲಿಟ್ಟ ಸಮನಾಗಿ ಪ್ರೀತಿ ಮಾಡಲು ಸಾಧ್ಯವಾಗುವುದಿಲ್ಲ. ಮಗುವನ್ನು ಹೇಗೆ ಪ್ರೀತಿಸಬೇಕು ಎಂಬುದಕ್ಕೆ ಯಾವುದೇ ಅಧಿಕೃತ ಬ್ಲೂಪ್ರಿಂಟ್‌ ಇಲ್ಲ. ಎರಡನೇ ಮಗುವಾದಾಗ ಪೋಷಕರು ಕೊಂಚ ಗೊಂದಲಕ್ಕೆ ಒಳಗಾಗುವುದು ಸಹಜ. ಆದರೆ ಕಾಲ ಕ್ರಮೇಣ ಇದೆಲ್ಲವೂ ಸರಿಯಾಗುತ್ತದೆʼ ಎಂದು ಮನೋಶಾಸ್ತ್ರಜ್ಞರು ಸಲಹೆ ನೀಡುತ್ತಾರೆ.

ʼತಮ್ಮ ಮಕ್ಕಳ ಮೇಲೆ ಪೋಷಕರಿಗೆ ಸಮಾನ, ಪ್ರೀತಿ ಹಾಗೂ ಆಧರ ಇರುವುದು ಸಹಜ. ಇಬ್ಬರಿಗೂ ಪೋಷಕರು ಹೃದಯದಲ್ಲಿ ಸ್ಥಾನವಿರುತ್ತದೆ. ಆದರೆ ತೋರ್ಪಡಿಕೆಯಲ್ಲಿ ಕೊಂಚ ವ್ಯತ್ಯಾಸವಾಗಬಹುದಷ್ಟೇʼ ಎಂದು ಅವರು ಹೇಳುತ್ತಾರೆ.

ʼನಾನು ಎರಡನೇ ಮಗುವನ್ನು ಪ್ರೀತಿಸಿದರೆ ಅಥವಾ ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸಿದರೆ ಎಲ್ಲಿ ಮೊದಲ ಮಗು ನೊಂದುಕೊಳ್ಳುವುದೋ ಎಂಬ ಭಯವೂ ಕೆಲವು ಪೋಷಕರಲ್ಲಿರುತ್ತದೆ. ಇದರಿಂದ ಮಕ್ಕಳ ನಡುವೆ ನೀವೇ ಭೇದ ಮೂಡಿಸಿದಂತಾಗುತ್ತದೆ. ಹಾಗಾಗಿ ಇಬ್ಬರನ್ನೂ ಸಮಾನಾವಾಗಿ ನೋಡಿ. ಪ್ರೀತಿ ತೋರಿಸುವುದರಲ್ಲೂ ಸಮಾನತೆ ತೋರಿ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner