ಕನ್ನಡ ಸುದ್ದಿ  /  ಜೀವನಶೈಲಿ  /  ಕಂದಮ್ಮನ ತ್ವಚೆಗೆ ಫೇಸ್‌ಕ್ರೀಮ್‌ ಬಳಕೆ ಸುರಕ್ಷಿತವೇ? ಮಗುವಿನ ಫೇಸ್‌ಕ್ರೀಮ್‌ ಆಯ್ಕೆಗೂ ಮುನ್ನ ಪೋಷಕರು ಗಮನಿಸಲೇಬೇಕಾದ ಅಂಶಗಳಿವು

ಕಂದಮ್ಮನ ತ್ವಚೆಗೆ ಫೇಸ್‌ಕ್ರೀಮ್‌ ಬಳಕೆ ಸುರಕ್ಷಿತವೇ? ಮಗುವಿನ ಫೇಸ್‌ಕ್ರೀಮ್‌ ಆಯ್ಕೆಗೂ ಮುನ್ನ ಪೋಷಕರು ಗಮನಿಸಲೇಬೇಕಾದ ಅಂಶಗಳಿವು

ಪುಟ್ಟ ಕಂದಮ್ಮನ ತ್ವಚೆಯ ಆರೈಕೆಯ ವಿಚಾರದಲ್ಲಿ ಪೋಷಕರು ಸಾಕಷ್ಟು ಗಮನ ಹರಿಸುವುದು ಅಗತ್ಯ. ಅದರಲ್ಲೂ ಮಗುವಿನ ಮುಖಕ್ಕೆ ಫೇಸ್‌ಕ್ರೀಮ್‌ ಬಳಸಬಹುದೇ, ಯಾವ ರೀತಿ ಫೇಸ್‌ಕ್ರೀಮ್‌ ಉತ್ತಮ, ಫೇಸ್‌ಕ್ರೀಮ್‌ ಆಯ್ಕೆ ಹೇಗಿರಬೇಕು? ಎಂಬೆಲ್ಲಾ ಪ್ರಶ್ನೆಗಳು ಪೋಷಕರ ಮನದಲ್ಲಿರುತ್ತದೆ. ಈ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ.

ಕಂದಮ್ಮನಿಗೆ ಫೇಸ್‌ಕ್ರೀಮ್‌ ಆಯ್ಕೆಗೂ ಮುನ್ನ ಪೋಷಕರು ಗಮನಿಸಬೇಕಾದ ಮಹತ್ವದ ಅಂಶಗಳಿವು
ಕಂದಮ್ಮನಿಗೆ ಫೇಸ್‌ಕ್ರೀಮ್‌ ಆಯ್ಕೆಗೂ ಮುನ್ನ ಪೋಷಕರು ಗಮನಿಸಬೇಕಾದ ಮಹತ್ವದ ಅಂಶಗಳಿವು

ಪುಟ್ಟ ಕಂದಮ್ಮನನ್ನು ಪ್ರಪಂಚಕ್ಕೆ ಸ್ವಾಗತಿಸುವುದು ಎಂದರೆ ಅಮ್ಮ-ಅಪ್ಪನಿಗೆ ಎಲ್ಲಿಲ್ಲದ ಸಂಭ್ರಮ. ಆದರೆ ಈ ಸಂಭ್ರಮದ ನಡುವೆ ಮಗುವಿನ ಲಾಲನೆ-ಪಾಲನೆ ಸವಾಲು ಎನ್ನಿಸುತ್ತದೆ. ಅದರಲ್ಲೂ ಎಳೆಯ ಕಂದಮ್ಮಗಳ ತ್ವಚೆಯ ವಿಚಾರದಲ್ಲಿ ಪೋಷಕರು ಸಾಕಷ್ಟು ಎಚ್ಚರ ವಹಿಸಬೇಕು. ಮಗುವಿನ ಚರ್ಮದ ಆರೈಕೆಗೆ ಸರಿಯಾದ ಉತ್ಪನ್ನವನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಲಭ್ಯವಿರುವ ಹಲವು ಆಯ್ಕೆಗಳೊಂದಿಗೆ ಬೇಬಿ ಫೇಸ್‌ಕ್ರೀಮ್‌ ಆಯ್ಕೆ ಮಾಡಿಕೊಳ್ಳುವುದು ಕಷ್ಟಕರವಾಗಿರುತ್ತದೆ. ಮಕ್ಕಳಿಗೆ ಯಾವ ಫೇಸ್‌ಕ್ರೀಮ್‌ ಸುರಕ್ಷಿತ, ಫೇಸ್‌ಕ್ರೀಮ್‌ನಲ್ಲಿ ಯಾವೆಲ್ಲಾ ಪದಾರ್ಥಗಳು ಇರಬೇಕು, ಯಾವುದ ಇರಬಾರದು? ಇದೆಲ್ಲಾ ಗೊಂದಲಗಳು ಇರುವುದು ಸಹಜ. ಎಳೆ ಕಂದಮ್ಮಗಳ ಪೋಷಕರಿಗೆ ಬೇಬಿ ಕ್ರೀಮ್‌ ಆಯ್ಕೆ ಮಾಡುವ ವಿಚಾರದಲ್ಲಿ ಪೋಷಕರಿಗೆ ಇಲ್ಲಿದೆ ಮಹತ್ವದ ಸಲಹೆ.

ಟ್ರೆಂಡಿಂಗ್​ ಸುದ್ದಿ

ಮಗುವಿನ ಚರ್ಮವನ್ನು ಅರ್ಥ ಮಾಡಿಕೊಳ್ಳಿ

ಕ್ರೀಮ್‌, ಲೋಷನಗಳನ್ನು ಅರ್ಥ ಮಾಡಿಕೊಳ್ಳುವ ಮೊದಲು ಮಗುವಿನ ಚರ್ಮದ ಸೂಕ್ಷ್ಮತೆಯ ಬಗ್ಗೆ ತಿಳಿದುಕೊಳ್ಳಲು ಒಂದಿಷ್ಟು ಸಮಯ ತೆಗೆದುಕೊಳ್ಳಬೇಕು. ನವಜಾತ ಶಿಶುಗಳು, ಎಳೆಯ ಕಂದಮ್ಮಗಳ ಚರ್ಮವು ವಯಸ್ಕರ ಚರ್ಮಕ್ಕಿಂತ ತೆಳುವಾಗಿ, ಹೆಚು ಸೂಕ್ಷ್ಮವಾಗಿರುತ್ತದೆ. ಮಕ್ಕಳ ಚರ್ಮವು ಬೇಗ ಶುಷ್ಕತೆಗೆ ಒಳಗಾಗುತ್ತದೆ. ಚರ್ಮದ ತಡೆಗೋಡೆಯು ಇನ್ನೂ ಅಭಿವೃದ್ಧಿ ಹೊಂದುತ್ತಿರುತ್ತದೆ. ಆ ಕಾರಣಕ್ಕೆ ಚರ್ಮದ ಕಿರಿಕಿರಿ, ಅಲರ್ಜಿಯಂತಹ ಸಮಸ್ಯೆಗಳು ಎದುರಾಗಬಹುದು. ಈ ಎಲ್ಲವನ್ನು ಅರ್ಥ ಮಾಡಿಕೊಂಡು ಮಗುವಿನ ತ್ವಚೆಗೆ ಹೊಂದುವ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮೊದಲ ಹಂತವಾಗಿದೆ.

ಈ ಅಂಶಗಳನ್ನು ಗಮನಿಸಿ

ಹೈಪೋಲಾರ್ಜನಿಕ್ ಸೂತ್ರಗಳು: ಮುಖದ ಕ್ರೀಮಗಳ ವಿಚಾರಕ್ಕೆ ಬಂದರೆ ಹೈಪೋಲಾರ್ಜನಿಕ್ ಅಂಶ ಇರುವುದು ಮುಖ್ಯವಾಗುತ್ತದೆ. ಮೂಲಭೂತವಾಗಿ, ಅಲರ್ಜಿಯ ಪ್ರತಿಕ್ರಿಯೆಗಳ ಅಪಾಯವನ್ನು ಕಡಿಮೆ ಮಾಡಲು ಉತ್ಪನ್ನವನ್ನು ರೂಪಿಸಲಾಗುತ್ತದೆ. ಹೈಪೋಲಾರ್ಜನಿಕ್ ಬೇಬಿ ಫೇಸ್ ಕ್ರೀಮ್ ಅನ್ನು ಆಯ್ಕೆ ಮಾಡುವುದು ಸುರಕ್ಷತೆಗೆ ಹೇಳಿ ಮಾಡಿಸಿದ್ದು.

ಈ ಪದಾರ್ಥಗಳನ್ನು ಗಮನಿಸಿ: ಬೇಬಿ ಫೇಸ್‌ಕ್ರೀಮ್‌ಗಳು ಸರಳವಾಗಿದ್ದು, ನೇರವಾಗಿ ಮುಖಕ್ಕೆ ಹಚ್ಚುವಂತಿರಬೇಕು, ಅಂದರೆ ಇದರೊಂದಿಗೆ ಬೇರೆ ಉತ್ಪನ್ನಗಳು ಬೆರೆಸುವಂತೆ ಇರಬಾರದು. ಕಠಿಣ ರಾಸಾಯನಿಕಗಳು ಇರದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ನೈಸರ್ಗಿಕ ಅಂಶಗಳಿರುವ ಫೇಸ್‌ಕ್ರೀಮ್‌ ಬಳಸುವುದು ಉತ್ತಮ.

ಫೇಸ್‌ಕ್ರೀಮ್‌ ವಿಚಾರದಲ್ಲಿ ಈ ಅಂಶಗಳನ್ನು ಗಮನಿಸಿ

ಸುಗಂಧಭರಿತವಾಗಿರುವುದು ಮುಖ್ಯವಲ್ಲ: ಫೇಸ್‌ಕ್ರೀಮ್‌ ವಿಚಾರಕ್ಕೆ ಬಂದರೆ ನಾವೆಲ್ಲರೂ ಪರಿಮಳಯುಕ್ತ ಪದಾರ್ಥಗಳನ್ನು ಹೆಚ್ಚು ಇಷ್ಟಪಡುತ್ತೇವೆ. ಆದರೆ ಮಗುವಿನ ಚರ್ಮಕ್ಕೆ ಇದು ಇಷ್ಟವಾಗದೇ ಇರಬಹುದು. ಸುಗಂಧ ದ್ರವ್ಯಗಳು ಚರ್ಮದ ಕಿರಿಕಿರಿಗೆ ಕಾರಣವಾಗಬಹುದು. ಹಾಗಾಗಿ ಲಘು ಪರಿಮಳಯುಕ್ತ ಫೇಸ್‌ಕ್ರೀಮ್‌ ಆಯ್ಕೆ ಮಾಡಿ. ಇದರಿಂದ ಮಗುವಿನ ತ್ವಚೆಯ ಮೇಲೆ ಅನಗತ್ಯ ದದ್ದು, ಕೆಂಪಾಗುವುದು ಉಂಟಾಗುವುದನ್ನು ತಪ್ಪಿಸಬಹುದು.

ಅಲರ್ಜಿ ವರ್ತನೆಗಳು: ಮಕ್ಕಳು ಜಗತ್ತಿಗೆ ಹೊಸತಾಗಿ ಕಾಲಿಟ್ಟಿರುತ್ತವೆ. ಅವು ಎಲ್ಲವನ್ನೂ ಅನ್ವೇಷಿಸುತ್ತವೆ. ಇದಕ್ಕೆ ಮಕ್ಕಳ ಚರ್ಮವೂ ಹೊರತಾಗಿಲ್ಲ. ಮಕ್ಕಳ ಚರ್ಮಕ್ಕೆ ಯಾವುದೇ ಕ್ರೀಮ್‌ ಹಚ್ಚುವ ಮೊದಲು ಪ್ಯಾಚ್‌ ಗಮನಿಸಬೇಕು. ಮೊದಲು ಸಣ್ಣ ಜಾಗಕ್ಕೆ ಹಚ್ಚಿ, 24 ಗಂಟೆಗಳ ಕಾಲ ಕಾಯಿರಿ. ಆ ಜಾಗದಲ್ಲಿ ಯಾವುದೇ ಕೆಂಪು, ಕಿರಿಕಿರಿಯಿಲ್ಲದೇ ಇದ್ದರೆ ಆ ಕ್ರೀಮ್‌ ಮಗುವಿನ ಚರ್ಮಕ್ಕೆ ಹೊಂದಿಕೆಯಾಗುತ್ತದೆ ಎಂದರ್ಥ.

ಪರ್ಫೆಕ್ಟ್‌ ಫೇಸ್‌ಕ್ರೀಮ್‌ ಆಯ್ಕೆ ಮಾಡಲು ಸಲಹೆಗಳು

ಚರ್ಮರೋಗ ವೈದ್ಯರ ಅನುಮೋದನೆ: ಚರ್ಮರೋಗ ವೈದ್ಯರಿಂದ ಅನುಮತಿ ಪಡೆದು ನಂತರವಷ್ಟೇ ಮಗುವಿನ ಫೇಸ್‌ ಕ್ರೀಮ್‌ ಆಯ್ಕೆ ಮಾಡುವುದು ಉತ್ತಮ. ಉತ್ಪನ್ನವನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗಿದೆ ಮತ್ತು ಮಗುವಿನ ತ್ವಚೆಯ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ಇದು ಖಚಿತಪಡಿಸುತ್ತದೆ.

ನೈಸರ್ಗಿಕ ಉತ್ಪನ್ನ: ನೈಸರ್ಗಿಕ ಹಾಗೂ ಸಾವಯವ ಪದಾರ್ಥಗಳನ್ನು ಹೊಂದಿರುವ ಫೇಸ್‌ಕ್ರೀಮ್‌ ಆಯ್ಕೆ ಮಾಡಿ. ಇದು ಮಗುವಿನ ತ್ವಚೆಗೆ ತೇವಾಂಶ ನೀಡುವುದು ಮಾತ್ರವಲ್ಲ, ನಿಮ್ಮ ಮಗುವಿನ ಸೂಕ್ಷ್ಮ ಚರ್ಮಕ್ಕೆ ಹಿತವಾದ ಗುಣಗಳನ್ನು ನೀಡುತ್ತದೆ.

ಸ್ಥಿರತೆ ಮುಖ್ಯ: ನಿಮ್ಮ ಮಗುವಿನ ಚರ್ಮಕ್ಕೆ ಹೊಂದಿಕೆಯಾಗುವ ವಿನ್ಯಾಸದೊಂದಿಗೆ ಫೇಸ್ ಕ್ರೀಮ್ ಅನ್ನು ಹುಡುಕಿ.

ಯಾವಾಗ ಬೇಬಿ ಫೇಸ್ ಕ್ರೀಮ್ ಬಳಸಲು ಪ್ರಾರಂಭಿಸಬೇಕು?

ನವಜಾತ ದಿನಗಳು: ಮಗು ಜನಿಸಿದ ಕೆಲವು ವಾರಗಳಲ್ಲಿ, ಮಗುವಿನ ಚರ್ಮವು ಗರ್ಭಾಶಯದ ಹೊರಗಿನ ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಮಗುವಿನ ಚರ್ಮವನ್ನು ಸ್ವಚ್ಛವಾಗಿಡಲು ನೀರು ಸಾಕಾಗುತ್ತದೆ. ಆದಾಗ್ಯೂ, ನಿಮ್ಮ ಮಗುವಿನ ಚರ್ಮವು ಶುಷ್ಕ ಅಥವಾ ಫ್ಲಾಕಿಯಾಗಿ ಕಂಡುಬಂದರೆ, ಸೌಮ್ಯವಾದ, ಸುಗಂಧ-ಮುಕ್ತವಾದ ಮಾಯಿಶ್ಚರೈಸರ್ ಅನ್ನು  ಹಚ್ಚಬಹುದು. 

ಆರು ವಾರಗಳ ಅವಧಿ: ಮಗುವಿನ ಚರ್ಮವು ಅಭಿವೃದ್ಧಿ ಹೊಂದುತ್ತಿರುವಂತೆ, ಅದರ ರಚನೆಯಲ್ಲಿ ಬದಲಾವಣೆಗಳನ್ನು ನೀವು ಗಮನಿಸಬಹುದು. ಆರು ವಾರಗಳ ಅವಧಿಯಲ್ಲಿ, ನಿಮ್ಮ ಮಗುವಿನ ತ್ವಚೆಯ ದಿನಚರಿಯಲ್ಲಿ ಸೌಮ್ಯವಾದ, ಹೈಪೋಲಾರ್ಜನಿಕ್ ಫೇಸ್‌ಕ್ರೀಮ್ ಅನ್ನು ಪರಿಚಯಿಸಬಹುದು. ಅವರ ಚರ್ಮದ ಪ್ರತಿಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಯಾವಾಗಲೂ ಸ್ವಲ್ಪ ಪ್ರಮಾಣದಲ್ಲಿ ಹಚ್ಚಿ.