Parenting: ಮಕ್ಕಳ ಮೇಲೆ ರೇಗುವ ಮುನ್ನ ಇಲ್ಕೇಳಿ; ಮಕ್ಕಳಿಗೆ ಬಯ್ಯೋದು ಕೂಡ ಲೈಂಗಿಕ, ದೈಹಿಕ ದೌರ್ಜನ್ಯದಷ್ಟೇ ಅಪಾಯವಂತೆ
ಇತ್ತೀಚೆಗೆ ಅಮೆರಿಕ ಮತ್ತು ಲಂಡನ್‌ನಲ್ಲಿ ನಡೆದ ಅಧ್ಯಯನಗಳ ಪ್ರಕಾರ ಮಕ್ಕಳಿಗೆ ಬಯ್ಯವುದು ಕೂಡ ಲೈಂಗಿಕ ಅಥವಾ ದೈಹಿಕ ದೌರ್ಜನ್ಯ ಮಾಡಿದಷ್ಟೇ ಅಪಾಯಕಾರಿ ಎಂಬ ಅಂಶ ತಿಳಿದು ಬಂದಿದೆ. ಮಕ್ಕಳಿಗೆ ಕೆಟ್ಟದಾಗಿ ಬಯ್ಯವುದು, ಏರು ಧ್ವನಿಯಲ್ಲಿ ಜೋರು ಮಾಡುವುದು, ತಟ್ಟನೆ ಪ್ರತಿಕ್ರಿಯೆ ನೀಡುವುದು ಇವೆಲ್ಲವೂ ದೌರ್ಜನ್ಯ ಎನ್ನಿಸಿಕೊಳ್ಳುತ್ತದೆ ಎನ್ನುತ್ತದೆ ಆ ಅಧ್ಯಯನ.
ಮಕ್ಕಳು ತಪ್ಪು ಮಾಡಿದಾಗ ಪೋಷಕರು ಬಯ್ಯುವುದು, ಗದರುವುದು ಸಾಮಾನ್ಯ. ನಾವು ಬಾಲ್ಯದಲ್ಲಿ ಇದ್ದಾಗಲೂ ನಮ್ಮ ತಂದೆ, ತಾಯಿ ನಮಗೆ ಬಯ್ಯುತ್ತಿದ್ದರು. ಹೇಳದ ಮಾತು ಕೇಳದೇ ಇದ್ದಾಗ, ಹಠ ಮಾಡಿದಾಗ, ಹೋವರ್ಕ್ ಮಾಡದೇ ಇದ್ದಾಗ ತಂದೆ-ತಾಯಿ ಬಯ್ಯುತ್ತಾರೆ. ಇದು ಎಲ್ಲರ ಮನೆಯಲ್ಲೂ ನಡೆಯುವ ಸಹಜ ಸಂಗತಿ.
ಆದರೆ ಇನ್ ಮುಂದೆ ಹಾಗಲ್ಲ ಸ್ವಾಮಿ, ಮಕ್ಕಳಿಗೆ ಬಯ್ಯುವ ಮುನ್ನ ಖಂಡಿತ ಯೋಚನೆ ಮಾಡ್ಬೇಕು. ಯಾಕೆ ಅಂತೀರಾ, ಮುಂದೆ ಓದಿ.
ಇತ್ತೀಚೆಗೆ ಅಮೆರಿಕ ಮತ್ತು ಲಂಡನ್‌ನಲ್ಲಿ ನಡೆದ ಅಧ್ಯಯನಗಳ ಪ್ರಕಾರ ಮಕ್ಕಳಿಗೆ ಬಯ್ಯವುದು ಕೂಡ ಲೈಂಗಿಕ ಅಥವಾ ದೈಹಿಕ ದೌರ್ಜನ್ಯ ಮಾಡಿದಷ್ಟೇ ಅಪಾಯಕಾರಿ. ಮಕ್ಕಳಿಗೆ ಕೆಟ್ಟದಾಗಿ ಬಯ್ಯವುದು, ಏರು ಧ್ವನಿಯಲ್ಲಿ ಜೋರು ಮಾಡುವುದು, ತಟ್ಟನೆ ಪ್ರತಿಕ್ರಿಯೆ ನೀಡುವುದು ಇವೆಲ್ಲವೂ ದೌರ್ಜನ್ಯ ಎನ್ನಿಸಿಕೊಳ್ಳುತ್ತದೆ.
ಅಧ್ಯಯನದ ಕುರಿತು ಒಂದು ನೋಟ
ಯುಕೆ ಚಾರಿಟಿ ವರ್ಡ್ಸ್ ಮ್ಯಾಟರ್ ಈ ಅಧ್ಯಯನವನ್ನು ನಡೆಸಿತ್ತು. ʼಚೈಲ್ಡ್ ಅಬ್ಯುಸ್ ಅಂಡ್ ನೆಗ್ಲೆಕ್ಟ್ʼ ನಿಯತಕಾಲಿಕೆಯಲ್ಲಿ ಈ ಅಧ್ಯಯನದ ಅಂಶ ಪ್ರಕಟವಾಗಿದೆ.
ಬೈಗುಳದಿಂದ ಮಕ್ಕಳ ಮೇಲಾಗುವ ಪರಿಣಾಮ
ಈ ಅಧ್ಯಯನದ ಪ್ರಕಾರ ಮಕ್ಕಳ ಮೇಲೆ ಭಾಷಾ ಅಥವಾ ಶಬ್ದ ಪ್ರಹಾರ ನಡೆಸುವವರು ಸಾಮಾನ್ಯವಾಗಿ ತಾಯಿ, ಶಿಕ್ಷಕರು ಹಾಗೂ ಪೋಷಕರು. ಕೆಲವೊಮ್ಮೆ ಬಾಲ್ಯದಲ್ಲಿ ಮಕ್ಕಳ ಮೇಲೆ ಮಾಡಿದ ಮೌಖಿಕ ನಿಂದನೆಯು ಅವರ ಜೀವನಪರ್ಯಂತ ಪರಿಣಾಮ ಬೀರುವ ಸಾಧ್ಯತೆಯೂ ಇದೆ.
ಮೌಖಿಕ ನಿಂದನೆಯು ಮಕ್ಕಳ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದು ಮಕ್ಕಳಲ್ಲಿನ ಸ್ಥೂಲಕಾಯತೆ, ಅತಿಯಾದ ಕೋಪ, ಮಾದಕ ವ್ಯಸನ, ಖಿನ್ನತೆ ಹಾಗೂ ಸ್ವಯಂ ಹಾನಿ ಇಂತಹ ಅಪಾಯಗಳಿಗೆ ಕಾರಣವಾಗಬಹುದು ಎಂದು ಈ ಅಧ್ಯಯನ ತಿಳಿಸಿದೆ.
ಬಾಲ್ಯದ ಮೌಖಿಕ ನಿಂದನೆಯನ್ನು ಅರ್ಥ ಮಾಡಿಕೊಳ್ಳಿ
ಪ್ರಸುತ್ತ ಬಾಲ್ಯ ಕಿರುಕುಳವನ್ನು ಒಳಗೊಂಡಿರುವ ನಾಲ್ಕು ವಿಭಾಗಗಳಿವೆ. ದೈಹಿಕ ನಿಂದನೆ, ಭಾವನಾತ್ಮಕ ನಿಂದನೆ, ಲೈಂಗಿಕ ನಿಂದನೆ ಮತ್ತು ನಿರ್ಲಕ್ಷ್ಯ. ಅಧ್ಯಯನದ ಪ್ರಕಾರ ಬಾಲ್ಯದ ದಿನಗಳ ಭಾವನಾತ್ಮಕ ನಿಂದನೆಯು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ.
ಮೌಖಿಕ ನಿಂದನೆಯೂ ದೌರ್ಜನ್ಯ
ಮಕ್ಕಳನ್ನು ಮೌಖಿಕವಾಗಿ ನಿಂದಿಸುವುದು ಕೂಡ ದೌರ್ಜನ್ಯ. ಇದು ಮಕ್ಕಳನ್ನು ದುರುಪಯೋಗ ಮಾಡಿಕೊಳ್ಳುವ ವಿಧಾನ ಎಂದು ಅಧ್ಯಯನ ಹೇಳುತ್ತದೆ. ಯಾಕೆಂದರೆ ಇದು ಮಕ್ಕಳ ಮೇಲೆ ಜೀವನವಿಡಿ ಪರಿಣಾಮ ಬೀರಬಹುದು ಎಂದು ಅಧ್ಯಯನ ಹೇಳುತ್ತದೆ.
ರೇಗುವ ಬದಲು ಬೇರೆ ಮಾರ್ಗ ಕಂಡುಕೊಳ್ಳಿ
ಮಕ್ಕಳಿಗೆ ಬದುಕಿನ ಪಾಠವನ್ನು ಕಲಿಸುವ ಬರದಲ್ಲಿ ಪೋಷಕರು ರೇಗುವುದು ಸಾಮಾನ್ಯ, ಆದರೆ ರೇಗುವ ಬದಲು ಬೇರೆ ಮಾರ್ಗಗಳನ್ನು ಕಂಡುಕೊಳ್ಳಬಹುದು. ಅವರೊಂದಿಗೆ ಸಕಾರಾತ್ಮಕ ಮತ್ತು ಆರೋಗ್ಯಕರ ಸಂಬಂಧ ಹೊಂದಲು ಬಯ್ಯುವ ಬದಲು ಬೇರೆ ಮಾರ್ಗ ಅನುಸರಿಸಿ. ಮಗುವಿನ ನಡತೆಯಿಂದ ನೀವು ರೋಸಿ ಹೋಗಿದ್ದರು ಶಾಂತವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳಿ. ಮಕ್ಕಳಿಗೆ ಪ್ರೀತಿಯಿಂದ ತಿಳಿ ಹೇಳಿ. ಕೇಳದಿದ್ದಾಗ ಸ್ವಲ್ಪ ನಿರ್ಲಕ್ಷ್ಯ ಮಾಡಿ, ಆಗ ಅವರು ನಿಮ್ಮ ದಾರಿಗೆ ಬರುತ್ತಾರೆ.
ಇದನ್ನೂ ಓದಿ
Parenting: 15 ವರ್ಷ ತುಂಬುವ ಮೊದಲೇ ಪೋಷಕರು ಮಕ್ಕಳಿಗೆ ಕಲಿಸಲೇಬೇಕಾದ ಕೆಲವು ಅಗತ್ಯ ಜೀವನ ಕೌಶಲಗಳಿವು
ಮಕ್ಕಳಿಗೆ 15 ವರ್ಷ ತುಂಬುವ ಮೊದಲೇ ಪೋಷಕರು ಕೆಲವು ಜೀವನ ಕೌಶಲಗಳನ್ನು ಕಲಿಸಬೇಕು. ಈ ಕೌಶಲಗಳು ಶೈಕ್ಷಣಿಕ ವಿಚಾರಗಳ ಗಡಿಯನ್ನು ಮೀರಿ ಸಾಮಾಜಿಕ, ಭಾವನಾತ್ಮಕ ಮತ್ತು ಜೀವನಕ್ಕೆ ಸಂಬಂಧಿಸಿ ಹಲವು ವಿಚಾರಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಇವು ಮಕ್ಕಳ ಭವಿಷ್ಯ ಜೀವನಕ್ಕೆ ರಹದಾರಿಯೂ ಹೌದು. ಹಾಗಾದರೆ ಆ ಕೌಶಲಗಳು ಯಾವುವು ನೋಡಿ.
ವಿಭಾಗ