ಕನ್ನಡ ಸುದ್ದಿ  /  ಜೀವನಶೈಲಿ  /  Parenting: ಆರಂಭವಾಯ್ತು ಶಾಲೆ; ಹೇಗಿರಬೇಕು ಮಕ್ಕಳ ಟಿಫಿನ್‌ ಬಾಕ್ಸ್‌ ಆಹಾರ; ಪೋಷಕರಿಗೆ ಇಲ್ಲಿದೆ ಸಲಹೆ

Parenting: ಆರಂಭವಾಯ್ತು ಶಾಲೆ; ಹೇಗಿರಬೇಕು ಮಕ್ಕಳ ಟಿಫಿನ್‌ ಬಾಕ್ಸ್‌ ಆಹಾರ; ಪೋಷಕರಿಗೆ ಇಲ್ಲಿದೆ ಸಲಹೆ

Children Tiffin Box: ಜೂನ್‌ 1ನೇ ತಾರೀಕು ಬಂತೆಂದರೆ ಮಕ್ಕಳಿಗೆ ಶಾಲೆಗೆ ಹೋಗುವ ಸಂಭ್ರಮ, ಪೋಷಕರಿಗೆ ಮಕ್ಕಳ ಯೂನಿಫಾರಂ, ಬ್ಯಾಗ್‌, ಊಟದ ಡಬ್ಬಿಯ ಚಿಂತೆ. ಮಕ್ಕಳ ಊಟದ ಡಬ್ಬಿಗೆ ನೀಡುವ ಆಹಾರವು ಅವರ ಹಸಿವು ನೀಗಿಸುವ ಜೊತೆಗೆ ಆರೋಗ್ಯಕ್ಕೂ ಉತ್ತಮ ಎನ್ನಿಸಬೇಕು. ಹಾಗದರೆ ಮಕ್ಕಳ ಊಟದ ಡಬ್ಬಿ ಹೇಗಿರಬೇಕು, ಇಲ್ಲಿದೆ ಪೋಷಕರಿಗೆ ಸಲಹೆ.

ಹೀಗಿರಲಿ ಮಕ್ಕಳ ಟಿಫಿನ್‌ ಬಾಕ್ಸ್‌
ಹೀಗಿರಲಿ ಮಕ್ಕಳ ಟಿಫಿನ್‌ ಬಾಕ್ಸ್‌

ಜೂನ್‌ 1ನೇ ತಾರೀಕು ಬಂತೆಂದರೆ ಶಾಲೆಗಳಲ್ಲಿ ಸಂಭ್ರಮ. ಮಕ್ಕಳ ಮನದಲ್ಲಿ ಖುಷಿಯೋ ಖುಷಿ. ಪೋಷಕರಲ್ಲಿ ದುಗುಡದ ಜೊತೆಗೆ ʼಮಕ್ಕಳು ಶಾಲೆಗೆ ಹೊರಟರಲ್ಲಾʼ ಎಂಬ ನೆಮ್ಮದಿಯ ನಿಟ್ಟುಸಿರು. ʼಇನ್ನು ಪಾಠದ ಆರಂಭʼ ಎಂದು ಶಿಕ್ಷಕರಲ್ಲಿ ಉತ್ಸಾಹ. ಹೀಗೆ ಶಾಲಾರಂಭವನ್ನು ಪ್ರತಿಯೊಬ್ಬರು ಒಂದೊಂದು ರೀತಿ ಸ್ವಾಗತಿಸುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಮಕ್ಕಳನ್ನು ಶಾಲೆ ಕಳುಹಿಸುವುದು ಕೂಡ ಸವಾಲು. ಬ್ಯಾಗ್‌, ಯೂನಿಫಾರ್ಮ್‌, ಚಪ್ಪಲಿ, ಛತ್ರಿ, ರೇನ್‌ಕೋಟ್‌ ಇದೆಲ್ಲದರ ಜೊತೆಗೆ ಮುಖ್ಯವಾಗುವುದು ಟಿಫಿನ್‌ ಬಾಕ್ಸ್‌.

ಮಕ್ಕಳ ಟಿಫಿನ್‌ ಬಾಕ್ಸ್‌ ಬಹುಶಃ ಷೋಷಕರನ್ನು ಕಾಡುವ ವಿಷಯವೂ ಇರಬಹುದು. ನಾಳೆ ಡಬ್ಬಿಗೆ ಏನು ಮಾಡಲಿ, ಅಕ್ಕಿ ತಿಂಡಿಗಳನ್ನು ಮಗು ತಿನ್ನುವುದಿಲ್ಲ, ಎಣ್ಣೆ ಪದಾರ್ಥ ಆರೋಗ್ಯ ಕೆಡುತ್ತದೆ, ಸಿಹಿ ತಿಂದರೆ ಹಲ್ಲು ಹುಳುಕಾಗುತ್ತದೆ... ಹೀಗೆ ಹಲವು ಗೊಂದಲಗಳು ಕಾಡಬಹುದು. ಅದೇನೆ ಇರಲಿ ಮಕ್ಕಳು ಶಾಲೆಗೆ ಒಯ್ಯುವ ಟಿಫಿನ್‌ ಬಾಕ್ಸ್‌ಗೆ ಆರೋಗ್ಯಕರ, ಪೌಷ್ಟಿಕಾಂಶಯುಕ್ತ ಆಹಾರ ನೀಡುವುದು ಅವಶ್ಯ.

ಹೀಗಿರಲಿ ಮಕ್ಕಳ ಟಿಫಿನ್‌ ಬಾಕ್ಸ್‌

ಸಂಸ್ಕರಿತ ಆಹಾರ ನೀಡದಿರಿ

ಬ್ರೆಡ್‌, ಬಿಸ್ಕತ್ತು, ಕುರ್‌ಕುರೆ, ಲೇಸ್‌ ಸೇರಿದಂತೆ ಸಂಸ್ಕರಿತ ಆಹಾರ ಪದಾರ್ಥಗಳು ಹಾಗೂ ಪಾನೀಯಗಳ ಬದಲು ಮನೆಯಲ್ಲಿ ಮಾಡಿದ ತಿನಿಸುಗಳನ್ನು ಹಾಕಿ. ಯಾವಾಗಲೂ ತಾಜಾ ತಿನಿಸುಗಳನ್ನೇ ಡಬ್ಬಿಗೆ ಹಾಕಿಕೊಡಿ. ಆಯಾ ಋತುಮಾನದ ಹಣ್ಣುಗಳನ್ನು ಡಬ್ಬಿಗೆ ಹಾಕಿ ಕೊಡಬಹುದು. ಮಕ್ಕಳು ತರಕಾರಿ ಇಷ್ಟ ಪಡುವುದಾದರೆ ಅವರಿಷ್ಟದ ತರಕಾರಿಯನ್ನೂ ಸೇರಿಸಬಹುದು.

ಡಬ್ಬಿ ಭಿನ್ನವಾಗಿರಲಿ

ಪ್ರತಿದಿನ ದೋಸೆ, ಚಪಾತಿ, ತರಕಾರಿ, ಹಣ್ಣುಗಳನ್ನು ತಿಂದು ಮಕ್ಕಳಿಗೆ ಬೇಸರವಾಗಬಹುದು. ಆದರೆ ಆ ಕಾರಣಕ್ಕೆ ಅದನ್ನು ಭಿನ್ನವಾಗಿ ತಯಾರಿಸಿ ಡಬ್ಬಿಗೆ ಹಾಕಿ. ಚಪಾತಿ, ಬ್ರೆಡ್‌ ರೋಲ್‌, ಚಪಾತಿ ಜಾಮ್‌, ಸ್ಟಫ್ಡ್‌ ವೆಜಿಟೇಬಲ್‌ ಪರೋಟ ಹೀಗೆ ಇರುವುದನ್ನೇ ಭಿನ್ನವಾಗಿ, ಆರೋಗ್ಯಕರವಾಗಿ ತಯಾರಿಸಿ ಕೊಡಬಹುದು. ಹಸಿರು ತರಕಾರಿಗಳು, ಬೇಯಿಸಿದ ಧಾನ್ಯಗಳು, ಪನ್ನೀರ್‌ ಇವುಗಳಿಂದ ವಿಶೇಷ ಖಾದ್ಯ ತಯಾರಿಸಿ ಡಬ್ಬಿಗೆ ಹಾಕಬಹುದು. ಮ್ಯಾಗಿ, ಪಾಸ್ತಾಗಳಿಗಿಂತ ಇವು ಉತ್ತಮ.

ಸಾಕಷ್ಟು ತರಕಾರಿ ಬಳಸಿ

ನೀವು ತಯಾರಿಸುವ ಖಾದ್ಯಗಳಗೆ ಸಾಧ್ಯವಾದಷ್ಟು ತರಕಾರಿ ಬಳಸಿ. ಮೊಳಕೆಕಾಳುಗಳು, ಶೇಂಗಾ, ಕಡಲೆ, ಜೋಳ ಇಂತಹ ಆರೋಗ್ಯಕರ ವಸ್ತುಗಳಿಂದ ತಯಾರಿಸಿದ ತಿನಿಸುಗಳನ್ನು ಡಬ್ಬಿಗೆ ಹಾಕಬಹುದು. ತರಕಾರಿಗಳಿಂದ ಮಕ್ಕಳಲ್ಲಿ ಶಕ್ತಿಯ ಮಟ್ಟ ಹೆಚ್ಚುವುದು ಮಾತ್ರವಲ್ಲ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ನಿವಾರಣೆಗೂ ಇದು ಸಹಕಾರಿ.

ಭಾಗ ಮಾಡಿ ಕೊಡಿ

ರಜಾದಿನಗಳಲ್ಲಿ ಮಕ್ಕಳು ಸಿಕ್ಕಿದ್ದನ್ನು ತಿಂದು, ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡುವ ಮೂಲಕ ಹೊಟ್ಟೆಗೆ ಕಡಿಮೆಯಾಗದಂತೆ 2 ತಿಂಗಳು ಕಳೆದಿರುತ್ತಾರೆ. ಆದರೆ ಶಾಲೆಯಲ್ಲಿ ಹಾಗಾಗುವುದಿಲ್ಲ. ಆ ಕಾರಣಕ್ಕೆ ನಡುವೆ ನಡುವೆ ತಿನ್ನಲು ನೆರವಾಗುವಂತೆ 2,3 ಚಿಕ್ಕ ಚಿಕ್ಕ ಡಬ್ಬಿಯನ್ನು ಇರಿಸಿ. ಸಾಧ್ಯವಾದರೆ ಆ ಡಬ್ಬಿಗಳಲ್ಲಿ ಬೇರೆ ಬೇರೆ ರೀತಿಯ ತಿನಿಸುಗಳನ್ನು ಹಾಕಿ. ಮೊಳಕೆ ಕಾಳು, ಹಣ್ಣುಗಳ ಸಲಾಡ್‌, ಒಣಹಣ್ಣುಗಳನ್ನು ನೀಡಬಹುದು. ಇದು ಮಕ್ಕಳಲ್ಲಿ ಆಯಾಸ, ಸುಸ್ತು ಕಡಿಮೆಯಾಗಲು ಸಹಾಯವಾಗುತ್ತದೆ.

ಬೆಲ್ಲ, ರಾಗಿಯಿಂದ ತಯಾರಿಸಿದ ತಿನಿಸುಗಳನ್ನು ನೀಡಿ

ಮಕ್ಕಳ ಡಬ್ಬಿಗೆ ಡೆಸರ್ಟ್‌ ಅಥವಾ ಸಿಹಿ ತಿನಿಸುಗಳನ್ನು ಮಾಡುವಾಗ ಸಕ್ಕರೆ ಬದಲು ಬೆಲ್ಲದ ಬಳಸಬಹುದು ಅಥವಾ ಜೇನುತುಪ್ಪ ಬಳಸಬಹುದು. ಇದರೊಂದಿಗೆ ಸಾಕಷ್ಟು ಒಣಹಣಗಳನ್ನು ಸೇರಿಸಬಹುದು. ಹೀಗೆ ಕೇಕ್‌, ಕುಕ್ಕಿಸ್‌ ತಯಾರಿಸುವಾಗ ಮೈದಾಹಿಟ್ಟಿನ ಬದಲು ರಾಗಿ ಬಳಸಬಹುದು.

ಬಿಸಿ ಆಹಾರ ನೀಡಿ

ಮಕ್ಕಳು ತಣ್ಣನೆಯ ಆಹಾರ ಸೇವನೆಗೆ ಹಿಂದೇಟು ಹಾಕುತ್ತಾರೆ. ಆ ಕಾರಣಕ್ಕೆ ತಿನ್ನುವವರೆಗು ಬಿಸಿ ಇರುವಂತೆ ಹಾಟ್‌ ಬಾಕ್ಸ್‌ನಲ್ಲಿ ಆಹಾರ ನೀಡುವುದು ಉತ್ತಮ.

ವಿಭಾಗ