Parenting: 15 ವರ್ಷ ತುಂಬುವ ಮೊದಲೇ ಪೋಷಕರು ಮಕ್ಕಳಿಗೆ ಕಲಿಸಲೇಬೇಕಾದ ಕೆಲವು ಅಗತ್ಯ ಜೀವನ ಕೌಶಲಗಳಿವು
ಮಕ್ಕಳಿಗೆ 15 ವರ್ಷ ತುಂಬುವ ಮೊದಲೇ ಪೋಷಕರು ಕೆಲವು ಜೀವನ ಕೌಶಲಗಳನ್ನು ಕಲಿಸಬೇಕು. ಈ ಕೌಶಲಗಳು ಶೈಕ್ಷಣಿಕ ವಿಚಾರಗಳ ಗಡಿಯನ್ನು ಮೀರಿ ಸಾಮಾಜಿಕ, ಭಾವನಾತ್ಮಕ ಮತ್ತು ಜೀವನಕ್ಕೆ ಸಂಬಂಧಿಸಿ ಹಲವು ವಿಚಾರಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಇವು ಮಕ್ಕಳ ಭವಿಷ್ಯ ಜೀವನಕ್ಕೆ ರಹದಾರಿಯೂ ಹೌದು. ಹಾಗಾದರೆ ಆ ಕೌಶಲಗಳು ಯಾವುವು ನೋಡಿ.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣವೇ ರಹದಾರಿ. ಶಿಕ್ಷಣದಿಂದ ಎಲ್ಲವನ್ನೂ ಕಲಿಯಬಹುದು ಎಂಬುದು ಇತ್ತೀಚಿನ ಹಲವು ಪೋಷಕರ ಅಭಿಪ್ರಾಯ. ಆದರೆ ಪಠ್ಯಪುಸ್ತಕ, ಪರೀಕ್ಷೆಗಳ ಮಿತಿಯನ್ನು ಮೀರಿ ತರಗತಿ ಆಚೆಗೂ ಶಿಕ್ಷಣ ಅಥವಾ ಕಲಿಕೆ ಎಂಬುದು ವಿಸ್ತರಿಸುತ್ತದೆ ಎಂಬುದನ್ನು ಪೋಷಕರು ಅರಿಯಬೇಕು. ಶಾಲೆಯನ್ನು ಹೊರತು ಪಡಿಸಿ ಮಕ್ಕಳಿಗೆ ನೀಡುವ ಶಿಕ್ಷಣವು ಅವರನ್ನು ಸಾಮಾಜಿಕವಾಗಿ ಸಂಘಟಿತರಾಗಿ ಬೆಳೆಯಲು ಸಹಕರಿಸುತ್ತದೆ. ಹಾಗಾಗಿ ಮಕ್ಕಳಿಗೆ 15 ವರ್ಷ ತುಂಬುದ ಮೊದಲೇ ಪೋಷಕರು ಕೆಲವೊಂದು ವಿಚಾರಗಳನ್ನು ಕಲಿಸಬೇಕು. ಪೋಷಕರು ಕಲಿಸುವ ಈ ಕೌಶಲಗಳು ಮಕ್ಕಳ ಜೀವನಕ್ಕೆ ಬಹಳ ಅವಶ್ಯ. ಈ ಕೌಶಲಗಳು ಶೈಕ್ಷಣಿಕ ವಿಚಾರಗಳ ಗಡಿಯನ್ನು ಮೀರಿ ಸಾಮಾಜಿಕ, ಭಾವನಾತ್ಮಕ ಮತ್ತು ಜೀವನಕ್ಕೆ ಸಂಬಂಧಿಸಿದ ಪ್ರಯೋಗಿಕ ಅಂಶಗಳನ್ನು ಒಳಗೊಳ್ಳುತ್ತದೆ.
ಮಕ್ಕಳ ಹರೆಯಕ್ಕೆ ಕಾಲಿಡುವ ಮೊದಲೇ ಪೋಷಕರು ಅವರಿಗೆ ಕಲಿಸುವ ಜೀವನ ಕೌಶಲಗಳು ಅವರನ್ನು ಹೆಚ್ಚು ಜವಾಬ್ದಾರಿಯುತ, ಸಹಾನುಭೂತಿ ಮತ್ತು ಸಮರ್ಥ ವ್ಯಕ್ತಿಗಳಾಗಿ ರೂಪಿಸಲು ನೆರವಾಗುತ್ತದೆ.
ಸಾಮಾಜಿಕ ಕೌಶಲ ಮತ್ತು ಶಿಷ್ಟಾಚಾರ
ಮಕ್ಕಳಿಗೆ ಸಹಾನುಭೂತಿ, ಗೌರವ ಮತ್ತು ಸೌಜನ್ಯದ ಮಹತ್ವವನನ್ನು ಕಲಿಸುವುದು ಅರ್ಥಪೂರ್ಣ ಸಂಬಂಧಗಳನ್ನು ನಿರ್ಮಿಸುವ ತಳಹದಿಯಾಗಿದೆ. ಸಾಮಾಜಿಕ ಕೌಶಲ ಹಾಗೂ ನಡವಳಿಕೆ ಮಕ್ಕಳಿಗೆ ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಸಮಾಜದಲ್ಲಿ ಸಹಕಾರ ಮನೋಭಾವದೊಂದಿಗೆ ಹೇಗೆ ಬೆರೆಯಬೇಕು ಎಂಬುದನ್ನು ಕಲಿಸುತ್ತದೆ.
ವರ್ತನೆಯ ಕೌಶಲ
ಮಕ್ಕಳು ತಮ್ಮ ನಡವಳಿಕೆಯಿಂದ ತಮ್ಮ ಮೇಲೆ ಹಾಗೂ ಇತರರ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಅರ್ಥ ಮಾಡಿಕೊಳ್ಳುವ ಮನೋಭಾವ ಹೊಂದಿರಬೇಕು. ಸಮಾಜದೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಶಿಕ್ಷಣದಿಂದ ಕಲಿಯಲು ಸಾಧ್ಯವಿಲ್ಲ. ಅದನ್ನು ಬಾಲ್ಯದಿಂದಲೇ ಪೋಷಕರು ಮಕ್ಕಳಿಗೆ ತಿಳಿಸಿ ಹೇಳಬೇಕು. ಆ ಮೂಲಕ ಹಠಾತ್ ಪ್ರತಿಕ್ರಿಯೆಯನ್ನು ನಿಯಂತ್ರಿಸುವುದು, ಕೋಪವನ್ನು ನಿರ್ವಹಿಸುವುದು ಮತ್ತು ಜವಾಬ್ದಾರಿಯನ್ನು ಕಲಿಯುವುದು ಮಕ್ಕಳಿಗೆ ಅಭ್ಯಾಸವಾಗುತ್ತದೆ.
ಸಂವಹನ ಕೌಶಲ
ಸಂವಹನ ಕೌಶಲ ಬಹಳ ಮುಖ್ಯ. ಮಾತು ವರ್ತನೆಗಿಂತ ಹೆಚ್ಚು ಪರಿಣಾಮಕಾರಿ. ಪರಿಣಾಮಕಾರಿ ಸಂವಹನವು ಆಲಿಸುವುದು, ಅರ್ಥ ಮಾಡಿಕೊಳ್ಳುವುದು ಮತ್ತು ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದು ಈ ಅಂಶಗಳನ್ನು ಒಳಗೊಂಡಿದೆ. ಈ ಕೌಶಲದಿಂದ ಮಕ್ಕಳಿಗೆ ತಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ತಿಳಿಸಲು ಮತ್ತು ಅಷ್ಟೇ ಮುಖ್ಯವಾಗಿ ಇತರರ ದೃಷ್ಟಿಕೋಶಗಳನ್ನು ಗ್ರಹಿಸಲು ಅನುವು ಮಾಡಿಕೊಡುತ್ತದೆ.
ನ್ಯಾವಿಗೇಶನ್ ಸ್ಕಿಲ್
ನ್ಯಾವಿಗೇಶನ್ ಕೌಶಲವು ಮಕ್ಕಳಿಗೆ ನಕ್ಷೆಗಳನ್ನು ಓದುವುದು ನಿರ್ದೇಶಗಳನ್ನು ಅನುಸರಿಸುವುದು, ಮಾರ್ಗಗಳನ್ನು ಯೋಜಿಸುವುದು ಹೇಗೆ ಎಂಬುದನ್ನು ಕಲಿಯಲು ಸಹಾಯ ಮಾಡುತ್ತದೆ. ಮಕ್ಕಳು ಯಾವುದೇ ಸ್ಥಳ ಅಥವಾ ಕೆಲಸದ ಬಗ್ಗೆ ಗುರಿಯನ್ನು ಹೊಂದಿಸುವುದು ಬಹಳ ಮುಖ್ಯವಾಗುತ್ತದೆ. ಅಲ್ಲದೆ ಅವರು ತಮ್ಮ ಗುರಿಯ ಪ್ರಾಮುಖ್ಯತೆಯನ್ನೂ ಅರಿಯಬೇಕು. ಅಲ್ಲದೆ ಭವಿಷ್ಯಕ್ಕಾಗಿ ಮಾರ್ಗವನ್ನು ರೂಪಿಸಬೇಕು. ಇದು ನ್ಯಾವಿಗೇಷನ್ ಕೌಶಲದಿಂದ ಸಾಧ್ಯ.
ಡೊಮೆಸ್ಟಿಕ್ ಕೌಶಲ
ಡೊಮೆಸ್ಟಿಕ್ ಕೌಶಲ ಎನ್ನುವುದು ಮನೆ ಹಾಗೂ ವೈಯಕ್ತಿಕ ವಿಚಾರಗಳನ್ನು ಒಳಗೊಂಡಿರುತ್ತದೆ. ಅಡುಗಮನೆ ನಿರ್ವಹಣೆ, ಸ್ವಚ್ಛತೆ ಹಾಗೂ ಹಣಕಾಸು ನಿರ್ವಹಣೆಯಂತಹ ಮೂಲಭೂತ ಕೌಶಲಗಳು ಮಕ್ಕಳು ಸ್ವಾವಲಂಬಿಯಾಗಿ ಬದುಕಲು ಬಹಳ ಅವಶ್ಯ. ಈ ಕೌಶಲಗಳಿಂದ ಮಕ್ಕಳಲ್ಲಿ ಜವಾಬ್ದಾರಿ ಬೆಳೆಯುತ್ತದೆ. ಅಲ್ಲದೆ ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳಲು ಸಹಾಯವಾಗುತ್ತದೆ.
ಸಾಂಸ್ಥಿಕ ಕೌಶಲ
ಸಮಯ ಹಾಗೂ ಕೆಲಸಗಳನ್ನು ಪರಿಣಾಮಕಾರಿ ನಿರ್ವಹಿಸಲು ಸಾಂಸ್ಥಿಕ ಕೌಶಲಗಳು ಬಹಳ ಅಗತ್ಯ. ಮಕ್ಕಳು ತಮ್ಮ ಶೈಕ್ಷಣಿಕ ಹಾಗೂ ವೈಯ್ತಕಿಕ ಜೀವನಕ್ಕೆ ಆದ್ಯತೆ ನೀಡಲು ವೇಳಾಪಟ್ಟಿಗಳನ್ನು ಹೊಂದಿಸಲು ಮತ್ತು ಆ ವಿಷಯಗಳಲ್ಲಿ ಕ್ರಮಗಳನ್ನು ನಿರ್ವಹಿಸುವುದನ್ನು ಕಲಿಯಬೇಕು.
ಸ್ವಚ್ಛತೆ ಮತ್ತು ನೈಮರ್ಲ್ಯ
ವೈಯಕ್ತಿಕ ನೈಮರ್ಲ್ಯ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುವುದು ಕೇವಲ ದೈಹಿಕ ಆರೋಗ್ಯವನ್ನು ಉತ್ತೇಜಿಸುವ ಜೊತೆಗೆ ಶಿಸ್ತು ಹಾಗೂ ಸ್ವಾಭಿಮಾನವನ್ನು ಬೆಳೆಸುತ್ತದೆ. ಈ ಅಭ್ಯಾಸಗಳು ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ.
ಭಾವನೆಗಳನ್ನು ನಿಭಾಯಿಸುವುದು
ಭಾವನಾತ್ಮಕ ಬುದ್ಧಿವಂತಿಕೆಯು ನಿರ್ಣಾಯಕ ಕೌಶಲವಾಗಿದ್ದು, ಅದು ಮಕ್ಕಳನ್ನು ಅರ್ಥ ಮಾಡಿಕೊಳ್ಳಲು, ನಿರ್ವಹಿಸಲು ಮತ್ತು ಅವರ ಭಾವನೆಗಳನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಮಕ್ಕಳು ಇತರರೊಂದಿಗೆ ಸಹಾನುಭೂತಿ ಹೊಂದಲು ಮತ್ತು ಬಲವಾದ ಸಂಬಂಧಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಸಮಸ್ಯೆಗಳನ್ನು ಪರಿಹರಿಸುವ ಕೌಶಲ
ಜೀವನವು ಸವಾಲುಗಳಿಂದ ಕೂಡಿದೆ. ಅವುಗಳನ್ನು ಜಯಿಸಲು ಸಮಸ್ಯೆಗಳನ್ನು ಪರಿಹರಿಸುವ ಕೌಶಲ ಅವಶ್ಯ. ಸಮಸ್ಯೆಗಳನ್ನು ವಿಶ್ಲೇಷಿಸುವುದು, ಪರಿಹಾರಗಳನ್ನು ಬುದ್ಧಿಮತ್ತೆ ಉಪಯೋಗಿಸುವುದು ಮತ್ತು ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ಮಕ್ಕಳಿಗೆ ಕಲಿಸುವುದರಿಂದ ಜೀವನದಲ್ಲಿ ಎಂತಹ ಸಂಕಷ್ಟದ ಪರಿಸ್ಥಿತಿ ಎದುರಾದರೂ ಅವರು ಅದನ್ನು ಎದುರಿಸಲು ಆತ್ಮವಿಶ್ವಾಸದಿಂದ ಮುನ್ನುಗಲು ಸಹಾಯ ಮಾಡುತ್ತದೆ.
ಗುರಿ ಹೊಂದಿಸುವುದು ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲ
ಗುರಿಗಳನ್ನು ಹೊಂದಿಸುವುದಕ್ಕೆ ಹಲವು ಉದ್ದೇಶಗಳಿರುತ್ತವೆ. ಮಕ್ಕಳು ಅಲ್ಪಾವಧಿ ಹಾಗೂ ದೀರ್ಘಾವಧಿ ಗುರಿಗಳನ್ನು ಹೊಂದಿಸಲು ಕಲಿಯಬೇಕು. ಗುರಿಗಳನ್ನು ಕ್ರಮಬದ್ಧ ಹಂತಗಳಾಗಿ ವಿಭಜಿಸಬೇಕು ಮತ್ತು ಅವರ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಬೇಕು. ಜೀವನದಲ್ಲಿ ಹಲವು ಆಯ್ಕೆಗಳು ಎದುರಾಗುತ್ತವೆ. ಈ ಆಯ್ಕೆಗಳನ್ನು ತಿಳುವಳಿಕೆಯಿಂದ ಸಮರ್ಥವಾಗಿ ನಿರ್ಧರಿಸುವ ಕೌಶಲ ಮಕ್ಕಳಲ್ಲಿ ಇರಬೇಕು. ಆಯ್ಕೆಗಳನ್ನು ನಿರ್ಧರಿಸುವುದು, ಪರಿಣಾಮಗಳ ಬಗ್ಗೆ ತಿಳಿಯುವುದು ಹಾಗೂ ಮೌಲ್ಯಗಳಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ಮಕ್ಕಳಿಗೆ ಕಲಿಸುವುದು ಅತ್ಯಗತ್ಯ.
ಸಮಯ ನಿರ್ವಹಣೆ
ಸಮಯ ನಿರ್ವಹಣೆಯನ್ನು ಕಲಿಸುವುದು ಬಹಳ ಮುಖ್ಯ. ಇದರಿಂದ ಮಕ್ಕಳು ಕೆಲಸ ಕಾರ್ಯಗಳನ್ನು ಮುಂದೂಡುವುದು, ಉದಾಸೀನ ಭಾವ ತೋರುವುದು ಇದನ್ನು ತಪ್ಪಿಸಬಹುದು. ಶೈಕ್ಷಣಿಕ ಹಾಗೂ ವೃತ್ತಿ ಜೀವನದಲ್ಲಿ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದನ್ನು ತಿಳಿಯಲು ಸಮಯ ನಿರ್ವಹಣೆ ಬಹಳ ಅವಶ್ಯ.
ವಿಭಾಗ