ಮಕ್ಕಳು ಹೋಂ ವರ್ಕ್‌ ಮಾಡೋಕೆ ಹಟ ಮಾಡ್ತಿದ್ದಾರಾ? ಈ 5 ಟಿಪ್ಸ್‌ ಫಾಲೋ ಮಾಡಿ, ಮುಂದಿನ ಬದಲಾವಣೆಯನ್ನು ನೀವೇ ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳು ಹೋಂ ವರ್ಕ್‌ ಮಾಡೋಕೆ ಹಟ ಮಾಡ್ತಿದ್ದಾರಾ? ಈ 5 ಟಿಪ್ಸ್‌ ಫಾಲೋ ಮಾಡಿ, ಮುಂದಿನ ಬದಲಾವಣೆಯನ್ನು ನೀವೇ ಗಮನಿಸಿ

ಮಕ್ಕಳು ಹೋಂ ವರ್ಕ್‌ ಮಾಡೋಕೆ ಹಟ ಮಾಡ್ತಿದ್ದಾರಾ? ಈ 5 ಟಿಪ್ಸ್‌ ಫಾಲೋ ಮಾಡಿ, ಮುಂದಿನ ಬದಲಾವಣೆಯನ್ನು ನೀವೇ ಗಮನಿಸಿ

Parenting Tips: ಮಕ್ಕಳಿಗೆ ಹೋಂ ವರ್ಕ್‌ ಮಾಡಿಸುವಾಗ ವಾತಾವರಣ ಶಾಂತಿಯಿಂದ ಇರಲಿ. ಟಿವಿ ಆನ್‌ ಮಾಡಲೇಬೇಡಿ. ನಿಮ್ಮ ಖುಷಿಗಿಂತ ಮಕ್ಕಳ ವಿದ್ಯಾಭ್ಯಾಸ ಮುಖ್ಯ ಅನ್ನೋದು ಗಮನದಲ್ಲಿ ಇರಲಿ. ಇಲ್ಲದಿದ್ದರೆ ನಿಮ್ಮ ಮಕ್ಕಳಿಗೆ ಹೋಂ ವರ್ಕ್‌ ಕಡೆ ಗಮನ ಕೊಡಲು ಸಾಧ್ಯವಾಗುವುದಿಲ್ಲ.

ಮಕ್ಕಳಿಗೆ ಹೋಂವರ್ಕ್‌ ಮಾಡಿಸಲು ಟಿಪ್ಸ್‌
ಮಕ್ಕಳಿಗೆ ಹೋಂವರ್ಕ್‌ ಮಾಡಿಸಲು ಟಿಪ್ಸ್‌ (PC: Unsplash)

Parenting Tips ಬಹುತೇಕ ಮಕ್ಕಳಿಗೆ ಹಟದ ಸ್ವಭಾವ ಇರುತ್ತದೆ. ಹೆತ್ತವರು ಹೇಳಿದಂತೆ ಕೇಳುವುದಿಲ್ಲ. ಊಟ ತಿಂಡಿ ವಿಚಾರದಲ್ಲಿ ಇದು ಬೇಕು, ಅದು ಬೇಡ ಎಂದು ಹಟ ಹಿಡಿಯುತ್ತಾರೆ. ಇನ್ನು ಹೋಂ ವರ್ಕ್‌ ವಿಚಾರ ಬಂದಾಗ ಕೇಳೋದೇ ಬೇಡ. ಒಂದು ಸಾಲು ಬರೆಯಲೂ ಬಹಳ ಹಟ ಮಾಡುತ್ತಾರೆ. ಹೋಂ ವರ್ಕ್‌ ಮಾಡಿಸುವಂತಿಲ್ಲ, ಬಿಡುವಂತಿಲ್ಲ. ಅವನ್ನು ಸಮಾಧಾನ ಮಾಡಿ, ಪುಸಲಾಯಿಸಿ ಬರೆಸುವಷ್ಟರಲ್ಲಿ ಹೆತ್ತವರಿಗೆ ಸಾಕಾಗಿರುತ್ತದೆ.

ಮಕ್ಕಳು ಸುಲಭವಾಗಿ ಹೋಂ ವರ್ಕ್‌ ಮಾಡುವಂತೆ ಈ ರೀತಿ ಪ್ಲಾನ್‌ ಮಾಡಿ

1. ಹೋಂ ವರ್ಕ್‌ ಪ್ಲಾನ್‌ ಕ್ರಿಯೇಟ್‌ ಮಾಡಿ

ಮಕ್ಕಳಿಗೆ ಏನು ಹೋಂ ವರ್ಕ್‌ ಕೊಟ್ಟಿದ್ದಾರೆ ಅನ್ನೋದನ್ನು ಮೊದಲು ನೀವು ಅರ್ಥ ಮಾಡಿಕೊಳ್ಳಿ. ಒಂದು ಪುಸ್ತಕದಲ್ಲಿ ಎಲ್ಲವನ್ನೂ ನೋಟ್‌ ಮಾಡಿಕೊಳ್ಳಿ. ಅನುಮಾನ ಇದ್ದಲ್ಲಿ ನಿಮ್ಮ ಮಕ್ಕಳ ಟೀಚರ್‌ಗಳಿಗೆ ಕರೆ ಮಾಡಿ ತಿಳಿದುಕೊಳ್ಳಿ. ಮಕ್ಕಳು ಮನೆಗೆ ಬರುವಷ್ಟರಲ್ಲಿ ನಿಮ್ಮ ಮನೆ ಕೆಲಸ ಮುಗಿದಿರಲಿ. ಅವರು ಬಂದ ಕೂಡಲೇ ಹೋಂ ವರ್ಕ್‌ ಶುರು ಮಾಡಿಸಬೇಡಿ, ಮನೆಗೆ ಬಂದ ನಂತರ ಮೊದಲು ಫ್ರೆಶ್‌ ಅಪ್‌ ಆಗಲಿ. ನಂತರ ಸ್ನಾಕ್ಸ್‌ ಕೊಡಿ, ಅವರೊಂದಿಗೆ ಸ್ವಲ್ಪ ಸಮಯ ಕಾಲ ಕಳೆಯಿರಿ. ನಂತರವಷ್ಟೇ ಹೋಂ ವರ್ಕ್‌ ಶುರು ಮಾಡಿಸಿ, ತಪ್ಪು ಮಾಡಿದಾಗ ಬೈಯ್ಯದೆ ನಗುತ್ತಲೇ ಅವರ ತಪ್ಪನ್ನು ತಿದ್ದಿ.

2. ಮನೆಯಲ್ಲಿ ನಿಗದಿತ ಸ್ಥಳದಲ್ಲಿ ಕೂರಿ

ಕಿಚನ್‌, ದೇವರಮನೆ ಎಲ್ಲೆಂದರಲ್ಲಿ ಮಕ್ಕಳಿಗೆ ಹೋಂ ವರ್ಕ್‌ ಮಾಡಿಸಬೇಡಿ. ಅವರು ಖುಷಿಯಿಂದ ಹೋಂ ವರ್ಕ್‌ ಮಾಡುವಂತ ಸ್ಥಳವನ್ನು ನೀವೇ ಗುರುತಿಸಿ. ನೀವು ಟಿವಿ ನೋಡುತ್ತಾ, ಅವರಿಗೂ ಟಿವಿ ತೋರಿಸುತ್ತಾ ಅಥವಾ ಮೊಬೈಲ್‌ ನೋಡುತ್ತಾ ಮಕ್ಕಳಿಗೆ ಹೋಂ ವರ್ಕ್‌ ಮಾಡಿಸುವುದು ಬಹಳ ತಪ್ಪು. ಮಕ್ಕಳಿಗೆ ಹೋಂ ವರ್ಕ್‌ ಮಾಡಿಸುವಾಗ ವಾತಾವರಣ ಶಾಂತಿಯಿಂದ ಇರಲಿ. ಟಿವಿ ಆನ್‌ ಮಾಡಲೇಬೇಡಿ. ನಿಮ್ಮ ಖುಷಿಗಿಂತ ಮಕ್ಕಳ ವಿದ್ಯಾಭ್ಯಾಸ ಮುಖ್ಯ ಅನ್ನೋದು ಗಮನದಲ್ಲಿ ಇರಲಿ. ಇಲ್ಲದಿದ್ದರೆ ನಿಮ್ಮ ಮಕ್ಕಳಿಗೆ ಹೋಂ ವರ್ಕ್‌ ಕಡೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ನಿಮಗೆ ಅನುಕೂಲ ಇದ್ದರೆ ಮಕ್ಕಳಿಗಾಗಿ ಒಂದು ಸ್ಟಡಿ ರೂಮ್‌ ನಿರ್ಮಿಸಿ. ಮಕ್ಕಳು ಕುಳಿತುಕೊಳ್ಳಲು ಕೂಡಾ ಚೇರ್‌ ಅಥವಾ ಟೇಬಲ್‌ ಕೂಡಾ ಕಂಫರ್ಟಬಲ್‌ ಆಗಿರಬೇಕು.

3. ಮಕ್ಕಳ ಮೂಡ್‌ ಗಮನಿಸಿ

ಹೋಂ ವರ್ಕ್‌ ಮಾಡಿಸುವ ಮುನ್ನ ಮಕ್ಕಳ ಮೂಡ್‌ ಗಮನಿಸಿ, ಯಾವುದೋ ವಿಚಾರಕ್ಕೆ ಅವರು ಡಿಸ್ಟರ್ಬ್‌ ಆಗಿದ್ದಾರೆ ಎಂದರೆ ಅವರಿಗೆ ಕೂಡಲೇ ಹೋಂ ವರ್ಕ್‌ ಮಾಡುವಂತೆ ತಾಕೀತು ಮಾಡಬೇಡಿ. ಅವರ ಜೊತೆ ಫನ್ನಿಯಾಗಿ ಮಾತನಾಡಿ, ಇಂದು ಕ್ಲಾಸ್‌ನಲ್ಲಿ ಏನೆಲ್ಲಾ ಆಕ್ಟಿವಿಟಿ ಮಾಡಿದರು ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಅವರ ಮೂಡ್‌ ಬದಲಿಸಲು ಪ್ರಯತ್ನಿಸಿ. ಅವರು ಮಾಡುವ ಹೋಂ ವರ್ಕ್‌ಕ್ಕೆ ತಕ್ಕಂತೆ ಏನಾದರೂ ಉದಾಹರಣೆ ಕೊಡುತ್ತಾ ಕೆಲಸ ಮಾಡಿಸಿ. ಒಂದು ವೇಳೆ ಅವರು ಗಣಿತ ಬರೆಯುತ್ತಿದ್ದರೆ, ಸಂಖ್ಯೆಗಳನ್ನು ಚಾಕೊಲೇಟ್‌, ಫ್ರೂಟ್ಸ್‌ ಜೊತೆ ಲೆಕ್ಕಾಚಾರ ಮಾಡಿ ಹೇಳಿಕೊಂಡಿ. ನಿನ್ನ ಬಳಿ 4 ಚಾಕೊಲೇಟ್‌ಗಳಿವೆ ನನಗೆ 1 ಕೊಟ್ಟರೆ ನಿನ್ನ ಬಳಿ ಎಷ್ಟು ಉಳಿಯುತ್ತದೆ ಎಂದು ಕೇಳಿ. ಆಗ ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ.

4. ಹೆಚ್ಚು ಹೊತ್ತು ಹೋಂ ವರ್ಕ್‌ ಮಾಡಿಸದೆ ಬ್ರೇಕ್‌ ಕೊಡಿ

ಒಂದು ಹೋಂ ವರ್ಕ್‌ ಮುಗಿಸಿದ ಕೂಡಲೇ ಮತ್ತೊಂದು ಹೋಂ ವರ್ಕ್‌ ಮಾಡಿಸಬೇಡಿ. 5-10 ನಿಮಿಷ ಗ್ಯಾಪ್‌ ಕೊಡಿ. ಕೆಲವು ಮಕ್ಕಳು ನೀವು ಬೆದರಿಸಿದರೆ ಮತ್ತಷ್ಟು ಹಟ ಮಾಡುತ್ತವೆ. ಆದ್ದರಿಂದ ಮಕ್ಕಳನ್ನು ಒಳ್ಳೆ ರೀತಿ ಮಾತನಾಡಿಸಿ. ನೀನು ಗುಡ್‌ ಬಾಯ್/ಗುಡ್‌ ಗರ್ಲ್‌, ಕ್ಲಾಸ್‌ನಲ್ಲಿ ನೀನೇ ಫಸ್ಟ್‌ ಅಂತೆ ನಿಮ್ಮ ಮ್ಯಾಡಮ್‌ ಹೇಳುತ್ತಿದ್ದರು ಎಂದು ಅವರನ್ನು ಸಮಾಧಾನ ಮಾಡಿ. ಹೋಂ ವರ್ಕ್‌ ಚೆನ್ನಾಗಿ ಮಾಡುತ್ತಿದ್ದೀಯ ಅಂತ ಗುಡ್‌ ಹೇಳಿ, ಕ್ಲ್ಯಾಪ್‌ ಮಾಡಿ, ಹೀಗೆ ಮಾಡಿದರೆ ಮಕ್ಕಳಿಗೆ ಖುಷಿ ಆಗುತ್ತದೆ. ಹೋಂ ವರ್ಕ್‌ ಮುಗಿಸಬೇಕೆಂದು ಅವರ ಮನಸ್ಸಿಗೂ ಬರುತ್ತದೆ.

5. ಕಷ್ಟ ಎನಿಸಿದ್ದನ್ನು ಬಲವಂತವಾಗಿ ತಲೆಗೆ ಹಚ್ಚದಿರಿ

ಕೆಲವೊಂದು ವಿಚಾರಗಳು ಮಕ್ಕಳಿಗೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಬಲವಂತವಾಗಿ ಅವರಿಗೆ ತಲೆಗೆ ಎಲ್ಲವನ್ನೂ ಸೇರಿಸಬೇಡಿ. ಈ ವಿಚಾರವಾಗಿ ಅವರ ಟೀಸರ್‌ಗಳ ಜೊತೆಯೂ ಮಾತನಾಡಿ, ಸಾಧ್ಯವಾದರೆ ಮರು ದಿನ ಅಥವಾ ರಜಾ ದಿನಗಳಲ್ಲಿ ಆ ಹೋಂ ವರ್ಕ್‌ ಮುಗಿಸಲು ಪ್ರಯತ್ನಿಸಿ.

Whats_app_banner