Parenting Tips: ಮಕ್ಕಳಲ್ಲಿ ಈ 5 ಲಕ್ಷಣಗಳು ಕಾಣಿಸಿದ್ರೆ ಖಂಡಿತ ನಿರ್ಲಕ್ಷ್ಯ ಮಾಡ್ಬೇಡಿ, ಕೂಡಲೇ ಮಗುವಿನತ್ತ ಗಮನ ಹರಿಸಿ
ನಿಮ್ಮ ಮಗು ಹೊರಗಡೆ ಹೋದಾಗ ಜನರನ್ನ ನೋಡಿ ಭಯ ಪಡುವುದು, ಜನರೊಂದಿಗೆ ಬೆರೆಯಲು ಹಿಂಜರಿಯುವುದು ಮಾಡಿದರೆ ಖಂಡಿತ ನಿರ್ಲಕ್ಷ್ಯ ಮಾಡ್ಬೇಡಿ. ಈ 5 ಲಕ್ಷಣಗಳು ಮಗುವಿನಲ್ಲಿ ಕಾಣಿಸಿದರೆ ಅದರತ್ತ ಹೆಚ್ಚು ಗಮನ ಹರಿಸಿ.
ಇಂದಿನ ಒತ್ತಡದ ಬದುಕಿನಲ್ಲಿ ಬಹಳಷ್ಟು ಜನ ಪೋಷಕರು ತಮ್ಮ ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುತ್ತಾರೆ. ತಮ್ಮ ವೃತ್ತಿ ಬದುಕು ಹಾಗೂ ವೈಯಕ್ತಿಕ ಜೀವನದ ನಡುವೆ ಪೋಷಕರು ಮಗುವಿನ ಮೇಲೆ ಗಮನ ಹರಿಸುವುದನ್ನು ಕಡಿಮೆ ಮಾಡಿರುತ್ತಾರೆ. ಆದರೆ ನಿಮ್ಮ ವೃತ್ತಿಯ ಒತ್ತಡದ ನಡುವೆ ಮಗುವಿನ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ. ಪೋಷಕರಾಗಿ ಮಕ್ಕಳಿಗೆ ಬೆಸ್ಟ್ ಎನ್ನಿಸುವುದನ್ನು ನೀಡುವುದು ಬಹಳ ಮುಖ್ಯ. ಬಹುತೇಕ ಪೋಷಕರು ಮಕ್ಕಳ ಖುಷಿಗಾಗಿ ಎಲ್ಲವನ್ನೂ ಮಾಡುತ್ತಾರೆ. ಆದರೆ ಕೆಲವೊಮ್ಮೆ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುವುದನ್ನು ಮರೆಯುತ್ತಾರೆ. ಮಕ್ಕಳು ಸ್ವಾವಲಂಬಿಗಳಾಗಿದ್ದರೂ ಕೆಲವೊಮ್ಮೆ ಪೋಷಕರ ಒತ್ತಡದ ಬದುಕು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆ ಕಾರಣಕ್ಕೆ ಮಕ್ಕಳ ಈ ಕೆಲವು ವರ್ತನೆಗಳನ್ನು ಪೋಷಕರು ತಪ್ಪದೇ ಗಮನಿಸಬೇಕು.
ಬೇರೆಯವರನ್ನು ನೋಡಿದಾಗ ಆತಂಕ ವ್ಯಕ್ತಪಡಿಸುವುದು
ನಿಮ್ಮ ಮಗು ಹೊರಗಡೆ ಹೋಗಲು ಭಯ ಪಡುವುದು, ಬೇರೆ ಜನರ ಜೊತೆ ಬೆರೆಯಲು ಹಿಂಜರಿಕೆ ಮಾಡುವುದು ಮಾಡುತ್ತಿದ್ದರೆ, ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಮಗುವಿನ ಮೇಲೆ ಹೆಚ್ಚು ಗಮನ ಹರಿಸಬೇಕು ಎಂದು ಅರ್ಥ.
ನಕಾರಾತ್ಮಕ ಭಾವ
ಕೆಲವೊಮ್ಮೆ ಮಕ್ಕಳು ನಿಮ್ಮ ಗಮನ ಸೆಳೆಯುವ ಸಲುವಾಗಿ ನಿಮಗೆ ಇಷ್ಟವಿಲ್ಲದ ವಿಷಯಗಳನ್ನು ಹೇಳಬಹುದು. ಆಗಲೂ ನೀವು ಅವರ ಬಗ್ಗೆ ಗಮನ ಹರಿಸದೇ ಇದ್ದರೆ ಮಗುವಿನಲ್ಲಿ ಹೆತ್ತವರ ಬಗ್ಗೆ ನಕಾರಾತ್ಮಕ ಭಾವ ಮೂಡಬಹುದು. ಅಲ್ಲದೆ ಆ ಮಗು ನಿಮ್ಮೊಂದಿಗೆ ಕೆಟ್ಟದಾಗಿ ವರ್ತಿಸಬಹುದು. ಅಂತಹ ಸಂದರ್ಭದಲ್ಲಿ ಮಕ್ಕಳೊಂದಿಗೆ ಕೋಪಗೊಳ್ಳುವ ಬದಲು ಅವರು ನಿಮ್ಮ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ.
ಅಂಟಿಕೊಳ್ಳುವ ನಡವಳಿಕೆ
ಹಲವು ಕಾರಣಗಳಿಂದ ಪೋಷಕರಿಗೆ ಅಂಟಿಕೊಳ್ಳುವ ವರ್ತನೆಯನ್ನು ಮಕ್ಕಳು ತೋರಬಹುದು. ಇದರ ಅರ್ಥ ನೀವು ಮಗುವಿಗೆ ಹೆಚ್ಚು ಗಮನ ಕೊಡುತ್ತಿದ್ದೀರಿ ಎಂಬುದಾಗಬಹುದು ಅಥವಾ ನೀವು ಮಗುವಿನ ಮೇಲೆ ಗಮನ ಹರಿಸುತ್ತಿಲ್ಲ ಎಂಬುದು ಆಗಿರಬಹುದು. ಹಾಗಾಗಿ ಇಂತಹ ನಡವಳಿಕೆ ಕಂಡಾಗ ಮಗುವಿನ ಮೇಲೆ ಹೆಚ್ಚು ಗಮನ ಹರಿಸಬೇಕು. ಕೆಲವೊಮ್ಮೆ ಅಸುರಕ್ಷಿತ ಭಾವವೂ ಮಗು ನಿಮಗೆ ಅಂಟಿಕೊಂಡೇ ಇರಲು ಕಾರಣವಾಗುತ್ತದೆ. ಹಾಗಾಗಿ ಮಗುವಿನ ಮೇಲೆ ಗಮನ ಹರಿಸಬೇಕಾಗುತ್ತದೆ.
ಆಕ್ರಮಣಶೀಲ ಮನೋಭಾವ
ಪೋಷಕರ ಗಮನ ಸೆಳೆಯಲು ಬಯಸುವ ಮಕ್ಕಳು ಆಗಾಗ ಆಕ್ರಮಣಕಾರಿ ಮನೋಭಾವ ತೋರುತ್ತಾರೆ. ಆಟಿಕೆಗಳು ಹಾಗೂ ಇತರ ವಸ್ತುಗಳನ್ನು ಎಸೆಯುವುದು, ಹೊಡೆಯುವುದು, ತಮಗೆ ಹಾನಿ ಮಾಡಿಕೊಳ್ಳುವುದು, ಬೇರೆಯವರಿಗೆ ಹಾನಿ ಮಾಡುವುದು ಮಾಡಬಹುದು. ಇಂತಹ ಸಂದರ್ಭದಲ್ಲಿ ಮಕ್ಕಳು ಪೋಷಕರ ಗಮನ ಬಯಸುತ್ತಿದ್ದಾರೆ ಎಂದರ್ಥ.
ಜೋರಾಗಿ ಅಳುವುದು
ಪೋಷಕರು ಹಲವು ದಿನಗಳವರೆಗೆ ಮಗುವಿನ ಮೇಲೆ ಸರಿಯಾಗಿ ಗಮನ ಕೊಡದೇ ಇದ್ದರೆ, ಮಕ್ಕಳು ಅತಿಯಾಗಿ ಪ್ರತಿಕ್ರಿಯಿಸಬಹುದು. ಅಂತರ್ಮುಖಿಗಳಾಗಿ ಬೆಳೆಯುವ ಮಕ್ಕಳು ಅಥವಾ ಹೆಚ್ಚು ಮಾತನಾಡದ ಮಕ್ಕಳು ಸಣ್ಣ-ಪುಟ್ಟ ವಿಚಾರಗಳಿಗೂ ಅತಿಯಾಗಿ ಅಳುವುದು, ರೋಧಿಸುವುದು ಮಾಡುತ್ತಾರೆ. ಇದರರ್ಥ ನಿಮ್ಮ ಅವಶ್ಯಕತೆ ಮಗುವಿಗೆ ಇದೆ ಎಂದು.
ಈ ಮೇಲಿನ ಲಕ್ಷಣಗಳನ್ನು ನಿಮ್ಮ ಮಗು ಕೂಡ ತೋರಿದರೆ ನೀವು ಈ ಬಗ್ಗೆ ಗಮನ ಹರಿಸುವುದು ಮುಖ್ಯವಾಗುತ್ತದೆ. ಇಲ್ಲದೇ ಹೋದಲ್ಲಿ ಇದು ಮಕ್ಕಳ ಮನಸ್ಸಿಗೆ ಮೇಲೆ ಸಾಕಷ್ಟು ಪರಿಣಾಮ ಬೀರಬಹುದು. ಜೊತೆಗೆ ಇದರಿಂದ ಅವರಲ್ಲಿ ಮಾನಸಿಕ ಸಮಸ್ಯೆಗಳು ಎದುರಾಗಬಹುದು.
(This copy first appeared in Hindustan Times Kannada website. To read more like this please logon to kannada.hindustantimes.com )
ವಿಭಾಗ