Parenting: ಮಕ್ಕಳ ತ್ವಚೆಯ ಬಗ್ಗೆ ಎಚ್ಚರ: ಪೋಷಕರೇ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Parenting: ಮಕ್ಕಳ ತ್ವಚೆಯ ಬಗ್ಗೆ ಎಚ್ಚರ: ಪೋಷಕರೇ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ

Parenting: ಮಕ್ಕಳ ತ್ವಚೆಯ ಬಗ್ಗೆ ಎಚ್ಚರ: ಪೋಷಕರೇ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ

Parenting: ಮಕ್ಕಳ ತ್ವಚೆಗೆ ಯಾವ ಉತ್ಪನ್ನಗಳನ್ನು ಬಳಸಿದರೆ ಉತ್ತಮ, ಯಾವುದು ಸೂಕ್ತವಲ್ಲ ಎಂಬ ಗೊಂದಲ ಎಲ್ಲ ಹೆತ್ತವರನ್ನೂ ಕಾಡುತ್ತದೆ. ಕೆಲವೊಮ್ಮೆ ತಮ್ಮ ಮಕ್ಕಳಿಗಾಗಿ ವೈಯಕ್ತಿಕ ಆರೈಕೆಯ ಉತ್ಪನ್ನಗಳನ್ನು ಖರೀದಿಸುವಾಗ ಪೋಷಕರು ಅನೇಕ ತಪ್ಪುಗಳನ್ನು ಮಾಡುತ್ತಾರೆ. ಅವು ನೇರವಾಗಿ ಮಕ್ಕಳ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ.

ಮಕ್ಕಳ ತ್ವಚೆಯ ಬಗ್ಗೆ ಎಚ್ಚರ: ಪೋಷಕರೇ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ
ಮಕ್ಕಳ ತ್ವಚೆಯ ಬಗ್ಗೆ ಎಚ್ಚರ: ಪೋಷಕರೇ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ

Parenting Tips: ಮಕ್ಕಳ ತ್ವಚೆ ಬಹಳ ಸೂಕ್ಷ್ಮವಾದುದು. ಋತುವಿನ ಬದಲಾವಣೆಯು ನಿಮ್ಮ ಮಗುವಿನ ಚರ್ಮ ಮತ್ತು ದೇಹದ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ, ನಿಮ್ಮ ಮಗುವಿನ ಚರ್ಮವನ್ನು ರಕ್ಷಿಸಲು ಬಹಳಷ್ಟು ಮಾಯಿಶ್ಚರೈಸರ್‌ಗಳನ್ನು ಬಳಸುತ್ತೇವೆ. ಅಂತೆಯೇ, ಬೇಸಿಗೆ ಹಾಗೂ ಮಳೆಗಾಲದಲ್ಲೂ ಮಗುವಿನ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಮಕ್ಕಳ ತ್ವಚೆಗೆ ಯಾವ ಉತ್ಪನ್ನಗಳನ್ನು ಬಳಸಿದರೆ ಉತ್ತಮ, ಯಾವುದು ಸೂಕ್ತವಲ್ಲ ಎಂಬ ಗೊಂದಲ ಎಲ್ಲ ಹೆತ್ತವರನ್ನೂ ಕಾಡುತ್ತದೆ. ಕೆಲವೊಮ್ಮೆ ತಮ್ಮ ಮಕ್ಕಳಿಗಾಗಿ ವೈಯಕ್ತಿಕ ಆರೈಕೆಯ ಉತ್ಪನ್ನಗಳನ್ನು ಖರೀದಿಸುವಾಗ ಪೋಷಕರು ಅನೇಕ ತಪ್ಪುಗಳನ್ನು ಮಾಡುತ್ತಾರೆ.

ಪಾಲಕರು ಸಾಮಾನ್ಯವಾಗಿ ವೈಯಕ್ತಿಕ ನೈರ್ಮಲ್ಯ ಉತ್ಪನ್ನಗಳ ಮೇಲೆ ಘಟಕಾಂಶದ ಲೇಬಲ್‌ಗಳನ್ನು ಓದದಿರುವ ತಪ್ಪನ್ನು ಮಾಡುತ್ತಾರೆ. ಮಕ್ಕಳಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಉತ್ಪನ್ನಗಳಲ್ಲಿ ಸಲ್ಫೇಟ್‌ಗಳು, ಪ್ಯಾರಬೆನ್‌ಗಳು ಮತ್ತು ಥಾಲೇಟ್‌ಗಳಂತಹ ಹಾನಿಕಾರಕ ಪದಾರ್ಥಗಳು ಹೆಚ್ಚಾಗಿ ಕಂಡುಬರುತ್ತವೆ. ಉದಾಹರಣೆಗೆ, ಅನೇಕ ಶ್ಯಾಂಪೂಗಳು ಸಲ್ಫೇಟ್‌ಗಳನ್ನು ಹೊಂದಿರುತ್ತವೆ.ಇದು ಚರ್ಮದಲ್ಲಿ ತುರಿಕೆ, ಅಲರ್ಜಿಯಂತಹ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಲು ಪೋಷಕರು ನೈಸರ್ಗಿಕ, ಹೈಪೋಲಾರ್ಜನಿಕ್ ಪದಾರ್ಥಗಳು ಹೊಂದಿರುವ ಬೇಬಿ ಪ್ರಾಡಕ್ಟ್‌ ಗಳಿಗೆ ಆದ್ಯತೆ ನೀಡಬೇಕು. ಈ ಮೂಲಕ, ಅಪಾಯಕಾರಿ ರಾಸಾಯನಿಕಗಳನ್ನು ಮಕ್ಕಳ ಸೂಕ್ಷ್ಮ ಚರ್ಮದಿಂದ ದೂರವಿಡಲಾಗುತ್ತದೆ.

ʻಮಕ್ಕಳ ಸ್ನೇಹಿ' ಉತ್ಪನ್ನಗಳ ಬಗ್ಗೆ ಎಚ್ಚರವಿರಲಿ

ಈಗಂತೂ ಮಕ್ಕಳ ಬಳಕೆಗೆ ಅನೇಕ ಬ್ರಾಂಡ್‌ಗಳ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. "ಮಕ್ಕಳ ಸ್ನೇಹಿ" ಎಂಬ ಟ್ಯಾಗ್‌ ಮೂಲಕ ಪೋಷಕರನ್ನೂ ಮಕ್ಕಳನ್ನೂ ಏಕಕಾಲಕ್ಕೆ ಮೋಸಗೊಳಿಸುವ ಕೆಲಸ ಮತ್ತೆ ಮತ್ತೆ ನಡೆಯುತ್ತಲೇ ಇರುತ್ತದೆ. ಅನಿಮೇಷನ್‌ಗಳು ಮತ್ತು ರೋಮಾಂಚಕ ಪ್ಯಾಕೇಜಿಂಗ್‌ಗಳು ಪೋಷಕರು ಮತ್ತು ಮಕ್ಕಳನ್ನು ಆಕರ್ಷಿಸಲು ತಯಾರಕರು ಬಳಸುವ ಸಾಮಾನ್ಯ ತಂತ್ರಗಳಾಗಿವೆ. ಆದ್ದರಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪಾಲಕರು ಉತ್ಪನ್ನದ ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದಬೇಕು.

ಮಾರ್ಕೆಟಿಂಗ್ ಗಿಮಿಕ್‌ಗಳಿಗೆ ಮಾರು ಹೋಗದಿರಿ

ಮಕ್ಕಳಿಗಾಗಿ ವೈಯಕ್ತಿಕ ನೈರ್ಮಲ್ಯ ಉತ್ಪನ್ನಗಳನ್ನು ಖರೀದಿಸುವಾಗ, ಪೋಷಕರು ಹೆಚ್ಚಾಗಿ ಮಾರ್ಕೆಟಿಂಗ್ ತಂತ್ರಗಳಿಗೆ ಬಲಿಯಾಗುತ್ತಾರೆ. ಆದರೆ ವರ್ಣರಂಜಿತ ಹಾಗೂ ಆಕರ್ಷಕವೆನ್ನಿಸುವ ಉತ್ಪನ್ನಗಳತ್ತ ವಾಲುವುದಕ್ಕಿಂತ ಉತ್ಪನ್ನಗಳಲ್ಲಿರುವ ಪದಾರ್ಥಗಳ ಬಗ್ಗೆ ಗಮನಹರಿಸುವುದು ಮುಖ್ಯವಾಗಿದೆ. ಜವಾಬ್ದಾರಿಯುತ ಪೋಷಕರಾಗಿ, ಉತ್ಪನ್ನಗಳಲ್ಲಿ ಬಳಸುವ ಪದಾರ್ಥಗಳನ್ನು ನೋಡಿಕೊಂಡು ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯ. ಆಕರ್ಷಕ ಘೋಷಣೆಗಳಿಂದ ಪ್ರಭಾವಿತರಾಗುವುದಕ್ಕಿಂತ ಹೆಚ್ಚಾಗಿ ಉತ್ಪನ್ನದ ನಿಜವಾದ ಪ್ರಯೋಜನಗಳ ಮೇಲೆ ಕೇಂದ್ರೀಕರಿಸಿ. ಪಾಲಕರು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಬಹುದು.

ಚರ್ಮದ ಸೋಂಕಿನ ಬಗ್ಗೆ ತಿಳಿದುಕೊಳ್ಳಿ

ಪ್ರತಿ ಮಗುವೂ ವಿಭಿನ್ನವಾಗಿದ್ದು ಅವರ ಶರೀರ ರಚನೆ, ಚರ್ಮ, ಸೂಕ್ಷ್ಮತೆಯ ಮಟ್ಟಗಳು ಪ್ರತ್ಯೇಕ ಗುಣಗಳನ್ನು ಹೊಂದಿವೆ.. ಬೇಬಿ ಉತ್ಪನ್ನಗಳನ್ನು ನೇರವಾಗಿ ಬಳಸುವ ಮುನ್ನ ಅವುಗಳ ಸಂಯೋಜನೆಗಳನ್ನು ಕುರಿತು ತಿಳಿಯದೇ ಹೋದರೆ ಅದರ ಪರಿಣಾಮ ಮಗುವಿನ ಮೇಲಾಗಲಿದೆ. ಅನಗತ್ಯ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು, ಪೋಷಕರು ಎಚ್ಚರಿಕೆಯಿಂದ ಘಟಕಾಂಶಗಳ ಪಟ್ಟಿಗಳನ್ನು ಪರಿಶೀಲಿಸಬೇಕು.

ಈ ರೀತಿ ಮಗುವಿಗೆ ಬಳಕೆ ಮಾಡುವ ಉತ್ಪನ್ನಗಳನ್ನು ವಿವೇಚನೆಯಿಂದ ಆಯ್ಕೆ ಮಾಡುವ ಮೂಲಕ ತಮ್ಮ ಮಕ್ಕಳ ಯೋಗಕ್ಷೇಮವನ್ನು ಕಾಪಾಡಿಕೊಳ್ಳಬಹುದು. ಅಲ್ಲದೆ ಭವಿಷ್ಯದ ಪೀಳಿಗೆಗೆ ಸುಸ್ಥಿರ ಜೀವನಶೈಲಿಯನ್ನು ಹೊಂದಲು ಪೋಷಕರು ನೆರವಾಗಬಹುದು.

Whats_app_banner