ಪೋಷಕರೇ, ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬೆಳೆಯಬೇಕು ಅಂದ್ರೆ ಕನ್ನಡಿ ಮುಂದೆ ಓದುವ ಅಭ್ಯಾಸ ಮಾಡಿಸಿ, ಇದರ ಪ್ರಯೋಜನಗಳು ಹೀಗಿವೆ
ಮಕ್ಕಳಲ್ಲಿ ಓದಿನ ಆಸಕ್ತಿ ಬೆಳೆಯಲು ಹಾಗೂ ಅಧ್ಯಯನವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಕೆಲವು ತಂತ್ರಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಅಂತಹ ತಂತ್ರಗಳಲ್ಲಿ ಕನ್ನಡಿಯ ಮುಂದೆ ಕೂತು ಓದುವುದು ಕೂಡ ಒಂದು. ಕನ್ನಡಿಯ ಮುಂದೆ ಕೂತು ಓದುವುದು ಎಂದರೇನು, ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ಓದಿನಲ್ಲಿ ಮುಂದೆ ಬರಬೇಕು, ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂಬ ಬಯಕೆ ಇರುವುದು ಸಹಜ. ಆದರೆ ಎಲ್ಲಾ ಮಕ್ಕಳು ಟಾಪರ್ ಆಗಲು ಸಾಧ್ಯವಿಲ್ಲ. ಕೆಲವು ಮಕ್ಕಳು ಓದಿನಲ್ಲಿ ಹಿಂದೆ ಬೀಳುತ್ತವೆ. ಇದಕ್ಕೆ ಮಗುವಿನ ತಪ್ಪು ಕೂಡ ಇರಬಹುದು. ಆದರೆ ಕೆಲವೊಮ್ಮೆ ಮಗುವಿಗೆ ಎಷ್ಟೇ ಓದಿದರೂ ನೆನಪಿನಲ್ಲಿ ಉಳಿಯುವುದಿಲ್ಲ. ಆದರೆ ಈ ವಿಚಾರ ಪೋಷಕರ ಗಮನಕ್ಕೆ ಬಂದಿರುವುದಿಲ್ಲ, ಕೆಲವೊಮ್ಮೆ ಪೋಷಕರು ಈ ವಿಚಾರವನ್ನು ನಿರ್ಲಕ್ಷ್ಯ ಮಾಡುತ್ತಾರೆ.
ಮಗುವಿನಲ್ಲಿ ಜ್ಞಾಪಕ ಶಕ್ತಿ ಹೆಚ್ಚಬೇಕು ಎಂದರೆ ಕೆಲವೊಂದಿಷ್ಟು ವಿಧಾನಗಳಿವೆ. ಆ ವಿಧಾನಗಳಲ್ಲಿ ಕನ್ನಡಿ ಮುಂದೆ ಓದುವ ವಿಧಾನವೂ ಒಂದು. ಮಕ್ಕಳು ಕನ್ನಡಿ ಮುಂದೆ ಕೂತು ಓದುವುದರಿಂದ ಅಧ್ಯಯನ ಹೆಚ್ಚು ಪರಿಣಾಮಕಾರಿ ಎನ್ನಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಹಾಗಾದರೆ ಕನ್ನಡಿ ಮುಂದೆ ಕೂತು ಓದುವುದರಿಂದಾಗುವ ಪ್ರಯೋಜನಗಳೇನು ನೋಡಿ.
ಸ್ವಯಂ ಪ್ರೇರಣೆ
ನಿದ್ದೆ ಬಾರದೇ ಹೆಚ್ಚು ಹೊತ್ತು ಓದಿನತ್ತ ಗಮನ ಹರಿಸುವುದು ಕಷ್ಟದ ಕೆಲಸ. ಇದಕ್ಕಾಗಿ ನಿರಂತರವಾಗಿ ನಿಮ್ಮನ್ನು ಪ್ರೇರೇಪಿಸುವ ಅವಶ್ಯಕತೆಯಿದೆ. ಈ ಕೆಲಸದಲ್ಲಿ ಕನ್ನಡಿ ಮಗುವಿಗೆ ಸಹಾಯ ಮಾಡಬಹುದು. ಅವನ ಸ್ಟಡಿ ಟೇಬಲ್‌ನ ಮುಂದೆ ಇರುವ ಕನ್ನಡಿಯನ್ನು ಅವನು ತನ್ನ ಮುಖವನ್ನು ನೋಡುವ ರೀತಿಯಲ್ಲಿ ಹೊಂದಿಸಿ. ಇದರೊಂದಿಗೆ, ಅವನು ಅಧ್ಯಯನ ಮಾಡುವುದನ್ನು ನೋಡಿದಾಗ, ಅವನು ಒಳಗಿನಿಂದ ಸ್ವಯಂ ಪ್ರೇರಣೆಯನ್ನು ಅನುಭವಿಸುತ್ತಾನೆ. ಈ ಸಣ್ಣ ಟ್ರಿಕ್ಸ್ ಮಕ್ಕಳನ್ನು ಮಾನಸಿಕವಾಗಿ ಪ್ರೇರೇಪಿಸಲು, ಸಕ್ರಿಯವಾಗಿಸಲು ಓದಿನಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.
ಆತ್ಮವಿಶ್ವಾಸ ಹೆಚ್ಚುತ್ತದೆ
ಬಹುತೇಕ ಮಕ್ಕಳಿಗೆ ಜನರ ಮುಂದೆ ಅಥವಾ ಬೇರೆಯವರ ಮುಂದೆ ನಿಂತು ಮಾತನಾಡಲು ಮುಜುಗರ ಎನ್ನಿಸುತ್ತದೆ. ಇದು ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇರುವುದನ್ನೂ ಸೂಚಿಸುತ್ತದೆ. ಅದಕ್ಕಾಗಿ ಕನ್ನಡಿಯ ಮುಂದೆ ನಿಂತು ಮಾತನಾಡುವುದನ್ನು ಅಭ್ಯಾಸ ಮಾಡಿಸಿ. ಇದರಿಂದ ಮಗುವಿನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಧೈರ್ಯ ಮೂಡುತ್ತದೆ. ಕನ್ನಡಿಯ ಮುಂದೆ ಅಧ್ಯಯನ ಮಾಡುವ ಮೂಲಕ, ಮಗು ತನ್ನನ್ನು ತಾನೇ ನೋಡುತ್ತಾನೆ ಮತ್ತು ಜನರ ಮುಂದೆ ತನ್ನನ್ನು ಹೇಗೆ ಪ್ರಸ್ತುತಪಡಿಸಬೇಕೆಂದು ಕಲಿಯುತ್ತಾನೆ. ಇದು ಅವನ ಅಧ್ಯಯನವನ್ನು ಸುಧಾರಿಸುವುದಲ್ಲದೇ ಅವನ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ನೆನಪಿನ ಶಕ್ತಿ ವೃದ್ಧಿಯಾಗುತ್ತದೆ
ನಮ್ಮ ಮಗ/ಮಗಳ ತುಂಬಾ ಓದ್ತಾರೆ, ಆದರೆ ಎಲ್ಲವನ್ನೂ ಮರೆಯುತ್ತಾರೆ. ಪರೀಕ್ಷೆಯಲ್ಲಿ ಓದಿರುವುದನ್ನು ಮರೆತು ಏನೇನೋ ಬರೆಯತ್ತಾರೆ ಎಂದು ಹಲವರು ಪೋಷಕರು ಹೇಳುವುದನ್ನು ನೀವು ಕೇಳಿಸಿಕೊಂಡಿರಬಹುದು. ನಿಮ್ಮ ಮಗು ಕೂಡ ಹಾಗೇ ಇದ್ದರೆ ನೀವು ಈ ಕನ್ನಡಿ ತಂತ್ರವನ್ನು ಅಳವಡಿಸಿಕೊಳ್ಳಬಹುದು. ವಾಸ್ತವವಾಗಿ, ಮಕ್ಕಳು ತಮ್ಮನ್ನು ಕನ್ನಡಿಯಲ್ಲಿ ನೋಡುತ್ತಿರುವಾಗ ಏನನ್ನಾದರೂ ಮಾತನಾಡುವಾಗ ಅಥವಾ ನೆನಪಿಸಿಕೊಳ್ಳುವಾಗ, ಈ ದೃಶ್ಯ ಸ್ಮರಣೆಯು ಅವರ ಮನಸ್ಸಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಚ್ಚೊತ್ತುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಓದಿದ್ದನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸಿದಾಗ, ಅವರು ಸುಲಭವಾಗಿ ವಿಷಯಗಳನ್ನು ನೆನಪಿಸಿಕೊಳ್ಳುತ್ತಾರೆ.
ಕನ್ನಡಿ ಮುಂದೆ ಓದುವ ತಂತ್ರವನ್ನ ಮಕ್ಕಳಲ್ಲಿ ಬೆಳೆಸಿ ನೋಡಿ. ಇದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುವ ಜೊತೆಗೆ ನೆನಪಿನ ಶಕ್ತಿಯೂ ವೃದ್ಧಿಸುತ್ತದೆ. ಮಕ್ಕಳಲ್ಲಿ ಓದಿನ ಆಸಕ್ತಿ ಬೆಳೆಯಲು ಈ ತಂತ್ರ ಪರಿಣಾಮಕಾರಿ.

ವಿಭಾಗ