Parenting Tips: ಶೈಕ್ಷಣಿಕ ಮಾತ್ರವಲ್ಲ, ಭವಿಷ್ಯದ ನಾಯಕರನ್ನಾಗಿ ಬೆಳೆಸಲು ಮಕ್ಕಳಿಗೆ ಈ ಜೀವನ ಕೌಶಲ್ಯ ಕಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಶೈಕ್ಷಣಿಕ ಮಾತ್ರವಲ್ಲ, ಭವಿಷ್ಯದ ನಾಯಕರನ್ನಾಗಿ ಬೆಳೆಸಲು ಮಕ್ಕಳಿಗೆ ಈ ಜೀವನ ಕೌಶಲ್ಯ ಕಲಿಸಿ

Parenting Tips: ಶೈಕ್ಷಣಿಕ ಮಾತ್ರವಲ್ಲ, ಭವಿಷ್ಯದ ನಾಯಕರನ್ನಾಗಿ ಬೆಳೆಸಲು ಮಕ್ಕಳಿಗೆ ಈ ಜೀವನ ಕೌಶಲ್ಯ ಕಲಿಸಿ

ಭವಿಷ್ಯದ ನಾಯಕರನ್ನು ಬೆಳೆಸುವ ರಹಸ್ಯವಿದು. ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿಗೆ ಕಲಿಸಬೇಕಾದ ಈ ಪ್ರಮುಖ ಜೀವನ ಕೌಶಲ್ಯಗಳನ್ನು ಕಲಿಸುವುದು ಬಹಳ ಮುಖ್ಯ. ಇಲ್ಲಿದೆ ಈ ಬಗ್ಗೆ ವಿವರ.

ಶೈಕ್ಷಣಿಕ ಮಾತ್ರವಲ್ಲ, ಭವಿಷ್ಯದ ನಾಯಕರನ್ನಾಗಿ ಬೆಳೆಸಲು ಮಕ್ಕಳಿಗೆ ಈ ಜೀವನ ಕೌಶಲ್ಯ ಕಲಿಸಿ
ಶೈಕ್ಷಣಿಕ ಮಾತ್ರವಲ್ಲ, ಭವಿಷ್ಯದ ನಾಯಕರನ್ನಾಗಿ ಬೆಳೆಸಲು ಮಕ್ಕಳಿಗೆ ಈ ಜೀವನ ಕೌಶಲ್ಯ ಕಲಿಸಿ (PC: Canva)

ಮಗುವಿನ ಭವಿಷ್ಯದ ಯಶಸ್ಸಿನ ಬಗ್ಗೆ ಎಲ್ಲಾ ಪೋಷಕರು ಚಿಂತಿಸುತ್ತಾರೆ. ಇದಕ್ಕಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುತ್ತಾರೆ. ಉತ್ತಮ ಶಿಕ್ಷಣವು ಅವಿಭಾಜ್ಯ ಅಂಗವಾಗಿದ್ದರೂ, ಇಂದಿನ ಜಗತ್ತಿಗೆ ಮಕ್ಕಳನ್ನು ಸಿದ್ಧಪಡಿಸಲು ಜೀವನ ಕೌಶಲ್ಯಗಳನ್ನು ಕಲಿಸುವುದು ಅತ್ಯಗತ್ಯ .

ಪಾಲನೆಯು ಜೀವನವನ್ನು ಬದಲಾಯಿಸುವ ಮತ್ತು ಪ್ರತಿಫಲದಾಯಕ ಅನುಭವವಾಗಬಹುದು. ಆದರೆ ಕೆಲವೊಮ್ಮೆ ಅದು ಅಗಾಧವಾಗಿರುತ್ತದೆ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಅದಕ್ಕಾಗಿಯೇ ಪೋಷಕರು ತಮ್ಮ ಮಕ್ಕಳಿಗೆ ಕೆಲವು ಪ್ರಮುಖ ಜೀವನ ಕೌಶಲ್ಯಗಳನ್ನು ನೀಡಿದಾಗ, ಅವರು ಮೂಲತಃ ಹೆಚ್ಚು ತೃಪ್ತಿಕರ, ಸಂತೋಷ ಮತ್ತು ಯಶಸ್ವಿ ಜೀವನವನ್ನು ನಡೆಸಲು ದಾರಿ ಮಾಡಿಕೊಡುತ್ತಾರೆ.

ನಿಮ್ಮ ಮಗುವಿನ ಭವಿಷ್ಯವನ್ನು ಹೀಗೆ ರೂಪಿಸಿ

ಪ್ರತಿಯೊಬ್ಬ ಪೋಷಕರು ತಿಳಿದುಕೊಳ್ಳಬೇಕಾದ ಮೊದಲ ವಿಷಯವೆಂದರೆ ಮಗುವಿಗೆ ಬೆಂಬಲ ನೀಡುವ ಮತ್ತು ಪೋಷಿಸುವ ವಾತಾವರಣವನ್ನು ಸೃಷ್ಟಿಸುವುದು. ಅವರು ಅದರಿಂದ ಕಲಿಯುವವರೆಗೆ ವಿಫಲರಾಗುವುದು ಮತ್ತು ತಪ್ಪು ಮಾಡುವುದು ಇದ್ದಿದ್ದೆ ಎಂದು ಅವರು ವಿಶ್ವಾಸ ಹೊಂದಬೇಕು ಎಂಬುದಾಗಿ ಸಾಫ್ಟ್ ಸ್ಕಿಲ್ಸ್ ತರಬೇತುದಾರರಾದ ಶಾಲಿನಿ ಅಗರ್ವಾಲ್ ತಿಳಿಸಿದ್ದಾರೆ.

ಮಕ್ಕಳು ತಮ್ಮನ್ನು ತಾವು ಪರಿಣಾಮಕಾರಿಯಾಗಿ ಕಂಡುಕೊಳ್ಳಲು ಉತ್ತಮ ಸಂವಹನ ಕೌಶಲ್ಯಗಳು ಅತ್ಯಗತ್ಯ. ಮಕ್ಕಳು ಸ್ವಾಭಾವಿಕವಾಗಿಯೇ ಜಿಜ್ಞಾಸೆಯ ಸ್ವಭಾವದವರು. ನೇರ, ಪ್ರಾಮಾಣಿಕ ಮತ್ತು ಮಕ್ಕಳೊಂದಿಗೆ ಸ್ನೇಹದಿಂದಿರುವುದು ಬಹಳ ಮುಖ್ಯ. ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಅವರೊಂದಿಗೆ ಮುಕ್ತ ಸಂವಾದ ಮತ್ತು ಆರೋಗ್ಯಕರ ಚರ್ಚೆಯನ್ನು ಪ್ರೋತ್ಸಾಹಿಸಬೇಕು ಅಲ್ಲದೆ, ಅವರಿಗೆ ಕೇಳುವ ಕಲೆಯನ್ನು ಕಲಿಸಿ.

ದೃಢ ಮನಸ್ಸಿನ ಮಕ್ಕಳನ್ನು ಬೆಳೆಸುವುದು

ಮಕ್ಕಳು ಎಚ್ಚರಿಕೆಯಿಂದ ಕೇಳಲು ಮತ್ತು ಇತರರ ಬಗ್ಗೆ ಕಾಳಜಿ ವಹಿಸಲು ಕಲಿಯಬೇಕು. ಇದಕ್ಕಾಗಿ ಮಕ್ಕಳನ್ನು ದೃಢ ಮನಸ್ಸಿನವರನ್ನಾಗಿ ಬೆಳೆಸಬೇಕು. ಇದು ಸ್ವಾತಂತ್ರ್ಯದ ಬಯಕೆಯನ್ನು ಬೆಳೆಸುವುದಲ್ಲದೆ ಎಲ್ಲರಿಗೂ ಪ್ರಯೋಜನವಾಗುವ ಪರಿಹಾರಗಳನ್ನು ರಚಿಸಲು ಕಲಿಸುತ್ತದೆ.

ಸಮಸ್ಯೆಯ ಪರಿಹಾರವು ಮತ್ತೊಂದು ಪ್ರಮುಖ ವಿಷಯವಾಗಿದೆ. ಮಕ್ಕಳಿಗೆ ವಿಮರ್ಶಾತ್ಮಕ ಚಿಂತಕರಾಗಲು ಕಲಿಸಬೇಕು. ಮುಖ್ಯವಾಗಿ ಸಮಯಪಾಲನೆ ಮಾಡುವುದನ್ನು ಕಲಿಸುವುದು ಅತ್ಯಂತ ಮಹತ್ವದ ಪಾಠವಾಗಿದೆ. ಕೊನೆಯ ಗಂಟೆ ಬಾರಿಸುವ ಮೊದಲು ಕೆಲಸ ಮುಗಿಸುವುದು ಹೇಗೆ ಎಂಬುದನ್ನು ಕಲಿಸುವಲ್ಲಿ ಬಹಳ ಸಹಾಯ ಮಾಡುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ).

Priyanka Gowda

eMail