Parenting Tips: ಪೋಷಕರೇ.. ಪೌಡರ್, ಸ್ನೋ ಹಾಕಿ ಹೆಣ್ಮಕ್ಕಳನ್ನ ಶಾಲೆಗೆ ಕಳ್ಸೋದಲ್ಲ; ಈ ಬಗ್ಗೆನೂ ಹೇಳಿಕೊಡಿ!
Parenting Tips: ಬಾಲ್ಯದಿಂದಲೂ ಹೆಣ್ಣುಮಕ್ಕಳಿಗೆ ಬ್ಯಾಡ್ ಮತ್ತು ಗುಡ್ ಟಚ್ ಬಗ್ಗೆ ವ್ಯತ್ಯಾಸಗಳ ಕುರಿತು ವಿವರಿಸಬೇಕಿದೆ. ಈ ಕುರಿತು ಜ್ಞಾನ ತುಂಬಿದರೆ ಮಕ್ಕಳು ಸರಿ-ತಪ್ಪುಗಳನ್ನು ಅರಿಯಲು ತುಂಬಾ ಸಹಾಯ ಮಾಡುತ್ತದೆ.
Parenting Tips: ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಎಲ್ಲಿಯೂ ಸುರಕ್ಷಿತವಾಗಿಲ್ಲ. ಮನೆಯಲ್ಲಿ ಅಥವಾ ಹೊರಗೆ, ಶಾಲೆ, ಕಾಲೇಜು, ಕೆಲಸದ ಸ್ಥಳ, ಬಸ್ಸು ಅಥವಾ ರೈಲಿನಲ್ಲಿ ಎಲ್ಲಿಯೂ ಹೆಣ್ಣುಮಕ್ಕಳ ಸುರಕ್ಷತೆಯ ಭರವಸೆ ಇಲ್ಲ. ದಿನನಿತ್ಯ ಮಹಿಳೆಯರು ಹಾಗೂ ಅಮಾಯಕ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಕ್ರೌರ್ಯ ಘಟನೆಗಳೇ ಇದಕ್ಕೆ ಸಾಕ್ಷಿ. ಇಂತಹ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರಲ್ಲಿ ಆತಂಕ ಮೂಡುವುದು ಸಹಜ. ಆದರೆ ಸುಮ್ಮನೆ ಚಿಂತಿಸುವುದರಿಂದ ಪ್ರಯೋಜನವಿಲ್ಲ. ಇದೀಗ ಮನೆಯ ಹೆಣ್ಣುಮಕ್ಕಳಿಗೆ ಅವರ ಸುರಕ್ಷತೆಗೆ ಸಿದ್ಧಪಡಿಸುವ ಮತ್ತು ಅರಿವು ಮೂಡಿಸುವ ಸಮಯ ನಮ್ಮ ಮುಂದಿದೆ.
ಇದಕ್ಕಾಗಿ, ಚಿಕ್ಕಂದಿನಿಂದಲೇ ನಿಮ್ಮ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಕೆಲವೊಂದಿಷ್ಟು ಸಲಹೆಗಳನ್ನು ಹೇಳಬೇಕಿದೆ. ಕಷ್ಟಕರ ಸಂದರ್ಭಗಳನ್ನು ಎದುರಿಸಲು ಅವರನ್ನು ಸಿದ್ಧಪಡಿಸುವುದು ಅತಿ ಮುಖ್ಯವಾಗಿದೆ. ಬಾಲ್ಯದಿಂದಲೂ ಬ್ಯಾಡ್ ಮತ್ತು ಗುಡ್ ಟಚ್ ಬಗ್ಗೆ ವ್ಯತ್ಯಾಸಗಳ ಕುರಿತು ವಿವರಿಸಬೇಕಿದೆ. ಈ ಕುರಿತು ಜ್ಞಾನ ತುಂಬಿದರೆ ಮಕ್ಕಳು ಸರಿ-ತಪ್ಪುಗಳನ್ನು ಅರಿಯಲು ತುಂಬಾ ಸಹಾಯ ಮಾಡುತ್ತದೆ. ಅಲ್ಲದೆ, ಯಾವುದೇ ಅಹಿತಕರ ಪರಿಸ್ಥಿತಿಯಲ್ಲಿ ಅದನ್ನು ವಿರೋಧಿಸಲು ಧೈರ್ಯ ಮಾಡುತ್ತಾರೆ.
ನೀವು ನಂಬಿದರೂ ನಂಬದಿದ್ದರೂ ಈ ವಿಷಯಗಳ ಬಗ್ಗೆ ತಿಳಿಯದೇ ಎಷ್ಟೋ ಅಮಾಯಕ ಹೆಣ್ಣು ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು ನಮ್ಮ ಕಣ್ಣೆದುರಿವೆ. ಈ ಪರಿಸ್ಥಿತಿಯಲ್ಲಿ ಹುಡುಗಿಯರಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಮೊದಲಿನಿಂದಲೇ ಅರಿವು ಮೂಡಿಸಬೇಕು. ಆಗ ಹುಡುಗಿಯರು ಇಂತಹ ಘಟನೆಗಳಿಂದ ದೂರ ಉಳಿಯಲು ಸಾಧ್ಯವಾಗುತ್ತದೆ. ಅಲ್ಲದೆ, ಅವರ ಸುರಕ್ಷತೆಗೆ ಮತ್ತೊಬ್ಬರ ಸಹಾಯವೂ ಪಡೆಯದೇ ಎಂತಹದ್ದೇ ಸಂದರ್ಭವನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಪಡೆಯಲಿದ್ದಾರೆ.
ಬಾಲ್ಯದಿಂದಲೂ ಮುಕ್ತವಾಗಿ ಮಾತನಾಡಿ
ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯವು ಮಕ್ಕಳು ತಮ್ಮ ಎಲ್ಲಾ ಸಮಸ್ಯೆಗಳನ್ನು ತಮ್ಮ ಪೋಷಕರಿಗೆ ಮುಕ್ತವಾಗಿ ಹೇಳುವಂತೆ ಇರಬೇಕು. ಮಗಳಾಗಲಿ ಅಥವಾ ಮಗನಾಗಲಿ, ಪೋಷಕರು ತಮ್ಮ ಯಾವುದೇ ಸಮಸ್ಯೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಬದಲು ತಮ್ಮ ಸಮಸ್ಯೆಗಳೊಂದಿಗೆ ನಿಮ್ಮ ಬಳಿಗೆ ಬರಬೇಕೆಂದು ಬಯಸಬೇಕು. ಆದರೆ ಅನೇಕ ಬಾರಿ ಹುಡುಗಿಯರು ಹೆತ್ತವರೊಂದಿಗೆ ಏನೇ ಸಮಸ್ಯೆ ಇದ್ದರೂ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಹೀಗಾಗಿ ಹಾಗಾದಂತೆ ನೋಡಿಕೊಳ್ಳಬೇಕು. ಭಯಮುಕ್ತರಾಗಿ ತಮ್ಮೊಂದಿಗೆ ಮಾತನಾಡುವ ವಾತಾವರಣ ಸೃಷ್ಟಿಸಬೇಕು. ಆಗ ಹುಡುಗಿಯರು ತಮ್ಮ ಎಲ್ಲಾ ಸಮಸ್ಯೆಗಳನ್ನು ಮುಕ್ತವಾಗಿ ಹೇಳಕೊಳ್ಳಲಿದ್ದಾರೆ.
ಹೆಣ್ಣುಮಕ್ಕಳಿಗೆ ಲೈಂಗಿಕ ಶೋಷಣೆಯ ಪಾಠ ಕಲಿಸಿ
ಹೆಣ್ಣುಮಕ್ಕಳಿಗೆ ಲೈಂಗಿಕ ಶೋಷಣೆಯ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ. ಹೆಣ್ಣುಮಕ್ಕಳಿಗೆ ಲೈಂಗಿಕ ದೌರ್ಜನ್ಯ ನಡೆದಾಗ ಸುಮ್ಮನಿದ್ದು ಸಹಿಸಿಕೊಳ್ಳುವ ಬದಲು ಅದರ ವಿರುದ್ಧ ಧ್ವನಿ ಎತ್ತಬೇಕು ಎಂದು ಹೇಳಬೇಕು. ಲೈಂಗಿಕ ಕಿರುಕುಳ ಅನುಚಿತವಾಗಿ ಸ್ಪರ್ಶಿಸುವುದು ಮಾತ್ರವಲ್ಲ, ಅಸಭ್ಯ ಭಾಷೆ ಬಳಸುವುದು ಮತ್ತು ತಪ್ಪು ಸನ್ನೆಗಳನ್ನು ಮಾಡುವುದು ಕೂಡ ಈ ವರ್ಗದಲ್ಲಿ ಬರುತ್ತದೆ ಎಂದು ಹುಡುಗಿಯರಿಗೆ ವಿವರಿಸಿ. ಅಂತಹ ಯಾವುದೇ ಚಟುವಟಿಕೆಗಳನ್ನು ನಿರ್ಲಕ್ಷಿಸುವ ಬದಲು, ಅದರ ವಿರುದ್ಧ ಧ್ವನಿ ಎತ್ತುವಂತೆ ಸೂಚಿಸಿ.
ಸುರಕ್ಷಿತವಾಗಿರಲು ನಿಮ್ಮನ್ನು ಕಲಿಸಿ
ಹುಡುಗಿಯರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿದಿರಬೇಕು. ಎಲ್ಲಾ ಸಮಯದಲ್ಲೂ ಅವರನ್ನು ರಕ್ಷಿಸಲು ಯಾರೂ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿದಿರಬೇಕು. ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಎಷ್ಟು ಸದೃಢರನ್ನಾಗಿ ಮಾಡಬೇಕು ಎಂದರೆ ಅವರು ಯಾವುದೇ ಭಯ ಅಥವಾ ಗಾಬರಿ ಇಲ್ಲದೆ ಯಾವುದೇ ಸಮಸ್ಯೆಯನ್ನು ಎದುರಿಸುವಂತಾಗಬೇಕು. ಇದಕ್ಕಾಗಿ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ಮತ್ತು ಶಕ್ತಿಯ ಬಗ್ಗೆ ಕಾಳಜಿ ವಹಿಸುವುದು ಪೋಷಕರ ಜವಾಬ್ದಾರಿಯಾಗಿರುತ್ತದೆ.
ವಿಭಾಗ