ವಾರಪೂರ್ತಿ ಮಕ್ಕಳ ಲಂಚ್ ಬಾಕ್ಸ್‌ಗೆ ಏನ್ ಹಾಕೋದು ಅನ್ನೋ ಚಿಂತೆ ಬಿಡಿ, ಸೋಮವಾರದಿಂದ ಶನಿವಾರದವರೆಗೆ ನೀಡಬಹುದಾದ ತಿಂಡಿಗಳ ಪಟ್ಟಿ ಗಮನಿಸಿ
ಮಗು ಶಾಲೆಗೆ ಹೋಗಲು ಆರಂಭಿಸಿದಾಗಿನಿಂದ ತಾಯಿಗೆ ಶುರುವಾಗುವ ದೊಡ್ಡ ಚಿಂತೆ ಎಂದರೆ ಲಂಚ್ ಬಾಕ್ಸ್‌ಗೆ ಏನು ಮಾಡೋದು ಅಂತ. ಸೋಮವಾರದಿಂದ ಶನಿವಾರದವರೆಗೆ ಮಕ್ಕಳ ಊಟದ ಡಬ್ಬಿಗೆ ಏನೆಲ್ಲಾ ಹಾಕಬಹುದು ಎಂದು ನೀವು ಯೋಚಿಸುತ್ತಿದ್ದರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ರೆಸಿಪಿಗಳು. ಈ ಐಡಿಯಾಗಳು ಬಹುತೇಕ ತಾಯಂದಿರ ಲಂಚ್ ಬಾಕ್ಸ್ ತಲೆನೋವು ಕಡಿಮೆ ಮಾಡೋದು ಖಂಡಿತ.
ಶಾಲೆಗೆ ಹೋಗುವ ಮಕ್ಕಳಿಗೆ ಪ್ರತಿದಿನ ಊಟದ ಡಬ್ಬಿ ಸಿದ್ಧಪಡಿಸುವುದು ದೊಡ್ಡ ಸವಾಲು. ಯಾಕೆಂದರೆ ಮಕ್ಕಳಿಗೆ ಎಲ್ಲಾ ರೀತಿ ತಿಂಡಿಗಳು ಇಷ್ಟವಾಗುವುದಿಲ್ಲ. ಜೊತೆಗೆ ಅವರಿಗೆ ನೀಡುವ ಆಹಾರದಲ್ಲಿ ಪೋಷಕಾಂಶಗಳೂ ಇರುವಂತೆ ನೋಡಿಕೊಳ್ಳಬೇಕು. ಒಂದೇ ರೀತಿ ತಿಂಡಿ ಕೊಟ್ಟರು ಮಕ್ಕಳು ಬೇಸರ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಬೇರೆ ಬೇರೆ ರೀತಿಯ ತಿನಿಸುಗಳನ್ನು ನೀಡಬೇಕಾಗುತ್ತದೆ. ದಿನವೂ ಅಕ್ಕಿ ತಿಂಡಿ ಕೊಟ್ಟರೆ ಮಕ್ಕಳು ತಿನ್ನುವುದಿಲ್ಲ. ಅಲ್ಲದೆ, ಕೆಲವು ಮಕ್ಕಳು ಸ್ಯಾಂಡ್‌ವಿಚ್‌ಗಳು ಮತ್ತು ಚಪಾತಿ ರೋಲ್‌ಗಳನ್ನು ಇಷ್ಟಪಡುತ್ತಾರೆ. ದೀರ್ಘಕಾಲದವರೆಗೆ ಜಗಿದು ತಿನ್ನುವ ತಿನಿಸುಗಳು ಅವರಿಗೆ ಹಿಡಿಸುವುದಿಲ್ಲ. ಊಟದ ಡಬ್ಬಿಗೆ ಅನ್ನ ಹಾಕಿಕೊಟ್ಟರೆ ಮುಖ ಸಿಂಡರಿಸುತ್ತಾರೆ. ಹಾಗಾಗಿ ಲಂಚ್ ಬಾಕ್ಸ್‌ಗೆ ಏನು ಹಾಕಬೇಕು ಅನ್ನೋದೇ ಎಲ್ಲರಿಗೂ ಚಿಂತೆ. ಸೋಮವಾರದಿಂದ ಶನಿವಾರದವರೆಗೆ ಲಂಚ್ ಬಾಕ್ಸ್‌ಗೆ ಏನೆಲ್ಲಾ ಹಾಕಬಹುದು ಎನ್ನುವವರಿಗೆ ಇಲ್ಲಿದೆ ಒಂದಿಷ್ಟು ಐಡಿಯಾಗಳು.
ಲಂಚ್ ಬಾಕ್ಸ್ ರೆಸಿಪಿಗಳು
ರೋಟಿ ಅಥವಾ ಪರೋಟಗಳು: ನಿಮ್ಮ ಮಕ್ಕಳ ಲಂಚ್ ಬಾಕ್ಸ್‌ಗೆ ಚಪಾತಿ ಅಥವಾ ಪರೋಟಗಳನ್ನು ಹಾಕಿದರೆ ಇಷ್ಟಪಟ್ಟು ತಿನ್ನುತ್ತಾರೆ ಎಂದಾದರೆ ನಿಮಗೆ ಲಭ್ಯವಿರುವ ಸುಲಭವಾದ ಆಯ್ಕೆಗಳನ್ನು ಪರಿಶೀಲಿಸಿ.
ಪಾಲಕ್ ಪರೋಟ
ಮೇಥಿ ಪರೋಟ
ಆಲೂ ಪರೋಟ
ಆಲೂಗಡ್ಡೆ ರೋಲ್
ತರಕಾರಿ ರೋಲ್
ಚೀನಿ ಕುಂಬಳಕಾಯಿ ಪರೋಟ
ಪನೀರ್ ಪರೋಟ
ಗೆಣಸಿನ ಪರೋಟ
ಅಕ್ಕಿಯಿಂದ ಮಾಡಬಹುದಾದ ಖಾದ್ಯಗಳು
ಊಟದ ಡಬ್ಬಿಯಲ್ಲಿ ಅನ್ನ ಮತ್ತು ಸಾರನ್ನು ಪ್ರತ್ಯೇಕವಾಗಿ ಹಾಕಿದರೆ ಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರು ಊಟದ ಡಬ್ಬಿ ಖಾಲಿ ಮಾಡಲು ಬಯಸಿದರೆ, ಅಕ್ಕಿ ಅಥವಾ ಅನ್ನದಿಂದ ವಿವಿಧ ಪಾಕವಿಧಾನಗಳನ್ನು ಪ್ರಯತ್ನಿಸಬೇಕು.
ಪಲಾವ್
ಚಿತ್ರಾನ್ನ
ಘೀ ರೈಸ್
ಪುದೀನಾ ರೈಸ್
ಕೊರಿಯಾಂಡರ್ ರೈಸ್
ಫ್ರೈಡ್ ರೈಸ್
ಸ್ವೀಟ್ ಕಾರ್ನ್ ಪುಲಾವ್
ಪಾಲಕ್ ರೈಸ್
ಆಲೂ ರೈಸ್
ಕ್ಯಾರೆಟ್ ರೈಸ್
ಜೀರಾ ರೈಸ್
ಮಶ್ರೂಮ್ ರೈಸ್
ಕ್ಯಾಬೇಜ್ ಪಲಾವ್
ಪನೀರ್ ಪುಲಾವ್
ಟೊಮೆಟೊ ರೈಸ್
ಪುಳಿಯೋಗರೆ
ಕೊಕೊನಟ್ ರೈಸ್
ಅನಾನಸ್ ಅಕ್ಕಿ
ವೆಜಿಟೇಬಲ್ ಪಲಾವ್
ಕ್ಯಾಪ್ಸಿಕಂ ರೈಸ್
ಇನ್ನೇನು ಮಾಡಬಹುದು
ಇವುಗಳ ಜೊತೆಗೆ ಮಕ್ಕಳ ಇಷ್ಟಪಟ್ಟು ತಿನ್ನುವ ನೂಡಲ್ಸ್, ಪಾಸ್ತಾ ಕೂಡ ತಯಾರಿಸಬಹುದು. ಪಾಸ್ತಾದಲ್ಲಿ ಹಸಿರು, ಕೆಂಪು ಮತ್ತು ಬಿಳಿ ಪಾಸ್ಟಾದಂತಹ ಹಲವು ವಿಧಗಳಿವೆ. ಅದಕ್ಕೆ ವಿವಿಧ ತರಕಾರಿಗಳನ್ನು ಸೇರಿಸಬಹುದು. ಮೊಟ್ಟೆಯನ್ನು ಸೇರಿಸಿ, ತರಕಾರಿಗಳನ್ನು ಸೇರಿಸಿ ಮತ್ತು ಕೆಲವು ಮಸಾಲೆಗಳನ್ನು ಬದಲಾಯಿಸಿ ನೂಡಲ್ಸ್ ಅನ್ನು ಸಹ ಮಾಡಬಹುದು.
ಲಂಚ್ ಬಾಕ್ಸ್ ಅನ್ನು ಹೀಗೆಲ್ಲಾ ನೀಡಬಹುದು
ಸೋಮವಾರದ ದಿನ: ಪಾಲಕ್ ಅಥವಾ ಮೇಥಿ ಪರೋಟ ಅಥವಾ ಯಾವುದೇ ತರಕಾರಿಯೊಂದಿಗೆ ಮಾಡಿದ ಪರೋಟ
ವೆಜ್ ಸಲಾಡ್, ಸಾಸ್ ಅಥವಾ ವೆಬ್ ಕೂರ್ಮಾ
ಮಂಗಳವಾರ ದಿನ:
ಸ್ವೀಟ್ ಕಾರ್ನ್ ರೈಸ್/ ಹೂಕೋಸು ರೈಸ್/ಕ್ಯಾರೆಟ್ ರೈಸ್/ ಕ್ಯಾಬೇಜ್ ರೈಸ್
ಸರಳ ಮಸಾಲಾ ಗ್ರೇವಿ
ತರಕಾರಿ ಸಲಾಡ್
ಬುಧವಾರ ದಿನ:
ತರಕಾರಿ ರೋಲ್/ ಆಲೂ ರೋಲ್/ ಮಸಾಲಾ ಫ್ರಾಂಕಿ/ ಗೆಣಸಿನ ರೋಲ್/ ಪನೀರ್ ರೋಲ್
ಹಣ್ಣುಗಳ ಸಲಾಡ್
ಮೊಸರು
ಗುರುವಾರ ದಿನ:
ಜೀರಾ ರೈಸ್/ ಪುದಿನಾ ರೈಸ್/ ಕೊತ್ತಂಬರಿ ರೈಸ್/ ಲೆಮನ್ ರೈಸ್/ ಪುಳಿಯೋಗರೆ
ಪನ್ನೀರ್ ಬಟರ್ ಮಸಾಲಾ/ ಪಾಲಕ್ ಪನ್ನೀರ್/ ಪನ್ನೀರ್ ಬುರ್ಜಿ, ತರಕಾರಿ ಸಲಾಡ್
ಶುಕ್ರವಾರ:
ವೆಜಿಟೇಬಲ್ ಬಿರಿಯಾನಿ / ವೆಜಿಟೇಬಲ್ ಫ್ರೈಡ್ ರೈಸ್ / ವೆಜಿಟೇಬಲ್ ಪುಲಾವ್
ಶನಿವಾರ:
ಸ್ಯಾಂಡ್‌ವಿಚ್ / ಪಾಸ್ತಾ / ಪಾವ್ ಬಾಜಿ / ನೂಡಲ್ಸ್ / ವೆಜ್ ಬರ್ಗರ್ / ಕಟ್ಲೆಟ್ / ಕಬಾಬ್ಸ್
ಹೀಗೆ ಮಕ್ಕಳ ಲಂಚ್‌ಬಾಕ್ಸ್‌ಗೆ ತಯಾರಿಸಲು ಒಂದಿಷ್ಟು ತಿನಿಸುಗಳನ್ನು ಕಲಿತುಕೊಳ್ಳಿ. ಒಂದು ರೆಸಿಪಿ ಒಂದೇ ತಿಂಗಳಲ್ಲಿ ಇನ್ನೊಮ್ಮೆ ಮಾಡಬೇಡಿ, ಮಾಡಿದರೂ ಅದರಲ್ಲೇ ವೆರೈಟಿ ಮಾಡಿ. ಇದರಿಂದ ಮಕ್ಕಳಿಗೂ ಖುಷಿಯಾಗುತ್ತೆ, ಲಂಚ್ ಬಾಕ್ಸ್ ಖಾಲಿ ಮಾಡುತ್ತಿಲ್ಲ ಎಂಬ ಬೇಸರವೂ ನಿಮ್ಮನ್ನು ಕಾಡುವುದಿಲ್ಲ.