ನಿಮ್ಮ ಮುದ್ದು ಮಗನಿಗಾಗಿ ಹೊಸ, ಅರ್ಥಪೂರ್ಣ ಹೆಸರು ಹುಡುಕುತ್ತಿದ್ದರೆ, ಇಲ್ಲಿದೆ ನೋಡಿ 2024ರ ಟ್ರೆಂಡಿಂಗ್‌ ಹೆಸರುಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮ ಮುದ್ದು ಮಗನಿಗಾಗಿ ಹೊಸ, ಅರ್ಥಪೂರ್ಣ ಹೆಸರು ಹುಡುಕುತ್ತಿದ್ದರೆ, ಇಲ್ಲಿದೆ ನೋಡಿ 2024ರ ಟ್ರೆಂಡಿಂಗ್‌ ಹೆಸರುಗಳು

ನಿಮ್ಮ ಮುದ್ದು ಮಗನಿಗಾಗಿ ಹೊಸ, ಅರ್ಥಪೂರ್ಣ ಹೆಸರು ಹುಡುಕುತ್ತಿದ್ದರೆ, ಇಲ್ಲಿದೆ ನೋಡಿ 2024ರ ಟ್ರೆಂಡಿಂಗ್‌ ಹೆಸರುಗಳು

Trendy Baby Boys Names 2024: ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಸಮೀಪದ ವ್ಯಕ್ತಿಗಳ ಮನೆಯಲ್ಲಿ ಮಗು ಜನಿಸಿದ್ದು, ಅದಕ್ಕೆ ಟ್ರೆಂಡಿಂಗ್‌ ಹೆಸರುಗಳನ್ನು ಹುಡುಕುತ್ತಿದ್ದರೆ, ನಾವು ಇಲ್ಲಿ ನಿಮಗೆ ಇಷ್ಟವಾಗುವಂತಹ ಟ್ರೆಂಡಿ ಹೆಸರುಗಳ ಪಟ್ಟಿಯನ್ನು ನೀಡಿದ್ದೇವೆ. ಇವು ಅರ್ಥಪೂರ್ಣ ಹೆಸರುಗಳಾಗಿರುವುದರ ಜೊತೆಗೆ ಈಗಿನ ಮಕ್ಕಳಿಗೆ ಸೂಟ್‌ ಆಗುತ್ತದೆ.

ನಿಮ್ಮ ಮುದ್ದು ಮಗನಿಗಾಗಿ ಹೊಸ, ಅರ್ಥಪೂರ್ಣ ಹೆಸರು ಹುಡುಕುತ್ತಿದ್ದರೆ, ಇಲ್ಲಿದೆ ನೋಡಿ 2024ರ ಟ್ರೆಂಡಿಂಗ್‌ ಹೆಸರುಗಳು
ನಿಮ್ಮ ಮುದ್ದು ಮಗನಿಗಾಗಿ ಹೊಸ, ಅರ್ಥಪೂರ್ಣ ಹೆಸರು ಹುಡುಕುತ್ತಿದ್ದರೆ, ಇಲ್ಲಿದೆ ನೋಡಿ 2024ರ ಟ್ರೆಂಡಿಂಗ್‌ ಹೆಸರುಗಳು (PC: Freepik)

ಮಗುವಿನ ಆಗಮನವೆಂಬುದು ಮನೆಮಂದಿಯೆಲ್ಲಾ ಸಂಭ್ರಮಿಸುವ ದಿನಗಳು. ಅಲ್ಲಿ ಖುಷಿ, ಸಂತೋಷ ತುಸು ಹೆಚ್ಚೇ ಇರುತ್ತದೆ. ಪುಟ್ಟ ಕಂದಮ್ಮ ಮನೆಗೆ ಬರುವುದರ ಮೂಲಕ ಮನೆಯಲ್ಲಿ ಹೊಸತನ ತುಂಬುತ್ತದೆ. ಹೊಸದಾಗಿ ಅಪ್ಪ–ಅಮ್ಮನ ಸ್ಥಾನಕ್ಕೇರಲು ತಯಾರಾಗಿರುವವರು ಮತ್ತು ಈಗಾಗಲೇ ಮಗುವಿನ ಜನನದಿಂದ ಪೋಷಕರಾದವರು ತಮ್ಮ ಮುದ್ದು ಮಗುವಿಗೆ ಯಾವ ಹೆಸರಿಟ್ಟರೆ ಚೆಂದ ಎಂದು ಯೋಚಿಸುತ್ತಿರುತ್ತಾರೆ. ಇತ್ತೀಚೆಗೆ ಪೋಷಕರು ತಮ್ಮ ಮಕ್ಕಳಿಗೆ ಇಡುವ ಹೆಸರು ಟ್ರೆಂಡಿಯಾಗಿರಬೇಕು, ಜೊತೆಗೆ ಅರ್ಥಪೂರ್ಣವಾಗಿರಬೇಕು ಎಂದು ಯೋಚಿಸುತ್ತಾರೆ. ಅಷ್ಟೇ ಅಲ್ಲದೆ ತಾವು ಆರಿಸಿಕೊಂಡಿರುವ ಹೆಸರು ಎಲ್ಲರಿಗೂ ಇಷ್ಟವಾಗಬೇಕು ಅಂದುಕೊಳ್ಳುತ್ತಾರೆ. ಅದೇ ರೀತಿ ನೀವೂ ಯೋಚಿಸುತ್ತಿದ್ದರೆ ನಿಮಗೆ ಸಹಾಯವಾಗಲೆಂದು ನಾವು ಇಲ್ಲಿ ಕೆಲವು ಟ್ರೆಂಡಿ ಹೆಸರುಗಳನ್ನು ಆಯ್ದು ನೀಡಿದ್ದೇವೆ. ಈ ಪಟ್ಟಿಯಲ್ಲಿರುವ ಹೆಸರುಗಳನ್ನು ಗಮನಿಸುವುದರ ಮೂಲಕ ನಿಮ್ಮ ಹುಡುಕಾಟವನ್ನು ಸುಲಭವಾಗಿಸಿಕೊಳ್ಳಿ.‌

ಗಂಡು ಮಗುವಿಗಾಗಿ ವಿಭಿನ್ನ ಹೆಸರುಗಳು

ಶ್ಲೋಕ– ಸಂಸ್ಕೃತದ ಮಂತ್ರಗಳಿಗೆ ಶ್ಲೋಕ ಎನ್ನುತ್ತಾರೆ.

ಶರ್ವೀಲ್‌– ಶ್ರೀಕೃಷ್ಣನ ಸಹಸ್ರನಾಮಗಳಲ್ಲಿ ಒಂದು.

ಶೌರ್ಯ– ಸಾಹಸ ಅಥವಾ ಪರಾಕ್ರಮ

ಸಾರ್ಥಕ– ಉದ್ದೇಶವನ್ನಿಟ್ಟುಕೊಂಡು ಬದುಕುವ ವ್ಯಕ್ತಿ.

ಸಿದ್ಧಾಂತ– ಸಂಪ್ರದಾಯ ಮತ್ತು ತತ್ವಶಾಸ್ತ್ರದಲ್ಲಿ ನಂಬಿಕೆ ಇಡುವ ವ್ಯಕ್ತಿ.

ಸೋಹಂ– ಪರಮಾತ್ಮ ಎಂಬುದು ಇದರ ಅರ್ಥ.

ಹರ್ಷ– ಖುಷಿ, ಸಂತೋಷ

ಹರ್ಷಿಲ್‌– ಸಂತೋಷ ಹೊಂದಿರುವ ವ್ಯಕ್ತಿ.

ವಿಹಾನ್‌– ಬೆಳಿಗ್ಗೆ ಅಥವಾ ಮುಂಜಾವು.

ವಿಭವ್‌– ಸಂಪೂರ್ಣ ಬ್ರಹ್ಮಾಂಡವನ್ನು ನೋಡಿಕೊಳ್ಳುವವನು.

ರುದ್ರಮ್‌– ಶಿವನ ಇನ್ನೊಂದು ಹೆಸರು.

ಪ್ರೀತಿಯ ಮಗನಿಗೆ ಇಡಬಹುದಾದ ಟ್ರೆಂಡಿಂಗ್‌ ಹೆಸರುಗಳು

ಕೈರವ್‌– ಪವಿತ್ರ ಮತ್ತು ಸುಂದರತೆಯ ಪ್ರತೀಕ.

ಗರ್ವಿತ್‌– ಈ ಹೆಸರು ಗೌರವ ಮತ್ತು ಹೆಮ್ಮೆಯ ಪ್ರತೀಕವಾಗಿದೆ.

ಚಿರಾಯು– ದೀರ್ಘಾಯುಷ್ಯ ಪಡೆದ ವ್ಯಕ್ತಿ.

ತನಿಷ್‌– ಮಹತ್ವಾಕಾಂಕ್ಷೆಯ ವ್ಯಕ್ತಿ.

ತೇಜಸ್‌– ಬೆಳಕು– ಹೊಳಪು.

ದಕ್ಷ– ಇತರರನ್ನು ಪ್ರತಿನಿಧಿಸುವ ವ್ಯಕ್ತಿ.

ದಿವಿಜ್‌– ಸ್ವರ್ಗದಿಂದ ಬಂದ ವ್ಯಕ್ತಿ.

ಧೈರ್ಯ್‌– ಧೈರ್ಯವನ್ನು ಹೊಂದಿರುವವನು.

ಪಾರ್ಥ– ಮಹಾಭಾರತದ ಅರ್ಜುನನಿಗೆ ಇರುವ ಇನ್ನೊಂದು ಹೆಸರು.

ಪ್ರಾಂಶು– ಭಗವಾನ್‌ ವಿಷ್ಣುವಿನ ಇನ್ನೊಂದು ಹೆಸರು.

ಗಂಡು ಮಗುವಿಗೆ ಇಡಬಹುದಾದ ಮುದ್ದಾದ ಹೆಸರುಗಳು

ಆದಿತ್ಯ– ಸೂರ್ಯನ ಹೆಸರುಗಳಲ್ಲೊಂದು.

ಅದ್ವಿಕ್‌– ಸಂಪೂರ್ಣ ವಿಭಿನ್ನವಾಗಿರುವವನು.

ಆಯುಷ್‌– ದೀರ್ಘಾಯುಷ್ಯವನ್ನು ಪಡೆದಿರುವ ವ್ಯಕ್ತಿ.

ಆರವ್‌– ಶಾಂತಿಯುತ, ಪ್ರಶಾಂತವಾದ ಧ್ವನಿ ಮತ್ತು ಹೊಳಪಿರುವ ವ್ಯಕ್ತಿ.

ಈಶಾನ್‌– ವಿಶ್ವವನ್ನು ಆಳುವ ವ್ಯಕ್ತಿ.

ರಿಷಿ– ಸಂತೋಷ, ಬುದ್ಧಿವಂತ ಮತ್ತು ಬೆಳಕಿನ ಕಿರಣ.

ಕಾರ್ತಿಕ್‌– ಸಾಹಸಿ.

ಕಿಯಾಂಶ್‌– ಎಲ್ಲಾ ಪ್ರತಿಭೆಗಳನ್ನು ಹೊಂದಿರುವವನು.

ಅದ್ವಯ್‌– ಈ ಹೆಸರು ಅನನ್ಯ ಎಂಬ ಅರ್ಥವನ್ನು ಸೂಚಿಸುತ್ತದೆ.

ಅಹಾನ್‌– ಬೆಳಕಿನ ಮೊದಲ ಕಿರಣ.

Whats_app_banner