ದಿನಕ್ಕೆ 14 ಗಂಟೆ ಕೆಲಸ ಮಾಡಿ, 3.5 ಗಂಟೆ ಮಕ್ಕಳ ಓದಿಗೆ ಕೊಟ್ರೆ, ಉಣ್ಣೋದ್ಯಾವಾಗ, ಮಲಗೋದ್ಯಾವಾಗ; ಉದ್ಯಮಿ ನಾರಾಯಣ ಮೂರ್ತಿ ಹೇಳಿಕೆ ಟ್ರೋಲ್‌-parenting tips narayana murthy s 3 5 hour parenting model spark debate among working parents uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ದಿನಕ್ಕೆ 14 ಗಂಟೆ ಕೆಲಸ ಮಾಡಿ, 3.5 ಗಂಟೆ ಮಕ್ಕಳ ಓದಿಗೆ ಕೊಟ್ರೆ, ಉಣ್ಣೋದ್ಯಾವಾಗ, ಮಲಗೋದ್ಯಾವಾಗ; ಉದ್ಯಮಿ ನಾರಾಯಣ ಮೂರ್ತಿ ಹೇಳಿಕೆ ಟ್ರೋಲ್‌

ದಿನಕ್ಕೆ 14 ಗಂಟೆ ಕೆಲಸ ಮಾಡಿ, 3.5 ಗಂಟೆ ಮಕ್ಕಳ ಓದಿಗೆ ಕೊಟ್ರೆ, ಉಣ್ಣೋದ್ಯಾವಾಗ, ಮಲಗೋದ್ಯಾವಾಗ; ಉದ್ಯಮಿ ನಾರಾಯಣ ಮೂರ್ತಿ ಹೇಳಿಕೆ ಟ್ರೋಲ್‌

ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಹೇಳಿಕೆ ಮತ್ತೆ ಟ್ರೋಲ್‌ಗೆ ಒಳಗಾಗಿದೆ. ಕಳೆದ ವರ್ಷ ವಾರಕ್ಕೆ 70 ಗಂಟೆ ದುಡಿಯಬೇಕು ಎಂದು ಹೇಳಿದ್ದ ನಾರಾಯಣ ಮೂರ್ತಿ ಅವರು ಪೇರೆಂಟಿಂಗ್ಸ್‌ ಟಿಪ್ಸ್ ಕೊಡುತ್ತ ದಿನಕ್ಕೆ ಮೂರೂವರೆ ಗಂಟೆ ಮಕ್ಕಳ ಓದಿಗೆ ಕೊಡಬೇಕು ಎಂದು ಹೇಳಿರುವುದು ಈಗ ಕೆಲಸಕ್ಕೆ ಹೋಗುವ ದಂಪತಿಯ ಅಸಮಾಧಾನಕ್ಕೆ ಕಾರಣವಾಗಿದೆ.

ಉದ್ಯಮಿ ನಾರಾಯಣ ಮೂರ್ತಿ (ಮಧ್ಯದವರು) ಅವರು ಪೇರೆಂಟಿಂಗ್ಸ್ ಬಗ್ಗೆ ನೀಡಿದ ಹೇಳಿಕೆ ಈಗ ಟ್ರೋಲ್‌ಗೆ ಒಳಗಾಗಿದೆ. ಉಳಿದ ಎರಡು ಚಿತ್ರಗಳನ್ನು ಪೇರೆಂಟಿಂಗ್‌ಗೆ ಸಾಂಕೇತಿಕವಾಗಿ ಬಳಸಲಾಗಿದೆ.
ಉದ್ಯಮಿ ನಾರಾಯಣ ಮೂರ್ತಿ (ಮಧ್ಯದವರು) ಅವರು ಪೇರೆಂಟಿಂಗ್ಸ್ ಬಗ್ಗೆ ನೀಡಿದ ಹೇಳಿಕೆ ಈಗ ಟ್ರೋಲ್‌ಗೆ ಒಳಗಾಗಿದೆ. ಉಳಿದ ಎರಡು ಚಿತ್ರಗಳನ್ನು ಪೇರೆಂಟಿಂಗ್‌ಗೆ ಸಾಂಕೇತಿಕವಾಗಿ ಬಳಸಲಾಗಿದೆ. (Pexel / Narayana Murthy FB)

ಪೇರೆಂಟಿಂಗ್ ವಿಚಾರಕ್ಕೆ ಸಂಬಂಧಿಸಿ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಉತ್ತಮ ಸಲಹೆಗಳನ್ನು ನೀಡುತ್ತ ಬರುತ್ತಿರವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅವರು ತಮ್ಮ ಬದುಕಿನ ಉದಾಹರಣೆಗಳನ್ನೇ ಕೊಡುತ್ತ ಹೋಗುತ್ತಿದ್ದು, ಕೆಲವು ವಿಚಾರಗಳಲ್ಲಿ ನಾರಾಯಣ ಮೂರ್ತಿ ಅವರು ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

ಕಳೆದ ವರ್ಷ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿ ಟ್ರೋಲ್‌ಗೆ ಗುರಿಯಾಗಿದ್ದ ನಾರಾಯಣ ಮೂರ್ತಿ ಅವರ ಮತ್ತೊಂದು ಹೇಳಿಕೆ ಕೂಡ ಈಗ ಟ್ರೋಲ್‌ಗೆ ಒಳಗಾಗಿದೆ. ಇದಕ್ಕೆ 70 ಗಂಟೆ ಕೆಲಸದ ವಿಚಾರವೇ ಬುನಾದಿಯಾಗಿದ್ದು, ಕೆಲಸಕ್ಕೆ ಹೋಗುವ ದಂಪತಿಗಳು ಹೆಚ್ಚಾಗಿ ಪ್ರತಿಕ್ರಿಯಿಸಿದ್ದಾರೆ.

ಪಾಲಕರು ಮಕ್ಕಳಿಗೆ ಎಷ್ಟು ಸಮಯ ನೀಡಬೇಕು; ನಾರಾಯಣ ಮೂರ್ತಿ ಹೇಳಿಕೆ

ಬೆಂಗಳೂರಿನಲ್ಲಿ ಸೆಪ್ಟೆಂಬರ್ 9 ರಂದು ನಡೆದ ಕಾರ್ಯಕ್ರಮ ಒಂದರಲ್ಲಿ ಮಕ್ಕಳಿಗೆ ಎಷ್ಟು ಸಮಯ ನೀಡಬೇಕು ಎಂಬ ಬಗ್ಗೆ ಮಾತನಾಡುತ್ತಾ ನಾರಾಯಣ ಮೂರ್ತಿ ಅವರು ಹೇಳಿರುವುದು ಇಷ್ಟು-

“ಮಕ್ಕಳ ಶಿಕ್ಷಣಕ್ಕಾಗಿ ಮನೆಯಲ್ಲಿ ಶಿಸ್ತು ಇರಬೇಕು. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪೋಷಕರ ಮೇಲಿದೆ. ಮಗು ತನ್ನ ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂಬ ಭರವಸೆಯೊಂದಿಗೆ ಪಾಲಕರು ಸಿನಿಮಾ ವೀಕ್ಷಿಸಲು ಸಾಧ್ಯವಿಲ್ಲ. ನಾನು ಮತ್ತು ಪತ್ನಿ ಸುಧಾ ನಮ್ಮ ಮಕ್ಕಳ ಬಾಲ್ಯದಲ್ಲಿ ಅವರೊಂದಿಗೆ ಓದಿಗಾಗಿ ಮೂರವರೆ ಗಂಟೆ ಸಮಯ ಮೀಸಲಿಡುತ್ತಿದ್ದೆವು”.

ಅರೆ ಸರಿಯಾಗಿಯೇ ಇದೆಯಲ್ಲ ಅವರ ಹೇಳಿಕೆ. ಆದರೆ ಟ್ರೋಲ್ ಯಾಕೆ ಮಾಡ್ತಿದ್ದಾರೆ? ಕಾರಣ ಇಷ್ಟೆ ಕಳೆದ ವರ್ಷ ನಾರಾಯಣ ಮೂರ್ತಿ ಅವರು 70-72 ಗಂಟೆಗಳ ಕಾಲ ಕೆಲಸ ಮಾಡುವುದನ್ನು ಪ್ರತಿಪಾದಿಸಿದ್ದರು. ಇದು ಕೆಲಸ ಮಾಡುವ ಜನರನ್ನು ಕೆರಳಿಸಿತ್ತು. ಅದನ್ನು ನೆನಪಿನಲ್ಲಿ ಇಟ್ಟುಕೊಂಡವರು ಈಗ ಆ ಹೇಳಿಕೆ ಮತ್ತು ಈ ಹೇಳಿಕೆಯನ್ನು ಒಟ್ಟು ಸೇರಿಸಿ ಟ್ರೋಲ್ ಮಾಡಲಾರಂಭಿಸಿದ್ದಾರೆ.

14 ಗಂಟೆ ಕೆಲಸ ಮಾಡಿ ಬಂದು ಮೂರೂವರೆ ಗಂಟೆ ಮಕ್ಕಳ ಜತೆಗೆ ಕಳೆಯೋದಕ್ಕಾಗುತ್ತಾ!

'ನಾನು 14 ಗಂಟೆ ಕೆಲಸ ಮಾಡಿದರೆ, ನಂತರ 3.5 ಗಂಟೆ ಮಕ್ಕಳೊಂದಿಗೆ ಅಧ್ಯಯನ ಮಾಡಿದರೆ, ನಾವು ಕಚೇರಿಗೆ ಹೋಗಲು ಒಂದೂವರೆ ಗಂಟೆ ತೆಗೆದುಕೊಳ್ಳುತ್ತದೆ. ಹಾಗಾದ್ರೆ ಊಟ, ನಿದ್ರೆಗೆ ಟೈಮೆಲ್ಲಿದೆ ಎಂದು ಒಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ.

ಇನ್ನೊಬ್ಬರು, ಅವರ ಕಾಲದಲ್ಲಿ ಯಾವುದೇ ತಂತ್ರಜ್ಞಾನ ಇರಲಿಲ್ಲ. ಹಾಗಾಗಿಯೆ ಅವರು ಅಂತಹ ಕೆಲಸ ಮಾಡಿದ್ದರು ಎಂದು ಟೀಕಿಸಿದ್ದಾರೆ.

'2023 ರಲ್ಲಿ ಮೂರ್ತಿಯವರು ಪ್ರತಿಪಾದಿಸಿದಂತೆ ಜನ ವಾರಕ್ಕೆ 72 ಗಂಟೆ ಕೆಲಸ ಮಾಡಲು ಶುರು ಮಾಡಿದರೆ, ಮಕ್ಕಳೊಂದಿಗೆ ಸಮಯ ಕಳೆಯಲು ಸಾಧ್ಯವೇ?' ಎಂದು ಮತ್ತೊಬ್ಬರು ಕೇಳಿದ್ದಾರೆ.

ನಾರಾಯಣಮೂರ್ತಿಯವರ ಹೇಳಿಕೆ 9-5 ಕರ್ತವ್ಯ ನಿರ್ವಹಿಸುವ ಪೋಷಕರಲ್ಲಿ ಅಸಮಾಧಾನ ಉಂಟುಮಾಡಿದ್ದರೆ ಆಶ್ಚರ್ಯವಿಲ್ಲ. ಕಚೇರಿಯಲ್ಲಿ ಹೆಚ್ಚುತ್ತಿರುವ ಕೆಲಸದ ಸಮಯವು ಅವರ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಲಾರಂಭಿಸಿದೆ. ಅವರು ಮಕ್ಕಳಿಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗುವುದಿಲ್ಲ. ಚಿಕ್ಕ ಮಕ್ಕಳನ್ನು ದಾದಿಗಳ ಆರೈಕೆಯಲ್ಲಿ ಬಿಡಲಾಗುತ್ತದೆ. ಹೀಗೆ ಕೆಲಸ ಮಾಡದೇ ಇದ್ದರೆ ಅಂಥವರು ವೃತ್ತಿಪರರಲ್ಲ ಎಂಬ ಭಾವನೆಯಲ್ಲಿ ನೋಡುತ್ತಾರೆ ಎಂಬ ಆತಂಕ ಈ ವರ್ಗದ ಜನರಲ್ಲಿದೆ. ಕೆಲಸ ಹೋದರೆ ಮನೆ ನಡೆಯದು ಎಂಬ ಕಳವಳವೂ ಇದೆ. ಹಾಗಾಗಿ ಮಕ್ಕಳನ್ನು ನಿರ್ಲಕ್ಷಿಸಿ ಹೋಗುವ ಲಕ್ಷಾಂತರ ಫೋಷಕರು ನಮ್ಮ ನಡುವೆ ಇದ್ದಾರೆ. ಸಹಜವಾಗಿಯೆ ನಾರಾಯಣ ಮೂರ್ತಿ ಅವರ ಪೇರೆಂಟಿಂಗ್ ಟಿಪ್ಸ್‌ ಅಸಮಾಧಾನಕ್ಕೆ ಕಾರಣವಾಗಿದೆ.

mysore-dasara_Entry_Point