Parenting Tips: ಒಳ್ಳೆಯ ಮಕ್ಕಳನ್ನು ಬಯಸುವ ಮೊದಲು ಉತ್ತಮ ಪೋಷಕರಾಗುವುದನ್ನು ಕಲಿಯಿರಿ; ಮಕ್ಕಳ ಮನ ಗೆಲ್ಲಲು ಪೋಷಕರಿಗಿಲ್ಲಿದೆ ಟಿಪ್ಸ್‌-parenting tips what exactly is good parenting 4 techniques to use how to become good parents in kannada rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಒಳ್ಳೆಯ ಮಕ್ಕಳನ್ನು ಬಯಸುವ ಮೊದಲು ಉತ್ತಮ ಪೋಷಕರಾಗುವುದನ್ನು ಕಲಿಯಿರಿ; ಮಕ್ಕಳ ಮನ ಗೆಲ್ಲಲು ಪೋಷಕರಿಗಿಲ್ಲಿದೆ ಟಿಪ್ಸ್‌

Parenting Tips: ಒಳ್ಳೆಯ ಮಕ್ಕಳನ್ನು ಬಯಸುವ ಮೊದಲು ಉತ್ತಮ ಪೋಷಕರಾಗುವುದನ್ನು ಕಲಿಯಿರಿ; ಮಕ್ಕಳ ಮನ ಗೆಲ್ಲಲು ಪೋಷಕರಿಗಿಲ್ಲಿದೆ ಟಿಪ್ಸ್‌

ತಮ್ಮ ಮಕ್ಕಳು ಎಲ್ಲರಿಗಿಂತ ಬೆಸ್ಟ್‌ ಎನ್ನಿಸಿಕೊಳ್ಳಬೇಕು ಎಂದು ಪೋಷಕರು ಬಯಸುವುದು ಸಹಜ. ಆದರೆ ಪೋಷಕರ ವರ್ತನೆ, ಮಾತು, ನಡವಳಿಕೆಯು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಹಲವು ಪೋಷಕರು ಯೋಚಿಸುವುದಿಲ್ಲ. ಉತ್ತಮ ಮಕ್ಕಳನ್ನು ಬಯಸುವ ಮೊದಲು ಉತ್ತಮ ಪೋಷಕರು ಎನ್ನಿಸಿಕೊಳ್ಳುವುದು ಮುಖ್ಯವಾಗುತ್ತದೆ.

ಪೇರೆಂಟಿಂಗ್‌ ಟಿಪ್ಸ್‌
ಪೇರೆಂಟಿಂಗ್‌ ಟಿಪ್ಸ್‌

ಒಳ್ಳೆಯ ಮಕ್ಕಳು ಎಂದು ಅನ್ನಿಸಿಕೊಳ್ಳುವುದು ಎಷ್ಟು ಮುಖ್ಯವೋ, ಉತ್ತಮ ಪೋಷಕರು ಎಂದೆನಿಸಿಕೊಳ್ಳುವುದು ಅಷ್ಟೇ ಮುಖ್ಯ. ಉತ್ತಮ ಪೋಷಕರು ಎನ್ನಿಸಿಕೊಳ್ಳುವುದು ಒಂದು ಮಹತ್ತರ ಜವಾಬ್ದಾರಿ. ಪೋಷಕರು ಈ ಜವಾಬ್ದಾರಿಯನ್ನು ಅರಿತು ಬಾಳಬೇಕು. ಇದು ಮಕ್ಕಳಲ್ಲಿ ಸ್ವಯಂ ಭರವಸೆ ಹುಟ್ಟಲು ನೆರವಾಗುತ್ತದೆ. ಪೋಷಕರ ವರ್ತನೆಯು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಪೋಷಕರು ಮಕ್ಕಳನ್ನು ಹೇಗೆ ನೋಡಿಕೊಂಡಿದ್ದಾರೆ ಎಂಬುದರ ಮೇಲೆ ಮಕ್ಕಳು ಕೂಡ ಪೋಷಕರನ್ನು ನೋಡಿಕೊಳ್ಳುತ್ತಾರೆ ಎನ್ನುವುದು ಸುಳ್ಳಲ್ಲ. ಕೆಲವೊಮ್ಮೆ ಪೋಷಕರು ಮಕ್ಕಳ ಮೇಲೆ ತೋರುವ ವರ್ತನೆಯು ಅವರ ಮಾನಸಿಕ, ಭಾವನಾತ್ಮಕ ಹಾಗೂ ದೈಹಿಕ ಅಗತ್ಯಗಳ ಮೇಲೂ ಪರಿಣಾಮ ಬೀರುತ್ತದೆ.

ʼಯಶಸ್ವಿ ಪೋಷಕರು ಎನ್ನಿಸಿಕೊಳ್ಳಲು ತಿಳುವಳಿಕೆಯುಳ್ಳ ಪೋಷಕರು ಎನ್ನಿಸಿಕೊಳ್ಳುವುದು ಅವಶ್ಯ. ಮಕ್ಕಳ ಬೆಳವಣಿಗೆ, ಮನೋವಿಜ್ಞಾನ ಹಾಗೂ ಪೇರೆಟಿಂಗ್‌ ತಂತ್ರಗಳ ಬಗ್ಗೆ ಜ್ಞಾನವನ್ನು ಬೆಳೆಸಿಕೊಳ್ಳುವ ಮೂಲಕ ಮಕ್ಕಳ ಅಗತ್ಯಗಳನ್ನು ಪೂರೈಸಬೇಕು. ಮಕ್ಕಳೊಂದಿಗೆ ಮೌಲ್ಯಯುತ ಸಮಯವನ್ನು ಕಳೆಯುವುದು ಉತ್ತಮ ಪೋಷಕರ ಪ್ರಮುಖ ಲಕ್ಷಣ. ಮಗು ಇಷ್ಟಪಡುವ, ಆನಂದಿಸುವ ಚಟುವಟಿಕೆಗಳಲ್ಲಿ ಪೋಷಕರೂ ಭಾಗಿಯಾಗುವುದರಿಂದ ಸಂಬಂಧ ವೃದ್ಧಿಯಾಗುತ್ತದೆ. ನಿಮ್ಮ ನಿರ್ಧಾರಗಳನ್ನು ಮಕ್ಕಳ ಮೇಲೆ ಹೇರುವ ಬದಲು ಅವರ ಆಸೆ, ಆಕಾಂಕ್ಷೆಯ ಬಗ್ಗೆ ಗಮನ ನೀಡಿ, ಅವರ ಗುರಿಗಳನ್ನು ಉತ್ತೇಜಿಸಿ. ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡುವುದು ಬಿಡಿ. ಈ ಎಲ್ಲಾ ಅಂಶಗಳು ಉತ್ತಮ ಪೋಷಕರೆನ್ನಿಸಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಮಕ್ಕಳ ತಜ್ಞೆ ತಾನ್ಯಾ ಮೆಹ್ರಾ. ಅವರು ಹಿಂದೂಸ್ತಾನ್‌ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ.

ಉತ್ತರ ಪೋಷಕರು ಎನ್ನಿಸಿಕೊಳ್ಳಲು ಈ ಟಿಪ್ಸ್‌ ಅನುಸರಿಸಿ

ರೋಲ್‌ ಮಾಡೆಲ್‌ಗಳಾಗಿ

ಪೋಷಕರು ಮಕ್ಕಳಿಗೆ ರೋಲ್‌ ಮಾಡೆಲ್‌ಗಳಾಗುವುದು ಬಹಳ ಮುಖ್ಯ. ನಿಮ್ಮ ಮಾತು, ವರ್ತನೆ, ನಡವಳಿಕೆಗಳನ್ನು ಮಕ್ಕಳು ಅನುಸರಿಸುತ್ತಾರೆ. ಹಾಗಾಗಿ ಮಕ್ಕಳ ಎದುರು ಸಾಕಷ್ಟು ಮುಂಜಾಗೃತೆಯಿಂದ ವರ್ತಿಸಿ. ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅವರಿಗೆ ಕಲಿಸಿ. ನಿಮ್ಮಲಿರುವ ಒಳ್ಳೆಯ ಗುಣಗಳನ್ನು ಮಕ್ಕಳಿಗೆ ಧಾರೆ ಎರೆಯಿರಿ. ಧನಾತ್ಮಕವಾಗಿ ಯೋಚಿಸುವುದನ್ನು ಕಲಿಸಿ.

ಪ್ರೀತಿ, ಮಮಕಾರಿ ತೋರಿ

ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಹೆಚ್ಚಲು ಮಕ್ಕಳ ಮೇಲೆ ಪ್ರೀತಿ, ವಾತ್ಸಲ್ಯವನ್ನು ತೋರುವುದು ಮುಖ್ಯವಾಗುತ್ತದೆ. ಬೆಚ್ಚನೆಯ ಅಪ್ಪುಗೆ, ಹಣೆ ಮೇಲೆ ಸಿಹಿಮುತ್ತು ನೀಡುವುದು, ಪದಗಳ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿ. ಸಂದರ್ಭಗಳು ಹೇಗೆ ಇರಲಿ ಮಕ್ಕಳು ನಿಮ್ಮ ಬೆಂಬಲ ಹಾಗೂ ಕಾಳಜಿಯನ್ನು ಬಯಸುತ್ತಾರೆ ಎಂಬುದನ್ನು ಮರೆಯದಿರಿ. ಇದು ಮಕ್ಕಳಲ್ಲಿ ಪೋಷಕರ ಮೇಲೆ ಭದ್ರತೆ ಹಾಗೂ ನಂಬಿಕೆ ಭಾವವನ್ನು ಸೃಷ್ಟಿಸುತ್ತದೆ. ಅವರ ಅನುಭವ ಹಾಗೂ ಭಾವನೆಗಳನ್ನು ನಿಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಪ್ರೋತ್ಸಾಹಿಸುತ್ತದೆ.

ಅವರ ದೃಷ್ಟಿಕೋನದಂತೆ ಅನುಭೂತಿ ತೋರಿಸಿ

ಮಕ್ಕಳ ದೃಷ್ಟಿಕೋನದಂತೆ ಯೋಚಿಸುವುದು, ಅವರ ಮೇಲೆ ಸಹಾನುಭೂತಿ ತೋರುವುದು ಬಹಳ ಮುಖ್ಯ. ನಿಮ್ಮ ಜೀವನದಲ್ಲಿ ನೀವು ಹಲವು ವಿಚಾರಗಳನ್ನು ಕಲಿತಿದ್ದರೂ ಪ್ರಸ್ತುತ ಸಮಾಜಕ್ಕೆ ತಕ್ಕಂತೆ ಮಕ್ಕಳೊಂದಿಗೆ ವರ್ತಿಸುವುದು ಮುಖ್ಯವಾಗುತ್ತದೆ. ಮಕ್ಕಳ ದೃಷ್ಟಿಕೋನದಂತೆ ಯೋಚಿಸುವ ಮೂಲಕ ಅವರು ನಿಮ್ಮ ಬಳಿ ಸ್ವಾತಂತ್ರ್ಯವಾಗಿ ಎಲ್ಲವನ್ನೂ ಹೇಳಿಕೊಳ್ಳುವ ಮನೋಭಾವ ಬೆಳೆಸಬೇಕು.

ಸ್ವಾತಂತ್ರ್ಯರಾಗಿರುವುದನ್ನು ಪ್ರೋತ್ಸಾಹಿಸಬೇಕು

ಮಕ್ಕಳು ಸ್ವಾತಂತ್ರ್ಯರಾಗಿ ಯೋಚಿಸುವಂತೆ ಮಾಡುವುದು ಅವರ ವೈಯಕ್ತಿಕ ಬೆಳವಣಿಗೆ ಹಾಗೂ ಆತ್ಮವಿಶ್ವಾಸ ಹೆಚ್ಚಲು ನಿರ್ಣಾಯಕವಾಗಿದೆ. ಸಣ್ಣ ಸಣ್ಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ವಯಸ್ಸಿಗೆ ಸೂಕ್ತವಾದ ಜವಾಬ್ದಾರಿಗಳನ್ನು ಕಲಿಸಲು ಅವರಿಗೆ ಅನುಮತಿಸಬೇಕು. ಸಣ್ಣಪುಟ್ಟ ಮನೆಕೆಲಸಗಳಲ್ಲಿ ಅವರಿಗೆ ತೊಡಗಿಕೊಳ್ಳಲು ಅವಕಾಶ ನೀಡಿ. ಒಟ್ಟಾರೆ ಅವರಿಗೆ ಸ್ವಾತಂತ್ರ್ಯ ನೀಡಿ. ಆದರೆ ಅದು ಸ್ವೇಚ್ಛೆಯತ್ತ ತಿರುಗದಂತೆ ನೋಡಿಕೊಳ್ಳಿ.

mysore-dasara_Entry_Point