ಮಕ್ಕಳಿಗೆ ಡೈಪರ್‌ ತೊಡಿಸುವ ಮುನ್ನ ಈ ವಿಚಾರ ತಿಳಿದಿರಲಿ: ಡೈಪರ್ ಮೇಲಿರುವ ಎಕ್ಸ್‌ ಮತ್ತು ಪ್ಲಸ್‌ ಚಿಹ್ನೆಗಳ ಅರ್ಥವಿದು
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳಿಗೆ ಡೈಪರ್‌ ತೊಡಿಸುವ ಮುನ್ನ ಈ ವಿಚಾರ ತಿಳಿದಿರಲಿ: ಡೈಪರ್ ಮೇಲಿರುವ ಎಕ್ಸ್‌ ಮತ್ತು ಪ್ಲಸ್‌ ಚಿಹ್ನೆಗಳ ಅರ್ಥವಿದು

ಮಕ್ಕಳಿಗೆ ಡೈಪರ್‌ ತೊಡಿಸುವ ಮುನ್ನ ಈ ವಿಚಾರ ತಿಳಿದಿರಲಿ: ಡೈಪರ್ ಮೇಲಿರುವ ಎಕ್ಸ್‌ ಮತ್ತು ಪ್ಲಸ್‌ ಚಿಹ್ನೆಗಳ ಅರ್ಥವಿದು

ಸಾಮಾನ್ಯವಾಗಿ ಎಲ್ಲಾ ಪೋಷಕರು ತಮ್ಮ ಮಗುವಿಗೆ ಡೈಪರ್ ತೊಡಿಸುತ್ತಾರೆ. ಆದರೆ ಅದರ ಮೇಲಿರುವ ಚಿಹ್ನೆಯ ಬಗ್ಗೆ ಗಮನ ಹರಿಸುವುದೇ ಇಲ್ಲ. ಬಟ್ಟೆಗಳಿಗೆ ಸೈಜ ಇರುವಂತೆ ಡೈಪರ್‌ಗೂ ಸಹ ಸೈಜ್‌ ಇರುತ್ತದೆ. ಮತ್ತು ಅದನ್ನು ಕೆಲವು ಮಾರ್ಕ್‌ಗಳ ಮೂಲಕ ಡೈಪರ್‌ ಮೇಲೆ ನಮೂದಿಸಿರುತ್ತಾರೆ. ಡೈಪರ್ ಮೇಲಿರುವ ಎಕ್ಸ್‌ ಮತ್ತು ಪ್ಲಸ್‌ನ ಅರ್ಥವೇನು? ಇಲ್ಲಿದೆ ಓದಿ.

ಮಕ್ಕಳಿಗೆ ಡೈಪರ್‌ ತೊಡಿಸುವ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ: ಡೈಪರ್ ಮೇಲಿರುವ ಎಕ್ಸ್‌ ಮತ್ತು ಪ್ಲಸ್‌ ಮಾರ್ಕ್‌ ಅರ್ಥ ಈ ರೀತಿಯಾಗಿದೆ
ಮಕ್ಕಳಿಗೆ ಡೈಪರ್‌ ತೊಡಿಸುವ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ: ಡೈಪರ್ ಮೇಲಿರುವ ಎಕ್ಸ್‌ ಮತ್ತು ಪ್ಲಸ್‌ ಮಾರ್ಕ್‌ ಅರ್ಥ ಈ ರೀತಿಯಾಗಿದೆ (PC: Pixabay)

ಮಗುವಿನ ಜನನ ಪ್ರತಿ ಪೋಷಕರಿಗೂ ಹೊಸ ಅನುಭವವನ್ನು ಕೊಡುತ್ತದೆ. ಪೋಷಕರು ಸಹ ಅದೆಷ್ಟೋ ತಪ್ಪುಗಳನ್ನು ಮಾಡುತ್ತಾ, ಅವುಗಳನ್ನು ಸರಿಪಡಿಸಿಕೊಳ್ಳುತ್ತಾ ತಮ್ಮ ಮಗುವಿನ ಪಾಲನೆ ಪೋಷಣೆ ಮಾಡುತ್ತಾರೆ. ಇಂತಹ ಸರಿ ತಪ್ಪುಗಳ ನಡುವೆಯೂ ಪ್ರತಿಯೊಬ್ಬ ಪೋಷಕರ ಗುರಿ ತಮ್ಮ ಮಕ್ಕಳನ್ನು ಬಹಳ ಪ್ರೀತಿಯಿಂದ ಪೋಷಣೆ ಮಾಡುವುದೇ ಆಗಿರುತ್ತದೆ. ಆದರೆ ಹೊಸದಾಗಿ ಪೋಷಕರಾದವರು ಮಾಡುವ ಸಣ್ಣ ಪುಟ್ಟ ತಪ್ಪುಗಳು, ಮಗು ತೊಂದರೆ ಅನುಭವಿಸುವಂತೆ ಮಾಡುತ್ತದೆ. ಏಕೆಂದರೆ ಕೆಲವು ವಿಷಯಗಳು ಅವರಿಗೆ ಹೊಸದಾಗಿರುತ್ತದೆ. ಅದರ ಬಗ್ಗೆ ತಿಳಿಹೇಳುವವರು ಕಡಿಮೆಯೆ. ಅಂತಹ ಒಂದು ವಿಷಯವೆಂದರೆ ಚಿಕ್ಕ ಮಕ್ಕಳ ಡೈಪರ್. ಡೈಪರ್‌ ಮೇಲಿರುವ ಗುರುತು ಏನು ಹೇಳುತ್ತದೆ ಎಂಬ ಗೊಂದಲ ಹೆಚ್ಚಿನ ಪೋಷಕರಿಗೆ ಇದೆ. ಅದನ್ನು ಸರಿಯಾಗಿ ತಿಳಿದುಕೊಳ್ಳದೆ ಇರುವುದರಿಂದ ಮಗುವು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕಂಟೆಂಟ್‌ ಕ್ರಿಯೇಟರ್‌ ಮಜಿದಾ ಅಮೋಗ್‌ ಅವರು ತಮ್ಮ ಇನ್‌ಸ್ಟಾಗ್ರಾಂ ವೀಡಿಯೊವೊಂದರಲ್ಲಿ ಇದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಡೈಪರ್‌ ಮೇಲಿನ ಎರಡು ಗುರುತುಗಳಾದ ಎಕ್ಸ್‌ (X) ಮತ್ತು ಪ್ಲಸ್‌ (+) ಏನನ್ನು ಹೇಳುತ್ತದೆ. ಇದನ್ನು ತಿಳಿದುಕೊಂಡರೆ ನಿಮ್ಮ ಸಮಸ್ಯೆಗೆ ಸುಲಭದಲ್ಲಿ ಪರಿಹಾರ ದೊರಕುತ್ತದೆ.

ಮಗುವಿನ ತೂಕಕ್ಕೆ ಅನುಗುಣವಾಗಿ ಡೈಪರ್‌ ತಯಾರಿಸಲಾಗುತ್ತದೆ: ಮಗುವಿನ ಡೈಪರ್‌ ಅನ್ನು ಅವರ ತೂಕಕ್ಕೆ ಅನುಗುಣವಾಗಿ ತಯಾರಿಸಲಾಗುತ್ತದೆ. ಇದು ಮಗುವಿನ ವಯಸ್ಸು ಮತ್ತು ಲಿಂಗಕ್ಕೆ ಸಂಬಂಧಿಸಿರುವುದಿಲ್ಲ. ಆದ್ದರಿಂದ ನಿಮ್ಮ ಮಗುವಿಗೆ ಡೈಪರ್‌ ಖರೀದಿಸುವ ಮೊದಲು ಮಗುವಿನ ತೂಕ ಎಷ್ಟಿದೆಯೆಂದು ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಡೈಪರ್‌ ಮೇಲಿನ ಪ್ಲಸ್‌ ಗುರುತಿನ ಅರ್ಥ: ಮಗುವಿಗೆ ತೊಡಿಸುವ ಡೈಪರ್‌ನ ಅಂಟಿಸುವ ಜಾಗದಲ್ಲಿ ಪ್ಲಸ್‌ (+) ಮಾರ್ಕ್‌ ಇರುತ್ತದೆ. ನಿಮ್ಮ ಮಗುವಿನ ಡೈಪರ್‌ ಆ ಪ್ಲಸ್‌ ಮಾರ್ಕ್‌ ಅನ್ನು ತಲುಪುತ್ತಿದೆ ಎಂದರೆ ಮಗುವಿನ ಗಾತ್ರ ಹೆಚ್ಚುತ್ತಿದೆ. ಅಂದರೆ ಮಗುವಿಗೆ ದೊಡ್ಡ ಸೈಜ್‌ನ ಡೈಪರ್‌ ಅವಶ್ಯಕತೆಯಿದೆ ಎಂದರ್ಥ. ಕೆಲವರ ಪ್ರಕಾರ + ಸೈಜ್‌ನ ಡೈಪರ್‌ ಹೆಚ್ಚು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಈ ಡೈಪರ್‌ಗಳು ಅಧಿಕ ಮೂತ್ರ ವಿಸರ್ಜನೆ ಮಾಡುವ ಮಗುವಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಹೇಳುತ್ತಾರೆ.

ಡೈಪರ್‌ ಮೇಲಿನ ಎಕ್ಸ್‌ ಚಿಹ್ನೆಯ ಅರ್ಥ: ಕೆಲವು ಡೈಪರ್‌ಗಳನ್ನು ಅಂಟಿಸುವ ಜಾಗದಲ್ಲಿ ಎಕ್ಸ್‌ (X) ಮಾರ್ಕ್‌ ಇರುತ್ತದೆ. ಮಗುವಿಗೆ ಡೈಪರ್‌ ತೊಡಿಸುವಾಗ ಅದು ಎಕ್ಸ್‌ ಮಾರ್ಕ್‌ ಅನ್ನು ತಲುಪುತ್ತಿದ್ದರೆ ಆ ಡೈಪರ್‌ ನಿಮ್ಮ ಮಗುವಿಗೆ ಚಿಕ್ಕದಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಕಡಿಮೆ ಸೈಜ್‌ನ ಡೈಪರ್‌ನಿಂದ ಮಗುವಿಗೆ ತೊಂದರೆಯಾಗುತ್ತದೆ. ಇದರಿಂದ ರ‍್ಯಾಶಸ್‌ ಉಂಟಾಗುವ ಸಂಭವ ಹೆಚ್ಚು. ಅದಕ್ಕಾಗಿ ಪೋಷಕರು ಮಗುವಿಗೆ ಡೈಪರ್‌ ತೊಡಿಸುವಾಗ ಎಚ್ಚರದಿಂದಿರಬೇಕು.

Whats_app_banner