Post Office Schemes: ಹಣ ಉಳಿತಾಯ ಮಾಡಲು ಬಯಸುವ ಮಹಿಳೆಯರಿಗೆ ಸೂಕ್ತವಾದ 5 ಅಂಚೆ ಕಚೇರಿ ಯೋಜನೆಗಳು
ಕನ್ನಡ ಸುದ್ದಿ  /  ಜೀವನಶೈಲಿ  /  Post Office Schemes: ಹಣ ಉಳಿತಾಯ ಮಾಡಲು ಬಯಸುವ ಮಹಿಳೆಯರಿಗೆ ಸೂಕ್ತವಾದ 5 ಅಂಚೆ ಕಚೇರಿ ಯೋಜನೆಗಳು

Post Office Schemes: ಹಣ ಉಳಿತಾಯ ಮಾಡಲು ಬಯಸುವ ಮಹಿಳೆಯರಿಗೆ ಸೂಕ್ತವಾದ 5 ಅಂಚೆ ಕಚೇರಿ ಯೋಜನೆಗಳು

Post Office Schemes: ಅಂಚೆ ಕಚೇರಿಯಲ್ಲಿ ಹಣ ಉಳಿತಾಯ ಮಾಡಲು ಬಯಸುವವರಿಗೆ ಹಲವು ಸ್ಕೀಮ್‌ಗಳು ಇವೆ. ವಿಶೇಷವಾಗಿ ಮಹಿಳೆಯರು ಅಂಚೆ ಕಚೇರಿಯಲ್ಲಿ ತಮ್ಮ ಭವಿಷ್ಯದ ಅವಶ್ಯಕತೆಗಾಗಿ ಯಾವೆಲ್ಲ ಯೋಜನೆಗಳಲ್ಲಿ ಇನ್‌ವೆಸ್ಟ್‌ ಮಾಡಬಹುದು ಎಂದು ತಿಳಿಯೋಣ.

Post Office Schemes: ಹಣ ಉಳಿತಾಯ ಮಾಡಲು ಬಯಸುವ ಮಹಿಳೆಯರಿಗೆ  5 ಅಂಚೆ ಕಚೇರಿ ಯೋಜನೆಗಳು
Post Office Schemes: ಹಣ ಉಳಿತಾಯ ಮಾಡಲು ಬಯಸುವ ಮಹಿಳೆಯರಿಗೆ 5 ಅಂಚೆ ಕಚೇರಿ ಯೋಜನೆಗಳು (pixabay)

Post Office Schemes: ಭಾರತೀಯ ಅಂಚೆ ಇಲಾಖೆಯು ಹಣ ಉಳಿತಾಯ ಮಾಡಲು ಬಯಸುವವರಿಗೆ ವೈವಿಧ್ಯಮಯ ಯೋಜನೆಗಳನ್ನು ಹೊಂದಿದೆ. ನಿಮ್ಮ ನಿವೃತ್ತಿ ಬದುಕಿಗೆ ಅಥವಾ ನಿಮ್ಮ ಮಗುವಿನ ಶಿಕ್ಷಣಕ್ಕೆ ಅಥವಾ ನಿಮ್ಮ ಹಣಕಾಸು ಸ್ಥಿರತೆಗೆ, ವ್ಯವಹಾರ ಉದ್ದೇಶಕ್ಕೆ ಹಣ ಉಳಿತಾಯ ಮಾಡಲು ಬಯಸಿರಬಹುದು. ಅಂಚೆ ಇಲಾಖೆಯ ಕೆಲವೊಂದು ಹೂಡಿಕೆ, ಉಳಿತಾಯ ಯೋಜನೆಗಳು ಆಕರ್ಷಕ ಬಡ್ಡಿದರ, ತೆರಿಗೆ ಪ್ರಯೋಜನಗಳನ್ನು ಹೊಂದಿದೆ. ಅಂತಹ ಐದು ಯೋಜನೆಗಳ ವಿವರ ಇಲ್ಲಿ ನೀಡಲಾಗಿದೆ.

ಪೋಸ್ಟ್‌ ಆಫೀಸ್‌ ಮಂತ್ಲಿ ಇನ್‌ಕಂ ಸ್ಕೀಮ್‌ (ಪಿಒಎಂಐಎಸ್‌)

ನಿಯಮಿತ ಆದಾಯ ಬಯಸುವ ಮಹಿಳೆಯರಿಗೆ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್‌) ಸೂಕ್ತವಾಗಿದೆ. ಹಣಕಾಸು ಸಚಿವಾಲಯ ಅಂಗೀಕರಿಸಿದ ಈ ಯೋಜನೆಯ ಮೂಲಕ ಹೂಡಿಕೆ ಮಾಡಿದರೆ ಶೇಕಡ 7.4 ಬಡ್ಡಿದರ ದೊರಕುತ್ತದೆ. ಇದಕ್ಕಾಗಿ ನೀವು ಪ್ರತಿತಿಂಗಳು ನಿರ್ದಿಷ್ಟ ಮೊತ್ತವನ್ನು ಅಂಚೆ ಕಚೇರಿಯಲ್ಲಿ ಕಟ್ಟಬೇಕು. ಈ ಯೋಜನೆಗೆ ಸೇರಿದ ಬಳಿಕ ಮೊದಲ ಐದು ವರ್ಷ ಹಣ ತೆಗೆಯಲು ಸಾಧ್ಯವಿಲ್ಲ. ಈ ಯೋಜನೆಯಲ್ಲಿ ಗರಿಷ್ಠ 9 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ತಿಂಗಳ ಆದಾಯವನ್ನು ಪೋಸ್ಟ್‌ ಡೇಟೆಡ್‌ ಚೆಕ್‌ಗಳು ಅಥವಾ ಎಲೆಕ್ಟ್ರಾನಿಕ್‌ ಕ್ಲಿಯರೆನ್ಸ್‌ ಸರ್ವೀಸ್‌ ಮೂಲಕ ಪ್ರತಿತಿಂಗಳು ಹಣ ಪಡೆಯಬಹುದು.

ಪೋಸ್ಟ್‌ ಆಫೀಸ್‌ ಸೀನಿಯರ್‌ ಸಿಟಿಜನ್ಸ್‌ ಸ್ಕೀಮ್‌ (ಎಸ್‌ಸಿಎಸ್‌ಎಸ್‌)

ನೀವು 60 ವರ್ಷ ವಯಸ್ಸಿಗಿಂತ ಹೆಚ್ಚಿನ ಹಿರಿಯರಾಗಿದ್ದರೆ ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್‌)ಗೆ ಸೇರಬಹುದು. ಇದು ಹಿರಿಯ ನಾಗರಿಕರ ಯೋಜನೆಯಾಗಿದ್ದರೂ ಹಿರಿಯ ಮಹಿಳೆಯರಿಗೂ ಸೂಕ್ತವಾಗಿದೆ. ತಮ್ಮ ನಿವೃತ್ತಿ ಅಥವಾ 60 ವರ್ಷ ವಯಸ್ಸಿನ ಬಳಿಕದ ಹಣಕಾಸು ತೊಂದರೆಗಳನ್ನು ಪರಿಹರಿಸಲು ಇದು ನೆರವಾಗಲಿದೆ. ಸರಕಾರದ ಬೆಂಬಲವಿರುವ ಈ ಯೋಜನೆಯಲ್ಲಿ ತ್ರೈಮಾಸಿಕ ಬಡ್ಡಿದರ ಶೇಕಡ 8.2 ದೊರಕುತ್ತದೆ. ಕನಿಷ್ಠ 1 ಸಾವಿರ ಹೂಡಿಕೆ ಮೂಲಕ ಈ ಯೋಜನೆಗೆ ಸೇರಬಹುದು. ಗರಿಷ್ಠ 30 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಈ ಯೋಜನೆ ಮೆಚ್ಯುರಿಟಿ ಆಗಲು 5 ವರ್ಷ ಬೇಕಿರುತ್ತದೆ. ಇದನ್ನು 3 ವರ್ಷ ವಿಸ್ತರಿಸಬಹುದು.

ನ್ಯಾಷನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌(ಎನ್‌ಎಸ್‌ಸಿ)

ದೀರ್ಘಕಾಲದ ಹೂಡಿಕೆ ಮೂಲಕ ಉತ್ತಮ ರಿಟರ್ನ್‌ ಪಡೆಯಲು ಬಯಸುವವರಿಗೆ ಎನ್‌ಎಸ್‌ಸಿ ಸೂಕ್ತವಾಗಿದೆ. ಕಡಿಮೆ ಅಪಾಯದ ಹೂಡಿಕೆ ಯೋಜನೆಯು ಎಲ್ಲಾ ಹೂಡಿಕೆದಾರರಿಗೆ ಸೂಕ್ತವಾಗಿದೆ. ಕನಿಷ್ಠ 1 ಸಾವಿರ ರೂಪಾಯಿಯಿಂದ ಈ ಯೋಜನೆಗೆ ಸೇರಬಹುದು. ಗರಿಷ್ಠ ಮಿತಿ ಇಲ್ಲ. ಐದು ವರ್ಷ ಮೆಚ್ಯುರಿಟಿ ಅವಧಿ ಇರುತ್ತದೆ. 80ಸಿಯಡಿ ತೆರಿಗೆ ಪ್ರಯೋಜನಗಳನ್ನೂ ಪಡೆಯಬಹುದು. ಮಕ್ಕಳ ಶಿಕ್ಷಣ ಅಥವಾ ನಿವೃತ್ತಿಯಂತಹ ದೀರ್ಘಕಾಲದ ಯೋಜನೆ ಹೊಂದಿರುವ ಮಹಿಳೆಯರಿಗೆ ಈ ಯೋಜನೆ ಸೂಕ್ತವಾಗಿದೆ.

ಕಿಶಾನ್‌ ವಿಕಾಸ್‌ ಪತ್ರ (ಕೆವಿಪಿ)

ಸ್ಥಿರ ಠೇವಣಿ ಮೂಲಕ ತಮ್ಮ ಆದಾಯ ದ್ವಿಗುಣಗೊಳಿಸಲು ಬಯಸುವ ಮಹಿಳೆಯರಿಗೆ ಇದು ಸೂಕ್ತ. ಜನವರಿ 1 2024ರಿಂದ ಬಡ್ಡಿದರ ಶೇಕಡ 7.5 ದೊರಕುತ್ತದೆ. ಸುಮಾರು 10 ವರ್ಷದಲ್ಲಿ ಹಣ ಡಬಲ್‌ ಆಗಬಹುದು.

ಗಮನಿಸಿ: ಇದು ಹಣಕಾಸು ಮಾಹಿತಿಗಾಗಿ ನೀಡಲಾದ ಬರಹ. ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ತಜ್ಞರೊಂದಿಗೆ ಸಂಪರ್ಕಿಸಿ. ಅಂಚೆ ಇಲಾಖೆಯು ವಿವಿಧ ಯೋಜನೆಗಳಿಗೆ ನೀಡುವ ಬಡ್ಡಿದರಗಳ ಕುರಿತು ಅಂಚೆ ಕಚೇರಿಯಲ್ಲಿ ಕೇಳಿ ಖಚಿತಪಡಿಸಿಕೊಳ್ಳಿ.

Whats_app_banner