Aadhaar card loan: ಆಧಾರ್‌ ಕಾರ್ಡ್‌ ಬಳಸಿ 2 ಲಕ್ಷ ರೂ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾರ್ಗದರ್ಶಿ
ಕನ್ನಡ ಸುದ್ದಿ  /  ಜೀವನಶೈಲಿ  /  Aadhaar Card Loan: ಆಧಾರ್‌ ಕಾರ್ಡ್‌ ಬಳಸಿ 2 ಲಕ್ಷ ರೂ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾರ್ಗದರ್ಶಿ

Aadhaar card loan: ಆಧಾರ್‌ ಕಾರ್ಡ್‌ ಬಳಸಿ 2 ಲಕ್ಷ ರೂ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾರ್ಗದರ್ಶಿ

Aadhaar card loan: ಆಧಾರ್‌ ಕಾರ್ಡ್‌ ಬಳಸಿ ವೈಯಕ್ತಿಕ ಸಾಲ ಪಡೆಯುವ ಆಯ್ಕೆಯನ್ನು ಸಾಕಷ್ಟು ಬ್ಯಾಂಕ್‌ಗಳು ನೀಡುತ್ತವೆ. ಕಡಿಮೆ ದಾಖಲೆಗಳನ್ನು ಬಯಸುವ ಈ ಬಗೆಯ ಸಾಲವು ಶೀಘ್ರದಲ್ಲಿ ಹಣ ಪಡೆಯಲು ನೆರವಾಗುತ್ತದೆ. ಈ ರೀತಿಯ ಸಾಲವು ವೇತನ ಪಡೆಯುವವರಿಗೆ, ಸ್ವಯಂ ಉದ್ಯೋಗ ಮಾಡುವವರಿಗೆ ದೊರಕುತ್ತದೆ.

Aadhaar card loan: ಆಧಾರ್‌ ಕಾರ್ಡ್‌ ಬಳಸಿ 2 ಲಕ್ಷ ರೂ ಸಾಲ ಪಡೆಯುವುದು ಹೇಗೆ?
Aadhaar card loan: ಆಧಾರ್‌ ಕಾರ್ಡ್‌ ಬಳಸಿ 2 ಲಕ್ಷ ರೂ ಸಾಲ ಪಡೆಯುವುದು ಹೇಗೆ?

Aadhaar card loan: ಆಧಾರ್‌ ಕಾರ್ಡ್‌ ಬಳಸಿ ವೈಯಕ್ತಿಕ ಸಾಲ ಪಡೆಯುವ ಆಯ್ಕೆಯನ್ನು ಸಾಕಷ್ಟು ಬ್ಯಾಂಕ್‌ಗಳು ನೀಡುತ್ತವೆ. ಕಡಿಮೆ ದಾಖಲೆಗಳನ್ನು ಬಯಸುವ ಈ ಬಗೆಯ ಸಾಲವು ಶೀಘ್ರದಲ್ಲಿ ಹಣ ಪಡೆಯಲು ನೆರವಾಗುತ್ತದೆ. ಈ ರೀತಿಯ ಸಾಲವು ವೇತನ ಪಡೆಯುವವರಿಗೆ, ಸ್ವಯಂ ಉದ್ಯೋಗ ಮಾಡುವವರಿಗೆ ದೊರಕುತ್ತದೆ. ಇಂತಹ ಸಾಲ ಪಡೆಯುವ ಮುನ್ನ ಬ್ಯಾಂಕ್‌ ವಿಧಿಸುವ ಬಡ್ಡಿದರದ ಕುರಿತು ಗಮನಹರಿಸಲು ಮರೆಯಬೇಡಿ. ಹಣಕಾಸು ತುರ್ತು ಅಗತ್ಯಬಿದ್ದಾಗ ಬಹುತೇಕರು ವೈಯಕ್ತಿಕ ಸಾಲ ಪಡೆಯಲು ಬಯಸುತ್ತಾರೆ. ಬಡ್ಡಿದರ ತುಸು ಹೆಚ್ಚು ಇದ್ದರೂ ಇದು ಕಷ್ಟದಲ್ಲಿ ಕೈಹಿಡಿಯುವ ಸಾಲವಾಗಿದೆ. ಕೆಲವೊಂದು ಸಾಲ ಪಡೆಯುವ ಪ್ರಕ್ರಿಯೆ ಸಾಕಷ್ಟು ಹಂತಗಳನ್ನು ಹೊಂದಿರುತ್ತದೆ. ದಾಖಲೆ ದೃಢೀಕರಣ ಪ್ರಕ್ರಿಯೆಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಆದರೆ, ಆಧಾರ್‌ ಕಾರ್ಡ್‌ ಆಧರಿತ ಸಾಲಗಳಲ್ಲಿ ದಾಖಲೆ ದೃಢೀಕರಣ ಪ್ರಕ್ರಿಯೆ ಕನಿಷ್ಠವಾಗಿರುತ್ತದೆ. ಈ ಸಾಲ ಪಡೆಯಲು ಆಧಾರ್‌ ಕಾರ್ಡ್‌ನೊಂದಿಗೆ ಕೆಲವೇ ಕೆಲವು ದಾಖಲೆಗಳನ್ನು ನೀಡಬೇಕಾಗಿರುತ್ತದೆ.

ಈ ಲೇಖನದಲ್ಲಿ ಆಧಾರ್‌ ಕಾರ್ಡ್‌ ಮೂಲಕ ಎರಡು ಲಕ್ಷ ರೂಪಾಯಿ ಸಾಲ ಪಡೆಯುವುದು ಹೇಗೆ ಎಂದು ತಿಳಿಯೋಣ. ಈ ರೀತಿಯ ಸಾಲ ಪಡೆಯಲು ಹೆಚ್ಚು ಪೇಪರ್‌ವರ್ಕ್‌ ಬೇಕಿಲ್ಲ. ತುರ್ತಾಗಿ ಹಣ ಸಾಲ ಬೇಕಾದವರು ಈ ವಿಧಾನ ಅನುಸರಿಸಬಹುದು.

ಆಧಾರ್‌ ಲೋನ್‌ನಿಂದ ಪ್ರಮುಖ  ಪ್ರಯೋಜನಗಳು

ಕಡಿಮೆ ದಾಖಲೆ: ಸಾಮಾನ್ಯ ಸಾಲಕ್ಕೆ ಹೋಲಿಸಿದರೆ ಆಧಾರ್‌ ಕಾರ್ಡ್‌ ಆಧರಿತ ಸಾಲವು ಸರಳವಾಗಿದೆ. ಇದಕ್ಕೆ ಆದಾಯ ದಾಖಲೆ, ವಿಳಾಸ ದಾಖಲೆ, ಐಡೆಂಟೆಂಟಿ ಪ್ರೂಫ್ ಇತ್ಯಾದಿ ಹಲವು ದಾಖಲೆಗಳ ಅಗತ್ಯ ಇರುವುದಿಲ್ಲ. ಐಡೆಂಟೆಟಿ ಮತ್ತು ವಿಳಾಸ ದಾಖಲೆಗೆ ಆಧಾರ್ ಕಾರ್ಡ್‌ ಅನ್ನೇ ಬಳಸಲಾಗುತ್ತದೆ. ಇದರಿಂದ ಕಾಗದ ಪತ್ರಗಳ ಬಳಕೆ ಕಡಿಮೆಯಾಗುತ್ತದೆ.

ಡಿಜಿಟಲ್‌ ಪ್ರಕ್ರಿಯೆ: ಇದು ಆನ್‌ಲೈನ್‌ ಸಾಲವಾಗಿದೆ. ಬ್ಯಾಂಕ್‌ನವರ ಜತೆ ಸಂವಹನ, ಅನುಮತಿ ಇತ್ಯಾದಿಗಳು ಡಿಜಿಟಲ್‌ ರೂಪದಲ್ಲಿ ನಡೆಯುತ್ತದೆ. ನೀವು ಬ್ಯಾಂಕ್‌ಗೆ ಹೋಗುವ ಅಗತ್ಯ ಇರುವುದಿಲ್ಲ.

ಸುಲಭವಾಗಿ ಪಡೆಯಬಹುದು: ನಿಮಗೆ ನಿಯಮಿತ ಆದಾಯ ಮೂಲ ಇಲ್ಲದೆ ಇದ್ದರೂ ಈ ಸಾಲವನ್ನು ಸುಲಭವಾಗಿ ಪಡೆಯಬಹುದು.

ತ್ವರಿತ ಸಾಲ: ಈ ಸಾಲ ನೀಡುವ ಪ್ರಕ್ರಿಯೆ ತ್ವರಿತವಾಗಿರುತ್ತದೆ. ಇದರಿಂದ ಸಾಲದ ಮೊತ್ತಕ್ಕೆ ಹೆಚ್ಚು ದಿನ ಕಾಯುವ ಅಗತ್ಯವಿರುವುದಿಲ್ಲ.

ಅಡಮಾನ ಅಗತ್ಯ ಇಲ್ಲ: ಆಧಾರ್‌ ಕಾರ್ಡ್‌ ಸಾಲ ಪಡೆಯಲು ನೀವು ಯಾವುದೇ ಆಸ್ತಿಯನ್ನು ಅಡಮಾನ ಇಡಬೇಕಾಗಿಲ್ಲ.

2 ಲಕ್ಷ ರೂಪಾಯಿ ಆಧಾರ್‌ ಕಾರ್ಡ್‌ ಸಾಲಕ್ಕೆ ಅರ್ಹತಾ ಮಾನದಂಡಗಳು

ವಯಸ್ಸು: ಸಾಮಾನ್ಯವಾಗಿ 21-60 ವರ್ಷ ವಯಸ್ಸಿನವರಿಗೆ ದೊರಕುತ್ತದೆ. ಕೆಲವು ಬ್ಯಾಂಕ್‌ಗಳು 65 ವರ್ಷ ವಯಸ್ಸಿನವರೆಗೂ ಸಾಲ ನೀಡುತ್ತವೆ.

ಆದಾಯ: ಸಾಮಾನ್ಯವಾಗಿ ಸಾಲ ಪಡೆಯುವವರಿಗೆ ಮಾಸಿಕ 15-25 ಸಾವಿರ ರೂಪಾಯಿ ವೇತನ ಬಯಸುತ್ತವೆ.

ಕ್ರೆಡಿಟ್‌ ಸ್ಕೋರ್‌: ನಿಮ್ಮ ಕ್ರೆಡಿಟ್‌ ಸ್ಕೋರ್‌ ಉತ್ತಮವಾಗಿರಬೇಕು. 650-700 ಕ್ರೆಡಿಟ್‌ ಸ್ಕೋರ್‌ ಇರುವವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಬಹುದು.

ಉದ್ಯೋಗದ ಸ್ಥಿತಿ: ನೀವು ವೇತನ ಪಡೆಯುವವರು ಅಥವಾ ಸ್ವಉದ್ಯೋಗಿಯಾಗಿರಬೇಕು.

ಆಧಾರ್‌ ಕಾರ್ಡ್‌: ದೃಢೀಕರಣ ಪ್ರಕ್ರಿಯೆಗಾಗಿ ಆಕ್ಟಿವ್‌ ಆಗಿರುವ, ಮೊಬೈಲ್‌ ಸಂಖ್ಯೆಗೆ ಲಿಂಕ್‌ ಆಗಿರುವ ಆಧಾರ್‌ ಕಾರ್ಡ್‌ ಹೊಂದಿರಬೇಕು.

2 ಲಕ್ಷ ರೂಪಾಯಿ ಆಧಾರ್‌ ಕಾರ್ಡ್‌ ಸಾಲಕ್ಕೆ ಬೇಕಾಗುವ ದಾಖಲೆಗಳು

ಈ ಸಾಲದ ಹೆಸರು ಆಧಾರ್‌ ಕಾರ್ಡ್‌ ಸಾಲ ಎಂದಾಗಿದ್ದರೂ ಕೇವಲ ಆಧಾರ್‌ ಕಾರ್ಡ್‌ ಇದ್ದರೆ ಸಾಕಾಗದು. ಕೆಲವು ಬ್ಯಾಂಕ್‌ಗಳು ಬೇರೆ ಒಂದೆರಡು ದಾಖಲೆ ಕೇಳಬಹುದು. ಈ ಮುಂದಿನ ದಾಖಲೆಗಳನ್ನು ಕೆಲವು ಬ್ಯಾಂಕ್‌ಗಳು ಕೇಳಬಹುದು.

  • ಪ್ಯಾನ್‌ ಕಾರ್ಡ್‌
  • 3-6 ತಿಂಗಳ ಬ್ಯಾಂಕ್‌ ಸ್ಟೇಟ್‌ಮೆಂಟ್‌
  • ವೇತನ ಪಡೆಯುವವರಿಗೆ ಆದಾಯ ದಾಖಲೆ
  • ಐಟಿಆರ್‌ ರಿಟರ್ನ್‌ (ಸ್ವಯಂ ಉದ್ಯೋಗಿಗಳಿಗೆ)

ಇದನ್ನೂ ಓದಿ: Savings Mistakes: ಕಷ್ಟಪಟ್ಟು ಸಂಪಾದಿಸಿದ ಹಣ ಉಳಿತಿಲ್ವ? ಅದಕ್ಕೆ ನೀವು ಮಾಡುವ ಈ 10 ತಪ್ಪುಗಳೇ ಕಾರಣ

2 ಲಕ್ಷ ರೂಪಾಯಿ ಆಧಾರ್‌ ಕಾರ್ಡ್‌ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

  • ನಿರ್ದಿಷ್ಟ ಬ್ಯಾಂಕ್‌ನ ವೆಬ್‌ಸೈಟ್‌ ಅಥವಾ ಮೊಬೈಲ್‌ ಅಪ್ಲಿಕೇಷನ್‌ ಮೂಲಕ ಲೋನ್‌ ವಿಭಾಗಕ್ಕೆ ಪ್ರವೇಶಿಸಿ.
  • ನೀವು ಈ ರೀತಿಯ ಸಾಲಕ್ಕೆ ಅರ್ಹತೆ ಹೊಂದಿರುವಿರೋ ಎಂದು ಪರಿಶೀಲಿಸಿ. ಇದಕ್ಕೆ ಸಂಬಂಧಪಟ್ಟಂತೆ ಎಲಿಜಿಬಿಲಿಟಿ ಕ್ಯಾಲ್ಕ್ಯುಲೇಟರ್‌ ಇರಬಹುದು.
  • ದಾಖಲೆ ಅಪ್‌ಲೋಡ್‌ ಮಾಡಿ: ಈ ಸಾಲಕ್ಕೆ ಆನ್‌ಲೈನ್‌ ಮೂಲಕ ಸಲ್ಲಿಸಿ, ದಾಖಲೆಗಳನ್ನು ಅಪ್ಲೋಡ್‌ ಮಡಿ.
  • ಅರ್ಜಿ ಸಲ್ಲಿಸಿದ ಬಳಿಕ 24-48 ಗಂಟೆಗಳಲ್ಲಿ ನಿಮಗೆ ಬ್ಯಾಂಕ್‌ನಿಂದ ಇಮೇಲ್‌ ಬರಬಹುದು.

ಅರ್ಜಿ ಸಲ್ಲಿಸುವ ಮೊದಲು ಆಧಾರ್‌ ಕಾರ್ಡ್‌ ಆಧರಿತ ಸಾಲಕ್ಕೆ ಎಷ್ಟು ಬಡ್ಡಿದರ ಇದೆ ಎಂದು ಪರಿಶೀಲಿಸಿ. ಪ್ರೊಸೆಸಿಂಗ್‌ ಫೀಸ್‌ ಮತ್ತು ಇತರೆ ಶುಲ್ಕಗಳನ್ನು ಪರಿಶೀಲಿಸಿ.

ಡಿಸ್‌ಕ್ಲೈಮರ್‌/ ಹಕ್ಕುತ್ಯಾಗ: ಇದು ಲಭ್ಯವಿರುವ ಮಾಹಿತಿ ಆಧರಿಸಿದ ಬರಹ. ನಿರ್ದಿಷ್ಟ ಸಾಲ ಮತ್ತು ಇತರೆ ಮಾಹಿತಿಗಾಗಿ ಸಂಬಂಧಪಟ್ಟ ಬ್ಯಾಂಕನ್ನು ಸಂಪರ್ಕಿಸಿ

Whats_app_banner