Smart SIP Tips: ಏನಿದು ಸಿಪ್ ಹೂಡಿಕೆ, ವ್ಯವಸ್ಥಿತ ಹೂಡಿಕೆ ಯೋಜನೆ ಮೂಲಕ ಅತ್ಯುತ್ತಮ ಲಾಭ ಗಳಿಸಲು ಬಯಸುವವರಿಗೆ 10 ಟಿಪ್ಸ್
SIP Mutual Fund Investment: ಮ್ಯೂಚುಯಲ್ ಫಂಡ್‌ನಲ್ಲಿ ವ್ಯವಸ್ಥಿತವಾಗಿ ಹೂಡಿಕೆ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಈಗ ಬಹುತೇಕರು ಆದ್ಯತೆ ನೀಡುತ್ತಾರೆ. ಸಿಪ್ ಹೂಡಿಕೆ ಎಂದರೇನು, ಇದರಿಂದ ಹೆಚ್ಚು ಲಾಭ ಗಳಿಸುವುದು ಹೇಗೆ? ಇತ್ಯಾದಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಸಿಪ್ ಹೂಡಿಕೆ ಮಾಡುವ ಮೂಲಕ ಉತ್ತಮ ಆದಾಯ ಗಳಿಸಬಹುದೇ? ಈ ಪ್ರಶ್ನೆ ಈಗ ಹೆಚ್ಚಿನ ಜನರಲ್ಲಿದೆ. ಮ್ಯೂಚುಯಲ್ ಫಂಡ್‌ನಲ್ಲಿ ವ್ಯವಸ್ಥಿತವಾಗಿ ಹೂಡಿಕೆ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಈಗ ಬಹುತೇಕರು ಆದ್ಯತೆ ನೀಡುತ್ತಾರೆ. ಸಿಪ್ ಹೂಡಿಕೆ ಎಂದರೇನು, ಇದರಿಂದ ಹೆಚ್ಚು ಲಾಭ ಗಳಿಸುವುದು ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಸಿಪ್ ಹೂಡಿಕೆ ಎಂದರೇನು?
ಹೆಸರೇ ಹೇಳುವಂತೆ ಇದು ವ್ಯವಸ್ಥಿತ ಮ್ಯೂಚುಯಲ್ ಫಂಡ್ ಹೂಡಿಕೆ ಯೋಜನೆ. ನೀವು ಪ್ರತಿತಿಂಗಳು, ಮೂರು ತಿಂಗಳಿಗೊಮ್ಮೆ ಇಂತಿಷ್ಟು ಹೂಡಿಕೆ ಮಾಡುವ ಯೋಜನೆ ರೂಪಿಸಬಹುದು. ನಿಯಮಿತವಾಗಿ, ಮಾಸಿಕ ಅಥವಾ ತ್ರೈಮಾಸಿಕ ಹೂಡಿಕೆ ಮಾಡಬಹುದು. ಇದಕ್ಕಾಗಿ ಹೂಡಿಕೆದಾರರು ಒಂದು ಮ್ಯೂಚುಯಲ್ ಫಂಡ್ ಸ್ಕೀಮ್ ಆಯ್ಕೆ ಮಾಡಿಕೊಂಡು ಪ್ರತಿತಿಂಗಳು/ತ್ರೈಮಾಸಿಕ ಅವಧಿಗೆ ಬ್ಯಾಂಕ್ ಖಾತೆಯಿಂದ ಇಂತಿಷ್ಟು ಮೊತ್ತ ಕಡಿತವಾಗಲು ಅವಕಾಶ ನೀಡಬಹುದು. ಸಿಪ್‌ನಿಂದ ನಷ್ಟವಾಗುವ ಸಾಧ್ಯತೆ ಕನಿಷ್ಠ. ನಿಯಮಿತವಾಗಿ ಹೂಡಿಕೆ ಮಾಡುವುದರಿಂದ ಕಡಿಮೆ ವೆಚ್ಚದಲ್ಲಿ ಮ್ಯೂಚುಯಲ್ ಫಂಡ್ ಹೂಡಿಕೆ ಮಾಡಬಹುದು. ಇದರಿಂದ ತೆರಿಗೆ ಪ್ರಯೋಜನವೂ ದೊರಕುತ್ತದೆ. ಹಾಗಂತ, ಸಿಪ್ ಹೂಡಿಕೆ ರಿಸ್ಕ್ ಫ್ರೀ ಎಂದಲ್ಲ. ಇದನ್ನು ಷೇರು ಸೇರಿದಂತೆ ವಿವಿಧ ಸೆಕ್ಯುರಿಟೀಸ್‌ನಲ್ಲಿ ಹೂಡಿಕೆ ಮಾಡಲಾಗುತ್ತದೆ. ತಾವು ಹೂಡಿಕೆ ಮಾಡಿದ ಸಿಪ್ ಕುರಿತು ನಿಯಮಿತವಾಗಿ ಪರಿಶೀಲನೆ ಮಾಡುತ್ತ ಲಾಭವಾಗುತ್ತಿದೆಯೇ, ನಷ್ಟವಾಗುತ್ತಿದೆಯೇ ಎಂದು ಖಾತ್ರಿ ಪಡಿಸಿಕೊಳ್ಳಬಹುದು.
ಸ್ಮಾರ್ಟ್ ಸಿಪ್ ಟಿಪ್ಸ್
- ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಫಂಡ್‌ಗಳ ಮೇಲೆ ಹೂಡಿಕೆ ಮಾಡಿ.
- ದೀರ್ಘಕಾಲದಲ್ಲಿ ಸಿಪ್ ಉತ್ತಮ ಲಾಭ ತಂದುಕೊಡಬಹುದು. ಅಲ್ಪಾವಧಿ ಬದಲು ದೀರ್ಘಕಾಲದ ಹೂಡಿಕೆ ಮಾಡಿ.
- ದೀರ್ಘಾವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಫಂಡ್‌ಗಳು ಯಾವುವು ಎಂದು ಪರಿಶೀಲನೆ ಮಾಡಿ ಮುಂದುವರೆಯಿರಿ.
- ಮಾರುಕಟ್ಟೆಯ ಪರಿಸ್ಥಿತಿ ಹೇಗೆ ಬೇಕಾದರೂ ಇರಲಿ, ನಿಯಮಿತವಾಗಿ ಹೂಡಿಕೆ ಮಾಡುತ್ತ ಇರಲಿ. ದೀರ್ಘಕಾಲದಲ್ಲಿ ಲಾಭ ದೊರಕುತ್ತದೆ. ಅಲ್ಪಾವಧಿಯ ಮಾರುಕಟ್ಟೆಯ ಏರಿಳಿತದ ಕುರಿತು ಚಿಂತೆ ಮಾಡುವ ಅಗತ್ಯವಿರುವುದಿಲ್ಲ.
- ಮಾರುಕಟ್ಟೆಯ ತಾತ್ಕಾಲಿಕ ಚಂಚಲತೆಯನ್ನು ಗಮನಿಸಿಕೊಂಡು ಭಾವನಾತ್ಮಕ ನಿರ್ಧಾರ ತೆಗೆದುಕೊಳ್ಳಬೇಡಿ.
- ಮಾರುಕಟ್ಟೆ ಕೆಳಮಟ್ಟದ್ದಲ್ಲಿದ್ದಾಗ ಹೆಚ್ಚು ಫಂಡ್ ತೆಗೆದುಕೊಳ್ಳಿ. ಆದರೆ, ಸರಿಯಾದ ವಿಶ್ಲೇಷಣೆ ಅಗತ್ಯ.
- ದೀರ್ಘಕಾಲದ ಹೂಡಿಕೆ ಮಾಡಿ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಲಾಭ ದೊರಕುತ್ತದೆ.
- ಬೇಗ ವಿತ್‌ಡ್ರಾ ಮಾಡಬೇಡಿ. ಏನಾದರೂ ತುರ್ತು ಪರಿಸ್ಥಿತಿ ಬಂದಾಗ ಮ್ಯೂಚುಯಲ್ ಫಂಡ್‌ನಿಂದ ಹಣ ಪಡೆಯುವುದು ಸೂಕ್ತವಲ್ಲ. ಇದರಿಂದ ನಿಮಗೆ ದೊರಕುವ ಲಾಭ ಕಡಿಮೆಯಾಗಬಹುದು.
- ಮಾರುಕಟ್ಟೆಯ ಟ್ರೆಂಡ್ ಕುರಿತು ಅಪ್‌ಡೇಟ್ ಆಗಿರಿ.
- ಆರ್ಥಿಕ ಪ್ರಗತಿ ಟ್ರೆಂಡ್ ಗಮನಿಸಿ, ಎಚ್ಚರಿಕೆಯಿಂದ ಹೂಡಿಕೆ ನಿರ್ಧಾರ ತೆಗೆದುಕೊಳ್ಳಿ.