New FD Rates: ಎಸ್‌ಬಿಐ ಮತ್ತು ಅಂಚೆ ಕಚೇರಿಯ ನಿಶ್ಚಿತ ಠೇವಣಿ ಬಡ್ಡಿದರಗಳ ಹೋಲಿಕೆ, ಯಾವ ಎಫ್‌ಡಿಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ?
ಕನ್ನಡ ಸುದ್ದಿ  /  ಜೀವನಶೈಲಿ  /  New Fd Rates: ಎಸ್‌ಬಿಐ ಮತ್ತು ಅಂಚೆ ಕಚೇರಿಯ ನಿಶ್ಚಿತ ಠೇವಣಿ ಬಡ್ಡಿದರಗಳ ಹೋಲಿಕೆ, ಯಾವ ಎಫ್‌ಡಿಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ?

New FD Rates: ಎಸ್‌ಬಿಐ ಮತ್ತು ಅಂಚೆ ಕಚೇರಿಯ ನಿಶ್ಚಿತ ಠೇವಣಿ ಬಡ್ಡಿದರಗಳ ಹೋಲಿಕೆ, ಯಾವ ಎಫ್‌ಡಿಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ?

SBI vs Post Office fixed deposit: ಉಳಿತಾಯ ಖಾತೆಗಳಿಗೆ ಹೋಲಿಸಿದರೆ ನಿಶ್ಚಿತ ಠೇವಣಿ (ಎಫ್‌ಡಿ)ಯಲ್ಲಿ ಹೂಡಿಕೆ ಮಾಡಿದರೆ ದೀರ್ಘಕಾಲದಲ್ಲಿ ಒಳ್ಳೆಯ ರಿಟರ್ನ್ಸ್‌ ಮತ್ತು ಹೆಚ್ಚು ಬಡ್ಡಿದರ ದೊರಕುತ್ತದೆ. ಎಸ್‌ಬಿಐ 1ರಿಂದ 5 ವರ್ಷಗಳಿಗೆ ಶೇ 6.5ರಿಂದ 7ರವರಗೆ ಬಡ್ಡಿದರ ದೊರಕುತ್ತದೆ. ಅಂಚೆ ಕಚೇರಿಯೂ ಇಷ್ಟೇ ಅವಧಿಗ ಶೇ 6.7ರಿಂದ ಶೇಕಡ 7.1 ಬಡ್ಡಿದರ ನೀಡುತ್ತದೆ.

New FD Rates: ಎಸ್‌ಬಿಐ ಮತ್ತು ಅಂಚೆ ಕಚೇರಿಯ ನಿಶ್ಚಿತ ಠೇವಣಿ ಬಡ್ಡಿದರಗಳ ಹೋಲಿಕೆ
New FD Rates: ಎಸ್‌ಬಿಐ ಮತ್ತು ಅಂಚೆ ಕಚೇರಿಯ ನಿಶ್ಚಿತ ಠೇವಣಿ ಬಡ್ಡಿದರಗಳ ಹೋಲಿಕೆ

SBI vs Post Office fixed deposit: ಉಳಿತಾಯ ಖಾತೆಗಳಿಗೆ ಹೋಲಿಸಿದರೆ ನಿಶ್ಚಿತ ಠೇವಣಿ (ಎಫ್‌ಡಿ)ಯಲ್ಲಿ ಹೂಡಿಕೆ ಮಾಡಿದರೆ ದೀರ್ಘಕಾಲದಲ್ಲಿ ಒಳ್ಳೆಯ ರಿಟರ್ನ್ಸ್‌ ಮತ್ತು ಹೆಚ್ಚು ಬಡ್ಡಿದರ ದೊರಕುತ್ತದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು 1ರಿಂದ 5 ವರ್ಷಗಳಿಗೆ ಶೇಕಡ 6.5ರಿಂದ 7ರವರಗೆ ಬಡ್ಡಿದರ ದೊರಕುತ್ತದೆ. ಭಾರತೀಯ ಅಂಚೆ ಕಚೇರಿಯೂ ಇಷ್ಟೇ ಅವಧಿಗ ಶೇಕಡ 6.7ರಿಂದ ಶೇಕಡ 7.1 ಬಡ್ಡಿದರ ನೀಡುತ್ತದೆ.

ಸಾಕಷ್ಟು ಜನರು ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಆರ್‌ಡಿ ಅಥವಾ ಸೇವಿಂಗ್‌ ಖಾತೆಯಲ್ಲಿ ಹಣ ಇಡುವುದಕ್ಕಿಂತ ಎಫ್‌ಡಿಯಲ್ಲಿ ಇಟ್ಟರೆ ದೀರ್ಘಕಾಲದಲ್ಲಿ ಉತ್ತಮ ರಿಟರ್ನ್‌ ದೊರಕುತ್ತದೆ. ಇದೇ ಕಾರಣಕ್ಕೆ ಸಾಕಷ್ಟು ಜನರು ತಮ್ಮ ಖಾತೆಯಲ್ಲರುವ ಒಂದಿಷ್ಟು ಸಾವಿರ, ಒಂದಿಷ್ಟು ಲಕ್ಷ ರೂಪಾಯಿ ಹಣವನ್ನು ಎಫ್‌ಡಿಯಲ್ಲಿ ಇಡುತ್ತಾರೆ. ಬ್ಯಾಂಕ್‌ಗಳಲ್ಲಿ ಮತ್ತು ಅಂಚೆ ಕಚೇರಿಯಲ್ಲಿ ಎಫ್‌ಡಿ ಇಡಲು ಅವಕಾಶವಿದೆ. ಇಲ್ಲಿ ಎಸ್‌ಬಿಐ ಮತ್ತು ಅಂಚೆ ಕಚೇರಿಯ ಎಫ್‌ಡಿ ದರ ತಿಳಿಯೋಣ.

ಎಸ್‌ಬಿಐ ಸ್ಥಿರ ಠೇವಣಿ

ಭಾರತದ ಬೃಹತ್‌ ಬ್ಯಾಂಕಾಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ)ವು ವಿವಿಧ ಅವಧಿಗೆ ತಕ್ಕಂತೆ ನಿಶ್ಚಿತ ಠೇವಣಿಗೆ ಆಕರ್ಷಕ ಬಡ್ಡಿದರ ನೀಡುತ್ತದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು 1ರಿಂದ 5 ವರ್ಷಗಳಿಗೆ ಶೇಕಡ 6.5ರಿಂದ 7ರವರಗೆ ಬಡ್ಡಿದರ ದೊರಕುತ್ತದೆ. ಒಂದು ವರ್ಷದ ಅವಧಿಗೆ ಎಫ್‌ಡಿ ಮಾಡಿದ್ರೆ ಶೇಕಡ 6.8 ಬಡ್ಡಿದರ ದೊರಕುತ್ತದೆ. ಎರಡು ವರ್ಷದ ಅವಧಿಗೆ ಎಫ್‌ಡಿ ಹೂಡಿಕೆ ಮಾಡಿದರೆ ಶೇಕಡ 7 ಬಡ್ಡಿದರ ದೊರಕುತ್ತದೆ. ಮೂರು ಅಥವಾ ನಾಲ್ಕು ವರ್ಷದ ಎಫ್‌ಡಿಗೆ ಶೇಕಡ 6.75 ಬಡ್ಡಿದರ ದೊರಕುತ್ತದೆ. ಐದು ವರ್ಷದ ಅವಧಿಗೆ ಶೇಕಡ 6.5 ಬಡ್ಡಿದರ ದೊರಕುತ್ತದೆ.

ಅಂಚೆ ಕಚೇರಿ ನಿಶ್ಚಿತ ಠೇವಣಿ

ಭಾರತೀಯ ಅಂಚೆ ಇಲಾಖೆಯು ಎಫ್‌ಡಿ ಸೇವೆ ನೀಡುತ್ತದೆ. ಇದಕ್ಕೆ ಪೋಸ್ಟ್‌ ಆಫೀಸ್‌ ಟೈಮ್ ಡೆಪಾಸಿಟ್‌ ಅಕೌಂಟ್ಸ್‌ (ಟಿಡಿ) ಎಂದು ಹೆಸರು. ಇದಕ್ಕೆ ಭಾರತ ಸರಕಾರದ ಬೆಂಬಲ ಇರುತ್ತದೆ. ಇದೇ ಕಾರಣಕ್ಕೆ ಸಾಕಷ್ಟು ಜನರು ಇದನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಿದ್ದಾರೆ ಜನವರಿ- ಮಾರ್ಚ್‌ 2025ರ ಅವಧಿಯಲ್ಲಿ ಅಂಚೆ ಕಚೇರಿಯ ಎಫ್‌ಡಿಗೆ ಶೇಕಡ 6.7ರಿಂದ ಶೇಕಡ 7.1 ಬಡ್ಡಿದರ ನೀಡುತ್ತದೆ.

“2024-25 ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವು ಜನವರಿ 1, 2025ರಿಂದ ಪ್ರಾರಂಭವಾಗಿ ಮತ್ತು ಮಾರ್ಚ್ 31, 2025ರವರೆಗೆ ಮುಂದುವರೆಯಲಿದೆ. ಮೂರನೇ ತ್ರೈಮಾಸಿಕದ (ಅಕ್ಟೋಬರ್ 1, 2024) ಬಡ್‌ಡಿದರವು ಬದಲಾಗದೆ ಮುಂದುವರೆಯುತ್ತದೆ" ಎಂದು ಆರ್ಥಿಕ ವ್ಯವಹಾರಗಳ ಇಲಾಖೆ, ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಅಂಚೆ ಕಚೇರಿಯಲ್ಲಿ ಒಂದು ವರ್ಷದ ಅವಧಿಗೆ ಶೇಕಡ 6.9 ಬಡ್ಡಿದರ, ಎರಡು ವರ್ಷದ ಅವಧಿಗೆ ಶೇಕಡ 7 ಮತ್ತು ಮೂರು ವರ್ಷದ ಅವಧಿಗೆ ಶೇಕಡ 7.1 ಬಡ್ಡಿದರ ನೀಡಲಾಗುತ್ತದೆ. ಐದು ವರ್ಷದ ಎಫ್‌ಡಿ ಹೂಡಿಕೆಗೆ ಶೇಕಡ 6.7 ಬಡ್ಡಿದರ ದೊರಕುತ್ತದೆ.

ಅಂಚೆ ಕಚೇರಿ ಮತ್ತು ಎಸ್‌ಬಿಐ ಎಫ್‌ಡಿ ಬಡ್ಡಿದರ

ಅವಧಿಎಸ್‌ಬಿಐಅಂಚೆ ಕಚೇರಿ 
1 ವರ್ಷ6.8%6.9%
2 ವರ್ಷ7.0%7.0%
3 ವರ್ಷ6.75%7.1%
4 ವರ್ಷ6.75%-
5 ವರ್ಷ6.5%6.7%

Whats_app_banner