SIP Investment: ತಿಂಗಳಿಗೆ 2 ಸಾವಿರ ರೂನಂತೆ 20 ವರ್ಷ ಹಣ ಉಳಿತಾಯ ಮಾಡಿದರೆ ಎಷ್ಟಾಗುತ್ತದೆ, ಸಿಂಪಲ್ ಆಗಿ ಸಿಪ್ ಲೆಕ್ಕಾಚಾರ
SIP Investment Tips: ಪ್ರತಿತಿಂಗಳು 20 ಸಾವಿರ ರೂಪಾಯಿಯಂತೆ 20 ವರ್ಷ ಹೂಡಿಕೆ ಮಾಡಿದರೆ ಒಟ್ಟು ಎಷ್ಟಾಗುತ್ತದೆ? ನೀವು ಸ್ಥಿರ ಠೇವಣಿ, ಉಳಿತಾಯ ಖಾತೆ, ಮ್ಯೂಚುಯಲ್ ಫಂಡ್ ಇತ್ಯಾದಿಗಳಲ್ಲಿ ಉಳಿತಾಯ ಮಾಡಿದರೆ ಎಷ್ಟು ಲಾಭ ಗಳಿಸಬಹುದು.
ಪ್ರತಿತಿಂಗಳು ತಮ್ಮ ಆದಾಯದಲ್ಲಿ ಒಂದಿಷ್ಟು ಮೊತ್ತ ಉಳಿತಾಯ ಮಾಡಲು ಎಲ್ಲರೂ ಬಯಸುತ್ತಾರೆ. ಸಿಸ್ಟಮ್ಯಾಟಿಕ್ ಆಗಿ ಪ್ರತಿತಿಂಗಳು ನೀವು 2 ಸಾವಿರ ರೂಪಾಯಿ ಉಳಿತಾಯ ಮಾಡಿದರೆ ಹಲವು ವರ್ಷಗಳು ಕಳೆದಾಗ ಆ ಮೊತ್ತ ಬೃಹತ್ ಪ್ರಮಾಣವಾಗಿರುತ್ತದೆ ಎನ್ನುವುದು ನಿಜ. ಉಳಿತಾಯ ಖಾತೆ, ಆರ್‌ಡಿ, ಪಿಪಿಎಫ್ ಅಥವಾ ಮ್ಯೂಚುಯಲ್ ಬ್ಯಾಂಕ್‌ನಲ್ಲಿ ಪ್ರತಿತಿಂಗಳು ನಿರ್ದಿಷ್ಟ ಹಣ ಉಳಿತಾಯ ಮಾಡಿದರೆ ಎಷ್ಟಾಗುತ್ತದೆ ಎಂದು ತಿಳಿದುಕೊಳ್ಳೋಣ.
ಬ್ಯಾಂಕ್‌ನ ಉಳಿತಾಯ ಖಾತೆ: ಕಡಿಮೆ ಅಪಾಯವಿರುವ ಹೂಡಿಕೆ ಆಯ್ಕೆ ನೋಡಿದರೆ ನಿಮಗೆ ಬ್ಯಾಂಕ್‌ನ ಉಳಿತಾಯ ಖಾತೆ ಸೂಕ್ತವಾಗಬಹುದು. ಆದರೆ, ಉಳಿತಾಯ ಖಾತೆಗೆ ಬ್ಯಾಂಕ್ ಕಡಿಮೆ ಬಡ್ಡಿದರ ನೀಡುತ್ತದೆ. ನೀವು ತಿಂಗಳಿಗೆ 2 ಸಾವಿರ ರೂಪಾಯಿಯಂತೆ ಒಂದು ವರ್ಷಕ್ಕೆ 24 ಸಾವಿರ ರೂಪಾಯಿ, 20 ವರ್ಷಕ್ಕೆ 4.80 ಲಕ್ಷ ರೂಪಾಯಿ ಉಳಿತಾಯ ಮಾಡಬಹುದು. ಕೆಲವು ಸಾವಿರ ಬಡ್ಡಿದರ ದೊರಕಬಹುದು. ಒಟ್ಟಾರೆ ನಿಮ್ಮ ಮೊತ್ತ ಐದು ಲಕ್ಷ ರೂಪಾಯಿಗಿಂತ ತುಸು ಹೆಚ್ಚಬಹುದು. ಆರ್‌ಡಿಯ ಕಥೆಯೂ ಅಷ್ಟೇ. ತಿಂಗಳಿಗೆ ಐದು ಸಾವಿರ ರೂಪಾಯಿಯಂತೆ ಇಟ್ಟಾಗ ಒಂದು ವರ್ಷ ಕಳೆದಾಗ 63 ಸಾವಿರ ರೂಪಾಯಿ ದೊರಕಿತ್ತು. ಅಂದರೆ ಸುಮಾರು 3 ಸಾವಿರ ರೂಪಾಯಿ ಹೆಚ್ಚು ಮೊತ್ತ ದೊರಕಿತ್ತು. 20 ವರ್ಷದ ವೇಳೆಗೆ ಒಂದು 60 ಸಾವಿರ ಹೆಚ್ಚು ದೊರಕಬಹುದು. ಎಷ್ಟೇ ಅಧಿಕವಾದರೂ ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ಬಡ್ಡಿ ಮೊತ್ತ ದೊರಕುವುದು ಕಷ್ಟ. ಪಿಪಿಎಫ್ ಕೂಡ ಈ ರೀತಿ ಸಿಸ್ಟಮೆಟಿಕ್ ಹೂಡಿಕೆಗೆ ಸೂಕ್ತವಾಗಿದೆ.
ಸ್ವಲ್ಪ ಹೆಚ್ಚು ರಿಸ್ಕ್ ಇರುವಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಹಣ ದೊರಕಬಹುದು. ಇದೇ ಕಾರಣಕ್ಕೆ ಮ್ಯೂಚುಯಲ್ ಫಂಡ್‌ಗಳಲ್ಲಿ ಸಿಪ್ ಹೂಡಿಕೆ ಮಾಡಲು ಬಹುತೇಕರು ಬಯಸುತ್ತಾರೆ.
ಏಕೆ ಸಿಪ್ ಹೂಡಿಕೆ ಬೆಸ್ಟ್?
ಪ್ರತಿತಿಂಗಳು ಇಂತಿಷ್ಟು ಮೊತ್ತವನ್ನು ಉಳಿತಾಯಕ್ಕಾಗಿ ಇಡುವುದು ನಿಜಕ್ಕೂ ಸೂಕ್ತವಾದ ಯೋಜನೆಯಾಗಿದೆ. ಇದರಿಂದ ದೀರ್ಘಕಾಲದಲ್ಲಿ ದೊಡ್ಡ ಮೊತ್ತ ಉಳಿತಾಯವಾಗುತ್ತದೆ. ಸಿಪ್ ಉಳಿತಾಯದಲ್ಲಿ ರಿಟರ್ನ್ ಹೆಚ್ಚಿರುತ್ತದೆ. ನಮ್ಮಲ್ಲಿ ಎಷ್ಟು ಹಣವಿದೆಯೋ ಅದಕ್ಕೆ ತಕ್ಕಂತೆ ಸಿಪ್ ಹೂಡಿಕೆ ಪ್ಲಾನ್ ಮಾಡಬಹುದು.
ಪ್ರತಿತಿಂಗಳು 2 ಸಾವಿರ ಹೂಡಿಕೆ ಮಾಡಿದರೆ ಎಷ್ಟು ಲಾಭ ದೊರಕುತ್ತದೆ?
ಆನ್‌ಲೈನ್‌ನಲ್ಲಿ ನಿಮ್ಮ ಹೂಡಿಕೆಯ ಲೆಕ್ಕಾಚಾರ ಮಾಡಲು ಹಲವು ಕ್ಯಾಲ್ಕ್ಯುಲೇಟರ್ ದೊರಕುತ್ತದೆ. ಸಿಪ್‌ಕ್ಯಾಲ್ಕ್ಯುಲೇಟರ್.ಇನ್‌ನಲ್ಲಿ ಪರಿಶೀಲಿಸಿದಾಗ ಈ ಮುಂದಿನ ಫಲಿತಾಂಶ ದೊರಕಿದೆ.
- ಪ್ರತಿತಿಂಗಳು 2 ಸಾವಿರ ರೂಪಾಯಿ ಹೂಡಿಕೆ, ವರ್ಷದಲ್ಲಿ ದೊರಕುವ ರಿಟರ್ನ್ ಶೇಕಡ 10 ಎಂದಾದರೆ 1531394 (15.3 ಲಕ್ಷ) ರೂಪಾಯಿ ದೊರಕುತ್ತದೆ.
- ಎಲ್ಲಾದರೂ ಹೆಚ್ಚು ರಿಸ್ಕ್ ಮತ್ತು ಅಧಿಕ ಲಾಭ ಇರುವಲ್ಲಿ ಹೂಡಿಕೆ ಮಾಡಿದರೆ, ನಿಮಗೆ ವರ್ಷಕ್ಕೆ ಶೇಕಡ 20 ರಿಟರ್ನ್ ದೊರಕಿದರೆ ಈ ಮೊತ್ತ 6322959 (63 ಲಕ್ಷ) ರೂಪಾಯಿ ಆಗುತ್ತದೆ.
- ಶೇಕಡ 15 ರಿಟರ್ನ್ ದೊರಕುತ್ತದೆ ಎಂದು ಲೆಕ್ಕಹಾಕಿದರೆ 3031910 ಮೊತ್ತ ಆಗುತ್ತದೆ.
- ಎಲ್ಲಾದರೂ ಎಫ್‌ಡಿ ಅಥವಾ ಆರ್‌ಡಿಯ ಸರಾಸರಿ ಶೇಕಡ 6 ರಿಟರ್ನ್ ದೊರಕುತ್ತದೆ ಎಂದು ಲೆಕ್ಕಹಾಕಿದರೆ 9.3 ಲಕ್ಷ ರೂಪಾಯಿ ಆಗಬಹುದು.
ಇಲ್ಲಿ ನೀಡಿರುವುದು ಕೇವಲ ಮಾಹಿತಿಗಾಗಿ. ಆನ್‌ಲೈನ್ ಸಿಪ್ ಕ್ಯಾಲ್ಕ್ಯುಲೇಟರ್‌ಗಳನ್ನು ಬಳಸಿ ನೀವು ಇನ್ನಷ್ಟು ಸ್ಪಷ್ಟವಾಗಿ ಲೆಕ್ಕಚಾರ ಮಾಡಲು ಪ್ರಯತ್ನಿಸಿ. ಇದರಿಂದ ನಿಮಗೆ ಸರಿಯಾದ ಐಡಿಯಾ ದೊರಕುತ್ತದೆ.
ಪ್ರತಿತಿಂಗಳಿಗೆ ಇಂತಿಷ್ಟು ಹಣ ಹೂಡಿಕೆ ಮಾಡುವುದು ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿದೆ. ನಾವು ನಿರ್ದಿಷ್ಟವಾಗಿ ಇಂತಿಷ್ಟು ಹೂಡಿಕೆ ಮಾಡಿದರೆ ಕೊನೆಗೊಂದು ದಿನ ದೊಡ್ಡಮೊತ್ತವಾಗಿ ನಮ್ಮ ಕೈ ಸೇರುತ್ತದೆ. ಈ ರೀತಿ ಹೂಡಿಕೆ ಮಾಡದೆ ಇದ್ದರೆ ಬೇರ್ಯಾವುದೋ ರೀತಿಯಲ್ಲಿ ಆ ಹಣ ನಮ್ಮ ಕೈಯಲ್ಲಿ ಖರ್ಚಾಗಿ ಹೋಗುತ್ತದೆ.