Personal Finance: ಆರ್‌ಡಿ v/s ಸಿಪ್‌ ಎರಡರ ನಡುವಿನ ವ್ಯತ್ಯಾಸವೇನು, ಯಾವುದು ಉತ್ತಮ ಆಯ್ಕೆ?
ಕನ್ನಡ ಸುದ್ದಿ  /  ಜೀವನಶೈಲಿ  /  Personal Finance: ಆರ್‌ಡಿ V/s ಸಿಪ್‌ ಎರಡರ ನಡುವಿನ ವ್ಯತ್ಯಾಸವೇನು, ಯಾವುದು ಉತ್ತಮ ಆಯ್ಕೆ?

Personal Finance: ಆರ್‌ಡಿ v/s ಸಿಪ್‌ ಎರಡರ ನಡುವಿನ ವ್ಯತ್ಯಾಸವೇನು, ಯಾವುದು ಉತ್ತಮ ಆಯ್ಕೆ?

Personal Finance: ನೀವು ಸಿಪ್‌ನಲ್ಲಿ ಹೂಡಿಕೆ ಮಾಡಿದರೆ ತಿಂಗಳಿಗೆ 2 ಸಾವಿರ ಮೀಸಲಿಡಬೇಕು. ಈ ಹಣವನ್ನು ಐದು ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಮೆಚ್ಯೂರಿಟಿ ನಂತರ ನಿಮಗೆ ವಾರ್ಷಿಕವಾಗಿ ಶೇ 12ರಷ್ಟು ಬಡ್ಡಿಯ ಪ್ರಕಾರ 1,64,972 ಮೊತ್ತ ದೊರೆಯಲಿದೆ.

ಆರ್‌ಡಿ ಹಾಗೂ ಸಿಪ್‌ ನಡುವಿನ ವ್ಯತ್ಯಾಸ
ಆರ್‌ಡಿ ಹಾಗೂ ಸಿಪ್‌ ನಡುವಿನ ವ್ಯತ್ಯಾಸ (PC: unsplash)

Personal Finance: ಭವಿಷ್ಯಕ್ಕೆ ಹಣ ಉಳಿತಾಯ ಮಾಡುವುದು ಎಲ್ಲರಿಗೂ ಬಹಳ ಅವಶ್ಯಕತೆಯಾಗಿದೆ. ಬಂದಿದ್ದನ್ನು ಹಾಗೇ ಖರ್ಚು ಮಾಡುತ್ತಾ ಹೋದರೆ ಕಷ್ಟದ ಸಮಯದಲ್ಲಿ ಯಾರೂ ಸಹಾಯಕ್ಕೆ ಬರುವುದಿಲ್ಲ. ಆದ್ದರಿಂದ ಪ್ರತಿ ತಿಂಗಳು ನೀವು ಸಂಪಾದಿಸುವ ಮೊತ್ತದಲ್ಲಿ ಇಂತಿಷ್ಟು ಹಣವನ್ನು ಉಳಿತಾಯ ಮಾಡಿ. ಈಗಂತೂ ಅನೇಕ ಉಳಿತಾಯ ಯೋಜನೆಗಳಿವೆ. ಜನರು ತಮಗೆ ನಂಬಲು ಅರ್ಹವಾದ ಕಡೆ ತಮ್ಮ ಹಣವನ್ನು ಹೂಡಿಕೆ ಮಾಡುತ್ತಾರೆ.

ಸಾಮಾನ್ಯವಾಗಿ ಹೆಚ್ಚಿನ ಜನರು ಆರ್‌ಡಿ ಮಾಡಲು ಬಯಸುತ್ತಾರೆ. ಇದರ ಜೊತೆಗೆ ವ್ಯವಸ್ಥಿತ ಹೂಡಿಕೆ ಯೋಜನೆ (Systematic Investment Plan) ಕೂಡಾ ಇತ್ತೀಚಿನ ದಿನಗಳಲ್ಲಿ ಹೆಸರುವಾಸಿಯಾಗಿದೆ. ಆದರೆ ಎರಡರಲ್ಲಿ ಯಾವುದು ಬೆಸ್ಟ್‌ ಅನ್ನೋದು ಬಹಳ ಜನರಿಗೆ ಗೊಂದಲವಿದೆ.

ಆರ್‌ಡಿ v/s ಸಿಪ್‌ ನಡುವಿನ ಸಾಮ್ಯತೆ

  • ಎರಡೂ ಹೂಡಿಕೆಗಳಲ್ಲಿ ಮಾಸಿಕ ಅಥವಾ ತ್ರೈಮಾಸಿಕವಾಗಿ ಹಣ ಪಾವತಿಸಲು ಅವಕಾಶವಿದೆ.
  • ಹೂಡಿಕೆದಾರರಿಗೆ ಒಂದು ನಿರ್ದಿಷ್ಟ ಅವಧಿಗೆ ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಮತ್ತು ಕಾರ್ಪಸ್ ನಿರ್ಮಿಸಲು ಅನುವು ಮಾಡಿಕೊಡಲಾಗುತ್ತದೆ.
  • ಎರಡೂ ಯೋಜನೆಗಳನ್ನು ಯಾವುದೇ ಸಮಯದಲ್ಲಿ ನಿಲ್ಲಿಸಬಹುದು. ಹೂಡಿಕೆದಾರರು ಹಣವನ್ನು ಹಿಂಪಡೆಯಬಹುದು, ಆದರೆ ಅದಕ್ಕೆ ನಿಗದಿತ ಶುಲ್ಕ ಕಡಿತವಾಗುತ್ತದೆ.
  • ಹೂಡಿಕೆಗಳು ನಿಯಮಿತವಾಗಿ ಹಣ ಕಟ್ಟದಿದ್ದರೆ ಯೋಜನೆಗಳನ್ನು ಅರ್ಧದಲ್ಲೇ ನಿರ್ಬಂಧಿಸಬಹುದು, ಹೂಡಿಕೆದಾರರು ಅವುಗಳನ್ನು ಮತ್ತೆ ಪ್ರಾರಂಭಿಸಬೇಕಾಗಬಹುದು.

ಆರ್‌ಡಿ

ಪೋಸ್ಟ್‌ ಆಫೀಸಿನಲ್ಲಿ ಮಾತ್ರವಲ್ಲ ನೀವು ಬ್ಯಾಂಕಿನಲ್ಲಿ ಕೂಡಾ ಆರ್‌ಡಿ ಖಾತೆ ತೆರೆಯಬಹುದು. ಪೋಸ್ಟ್‌ ಆಫೀಸ್‌ ಆರ್‌ಡಿ ಸ್ಕೀಮ್‌ನಲ್ಲಿ ನೀವು ಪ್ರತಿ ತಿಂಗಳು 5 ಸಾವಿರ ಕಟ್ಟಿದರೆ, 5 ವರ್ಷಗಳಿಗೆ 3.52 ಲಕ್ಷ ಆಗಲಿದೆ. ಅಂದರೆ ಹೆಚ್ಚುರಿಯಾಗಿ ಅಸಲಿ ಮೊತ್ತಕ್ಕಿಂತ 52 ಸಾವಿರ ದೊರೆಯಲಿದೆ. ಇದನ್ನು ಮುಂದಿನ 5 ವರ್ಷ ಅವಧಿಗೆ ವಿಸ್ತರಿಸಿದರೆ ಕೊನೆಯಲ್ಲಿ ನಿಮಗೆ 8.32 ಲಕ್ಷ ರೂಪಾಯಿ ದೊರೆಯಲಿದೆ. ಬ್ಯಾಂಕಿನಲ್ಲಿ ಆರ್‌ಡಿ ಖಾತೆ ಒಂದೊಂದು ಬ್ಯಾಂಕಿಗೂ ಒಂದೊಂದು ಬಡ್ಡಿದರ ನಿಗದಿ ಮಾಡಲಾಗಿದೆ.

ಸಿಪ್‌

ನೀವು ಸಿಪ್‌ನಲ್ಲಿ ಹೂಡಿಕೆ ಮಾಡಿದರೆ ತಿಂಗಳಿಗೆ 2 ಸಾವಿರ ಮೀಸಲಿಡಬೇಕು. ಈ ಹಣವನ್ನು ಐದು ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಮೆಚ್ಯೂರಿಟಿ ನಂತರ ನಿಮಗೆ ವಾರ್ಷಿಕವಾಗಿ ಶೇ 12ರಷ್ಟು ಬಡ್ಡಿಯ ಪ್ರಕಾರ 1,64,972 ಮೊತ್ತ ದೊರೆಯಲಿದೆ. ನೀವು ಹೂಡಿಕೆ ಮಾಡಿದ ಹಣಕ್ಕಿಂದ 45 ಸಾವಿರದವರೆಗೆ ಹೆಚ್ಚು ಗಳಿಸಬಹುದು. ಆದರೆ ಇದರಲ್ಲಿ ಬಡ್ಡಿದರ ಒಂದೇ ರೀತಿ ಇರುವುದಿಲ್ಲ. ಶೇ 12 ಕ್ಕಿಂತ ಕಡಿಮೆ ದೊರೆಯಬಹುದು, ಹೆಚ್ಚಾಗಿಯೂ ದೊರೆಯಬಹುದು. ಷೇರು ಮಾರುಕಟ್ಟೆಯ ಏರಿಳಿತದ ಪ್ರಕಾರ ನಿಮ್ಮ ದುಡ್ಡಿಗೆ ಬಡ್ಡಿದರ ಅನ್ವಯವಾಗುತ್ತದೆ. ನಿಮಗೆ ಷೇರು ಮಾರುಕಟ್ಟೆಯಲ್ಲಿ ಸಂಪೂರ್ಣ ತಿಳಿದಿದ್ದಲ್ಲಿ, ನೀವು ರಿಸ್ಕ್‌ ತೆಗೆದುಕೊಳ್ಳಲು ಬಯಸಿದಲ್ಲಿ ನೀವು ಸಿಪ್‌ ಆಯ್ಕೆ ಮಾಡಿಕೊಳ್ಳಬಹುದು.

ಒಟ್ಟಿನಲ್ಲಿ ಆರ್‌ಡಿ ಆಗಲೀ, ಸಿಪ್‌ ಆಗಲೀ ಎಚ್ಚರಿಕೆಯಿಂದ ಹೂಡಿಕೆ ಮಾಡಿ.

Whats_app_banner