Personality Test: ನಮಗೆ ಯಾವ ವೃತ್ತಿ ಹೊಂದುತ್ತೆ, ನಮ್ಮ ವ್ಯಕ್ತಿತ್ವ ಎಂಥದ್ದು ತಿಳಿಬೇಕು ಅಂದ್ರೆ ಹಣೆಯ ಮೇಲಿನ ಗೆರೆಗಳನ್ನು ಪರೀಕ್ಷಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ನಮಗೆ ಯಾವ ವೃತ್ತಿ ಹೊಂದುತ್ತೆ, ನಮ್ಮ ವ್ಯಕ್ತಿತ್ವ ಎಂಥದ್ದು ತಿಳಿಬೇಕು ಅಂದ್ರೆ ಹಣೆಯ ಮೇಲಿನ ಗೆರೆಗಳನ್ನು ಪರೀಕ್ಷಿಸಿ

Personality Test: ನಮಗೆ ಯಾವ ವೃತ್ತಿ ಹೊಂದುತ್ತೆ, ನಮ್ಮ ವ್ಯಕ್ತಿತ್ವ ಎಂಥದ್ದು ತಿಳಿಬೇಕು ಅಂದ್ರೆ ಹಣೆಯ ಮೇಲಿನ ಗೆರೆಗಳನ್ನು ಪರೀಕ್ಷಿಸಿ

ನೀವು ನಿಮಗೆ ಹೊಂದುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೀರೋ ಇಲ್ಲವೋ ಎಂಬುದನ್ನು ತಿಳಿಯಲು ಇಲ್ಲೊಂದು ಪರ್ಸನಾಲಿಟಿ ಟೆಸ್ಟ್‌ ಇದೆ. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೆ. ಹುಬ್ಬುಗಂಟಿಕ್ಕಿ ಹಣೆಯ ಮೇಲೆ ಎಷ್ಟು ಲಂಬ ರೇಖೆಗಳು ಮೂಡಿವೆ ನೋಡಿ, ಈ ರೇಖೆಗಳು ನಿಮಗೆ ಎಂತಹ ವೃತ್ತಿ ಸೂಕ್ತ ಎಂಬುದನ್ನು ಹೇಳುತ್ತದೆ.

ನಮಗೆ ಯಾವ ವೃತ್ತಿ ಹೊಂದುತ್ತೆ, ನಮ್ಮ ವ್ಯಕ್ತಿತ್ವ ಎಂಥದ್ದು ತಿಳಿಬೇಕು ಅಂದ್ರೆ ಹಣೆಯ ಮೇಲಿನ ಗೆರೆಗಳನ್ನು ಪರೀಕ್ಷಿಸಿ
ನಮಗೆ ಯಾವ ವೃತ್ತಿ ಹೊಂದುತ್ತೆ, ನಮ್ಮ ವ್ಯಕ್ತಿತ್ವ ಎಂಥದ್ದು ತಿಳಿಬೇಕು ಅಂದ್ರೆ ಹಣೆಯ ಮೇಲಿನ ಗೆರೆಗಳನ್ನು ಪರೀಕ್ಷಿಸಿ

ಪರ್ಸನಾಲಿಟಿ ಟೆಸ್ಟ್‌ ಮೂಲಕ ನಾವು ಯಾರು, ನಮಗೆ ಏನು ಹೊಂದುತ್ತದೆ, ನಮ್ಮ ವ್ಯಕ್ತಿತ್ವ ಎಂಥದ್ದು ಎಂಬುದೆಲ್ಲವನ್ನೂ ತಿಳಿಯಬಹುದು. ದೇಹ ಪ್ರತಿ ಭಾಗವೂ ನಮ್ಮ ವ್ಯಕ್ತಿತ್ವವನ್ನು ಸೂಚಿಸುವ ಕನ್ನಡಿಯಾಗಿರುತ್ತದೆ ಎನ್ನುವ ವ್ಯಕ್ತಿತ್ವ ಪರೀಕ್ಷೆ. ಇದರಲ್ಲಿ ಮುಖ ಕೂಡ ಒಂದು. ಮುಖದಲ್ಲಿನ ಅಂಗಾಂಗಗಳು ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತವೆ. ಮುಖವು ನಮ್ಮ ಬಗೆಗಿನ ಹಲವು ವಿಚಾರಗಳನ್ನು ಹೊರ ಹಾಕುತ್ತದೆ. ಮೆಟೊಪೊಸ್ಕೋಪಿ ಎನ್ನುವುದು ಹಣೆಯ ಮೇಲೆ ಮೂಡುವ ರೇಖೆಗಳಿಂದ ವ್ಯಕ್ತಿಯ ಗುಣಲಕ್ಷಣಗಳು, ಅವರ ವ್ಯಕ್ತಿತ್ವ, ಪಾತ್ರ ಹಾಗೂ ಭವಿಷ್ಯವನ್ನು ಹೇಳುವ ಒಂದು ಕಲೆ.

ಮೆಟಮಾರ್ಫೊ ಸ್ಕೋಪಿಸ್ಟ್‌ಗಳ ಪ್ರಕಾರ, ಮನುಷ್ಯನ ಮನಸ್ಸಿನ ಆಂತರಿಕ ಅಂಶಗಳನ್ನು ಅವರ ಹಣೆಯ ಮೇಲೆ ಮೂಡಿದ ರೇಖೆಗಳಿಂದ ಕಂಡು ಹಿಡಿಯಬಹುದು. ಹಣೆಯ ಮೇಲೆ ಮೂಡುವ ರೇಖೆಗಳು ಆತ್ಮದ ನಕ್ಷೆಯಂತೆ ಎಂದು ಅವರು ಹೇಳುತ್ತಾರೆ.

ಇಂದಿನ ಲೇಖನದಲ್ಲಿ ಹಣೆಯ ಮೇಲೆ ಮೂಡುವ ವಿವಿಧ ಬಗೆಯ ರೇಖೆಗಳು ತಮ್ಮ ವ್ಯಕ್ತಿತ್ವವನ್ನು ಹೇಗೆ ವಿವರಿಸುತ್ತವೆ ಎಂಬುದನ್ನು ತಿಳಿಯೋಣ.

ಒಂದೇ ಒಂದು ಲಂಬ ರೇಖೆ

ಹುಬ್ಬುಗಂಟಿಕ್ಕಿದಾಗ ಹಣೆಯ ಮೇಲೆ ಒಂದೇ ರೇಖೆ ಮೂಡಿದರೆ ನೀವು ಅಕ್ರಮಣಕಾರಿ ಮನೋಭಾವದವರು ಎಂದರ್ಥ. ದೃಢನಿಶ್ಚಯ, ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನೋಭಾವದವರು ನೀವಾಗಿರುತ್ತೀರಿ. ಗುರಿ ಮೇಲೆ ಕೇಂದ್ರೀಕರಿಸುವ ಗುಣ ಹಾಗೂ ನಿಮ್ಮ ಕೆಲಸದ ನೀತಿಯು ನಿಮ್ಮ ಘನತೆ ಹೆಚ್ಚಲು ಕಾರಣವಾಗುತ್ತದೆ. ನಿಮ್ಮನ್ನು ಸಾಮರ್ಥ್ಯ ಹೊಂದಿದವರು ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ನಿಮ್ಮನ್ನು ಸ್ವಾರ್ಥಿ, ಅನ್‌ ರೊಮ್ಯಾಂಟಿಕ್‌ ಎಂದು ಕೂಡ ಗುರುತಿಸಬಹುದು. ಅತಿಯಾದ ಮಹತ್ವಾಕಾಂಕ್ಷೆಯೊಂದಿಗೆ ಸಾಕಷ್ಟು ಅಹಂಕಾರವು ಜೊತೆಯಾಗಿ ಇರಬಹುದು.

ನಿಮಗೆ ಸ್ನೇಹಿತರಿಗಿಂತ ವೈರಿಗಳೇ ಜಾಸ್ತಿ. ನೀವು ಇತರರ ಆಧ್ಯತೆಗಳಿಗಿಂತ ನಿಮ್ಮ ಆದ್ಯತೆಗೆ ಹೆಚ್ಚು ಗಮನ ನೀಡುತ್ತೀರಿ.

ಇನ್ನು ಹಣೆಯ ಮೇಲೆ ಒಂದೇ ರೇಖೆ ಮೂಡುವ ಹೆಣ್ಣುಮಕ್ಕಳು ಕೂಡ ಉಗ್ರ ಸ್ವಭಾವದವರು, ಇವರು ಪುರುಷರ ಗುಣವನ್ನು ಹೊಂದಿರುತ್ತಾರೆ.

ಒಂದೇ ಲಂಬವಾದ ಹಣೆಯ ರೇಖೆಯನ್ನು ಹೊಂದಿರುವವರಿಗೆ ಈ ಕೆಳಗಿನ ಕ್ಷೇತ್ರಗಳು ಹೆಚ್ಚು ಹೊಂದುತ್ತವೆ: ವ್ಯಾಪಾರ, ಕಾನೂನು, ರಾಜಕೀಯ, ವೈದ್ಯಕೀಯ, ಶಿಕ್ಷಣ, ಎಂಜಿನಿಯರಿಂಗ್‌, ವಿಜ್ಞಾನ ಮತ್ತು ತಂತ್ರಜ್ಞಾನ.

ಎರಡು ಲಂಬ ರೇಖೆಗಳು

ನಿಮ್ಮ ಹಣೆಯ ಮೇಲೆ ಎರಡು ಲಂಬ ರೇಖೆಗಳು ಮೂಡಿದರೆ, ನೀವು ವಿಶ್ಲೇಷಣಾತ್ಮಕ, ಚಿಂತನಶೀಲ ಹಾಗೂ ಬುದ್ಧಿವಂತರು ಎಂದು ಕರೆಸಿಕೊಳ್ಳುವ ವ್ಯಕ್ತಿತ್ವದವರು. ನಿಮ್ಮನ್ನು ಮಹತ್ವಕಾಂಕ್ಷಿ, ಶ್ರಮ ಜೀವಿ ಎಂದೂ ಪರಿಗಣಿಸಬಹುದು. ಕೆಲವೊಮ್ಮೆ ನೀವು ಇತರರಿಗೆ ಉದ್ವಿಗ್ನ ಮನೋಭಾವದವರು, ಸದಾ ಚಿಂತೆಯಲ್ಲೇ ಮುಳುಗುವವರು ಎಂದೂ ಭಾವಿಸಬಹುದು. ನೀವು ಸವಾಲನ್ನು ಎದುರಿಸಲು ಇಷ್ಟಪಡುವ ವ್ಯಕ್ತಿತ್ವದವರು. ಸಮಸ್ಯೆಗಳನ್ನು ಸುಲಭವಾಗಿ ಎದುರಿಸುವ ಕಲೆ ನಿಮ್ಮಲ್ಲಿದೆ. ನಿಮ್ಮನ್ನು ಉತ್ತಮಗೊಳಿಸಲಿ ನಿರಂತರವಾಗಿ ಶ್ರಮಿಸುತ್ತೀರಿ. ನೀವು ಕುಟುಂಬ ಹಾಗೂ ಸ್ನೇಹಿತರಿಗಾಗಿ ಸದಾ ಮಿಡಿಯುತ್ತೀರಿ. ನೀವು ಆಗಾಗ ಜನರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಸಹಾನುಭೂತಿ ಹೊಂದುವ ಮನೋಭಾವದವರು. ನಿಮ್ಮಲ್ಲೂ ಅಹಂಕಾರ ಕಡಿಮೆ ಇಲ್ಲ. ನೀವು ಪಾಲುದಾರಿಕೆ ವ್ಯವಹಾರದಲ್ಲಿ ಸಾಕಷ್ಟು ಎಚ್ಚರ ವಹಿಸಬೇಕು. ಹಣೆ ಮೇಲೆ ಎರಡು ಗೆರೆ ಹೊಂದಿರುವವರು ರಂಗಭೂಮಿ, ಸಂಗೀತ, ಕಲೆ, ಬರವಣಿಗೆ, ವಿಜ್ಞಾನ, ಕಾನೂನು, ಇಂಜಿನಿಯರಿಂಗ್, ವಾಸ್ತುಶಿಲ್ಪ, ಉದ್ಯಮಶೀಲತೆ, ಲೆಕ್ಕಪತ್ರ ನಿರ್ವಹಣೆ ಈ ರೀತಿ ವೃತ್ತಿಗೆ ಹೆಚ್ಚು ಸೂಕ್ತ ಎನ್ನಿಸುತ್ತಾರೆ.

ಮೂರು ಮತ್ತು ಮೂರಕ್ಕಿಂತ ಹೆಚ್ಚು ಗೆರೆ ಇರುವುದು

ಹಣೆಯ ಮೇಲೆ ಮೂರು ಲಂಬ ರೇಖೆಗಳನ್ನು ಹೊಂದಿದ್ದರೆ, ನಿಮ್ಮ ವ್ಯಕ್ತಿತ್ವದ ಗುಣದ ಆಧಾರದ ಮೇಲೆ ನೀವು ಬುದ್ಧಿವಂತ, ಅನುಭವಿ ಎಂದು ಜನರು ಗುರುತಿಸುತ್ತಾರೆ. ಈ ರೀತಿ ಗೆರೆ ಹೊಂದಿರುವವರು ಹಲವಾರು ಕೋನಗಳಿಂದ ವಿಷಯಗಳನ್ನು ನೋಡಲು ಸಮರ್ಥರಾಗಿದ್ದಾರೆ ಮತ್ತು ಜೀವನದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುತ್ತಾರೆ. ಇವರು ಬುದ್ಧಿವಂತರು ಮತ್ತು ಚಲನಶೀಲರಾಗಿರುತ್ತಾರೆ. ನೀವು ಇತರರ ಬಗ್ಗೆ ಹಾಗೂ ನಿಮ್ಮ ನಿರ್ಧಾರ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತೀರಿ. ಇವರಲ್ಲಿ ಹುಟ್ಟಿನಿಂದಲೇ ನಾಯಕತ್ವ ಗುಣ ಬೆಳೆದಿರುತ್ತದೆ. ಇವರು ಜನರನ್ನು ಪ್ರೇರೇಪಿಸುತ್ತಾರೆ. ಇತರರ ಜೀವನ ಸುಧಾರಿಸುವ ಹಾಗೂ ಸಮಾಜದ ಮೇಲೆ ಉತ್ತಮ ಪ್ರಭಾವ ಬೀರಲು ಅನುವು ಮಾಡಿಕೊಡುವ ಕೆಲಸಗಳು ನಿಮ್ಮನ್ನು ಆಕರ್ಷಿಸುತ್ತವೆ. ನೀವೂ ಕೆಲವೊಮ್ಮೆ ಕುಖ್ಯಾತಿಗೂ ಪಾತ್ರರಾಗಬಹುದು. ಸಲಹೆಗಾರ, ಸಾರ್ವಜನಿಕ ಸಂಪರ್ಕ ತಜ್ಞರು, ಮಾಧ್ಯಮ ಸಲಹೆಗಾರ, ಸಾಮಾಜಿಕ ಕಾರ್ಯಕರ್ತ, ಗಾಯಕ, ನಟ, ವೈದ್ಯ, ತತ್ವಜ್ಞಾನಿ, ಧಾರ್ಮಿಕ ಮುಖಂಡ ಇಂತಹ ವೃತ್ತಿ ನಿಮಗೆ ಹೆಚ್ಚು ಹೊಂದಲಿದೆ.

(ಗಮನಿಸಿ: ಇದು ನಂಬಿಕೆಯನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner