Personality Test: ಹಣೆಯ ಆಕಾರ ನಿಮ್ಮ ರಹಸ್ಯ ವ್ಯಕ್ತಿತ್ವ ಎಂದು ತಿಳಿಸುತ್ತೆ; ಒಮ್ಮೆ ಪರೀಕ್ಷಿಸಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಹಣೆಯ ಆಕಾರ ನಿಮ್ಮ ರಹಸ್ಯ ವ್ಯಕ್ತಿತ್ವ ಎಂದು ತಿಳಿಸುತ್ತೆ; ಒಮ್ಮೆ ಪರೀಕ್ಷಿಸಿ ನೋಡಿ

Personality Test: ಹಣೆಯ ಆಕಾರ ನಿಮ್ಮ ರಹಸ್ಯ ವ್ಯಕ್ತಿತ್ವ ಎಂದು ತಿಳಿಸುತ್ತೆ; ಒಮ್ಮೆ ಪರೀಕ್ಷಿಸಿ ನೋಡಿ

Forehead Personality Test: ಅಗಲವಾದ ಹಣೆ ಅಥವಾ ಉದ್ದದ ಹಣೆ ನಿಮ್ಮದಾಗಿದೆಯಾ? ನಿಮ್ಮ ಹಣೆಯ ಆಕಾರದ ಮೂಲಕವೂ ನಿಮ್ಮ ವ್ಯಕ್ತಿತ್ವವನ್ನು ತಿಳಿಯಬಹುದು. ಅದರಲ್ಲೂ ರಹಸ್ಯ ವ್ಯಕ್ತಿತ್ವವನ್ನು ಹಣೆಯ ಆಕಾರ ಹೇಳುತ್ತೆ.

ಹಣೆಯ ಆಕಾರದ ಮೂಲಕ ನಿಮ್ಮ ರಹಸ್ಯ ವ್ಯಕ್ತಿತ್ವವನ್ನು ತಿಳಿಯಿರಿ.
ಹಣೆಯ ಆಕಾರದ ಮೂಲಕ ನಿಮ್ಮ ರಹಸ್ಯ ವ್ಯಕ್ತಿತ್ವವನ್ನು ತಿಳಿಯಿರಿ.

ನಿಮ್ಮ ಮುಖ ನಿಮ್ಮ ಬಗ್ಗೆ ಸಾವಿರ ಕಥೆಗಳನ್ನು ಹೇಳಬಹುದು. ಅರಿಸ್ಟಾಟಲ್‌ನ ಕಾಲದಿಂದಲೂ ಫೇಸ್ ರೀಡಿಂಗ್ ಚಾಲ್ತಿಯಲ್ಲಿದೆ. ಭಾರತೀಯ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಮುಖವನ್ನ ಓದುವ ಕಲೆ ಇಂದಿಗೂ ಚಾಲ್ತಿಯಲ್ಲಿದೆ. ನಾನು ಅವರ ಮುಖವನ್ನು ನೋಡಿದ್ರೆ ಸಾಕು ಎಲ್ಲವನ್ನೂ ಹೇಳಬಲ್ಲೇ ಅಂತ ಹೇಳಿಕೊಂಡು ತಿರಾಗಾಡುವವರು ಇದ್ದಾರೆ. ಪ್ರಕಾಶಮಾನವಾದ ಹಣೆ ನಿಮ್ಮದಾಗಿದ್ದರೆ ನೀವು ತುಂಬಾ ಅದೃಷ್ಟವಂತರು. ಇದು ಖ್ಯಾತಿ, ಶಕ್ತಿ ಹಾಗೂ ಆರೋಗ್ಯವನ್ನು ಸೂಚಿಸುತ್ತದೆ. ಹಣೆಯ ಆಕಾರ ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ಅನ್ನೋದನ್ನು ಎಂದಾದರೂ ಯೋಚನೆ ಮಾಡಿದ್ದಾರಾ? ಖಂಡಿತ ಯೋಚನೆ ಮಾಡಿರುವುದಿಲ್ಲ. ಹಣೆಯ ಯಾವ ಆಕಾರದವರ ವ್ಯಕ್ತಿತ್ವ (Personality Test) ಹೇಗೆ ಇರುತ್ತದೆ ಅನ್ನೋದು ಇಲ್ಲಿ ನೀಡಲಾಗಿದೆ.

1. ವಿಶಾಲವಾದ ಹಣೆಯ ಆಕಾರ

ಫೋಟೊದಲ್ಲಿರುವ ನಂಬರ್ 1 ರ ಮುಖದಲ್ಲಿ ಹಣೆ ತುಂಬಾ ವಿಶಾಲವಾಗಿದೆ. ಈ ರೀತಿ ಹಣೆಯನ್ನು ಹೊಂದಿರುವವರು ಎಲ್ಲ ಜನರಿಗಿಂತ ಒಂದು ಹೆಜ್ಜೆ ಮುಂದೆ ಇರಲು ಬಯಸುತ್ತಾರೆ. ಶಾಂತ ಹಾಗೂ ಪ್ರಶಾಂತವಾಗಿರುತ್ತಾರೆ. ಹೀಗೆ ಹಣೆ ಹೆಣೆ ಇರುವವರು ನಡೆಯುವುದನ್ನು ಇಷ್ಟ ಪಡುತ್ತಾರೆ. ಇವರ ಬುದ್ಧಿವಂತಿಕೆ, ಅರ್ಥಗರ್ಭಿತ ಸ್ವಾಭಾವ ಜನರು ನಂಬುವಂತೆ ಮಾಡುತ್ತದೆ. ಇಂಟಲಿಜೆನ್ಸ್ ಅಂಶ ಹಾಗೂ ಭಾವನಾತ್ಮಕ ಅಂಶಗಳ ಸಮತೋಲವನ್ನು ಹೊಂದಿರುತ್ತಾರೆ.

2. ಕಿರಿದಾದ ಹಣೆಯ ಆಕಾರ

ಈ ರೀತಿಯ ಹಣೆಯ ಜನರು ವಿವಿಧ ಲಕ್ಷಣಗಳನ್ನು ಹೊಂದಿರುತ್ತಾರೆ. ಜನರ ನಡುವೆ ಇರುವುದಕ್ಕಿಂತ ಏಕಾಂತವನ್ನು ಹೆಚ್ಚು ಇಷ್ಟ ಪಡುತ್ತಾರೆ. ನಕಾರಾತ್ಮಕ ಭಾವನೆಗಳನ್ನು ಸಕರಾತ್ಮಕವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಾರೆ. ಹೆಚ್ಚು ಸಹಾನುಭೂತಿ ಹೊಂದಿರುತ್ತಾರೆ. ಬೇರೆಯವರಿಗೆ ಸಹಾಯ ಮಾಡುವುದನ್ನು ತುಂಬಾ ಇಷ್ಟ ಪಡುತ್ತಾರೆ. ಬಾಲಿವುಡ್ ನಟಿ ಆಲಿಯಾ ಭಟ್ ಹಣೆ ಚಿಕ್ಕದಾಗಿದೆ.

3. ಬಾಗಿದ ಹಣೆಯ ಆಕಾರ

ಬಾಗಿದಂತೆ ಇರುವ ಹಣೆಯ ಆಕಾರವನ್ನು ಹೊಂದಿರುವವರು ವ್ಯಕ್ತಿತ್ವವನ್ನು ನೋಡುವುದಾದರೆ ಇವರು ಸ್ನೇಹಮಯಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಸುಲಭವಾಗಿ ಮಾತನಾಡುವಂತೆ ಇರುತ್ತಾರೆ. ಅತ್ಯಂತ ಬುದ್ಧಿವಂತರು, ಪ್ರೇರೇಪಣೆಯ ಮಾತುಗಳನ್ನು ಹೇಳುವ ಕಲೆಯನ್ನು ಹೊಂದಿರುತ್ತಾರೆ. ಕಾಂತೀಯ ವ್ಯಕ್ತಿವನ್ನು ಹೊಂದಿದ್ದು, ಆಕರ್ಷಿತರಾಗಿರುತ್ತಾರೆ.

4. ಎಂ ಆಕಾರದ ಹಣೆಯ ವ್ಯಕ್ತಿತ್ವ

ಎಂ ಆಕಾರದ ಹಣೆ ಇರುವವರ ವ್ಯಕ್ತಿತ್ವ ತುಂಬಾ ಕಲಾತ್ಮಕ ಹಾಗೂ ವಿಶ್ಲೇಷಣಾತ್ಮಕವಾಗಿರುತ್ತದೆ. ಇವರನ್ನು ಪ್ರಪಂಚದಲ್ಲಿ ಅತ್ಯುತ್ತಮರು ಎಂದು ವಿವರಿಸಬಹುದು. ಗುಂಪುಗಳನ್ನು ಇವರು ಎಂದೂ ಅನುಸರಿಸುವುದಿಲ್ಲ. ಸ್ವಯಂ ಅಭಿವ್ಯಕ್ತಿಗೆ ಅವಕಾಶ ನೀಡುವ ವಿಷಯಗಳನ್ನು ತುಂಬಾ ಆನಂದಿಸುತ್ತಾರೆ.