ಕನ್ನಡ ಸುದ್ದಿ  /  ಜೀವನಶೈಲಿ  /  ವ್ಯಕ್ತಿತ್ವ ಪರೀಕ್ಷೆ: ಯಾವ ಹಕ್ಕಿ ನಿಮ್ಮನ್ನು ಪ್ರತಿನಿಧಿಸುತ್ತೆ? ನಿಮ್ಮ ಗುಣಲಕ್ಷಣಗಳನ್ನ ಹೀಗೂ ತಿಳಿಯಬಹುದು

ವ್ಯಕ್ತಿತ್ವ ಪರೀಕ್ಷೆ: ಯಾವ ಹಕ್ಕಿ ನಿಮ್ಮನ್ನು ಪ್ರತಿನಿಧಿಸುತ್ತೆ? ನಿಮ್ಮ ಗುಣಲಕ್ಷಣಗಳನ್ನ ಹೀಗೂ ತಿಳಿಯಬಹುದು

ಚಿತ್ರದಲ್ಲಿರುವ ಯಾವುದಾದರೂ ಒಂದು ಹಕ್ಕಿಯನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಗುಣಲಕ್ಷಣಗಳು ಏನು ಅನ್ನೋದನ್ನ ತಿಳಿಯಬಹುದು. ಒಮ್ಮೆ ಟ್ರೈ ಮಾಡಿ ನೋಡಿ.

ಹಕ್ಕಿಗಳನ್ನು ಒಂದನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಗುಣಲಕ್ಷಣಗಳನ್ನು ತಿಳಿಯಬಹುದು. ಟ್ರೈ ಮಾಡಿ ನೋಡಿ.
ಹಕ್ಕಿಗಳನ್ನು ಒಂದನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಗುಣಲಕ್ಷಣಗಳನ್ನು ತಿಳಿಯಬಹುದು. ಟ್ರೈ ಮಾಡಿ ನೋಡಿ.

ಇತ್ತೀಚಿನ ದಿನಗಳಲ್ಲಿ ವ್ಯಕ್ತಿತ್ವ ಪರೀಕ್ಷೆ ನಿರೀಕ್ಷೆಗೂ ಮೀರಿ ಜನಪ್ರಿಯವಾಗಿದೆ. ನಿಮ್ಮ ಗುಣಲಕ್ಷಣಗಳ ಬಗ್ಗೆ ಮೌಲ್ಯಯುತವಾಗಿ ತಿಳಿಯಲು ಇಲ್ಲೊಂದು ಅವಕಾಶವಿದೆ. ಹಕ್ಕಿಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕವೂ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಬಹುದು. ಇದು ಅಚ್ಚರಿ ಎನಿಸಿದರೂ ನಿಜ. ಈ ದೃಷ್ಟಿಗೋಚರ ವ್ಯಕ್ತಿತ್ವ ಪರೀಕ್ಷೆಯೊಂದಿಗೆ ಆಂತರಿಕ ಆತ್ಮವನ್ನು ಪರೀಕ್ಷೆ ಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ನಿಮ್ಮ ಕುತೂಹಲವನ್ನು ಹೆಚ್ಚಿಸಲು ಈ ಪೋಟೊದಲ್ಲಿರುವ ಒಂದು ಹಕ್ಕಿಯನ್ನು ಆರಿಸಿ ಆ ಬಳಿಕ ಅದು ನಿಮ್ಮ ಬಗ್ಗೆ ಏನು ಹೇಳುತ್ತದೆ ಅನ್ನೋದನ್ನ ತಿಳಿಯಿರಿ.

ಟ್ರೆಂಡಿಂಗ್​ ಸುದ್ದಿ

ಮನುಷ್ಯ ತನ್ನ ಬಗ್ಗೆ ಸಾಕಷ್ಟು ಕುತೂಹಲಗಳನ್ನು ಹೊಂದಿರುತ್ತಾರೆ. ಬೇರೆಯವರಿಗೆ ಕೈಯನ್ನು ಕೊಟ್ಟ ಶಾಸ್ತ್ರ ಕೇಳುಬಹುದು, ಭವಿಷ್ಯ ನೋಡುವುದು, ಸಂಖ್ಯಾಶಾಸ್ತ್ರ, ಗಿಣಿ ಶಾಸ್ತ್ರ ಹೀಗೆ ನಾನಾ ರೀತಿಯ ಮಾರ್ಗಗಳ ಮೂಲಕ ತಮ್ಮ ಬಗ್ಗೆ ತಿಳಿದುಕೊಳ್ಳಲು ಯತ್ನಿಸುತ್ತಾನೆ. ಆದರೆ ಪಕ್ಷಿಯೊಂದನ್ನು ಆಯ್ಕೆ ಮಾಡಿಕೊಂಡ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಗುರುತಿಸುವ ಪ್ರಯತ್ನ ಇದಾಗಿದ್ದು, ನೀವೂ ಒಮ್ಮೆ ಪ್ರಯತ್ನಿಸಿ.

ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ಮಾಡುವುದಿಲ್ಲ

ಒಂದನೇ ಪಕ್ಷಿಯನ್ನ ನೀವು ಆಯ್ಕೆ ಮಾಡಿಕೊಂಡರೆ ನೀವು ಪ್ರಸ್ತತ ಕ್ಷಣವನ್ನು ಹೇಗೆ ಸವಿಯಬೇಕೆಂದು ವ್ಯಕ್ತಿ ನೀವಾಗಿದ್ದೀರಿ ಎಂದು ಸೂಚಿಸುತ್ತದೆ. ಅನುಭವದಿಂದ ಸಾರವನ್ನು ಹೊರತೆಗೆಯುತ್ತೀರಿ. ಹಿಂದಿನದನ್ನು ಅಥವಾ ಭವಿಷ್ಯದ ಬಗ್ಗೆ ಅತಿಯಾದ ಚಿಂತೆಯನ್ನು ಮಾಡುವುದಿಲ್ಲ. ಈ ಕ್ಷಣದಲ್ಲಿ ಬದುಕಿ, ಮುಂದೇನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಸಾವು ಅತವಾ ಜೀವನ ಎಂಬ ಟ್ಯಾಗ್ ಲೈನ್ ನಿಮಗೆ ತುಂಬಾ ಚೆನ್ನಾಗಿ ಸೂಟ್ ಆಗುತ್ತದೆ. ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತಾ ಮುಂದೆ ಸಾಗುತ್ತೀರಿ.

ಹಲವರು ನಿಮ್ಮ ಸಲಹೆಗಳನ್ನು ಕೇಳುತ್ತಾರೆ

ಎರಡನೇ ಪಕ್ಷಿಯನ್ನು ಆಯ್ಕೆ ಮಾಡಿಕೊಂಡರೆ ನೀವು ತುಂಬಾ ವಿಶ್ವಾಸಾರ್ಹ ಮತ್ತು ಸಹಾನುಭೂತಿಯ ವ್ಯಕ್ತಿ. ನೀವು ಉತ್ತಮ ಕೇಳುಗರಾಗಿರುವುದರಿಂದ ಜನರು ನಿಮ್ಮಲ್ಲಿ ವಿಶ್ವಾಸವಿಡುತ್ತಾರೆ. ಅವರ ರಹಸ್ಯಗಳನ್ನು ಇಟ್ಟುಕೊಳ್ಳಬಹುದು. ಅನಗತ್ಯವಾದ ವಿಚಾರಗಳಲ್ಲಿ ತಲೆ ಹಾಕದೆ ಸಮತೋಲಿತ ಜೀವನವನ್ನು ನಡೆಸುತ್ತೀರಿ. ನಿಮ್ಮದು ಚಿಂತನಶೀಲ ವಿಧಾನವಾಗಿದೆ. ಹಲವರು ನಿಮ್ಮ ಸಲಹೆಗಳನ್ನು ಕೇಳುತ್ತಾರೆ.

ಕಠಿಣ ಸವಾಲು ನಿಭಾಯಿಸುವ ಶಕ್ತಿ ಹೊಂದಿದ್ದೀರಿ

ನೀವೇನಾದರೂ ಮೂರನೇ ಪಕ್ಷಿಯನ್ನು ಆರಿಸಿಕೊಂಡಿದ್ದರೆ ನಿಮ್ಮ ಭಾವನಾತ್ಮಕ ಜೀವನವು ಸದಾ ಬದಲಾಗುತ್ತಿರುತ್ತದೆ. ಕಠಿಣ ಸವಾಲುಗಳನ್ನು ನಿಭಾಯಿಸುವ ಹೆಚ್ಚಿನ ಶಕ್ತಿಯನ್ನು ಹೊಂದಿದ್ದೀರಿ. ತುಂಬಾ ಆತ್ಮಸ್ಥೈರ್ಯ ಹೊಂದಿದ್ದೀರಿ. ಆದರೆ ನಿಮ್ಮ ಶಕ್ತಿ ಕಡಿಮೆಯಾದರೆ ನೀವು ಬರಿದಾಗುವವ ಸಂದರ್ಭಗಳೂ ಇವೆ.

ಹಲವಾರು ಒಳ್ಳೆಯ ಕೆಲಸಗಳನ್ನು ಮಾಡುತ್ತೀರಿ

ಒಂದು ವೇಳೆ ನೀವು 4ನೇ ಪಕ್ಷಿಯನ್ನು ಆಯ್ಕೆ ಮಾಡಿಕೊಂಡಿದ್ದರೆ ನಿಮ್ಮ ಭಾವನೆಗಳು ಬಹಳಷ್ಟು ಬದಲಾಗಬಹುದು ಎಂದರ್ಥ. ಕೆಲವೊಮ್ಮೆ, ನೀವು ಸಾಕಷ್ಟು ಶಕ್ತಿ ಮತ್ತು ಉತ್ಸಾಹವನ್ನು ಹೊಂದಿರುತ್ತೀರಿ. ಆದ್ದರೆ ನೀವು ಹಲವಾರು ಒಳ್ಳೆಯ ಕೆಲಸಗಳನ್ನು ಮಾಡುತ್ತೀರಿ. ನೀವು ಪ್ಯಾನ್ ಮಾಡುತ್ತಿರುವ ವ್ಯಾಪಾರ ಯೋಜನೆಯಲ್ಲಿ ಕೆಲಸ ಮಾಡಬಹುದು. ಯಾವುದಾದರು ಸಣ್ಣ ತಪ್ಪು ಸಂಭವಿಸಿದರೆ ನಿಮ್ಮ ಶಕ್ತ ಕುಂದುತ್ತದೆ.

ಸ್ನೇಹಿತರು ಮತ್ತು ಕುಟುಂಬದವರೇ ನಿಮಗೆ ದೊಡ್ಡ ಶಕ್ತಿ

ನೀವು 5ನೇ ಪಕ್ಷಿಯನ್ನು ಆರಿಸಿಕೊಂಡಿದ್ದರ ನಿಮ್ಮ ಹತ್ತಿರದ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹೊಂದಿರುವ ನಿಕಟ ಸಂಬಧವೇ ನಿಮಗೆ ದೊಡ್ಡ ಶಕ್ತಿಯಾಗಿದೆ. ನಿಜವಾಗಿಯೂ ಒಳ್ಳೆಯ ಸ್ನೇಹಿತರು ಮತ್ತು ಕುಟುಂಬದವರನ್ನು ಹೊಂದಲು ನೀವು ಅದೃಷ್ಟವಂತರು. ಏನೇ ಇರಲಿ, ನಿಮ್ಮ ಬೆಂಬಲಿಸಲು ಯಾವಾಗಲೂ ಜನ ಇರುತ್ತಾರೆ. ಎಂದಿಗೂ ನಿಮ್ಮನ್ನು ಬಿಟ್ಟುಕೊಡದಂತೆ ಸದಾ ಪ್ರೋತ್ಸಾಹಿಸುತ್ತಾರೆ.

ಇದೊಂದು ವಿನೋದ ಮತ್ತು ವಿಶ್ರಾಂತಿಯ ಆಟವಾಗಿದೆ. ಇದನ್ನು ಓದಿದಾಗ ನಿಮ್ಮ ಮನಸ್ಸು ರಿಲ್ಯಾಕ್ಸ್ ಆಗಲಿ ಎಂಬ ಉದ್ದೇಶ ನಮ್ಮದು. ವ್ಯಕ್ತಿತ್ವದ ಬಗೆಗಿನ ಈ ಮಾಹಿತಿಯನ್ನ ತುಂಬಾ ಗಂಭೀರವಾಗಿ ಪರಿಗಣಿಸಬೇಡಿ. ಸುದ್ದಿ ಮೂಲ ಟೈಮ್ಸ್ ಆಫ್ ಇಂಡಿಯಾ.

ವಿಭಾಗ