Success Tips: ಯಶಸ್ಸು ಪಡೆದವರ ಜೀವನಶೈಲಿ ಹೇಗಿರುತ್ತದೆ? ಸಕ್ಸಸ್‌ ಪಡೆಯಲು ಬಯಸುವವರು ಈ ಹವ್ಯಾಸ ಬೆಳೆಸಿಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Success Tips: ಯಶಸ್ಸು ಪಡೆದವರ ಜೀವನಶೈಲಿ ಹೇಗಿರುತ್ತದೆ? ಸಕ್ಸಸ್‌ ಪಡೆಯಲು ಬಯಸುವವರು ಈ ಹವ್ಯಾಸ ಬೆಳೆಸಿಕೊಳ್ಳಿ

Success Tips: ಯಶಸ್ಸು ಪಡೆದವರ ಜೀವನಶೈಲಿ ಹೇಗಿರುತ್ತದೆ? ಸಕ್ಸಸ್‌ ಪಡೆಯಲು ಬಯಸುವವರು ಈ ಹವ್ಯಾಸ ಬೆಳೆಸಿಕೊಳ್ಳಿ

ಜೀವನದಲ್ಲಿ ಯಶಸ್ಸು ಗಳಿಸಬೇಕು ಎನ್ನುವುದು ಪ್ರತಿಯೊಬ್ಬರ ಗುರಿಯಾಗಿರುತ್ತದೆ. ಅದಕ್ಕಾಗಿ ಅವರು ಹಗಲು ರಾತ್ರಿ ಕಷ್ಟಪಡುತ್ತಿರುತ್ತಾರೆ. ಯಶಸ್ಸು ಎನ್ನುವುದು ರಾತ್ರಿ ಬೆಳಗಾಗುವುದರೊಳಗಾಗಿ ಬರುವುದಿಲ್ಲ, ಅದಕ್ಕಾಗಿ ಶ್ರಮ ಪಡಬೇಕು. ನಮ್ಮ ಹವ್ಯಾಸ, ಅಭ್ಯಾಸಗಳು ಅದಕ್ಕೆ ಪೂರಕವಾಗಿರಬೇಕು. ಯಶಸ್ವಿ ಜನರ ಹವ್ಯಾಸಗಳು ಯಾವುದು ಗೊತ್ತಾ?

ಯಶಸ್ವಿ ಜನರ ಹವ್ಯಾಸಗಳು ಯಾವುದು ಗೊತ್ತಾ?
ಯಶಸ್ವಿ ಜನರ ಹವ್ಯಾಸಗಳು ಯಾವುದು ಗೊತ್ತಾ? (Pixabay)

ಯಶಸ್ಸು ಎನ್ನುವುದು ಹಾಗೆಯೇ.. ಒಮ್ಮೆ ಜನರಿಗೆ ಯಶಸ್ಸಿನ ರುಚಿ ಸಿಕ್ಕಿದರೆ ಸಾಕು, ಮತ್ತೆ ಅದನ್ನು ಬೆನ್ನನ್ನುತ್ತಾರೆ. ಯಶಸ್ಸಿಗಾಗಿ ಹಗಲು ರಾತ್ರಿ ಶ್ರಮ ಪಡುತ್ತಾರೆ. ಅವರ ಕಷ್ಟ, ಶ್ರಮಕ್ಕೆ ಕೊನೆಗೆ ಫಲ ಸಿಕ್ಕಾಗ ಖುಷಿ ಪಡುತ್ತಾರೆ. ಮತ್ತಷ್ಟು ಹೆಚ್ಚಿನ ಯಶಸ್ಸನ್ನು ಪಡೆಯಲು ಮುಂದಾಗುತ್ತಾರೆ. ಆದರೆ ಯಶಸ್ಸು ಎನ್ನುವುದು ಅಷ್ಟು ಸುಲಭದಲ್ಲಿ ಸಿಗಲು ಸಾಧ್ಯವಿಲ್ಲ. ನಾಳೆ ಸಿಗುವ ಯಶಸ್ಸಿಗಾಗಿ ಇಂದು ನಾವು ಸವೆಯಬೇಕು, ಹಾಗಾದಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ. ಸುಲಭದಲ್ಲಿ ಯಶ ಸಿಗುತ್ತದೆ ಎಂದರೆ ಅದು ಸಾಧ್ಯವಿಲ್ಲ, ಅದಕ್ಕಾಗಿ ಪ್ರಯತ್ನ ನಿರಂತರ ಸಾಗುತ್ತಿರಬೇಕು.

ಯಶಸ್ಸಿನ ಗುಟ್ಟನ್ನು ಎಲ್ಲರೂ ಬಿಟ್ಟುಕೊಡುವುದಿಲ್ಲ. ಆದರೆ ಯಶಸ್ವಿ ಜನರ ಹವ್ಯಾಸ, ಅಭ್ಯಾಸಗಳನ್ನು ನಾವು ಅಳವಡಿಸಿಕೊಳ್ಳಬಹುದು, ಅದನ್ನು ಪಾಲಿಸಿದರೆ, ಯಶಸ್ಸು ನಮ್ಮದಾಗುವುದು. ಆದರೆ ಪರಿಶ್ರಮ ಅಗತ್ಯ. ಬರೀ ಹವ್ಯಾಸ, ಅಭ್ಯಾಸ ಪಾಲಿಸಿದರೆ ಸಾಕಾಗುವುದಿಲ್ಲ. ಇಲ್ಲಿ ಯಶಸ್ವಿ ಜನರ ಕೆಲವೊಂದು ಹವ್ಯಾಸ, ಅಭ್ಯಾಸಗಳನ್ನು ಪಟ್ಟಿ ಮಾಡಲಾಗಿದೆ. ನೀವು ಅವುಗಳನ್ನು ಅನುಸರಿಸಿ, ಯಶಸ್ಸಿನ ದಾರಿ ಕಂಡುಕೊಳ್ಳಬಹುದು.

ಕಂಫರ್ಟ್ ಝೋನ್‌ನಿಂದ ಹೊರಬನ್ನಿ

ನೀವು ಈಗ ಇರುವ ಕಂಫರ್ಟ್ ಝೋನ್‌ನಿಂದ ಹೊರಬನ್ನಿ. ಹೊಸತೇನಾದರೂ ಸಾಧಿಸಬೇಕು ಎಂದಿರುವಾಗ ನೀವು ಸವಾಲು ಎದುರಿಸಲು ಸಿದ್ಧರಾಗಬೇಕು. ಹೊಸ ಪರಿಸರ, ಹೊಸ ಜನರು ಇದ್ದರೂ ಪರವಾಗಿಲ್ಲ, ನಿಮ್ಮ ಗುರಿ ಯಶಸ್ಸಿನ ಕಡೆ ಇರಬೇಕು.

ನಿಮ್ಮಿಂದಾಗುವ ದಿ ಬೆಸ್ಟ್‌ಗೆ ಪ್ರಯತ್ನಿಸಿ

ಪ್ರಯತ್ನ ಕೈಬಿಡಬಾರದು, ನಿಮ್ಮಿಂದ ಎಷ್ಟು ಸಾಧ್ಯವೋ, ಅಷ್ಟು ದಿ ಬೆಸ್ಟ್ ಎನ್ನಿಸುವ ಯತ್ನವನ್ನು ಮಾಡಬೇಕು.

ತಪ್ಪುಗಳಿಂದ ಪಾಠ ಕಲಿಯಿರಿ

ತಪ್ಪಾಗುವುದು ಸಹಜ, ಆದರೆ ಅದರಿಂದ ಹೊಸ ಪಾಠ ಕಲಿಯಬೇಕು. ಹೊಸತನ್ನು ಕಲಿಯುವುದನ್ನು ಬಿಡಬಾರದು. ಹಳೆಯ ತಪ್ಪನ್ನು ಮರೆಯಬೇಕು.

ಆತ್ಮವಿಶ್ವಾಸ ಇರಲಿ

ಸಮಾಜದಲ್ಲಿ ಗೌರವ, ಪ್ರಶಂಸೆ ಗಳಿಸುವುದೇ ನಿಮ್ಮ ಸಾಧನೆಯಾಗಬಾರದು. ಅದರ ಬದಲು, ಸ್ವ ಅಭಿವೃದ್ಧಿ, ಆತ್ಮವಿಶ್ವಾಸ, ನಿಮ್ಮತನವನ್ನು ಹೆಚ್ಚಿಸಿಕೊಳ್ಳಬೇಕು.

ಆಶಾವಾದಿಯಾಗಿರಬೇಕು

ಕೆಲಸ ಮತ್ತು ಜೀವನ ಒಂದೇ ಅಲ್ಲ, ಅಲ್ಲಿ ಹಲವು ಏರಿಳಿತಗಳು ಇರುತ್ತವೆ. ಹೀಗಾಗಿ ಸದಾ ಆಶಾವಾದಿಯಾಗಿ ಕೆಲಸ ಮಾಡಿ.

ಶ್ರಮಪಟ್ಟು ಕೆಲಸ ಮಾಡಿ

ಒಂದೊಂದೆ ಸಮಸ್ಯೆಗಳನ್ನು ಪರಿಹರಿಸುತ್ತಾ ಹೋಗಿ, ಎಲ್ಲವನ್ನೂ ಒಮ್ಮೆಲೆ ಮೈಮೇಲೆ ಎಳೆದುಕೊಳ್ಳಬೇಡಿ.

ಸಂಬಂಧ ಮತ್ತು ಬಾಂಧವ್ಯವನ್ನು ಗೌರವಿಸಿ

ನಿಮ್ಮ ಆಪ್ತರೊಡನೆ, ಹಿತೈಷಿಗಳೊಡನೆ ಸಂಬಂಧವನ್ನು ಗೌರವಿಸಿ, ಬಾಂಧವ್ಯವನ್ನು ವೃದ್ಧಿಸಿಕೊಳ್ಳಿ.

ಅಡೆತಡೆಗಳನ್ನು ನಿವಾರಿಸಿ

ನಿಮ್ಮ ಸಾಧನೆಯ ಹಾದಿಯಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಿ, ಮುಂದೆ ಸಾಗಿ, ಲಭ್ಯ ಪ್ರತಿ ಅವಕಾಶ ಬಳಸಿಕೊಳ್ಳಿ.

ಪ್ರಾಮಾಣಿಕವಾಗಿರಿ

ಯಶಸ್ವಿ ಜನರು ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡಿರುತ್ತಾರೆ. ಅವರಂತೆಯೇ, ನಿಮ್ಮ ಕೆಲಸ, ಪ್ರಯತ್ನದಲ್ಲಿ ಪ್ರಾಮಾಣಿಕವಾಗಿರಿ.

ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಯಶಸ್ಸಿನ ಗುರಿಯತ್ತ ಸಾಗುವ ಭರದಲ್ಲಿ ನಿಮ್ಮ ಆರೋಗ್ಯ ನಿರ್ಲಕ್ಷಿಸಬೇಡಿ. ಆರೋಗ್ಯವೇ ಸಂಪತ್ತು ಎನ್ನುವ ಅರಿವು ನಿಮಗಿರಲಿ.

ಆತುರದ ನಿರ್ಧಾರ ಬೇಡ

ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಆತುರಪಡಬೇಡಿ. ಒಳಿತು, ಕೆಡುಕು ನೋಡಿಕೊಂಡು ಮುನ್ನಡೆಯಿರಿ.

ಉಪಕಾರ ಸ್ಮರಣೆ ಇರಲಿ

ನಿಮ್ಮ ಹಾದಿಯಲ್ಲಿ ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ. ಉಪಕಾರ ಸ್ಮರಣೆ ಮರೆಯಬೇಡಿ.

ಪ್ರಯತ್ನ ನಿರಂತರವಾಗಿರಲಿ

ಒಂದು ಬಾರಿ ಯತ್ನಿಸಿ ವಿಫಲವಾಯಿತು ಎಂದು ಎದೆಗುಂದಬೇಡಿ. ನಿಮ್ಮ ಪ್ರಯತ್ನ ನಿರಂತರವಾಗಿರಲಿ.

ಎಲ್ಲರನ್ನೂ ಗೌರವಿಸಿ

ಕೆಲಸ ಮತ್ತು ಜೀವನದಲ್ಲಿ ಎಲ್ಲರಿಗೂ ಅವರದ್ದೇ ಆದ ಗೌರವ ಇರುತ್ತದೆ. ಹಾಗಾಗಿ, ಗೌರವ ಕೊಟ್ಟು, ನೀವೂ ಗೌರವ ಪಡೆದು, ಗೌರವದ ಜೀವನ ನಡೆಸಿ.

ಗುರಿ ಸಾಧನೆ ನಿಮ್ಮ ಮಂತ್ರವಾಗಲಿ

ನಿಮ್ಮ ಗುರಿ ಸಾಧಿಸುವುದು ನಿಮ್ಮ ಮುಖ್ಯ ಉದ್ದೇಶವಾಗಲಿ. ಅದಕ್ಕಾಗಿ ಸರಳ ಸೂತ್ರ ಬೇಡ, ಕಠಿಣ ಪರಿಶ್ರಮ ಅಗತ್ಯ.

ವಿವಿಧ ಕೋನಗಳಿಂದ ಚಿಂತಿಸಿ

ಒಂದು ಯತ್ನದಲ್ಲಿ ಯಶಸ್ಸು ಸಾಧಿಸಲು ಹಲವು ರೀತಿಯ ಕೆಲಸ ಮಾಡಬೇಕಾಗುತ್ತದೆ. ಅದನ್ನು ನಾವು ವಿವಿಧ ಕೋನಗಳಿಂದ ಚಿಂತಿಸಬೇಕು.

ಕ್ರೀಯಾಶೀಲರಾಗಿರಿ

ಸಾಮಾನ್ಯರಂತೆ ಇರಬೇಡಿ. ಹೊಸ ಕ್ರೀಯಾಶೀಲ ಯತ್ನ ನಿಮ್ಮದಾಗಲಿ, ನಿಮ್ಮ ಯತ್ನ ಇನ್ನೊಬ್ಬರಿಗೆ ಮಾದರಿಯಾಗಲಿ.

ಜವಾಬ್ದಾರಿ ವಹಿಸಿಕೊಳ್ಳಿ

ನಿಮ್ಮ ಕೆಲಸಗಳಿಗೆ ನೀವು ಜವಾಬ್ದಾರಿ ವಹಿಸಿಕೊಳ್ಳಿ. ಕೆಲಸ ಯಾವುದೇ ಇರಲಿ, ಅದಕ್ಕಾಗಿ ನಿಮ್ಮ ಪರಿಶ್ರಮ, ಜವಾಬ್ದಾರಿಯನ್ನು ಬಿಡಬೇಡಿ.

ಇತರರಿಗೆ ಸಹಾಯ ಮಾಡಿ

ಉದ್ಯಮ ಅಥವಾ ಜೀವನದ ಹಾದಿಯಲ್ಲಿ ನಿಮ್ಮೊಡನೆ ಇರುವವರಿಗೆ ಸಹಾಯ ಮಾಡುವುದನ್ನು ಮರೆಯಬೇಡಿ. ಅವರನ್ನೂ ಜತೆಗೆ ಕರೆದೊಯ್ಯಿರಿ, ಅದರಿಂದ ನಿಮಗೂ ಸಹಾಯವಾಗುವುದು.

ಕಲಿಯುವಿಕೆಯನ್ನು ಬಿಡಬೇಡಿ

ಹೊಸತನ್ನು ಕಲಿಯುವುದು ನಿರಂತರವಾಗಿರಲಿ. ಹೊಸ ಕೌಶಲ ವೃದ್ಧಿ ಆದ್ಯತೆಯಾಗಿರಲಿ.

ಜ್ಞಾನ ಮತ್ತು ನಂಬಿಕೆ ವೃದ್ಧಿಸಿಕೊಳ್ಳಿ

ಮನಸ್ಸು ಕೊಟ್ಟು, ಶ್ರದ್ಧೆಯಿಂದ ಕೆಲಸ ಮಾಡಿ. ಅದರಿಂದ ನಿಮ್ಮ ಮೇಲಿನ ನಂಬಿಕೆ ವೃದ್ಧಿಯಾಗುತ್ತದೆ. ಜತೆಗೆ ಜ್ಞಾನವನ್ನೂ ವೃದ್ಧಿಸಿಕೊಳ್ಳಿ.

Whats_app_banner