Pitru Paksha 2022 Date : ಪಿತೃ ಪಕ್ಷ ಶುರು ಯಾವಾಗ 9ಕ್ಕಾ ಅಥವಾ 10ಕ್ಕಾ? ಇಲ್ಲಿದೆ ಮಾಹಿತಿ
Pitru Paksha 2022 Date in India: ಹಿಂದು ಧರ್ಮದಲ್ಲಿ, ಪಿತೃ ಪಕ್ಷದ ಸಮಯದಲ್ಲಿ ಮಂಗಳಕರ ಮತ್ತು ಶುಭ ಕಾರ್ಯಗಳು ನಿಷಿದ್ಧ. ಪಿತೃ ಪಕ್ಷದಲ್ಲಿ ದಾನ, ತರ್ಪಣ ಮತ್ತು ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಎಂಬುದು ನಂಬಿಕೆ. ಈ ವರ್ಷ ಪಿತೃಪಕ್ಷ ಶುರು ಯಾವಾಗ 9ಕ್ಕಾ ಅಥವಾ 10ಕ್ಕಾ? ಪೂರಕ ಮಾಹಿತಿ ಇಲ್ಲಿದೆ.
ಹಿಂದು ಧರ್ಮದಲ್ಲಿ ಪಿತೃ ಪಕ್ಷಕ್ಕೆ (Pitru Paksha 2022) ವಿಶೇಷ ಮಹತ್ವವಿದೆ. ಹಿಂದು ಕ್ಯಾಲೆಂಡರ್ ಪ್ರಕಾರ, ಪಿತೃ ಪಕ್ಷವು ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗುತ್ತದೆ. 9ಕ್ಕೆ ಅನಂತ ಚತುರ್ದಶಿ ಇದೆ. ಪಿತೃ ಪಕ್ಷವು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಪ್ರಾರಂಭವಾಗುತ್ತದೆ. 10ಕ್ಕೆ ಅನಂತನ ಹುಣ್ಣಿಮೆ ಇದೆ.
ಹಾಗಾಗಿ ಈ ವರ್ಷ ಪಿತೃಪಕ್ಷ ಕ್ಯಾಲೆಂಡರ್ ವರ್ಷದ ಪ್ರಕಾರ ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 25 ರವರೆಗೆ ಮುಂದುವರಿಯುತ್ತದೆ. ಅರ್ಥಾತ್ ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯಿಂದ ಪ್ರಾರಂಭವಾಗಿ ಅಶ್ವಿನ್ ಮಾಸದ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ.
ಪಿತೃ ಪಕ್ಷದ ಮರುದಿನದಿಂದ ನವರಾತ್ರಿ ಪ್ರಾರಂಭವಾಗುತ್ತದೆ- ಪಿತೃ ಪಕ್ಷ ಮುಗಿದ ಮರುದಿನದಿಂದಲೇ ಶಾರದೀಯ ನವರಾತ್ರಿ ಆರಂಭವಾಗುತ್ತದೆ. ಈ ವರ್ಷ ಶಾರದೀಯ ನವರಾತ್ರಿ ಸೆಪ್ಟೆಂಬರ್ 26 ರಿಂದ ಪ್ರಾರಂಭವಾಗುತ್ತಿದೆ.
ಪಿತೃ ಪಕ್ಷದ ಮಹತ್ವ
ಪಿತೃ ಪಕ್ಷದಲ್ಲಿ ಯಾವುದೇ ಶುಭ ಕಾರ್ಯ ನಿಷಿದ್ಧ. ಪಿತೃ ಪಕ್ಷದಲ್ಲಿ ಯಾವುದೇ ಸಂತೋಷದ ಕೆಲಸವನ್ನು ಮಾಡಿದರೆ ಪೂರ್ವಜರ ಆತ್ಮಕ್ಕೆ ನೋವುಂಟಾಗುತ್ತದೆ ಎಂಬುದು ನಂಬಿಕೆ. ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಪಿಂಡದಾನ ಮಾಡುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಪಿತೃಪಕ್ಷದ ಸಮಯದಲ್ಲಿ ಶ್ರಾದ್ಧವನ್ನು ಮಾಡದಿದ್ದಲ್ಲಿ ಪೂರ್ವಜರ ಆತ್ಮಗಳು ತೃಪ್ತಿಯಾಗುವುದಿಲ್ಲ. ತರ್ಪಣದಿಂದ ಸಂತುಷ್ಟರಾಗಿ, ಪೂರ್ವಜರು ತಮ್ಮ ಕುಟುಂಬಗಳು ಸಂತೋಷದಿಂದ ಮತ್ತು ಸಮೃದ್ಧವಾಗಿರಲು ಆಶೀರ್ವದಿಸುತ್ತಾರೆ ಎಂಬುದು ನಂಬಿಕೆ.
ಪಿತೃ ಪಕ್ಷದಲ್ಲಿ ಯಾವ ದಿನ ಪಿತೃಪೂಜೆ ನೆರವೇರಿಸಬೇಕು?-
ಅಶ್ವಿನ್ ಕೃಷ್ಣ ಪಕ್ಷ ಅಮಾವಾಸ್ಯೆ ಅಂದರೆ ಭಾದ್ರಪದ ಪೂರ್ಣಿಮೆಯಿಂದ ಹದಿನಾರು ದಿನ ಪಿತೃ ಪಕ್ಷದ ಅವಧಿ. ತಂದೆ ತಾಯಿ ದೇಹಾಂತ ಮಾಡಿದ ತಿಥಿಗೆ ಅನುಗುಣವಾಗಿ ಶ್ರಾದ್ಧ ಮಾಡುವುದು ಒಂದು ವಿಧಾನ. ಇನ್ನೊಂದು ಪ್ರತಿ ವರ್ಷ ಮಹಾಲಯ ಅಮಾವಾಸ್ಯೆ ದಿನ ಪಿಂಡದಾನ ಮಾಡುವ ಮೂಲಕ ಪಿತೃ ಪೂಜೆ ನೆರವೇರಿಸುವುದು. ಇಲ್ಲವೇ ಪಿತೃ ಪಕ್ಷದಲ್ಲಿ ಪಾಲಕರು ದೇಹಾಂತ ಮಾಡಿದ ತಿಥಿ ದಿನ ಪಿಂಡದಾನ ಮಾಡುವುದು.
ಪಿತೃ ಪಕ್ಷದಲ್ಲಿ ಪಿಂಡದಾನದಲ್ಲಿ ಯಾವ ದೇವತೆಯನ್ನು ಪೂಜಿಸಲಾಗುತ್ತದೆ-
ಪಿಂಡದಾನ ಮತ್ತು ಶ್ರಾದ್ಧಕ್ಕಾಗಿ ಪಿತೃ ಪಕ್ಷದಲ್ಲಿ ಭಗವಾನ್ ವಿಷ್ಣುವಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ಪಿತೃ ಯೋನಿಗೆ ಮಾಯಾಲೋಕದಿಂದ ದಾರಿ ತೆರೆಯುತ್ತದೆ. ಅದೇ ಸಮಯದಲ್ಲಿ ಮೋಕ್ಷವನ್ನು ಸಾಧಿಸಲಾಗುತ್ತದೆ ಎಂಬುದು ನಂಬಿಕೆ.
ಪಿತೃ ಪಕ್ಷದಲ್ಲಿ ಕಾಗೆಗಳ ಮಹತ್ವ
ಕಾಗೆಗಳು ಪೂರ್ವಜರ ಪ್ರತಿರೂಪವೆಂಬ ನಂಬಿಕೆ ಇದೆ. ಶ್ರಾದ್ಧವನ್ನು ಮಾಡಲು, ನಮ್ಮ ಪೂರ್ವಜರು ಕಾಗೆಯ ರೂಪವನ್ನು ತೆಗೆದುಕೊಂಡು ನಿಗದಿತ ದಿನಾಂಕದಂದು ಮಧ್ಯಾಹ್ನ ನಮ್ಮ ಮನೆಗೆ ಬರುತ್ತಾರೆ. ಶ್ರಾದ್ಧ ನೆರವೇರಿಸದೇ ಇದ್ದರೆ ಅವರಿಗೆ ಸಿಟ್ಟು ಬರುತ್ತೆ ಎಂಬ ನಂಬಿಕೆ ಇದೆ.
ಶ್ರಾದ್ಧ ದಿನಾಂಕಗಳು-
ಸೆಪ್ಟೆಂಬರ್ 10 - ಪೂರ್ಣಿಮಾ ಶ್ರಾದ್ಧ (ಶುಕ್ಲ ಪೂರ್ಣಿಮಾ), ಪ್ರತಿಪದ ಶ್ರಾದ್ಧ (ಕೃಷ್ಣ ಪ್ರತಿಪದ)
ಸೆಪ್ಟೆಂಬರ್ 11 - ಅಶ್ನಿನ್, ಕೃಷ್ಣ ದ್ವಿತೀಯ
12 ಸೆಪ್ಟೆಂಬರ್ - ಅಶ್ವಿನ್, ಕೃಷ್ಣ ತೃತೀಯಾ
13 ಸೆಪ್ಟೆಂಬರ್ - ಅಶ್ವಿನ್, ಕೃಷ್ಣ ಚತುರ್ಥಿ
ಸೆಪ್ಟೆಂಬರ್ 14 - ಅಶ್ವಿನ್, ಕೃಷ್ಣ ಪಂಚಮಿ
15 ಸೆಪ್ಟೆಂಬರ್ - ಅಶ್ವಿನ್, ಕೃಷ್ಣ ಪಷ್ಟಿ
16 ಸೆಪ್ಟೆಂಬರ್ - ಅಶ್ವಿನ್, ಕೃಷ್ಣ ಸಪ್ತಮಿ
18 ಸೆಪ್ಟೆಂಬರ್ - ಅಶ್ವಿನ್, ಕೃಷ್ಣ ಅಷ್ಟಮಿ
19 ಸೆಪ್ಟೆಂಬರ್ - ಅಶ್ವಿನ್, ಕೃಷ್ಣ ನವಮಿ
20 ಸೆಪ್ಟೆಂಬರ್ - ಅಶ್ವಿನ್, ಕೃಷ್ಣ ದಶಮಿ
21 ಸೆಪ್ಟೆಂಬರ್ - ಅಶ್ವಿನ್, ಕೃಷ್ಣ ಏಕಾದಶಿ
ಸೆಪ್ಟೆಂಬರ್ 22 - ಅಶ್ವಿನ್, ಕೃಷ್ಣ ದ್ವಾದಶಿ
23 ಸೆಪ್ಟೆಂಬರ್ - ಅಶ್ವಿನ್, ಕೃಷ್ಣ ತ್ರಯೋದಶಿ
ಸೆಪ್ಟೆಂಬರ್ 24 - ಅಶ್ವಿನ್, ಕೃಷ್ಣ ಚತುರ್ದಶಿ
ಸೆಪ್ಟೆಂಬರ್ 25 - ಅಶ್ವಿನ್, ಕೃಷ್ಣ ಅಮಾವಾಸ್ಯೆ
ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ ಫಾಲೋಮಾಡಿ.