Pitru Paksha 2023: ಪಿತೃ ಪಕ್ಷ ಆರಂಭಕ್ಕೆ ಕೆಲವೇ ದಿನಗಳು ಬಾಕಿ; ದಿನಾಂಕ, ಆಚರಣೆ, ಮಹತ್ವ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Pitru Paksha 2023: ಪಿತೃ ಪಕ್ಷ ಆರಂಭಕ್ಕೆ ಕೆಲವೇ ದಿನಗಳು ಬಾಕಿ; ದಿನಾಂಕ, ಆಚರಣೆ, ಮಹತ್ವ ತಿಳಿಯಿರಿ

Pitru Paksha 2023: ಪಿತೃ ಪಕ್ಷ ಆರಂಭಕ್ಕೆ ಕೆಲವೇ ದಿನಗಳು ಬಾಕಿ; ದಿನಾಂಕ, ಆಚರಣೆ, ಮಹತ್ವ ತಿಳಿಯಿರಿ

ಹಿಂದೂ ಕ್ಯಾಲೆಂಡರ್ ಪ್ರಕಾರ, ಅಶ್ವಿನಿ ಮಾಸದ ಕೃಷ್ಣ ಪಕ್ಷವನ್ನು ಪಿತೃ ಪಕ್ಷ ಎಂದು ಕರೆಯಲಾಗುತ್ತದೆ. ಪಿತೃ ಪಕ್ಷವು ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಪ್ರಾರಂಭವಾಗಿ ಅಶ್ವಿನಿ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯವರೆಗೆ ಮುಂದುವರಿಯುತ್ತದೆ.

ಪಿತೃ ಪಕ್ಷ ಆಚರಣೆ (ಸಂಗ್ರಹ ಚಿತ್ರ)
ಪಿತೃ ಪಕ್ಷ ಆಚರಣೆ (ಸಂಗ್ರಹ ಚಿತ್ರ)

ಪಿತೃ ಪಕ್ಷ ಅಥವಾ ಶ್ರಾದ್ಧ ಎಂದರೆ ಹಿಂದೂಗಳು ತಮ್ಮ ಪೂರ್ವಜರನ್ನು ಸ್ಮರಿಸಲು ಇರುವ 15 ದಿನಗಳ ಆಚರಣೆಯಾಗಿದೆ. ಈ 15 ದಿನಗಳ ಅವಧಿಯಲ್ಲಿ ಒಂದು ದಿನ ಮಕ್ಕಳು ಪಿತೃಲೋಕದಲ್ಲಿರುವ ಪೂರ್ವಜರಿಗೆ ಶ್ರಾದ್ಧವನ್ನು ಮಾಡುತ್ತಾರೆ. ಸ್ವರ್ಗ ಮತ್ತು ಭೂಮಿಯ ನಡುವಿನ ಕ್ಷೇತ್ರವನ್ನು ಪಿತೃಲೋಕ ಎಂದು ಕರೆಯಲಾಗುತ್ತದೆ.

ಈ ವರ್ಷದ ಪಿತೃ ಪಕ್ಷದ ದಿನಾಂಕ ಏನು?

ಹಿಂದೂ ಕ್ಯಾಲೆಂಡರ್ ಪ್ರಕಾರ, ಅಶ್ವಿನಿ ಮಾಸದ ಕೃಷ್ಣ ಪಕ್ಷವನ್ನು ಪಿತೃ ಪಕ್ಷ ಎಂದು ಕರೆಯಲಾಗುತ್ತದೆ. ಪಿತೃ ಪಕ್ಷವು ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಪ್ರಾರಂಭವಾಗಿ ಅಶ್ವಿನಿ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯವರೆಗೆ ಮುಂದುವರಿಯುತ್ತದೆ. ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 29 ರಂದು ಆರಂಭವಾಗಲಿದ್ದು, ಅಕ್ಟೋಬರ್ 16 ರಂದು ಮುಕ್ತಾಯವಾಗುತ್ತದೆ. ಈ ಅವಧಿಯಲ್ಲಿ ಶುಭಕಾರ್ಯಗಳನ್ನು ಮಾಡಲಾಗುವುದಿಲ್ಲ.

ಯಾರು ಯಾವಾಗ ಶ್ರಾದ್ಧ ಮಾಡಬೇಕು?

ಶುಕ್ಲ ಪಕ್ಷದ ಹುಣ್ಣಿಮೆಯಿಂದ ಕೃಷ್ಣ ಪಕ್ಷದ ಅಮಾವಾಸ್ಯೆಯ ವರೆಗೆ 15 ದಿನಗಳ ಪೈಕಿ ಯಾವ ದಿನವಾದರೂ ಶ್ರಾದ್ಧ ಮಾಡಬಹುದು. ಆದರೆ ಶಾಸ್ತ್ರಗಳ ಪ್ರಕಾರ, ಯಾವುದೇ ತಿಂಗಳ ಶುಕ್ಲ ಪಕ್ಷ ಅಥವಾ ಕೃಷ್ಣ ಪಕ್ಷದ ದಿನಾಂಕದಂದು ಮರಣ ಹೊಂದಿದ ವ್ಯಕ್ತಿಗಳ ಶ್ರಾದ್ಧ ಕರ್ಮವನ್ನು ಪಿತೃ ಪಕ್ಷದ ಅದೇ ದಿನಾಂಕದಂದು ಮಾಡಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಪೂರ್ವಜರ ಮರಣದ ದಿನಾಂಕವನ್ನು ತಿಳಿದಿಲ್ಲದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ, ಈ ಪೂರ್ವಜರ ಶ್ರಾದ್ಧ ಕರ್ಮವನ್ನು ಅಶ್ವಿನಿ ಅಮವಾಸ್ಯೆಯಂದು ಮಾಡಬಹುದು ಎಂದು ಶಾಸ್ತ್ರಗಳಲ್ಲಿ ನೀಡಲಾಗಿದೆ. ಇದಲ್ಲದೇ ಅಪಘಾತಕ್ಕೀಡಾದವರಿಗೆ ಚತುರ್ದಶಿ ತಿಥಿಯಂದು ಶ್ರಾದ್ಧವನ್ನು ಮಾಡಬಹುದು.

ಪಿತೃ ಪಕ್ಷದ ಆಚರಣೆ ಮತ್ತು ಮಹತ್ವ

ಪಿತೃ ಪಕ್ಷ ಆಚರಿಸುವ ದಿನದಂದು ಕುಟುಂಬದ ಹಿರಿಯ ಮಗ ಅಥವಾ ಇತರೆ ಯಾರಾದರೂ ಸದಸ್ಯರು ಪುಣ್ಯ ಸ್ನಾನ ಮಾಡಿ, ಶುಭ್ರವಾದ ಬಟ್ಟೆ ಧರಿಸಬೇಕು. ಪೂರ್ವಜರ ಚಿತ್ರವನ್ನು ದಕ್ಷಿಣ ದಿಕ್ಕಿನಲ್ಲಿ ಮರದ ಮೇಜಿನ ಮೇಲೆ ಇರಿಸಬೇಕು. ಶ್ರಾದ್ಧ ವಿಧಿಗಳಿಗಾಗಿ ಅಕ್ಕಿ ಮತ್ತು ಎಳ್ಳು ಬೀಜಗಳನ್ನು ಒಳಗೊಂಡಿರುವ ಪಿಂಡ ಹಾಗೂ ವಿವಿಧ ಬಗೆಯೆ ವಿಶೇಷ ಆಹಾರ ತಯಾರಿಸಬೇಕು. ಅದನ್ನು ಮೊದಲು ಕಾಗೆಗೆ ಅರ್ಪಿಸಲಾಗುತ್ತದೆ.

ಕಾಗೆಯನ್ನು ಪಿತೃಲೋಕದ ಪಾಲಕನಾಗಿರುವ ಯಮನ ಸಂಕೇತ ಎಂದು ನಂಬಲಾಗಿದೆ. ಕಾಗೆಗಳು ಈ ಆಹಾರ ತಿಂದರೆ ಪಿತೃಗಳು (ಮೃತಪಟ್ಟವರು/ಪೂರ್ವಜರು) ಸವಿದರು ಎಂದು ಭಾವಿಸಲಾಗುತ್ತದೆ. ಪಿತೃಗಳು ಭೂಮಿಗೆ ಬಂದು ನಮಗೆ ಆಶಿರ್ವಾದ ಮಾಡುತ್ತಾರೆ ಎಂದು ನಂಬಲಾಗಿದೆ. ನಿರ್ಗತಿಕರಿಗೆ ಮತ್ತು ಬಡವರಿಗೆ ಸಹಾಯ ಮಾಡಿದರೆ, ಆಹಾರ ದಾನ ಮಾಡಿದರೆ ಒಳಿತಾಗುತ್ತದೆ.

ಪಿತೃಪಕ್ಷದ ಸಮಯದಲ್ಲಿ ಬ್ರಾಹ್ಮಣರಿಗೆ ಅನ್ನದಾನ ಮಾಡುವುದರಿಂದ ಪಿತೃ ಆತ್ಮಗಳು ಪ್ರಸನ್ನವಾಗುತ್ತವೆ ಮತ್ತು ಅವರು ಶಾಂತಿಯನ್ನು ಪಡೆಯುತ್ತಾರೆ ಮತ್ತು ಪಿತೃ ಋಣದಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ. ಮಹಾಲಯ ಅಮಾವಾಸ್ಯೆ ದಿನ ಕೂಡ ಪಿಂಡದಾನ ಮಾಡುವ ಮೂಲಕ ಪಿತೃ ಪೂಜೆ ನೆರವೇರಿಸಬಹುದು.

Whats_app_banner