Post Workout Tips: ವ್ಯಾಯಾಮ ಮಾಡಿದ ಬಳಿಕ ಏನು ಸೇವಿಸಬೇಕು? ಏನು ಮಾಡಬೇಕು, ಏನು ಮಾಡಬಾರದು; ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  Post Workout Tips: ವ್ಯಾಯಾಮ ಮಾಡಿದ ಬಳಿಕ ಏನು ಸೇವಿಸಬೇಕು? ಏನು ಮಾಡಬೇಕು, ಏನು ಮಾಡಬಾರದು; ಇಲ್ಲಿದೆ ಮಾಹಿತಿ

Post Workout Tips: ವ್ಯಾಯಾಮ ಮಾಡಿದ ಬಳಿಕ ಏನು ಸೇವಿಸಬೇಕು? ಏನು ಮಾಡಬೇಕು, ಏನು ಮಾಡಬಾರದು; ಇಲ್ಲಿದೆ ಮಾಹಿತಿ

Fitness Tips: ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಮಾಡುವುದು ಒಳ್ಳೆಯದು. ಆದರೆ ಅನೇಕರಿಗೆ ವರ್ಕೌಟ್‌ ಬಳಿಕ ಏನು ತಿನ್ನಬೇಕು , ವ್ಯಾಯಾಮ ಮಾಡಿದ ನಂತರ ಏನು ಮಾಡಬೇಕು ಎಂದು ಕನ್ಫ್ಯೂಸ್‌ ಆಗುತ್ತಾರೆ. ಏನೋ ಮಾಡಲು ಹೋಗಿ ಆರೋಗ್ಯವನ್ನು ಇನ್ನಷ್ಟು ಹದಗೆಡಿಸಿಕೊಳ್ಳುತ್ತಾರೆ. ದೇಹ ದಂಡನೆ ಮಾಡಿದ ಬಳಿಕ ನಿಮ್ಮ ದಿನಚರಿ ಹೇಗಿರಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ವ್ಯಾಯಾಮದ ಬಳಿಕ ಏನು ಮಾಡಬೇಕು, ಏನು ಮಾಡಬಾರದು ಎನ್ನುವುದರ ಬಗ್ಗೆ ಟಿಪ್ಸ್‌
ವ್ಯಾಯಾಮದ ಬಳಿಕ ಏನು ಮಾಡಬೇಕು, ಏನು ಮಾಡಬಾರದು ಎನ್ನುವುದರ ಬಗ್ಗೆ ಟಿಪ್ಸ್‌ (PC: Unsplash)

Post Workout Tips: ದೇಹದ ತೂಕ ಇಳಿಕೆ ಮಾಡಬೇಕು ಎಂದುಕೊಳ್ಳುವಾಗಲೇ ಎಲ್ಲರೂ ಮೊದಲು ಆರಂಭಿಸುವ ಕೆಲಸವೇ ವ್ಯಾಯಾಮ ಮಾಡುವುದು. ದೇಹದಿಂದ ಬೆವರಿಳಿದರೆ ಮಾತ್ರ ತೂಕ ಇಳಿಕೆ ಮಾಡಿಕೊಳ್ಳಲು ಸಾಧ್ಯ. ಉತ್ತಮ ಅಹಾರ ಶೈಲಿಯ ಜೊತೆಗೆ ನಿಯಮಿತವಾದ ವ್ಯಾಯಾಮದಿಂದ ಮಾತ್ರ ತೂಕ ಇಳಿಸಬಹುದಾಗಿದೆ. ಆದರೆ ವ್ಯಾಯಾಮ ಮುಗಿಸಿದ ಬಳಿಕ ಕೆಲವು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ಉತ್ತಮ ಫಿಟ್ನೆಸ್‌ಗಾಗಿ ಕೆಲವರು ಜಿಮ್​ ಸೇರುತ್ತಾರೆ. ಇನ್ನೂ ಕೆಲವರು ಯೋಗಾಭ್ಯಾಸ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವರು ವಾಕಿಂಗ್​ ಮಾಡುತ್ತಾರೆ. ಹೀಗೆ ಒಬ್ಬೊಬ್ಬರು ಒಂದೊಂದು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೇವಲ ವ್ಯಾಯಾಮದಿಂದ ಮಾತ್ರವಲ್ಲ ವ್ಯಾಯಾಮದ ಬಳಿಕ ನೀವು ಮಾಡುವ ಕೆಲವೊಂದು ಕೆಲಸಗಳು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗಾದರೆ ವ್ಯಾಯಾಮದ ಬಳಿಕ ನಾವು ಯಾವೆಲ್ಲಾ ಅಂಶದ ಕಡೆಗೆ ಗಮನ ನೀಡಬೇಕು ಎಂಬುದನ್ನು ತಿಳಿಯೋಣ.

ದೇಹವನ್ನು ಸಾಮಾನ್ಯ ಸ್ಥಿತಿಗೆ ತರುವುದು

ವ್ಯಾಯಾಮದ ಬಳಿಕ ದೇಹವನ್ನು ಸಾಮಾನ್ಯ ಸ್ಥಿತಿಗೆ ತರುವುದು ತುಂಬಾನೇ ಮುಖ್ಯ. ವ್ಯಾಯಾಮ ಮಾಡುವಾಗ ನಮ್ಮ ಹೃದಯದ ಬಡಿತ ಹೆಚ್ಚಾಗಿರುತ್ತದೆ. ಇದರಿಂದ ಕೆಲವರು ಮೂರ್ಛೆ ತಪ್ಪಿ ಬೀಳುವ ಸಾಧ್ಯತೆಗಳು ಸಹ ಇರುತ್ತದೆ. ಹೀಗಾಗಿ ನೀವು ನಿಮ್ಮ ದೇಹವನ್ನು ವ್ಯಾಯಾಮದ ಬಳಿಕ ಹೇಗೆ ಸಹಜ ಸ್ಥಿತಿಗೆ ತರುತ್ತೀರಿ ಎನ್ನುವುದು ಸಹ ತುಂಬಾನೇ ಮುಖ್ಯ. ವ್ಯಾಯಾಮದ ಬಳಿಕ ನಿಧಾನವಾಗಿ ಒಂದೊಂದೇ ಆಸನಗಳನ್ನು ನಿಧಾನವಾಗಿ ಮಾಡುತ್ತಾ ಕೊನೆಯಲ್ಲಿ ಶವಾಸನ ಮಾಡಿ ನಿಮ್ಮ ದೇಹವನ್ನು ಸಹಜ ಸ್ಥಿತಿಗೆ ತಂದುಕೊಳ್ಳಬಹುದು.

ನೀರು ಕುಡಿಯುವುದು : ವರ್ಕೌಟ್​ ಮಾಡುವಾಗ ನಮ್ಮ ದೇಹದಲ್ಲಿರುವ ದ್ರವದ ಅಂಶವು ಬೆವರಿನ ರೂಪದಲ್ಲಿ ಹೊರ ಬರುತ್ತಿರುತ್ತದೆ. ಹೀಗಾಗಿ ವರ್ಕೌಟ್​ ಆದ ಬಳಿಕ ಚೆನ್ನಾಗಿ ನೀರು ಕುಡಿಯಬೇಕು. ನೆನಪಿರಲಿ ವರ್ಕೌಟ್​ ಮುಗಿದ ಕೂಡಲೇ ನೀರು ಕುಡಿಯುವುದು ಕೂಡ ಒಳ್ಳೆಯ ಅಭ್ಯಾಸವಲ್ಲ. ಸ್ವಲ್ಪ ಸಮಯದ ನಂತರ ವಿಶ್ರಾಂತಿ ಮಾಡಿ ಬಳಿಕ ನೀರು ಕುಡಿಯಬೇಕು.

ವ್ಯಾಯಾಮ ಮಾಡಿದ ಕೂಡಲೇ ತಿನ್ನಬೇಡಿ : ವ್ಯಾಯಾಮ ಮಾಡಿದ ಕೂಡಲೇ ಹಸಿವಾಗುವುದು ಸಹಜ. ಆದರೆ ವ್ಯಾಯಾಮವಾದ ಕೂಡಲೇ ತಿನ್ನುವುದು ಒಳ್ಳೆಯದಲ್ಲ. ವ್ಯಾಯಾಮ ಮಾಡಿ ಸ್ವಲ್ಪ ಸಮಯದ ಬಳಿಕ ತಿನ್ನುವುದು ಒಳ್ಳೆಯದಲ್ಲ. ಆದಷ್ಟು ಪ್ರೊಟೀನ್​ ಅಂಶಗಳನ್ನು ಒಳಗೊಂಡಿರುವ ತರಕಾರಿಗಳನ್ನು ಸೇವನೆ ಮಾಡಿ. ಆದರೆ ಯಾವುದನ್ನೂ ವ್ಯಾಯಾಮ ಮುಗಿದ ಕೂಡಲೇ ತಿನ್ನುವಂತಿಲ್ಲ.

ಇವುಗಳನ್ನು ತಿನ್ನಲೇಬಾರದು : ತುಂಬಾ ಜನರು ವ್ಯಾಯಾಮ ಮಾಡಿದ ಬಳಿಕ ಬರ್ಗರ್​​ಗಳು, ಚಿಪ್ಸ್​ನಂಥ ಪಾಸ್ಟ್‌ ಫುಡ್‌ಗಳನ್ನು ಸೇವಿಸಬಹುದು, ಹೇಗಿದ್ದರೂ ವ್ಯಾಯಾಮ ಮಾಡುತ್ತಿದ್ದೀನಲ್ಲ ಎಂದುಕೊಳ್ಳುತ್ತಾರೆ. ಆದರೆ ವ್ಯಾಯಾಮದ ಬಳಿಕ ನಿಮ್ಮ ದೇಹಕ್ಕೆ ಪೌಷ್ಠಿಕಾಂಶದ ಅಗತ್ಯವಿರುತ್ತದೆ. ಇವುಗಳು ನಿಮ್ಮ ದೇಹದ ಸ್ನಾಯುಗಳು, ಕೀಲುಗಳು ಸೇರಿದಂತೆ ವಿವಿಧ ಅಂಗಾಂಗಳ ಆರೋಗ್ಯ ಸುಧಾರಿಸಲು ಸಹಕರಿಸುತ್ತದೆ.

ಸ್ನಾಯುಗಳ ಮಸಾಜ್​ : ವ್ಯಾಯಾಮದಿಂದ ದೇಹದ ಮೇಲೆ ಒತ್ತಡ ಉಂಟಾಗುತ್ತದೆ. ದೇಹಕ್ಕೆ ಸ್ವಲ್ಪ ವಿಶ್ರಾಂತಿಯ ಅಗತ್ಯ ಕೂಡ ಇರುತ್ತದೆ. ಇಲ್ಲವಾದಲ್ಲಿ ಸ್ನಾಯುವಿನಲ್ಲಿ ನೋವು ಉಂಟಾಗುತ್ತದೆ. ವಿಶ್ರಾಂತಿ ಪಡೆಯುವುದರಿಂದ ನಿಮ್ಮ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ. ವಿಶ್ರಾಂತಿಯ ಜೊತೆಯಲ್ಲಿ ನೀವು ದೇಹಕ್ಕೆ ಮಸಾಜ್​ ಕೊಡುವುದರಿಂದ ವರ್ಕೌಟ್​ನಿಂದ ಆಗುವ ದೇಹದ ನೋವಿನಿಂದ ಪಾರಾಗಬಹುದಾಗಿದೆ.

ವರ್ಕೌಟ್​ ಆದ ಬಳಿಕ ದೇಹದಲ್ಲಿ ಬೆವರು ಇಳಿಯುತ್ತಿರುತ್ತದೆ. ದೇಹವು ಆಯಾಸದಿಂದ ಕೂಡಿರುತ್ತದೆ. ಹೀಗಾಗಿ ವರ್ಕೌಟ್​ ಆಗಿ ಸ್ವಲ್ಪ ಸಮಯದ ಬಳಿಕ ನೀವು ವಿಶ್ರಾಂತಿಯನ್ನು ಪಡೆದು ಇದಾದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು. ಇದರಿಂದ ನೀವು ಫ್ರೆಶ್​ ಅನುಭವ ಪಡೆಯಲಿದ್ದೀರಿ.

Whats_app_banner