ಗರ್ಭಧಾರಣೆಗೆ ಈ 5 ದಿನಗಳು ಉತ್ತಮ: ಆರೋಗ್ಯವಂತ ಮಗುವನ್ನು ಪಡೆಯಲು ಈ ವಿಚಾರವನ್ನು ನೀವು ತಿಳಿದಿರಲೇಬೇಕು
ಕನ್ನಡ ಸುದ್ದಿ  /  ಜೀವನಶೈಲಿ  /  ಗರ್ಭಧಾರಣೆಗೆ ಈ 5 ದಿನಗಳು ಉತ್ತಮ: ಆರೋಗ್ಯವಂತ ಮಗುವನ್ನು ಪಡೆಯಲು ಈ ವಿಚಾರವನ್ನು ನೀವು ತಿಳಿದಿರಲೇಬೇಕು

ಗರ್ಭಧಾರಣೆಗೆ ಈ 5 ದಿನಗಳು ಉತ್ತಮ: ಆರೋಗ್ಯವಂತ ಮಗುವನ್ನು ಪಡೆಯಲು ಈ ವಿಚಾರವನ್ನು ನೀವು ತಿಳಿದಿರಲೇಬೇಕು

ನೀವು ಗರ್ಭಿಣಿಯಾಗಲು ಯೋಜಿಸುತ್ತಿದ್ದರೆ,ಮೊದಲು ಈ ವಿಷಯದಲ್ಲಿ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾಗಿರುವುದು ಮುಖ್ಯ. ಇದರಿಂದ ನೀವು ಯಾವುದೇ ಸವಾಲನ್ನು ಎದುರಿಸಬೇಕಾಗಿಲ್ಲ. ಆರೋಗ್ಯಕರ ಮಗುವನ್ನು ಪಡೆಯಲು ಇಲ್ಲಿ ತಿಳಿಸಿರುವ ಮಾಹಿತಿಯು ನಿಮಗೆ ಬಹಳ ಉಪಯುಕ್ತವಾಗಿರಬಹುದು.

ಆರೋಗ್ಯವಂತ ಮಗುವನ್ನು ಪಡೆಯಲು ಗರ್ಭಿಣಿಯರು ಈ ವಿಚಾರವನ್ನು ತಿಳಿದಿರಲೇಬೇಕು
ಆರೋಗ್ಯವಂತ ಮಗುವನ್ನು ಪಡೆಯಲು ಗರ್ಭಿಣಿಯರು ಈ ವಿಚಾರವನ್ನು ತಿಳಿದಿರಲೇಬೇಕು (PC: Canva)

ಪ್ರತಿಯೊಬ್ಬ ಮಹಿಳೆಗೂ ತಾಯಿಯಾಗುವುದು ಎಂದರೆ ಅದು ಬಹಳ ವಿಶೇಷ ಪ್ರಯಾಣವಾಗಿರುತ್ತದೆ. ಗರ್ಭಧಾರಣೆಯಿಂದ ಮಗುವಿನ ಜನನದವರೆಗೆ ಪ್ರಯಾಣವು ಅಷ್ಟು ಸುಲಭವಲ್ಲ. ಗರ್ಭಧಾರಣೆಯ ಸಮಯದಲ್ಲಿ ಮೂಡ್ ಸ್ವಿಂಗ್, ಬೇಸರ, ವಾಂತಿ ಇತ್ಯಾದಿ ಉಂಟಾಗುವುದು ಸಹಜ. ಈ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರೆ, ಗರ್ಭಧಾರಣೆಯಿಂದ ಮಗುವಿನ ಹೆರಿಗೆಯವರೆಗೆ, ನಿಮ್ಮ ಪ್ರಯಾಣವು ಸುಲಭವಾಗುತ್ತದೆ. ಮಗುವನ್ನು ನಿರೀಕ್ಷಿಸುತ್ತಿರುವ ದಂಪತಿಗಳು ಗರ್ಭಧರಿಸಲು ಉತ್ತಮ ಸಮಯವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಮಹಿಳೆಯ ಋತುಚಕ್ರ ಮತ್ತು ಅಂಡೋತ್ಪತ್ತಿ ಸುತ್ತ ಸುತ್ತುವುದರಿಂದ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುವಲ್ಲಿ ಸಮಯವು ಮಹತ್ವದ ಪಾತ್ರವನ್ನು ವಹಿಸುತ್ತದೆ.

ಗರ್ಭಧಾರಣೆಯ ನಿಖರವಾದ ಸಮಯವನ್ನು ತಿಳಿಯಿರಿ

ನೀವು ನಿರಂತರವಾಗಿ ಗರ್ಭಧರಿಸಲು ಪ್ರಯತ್ನ ಪಡುತ್ತಿದ್ದು, ಅದರಲ್ಲಿ ಯಶಸ್ಸು ಸಿಗುತ್ತಿಲ್ಲವಾದರೆ ಈ ಬಗ್ಗೆ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು. ಒಂದು ಅಧ್ಯಯನದ ಪ್ರಕಾರ, ಶೇ. 78 ರಷ್ಟು ಭಾರತೀಯ ಮಹಿಳೆಯರಿಗೆ ಗರ್ಭಧರಿಸಲು ತಿಂಗಳ ಐದು ಅತ್ಯಂತ ಪರಿಣಾಮಕಾರಿ ದಿನಗಳು ಯಾವುವು ಎಂಬುದು ತಿಳಿದಿಲ್ಲವಂತೆ. ಗರ್ಭಧಾರಣೆಗೆ ಅತ್ಯಂತ ಅನುಕೂಲಕರ ದಿನಗಳನ್ನು ಅಂಡೋತ್ಪತ್ತಿ ಅವಧಿ ಎಂದು ಕರೆಯಲಾಗುತ್ತದೆ. ಅಂಡಾಶಯದಿಂದ ಪ್ರೌಢ ಮೊಟ್ಟೆಯನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಅಂಡೋತ್ಪತ್ತಿ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯು ಪ್ರತಿ ತಿಂಗಳು ನಡೆಯುತ್ತದೆ. ಈ ಸಮಯದಲ್ಲಿ ಮಹಿಳೆ ಗರ್ಭಧರಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಸಾಮಾನ್ಯವಾಗಿ, ಮಹಿಳೆಯರ ಋತುಚಕ್ರದ ಅವಧಿಯು 28 ರಿಂದ 35 ದಿನಗಳವರೆಗೆ ಇರುತ್ತದೆ. ಈ ಚಕ್ರದಲ್ಲಿ ಅಂಡೋತ್ಪತ್ತಿ ಅವಧಿಯಲ್ಲಿ ಕೆಲವು ದಿನಗಳು ಮಾತ್ರ ಬೀಳುತ್ತವೆ. ಸಾಮಾನ್ಯವಾಗಿ, ಮಹಿಳೆಯ ಮುಟ್ಟಿನ ಅವಧಿಯ ಅಂತ್ಯದ ನಂತರ 12 ರಿಂದ 16 ನೇ ದಿನದ ನಡುವಿನ ಸಮಯವನ್ನು ಅಂಡೋತ್ಪತ್ತಿ ಅವಧಿ ಎಂದು ಕರೆಯಲಾಗುತ್ತದೆ. ನೀವು ಗರ್ಭಧರಿಸುವ ಸಾಧ್ಯತೆಯಿರುವ ಈ ಸಂಭಾವ್ಯ ದಿನಗಳನ್ನು ಅಂಡೋತ್ಪತ್ತಿ ಅವಧಿಗಳು ಎಂದು ಕರೆಯಲಾಗುತ್ತದೆ. ಅವಧಿಯಲ್ಲಿ ಅಂಡಾಶಯದಿಂದ ಮೊಟ್ಟೆಯನ್ನು ಬಿಡುಗಡೆ ಮಾಡಿದಾಗ ಅಂಡೋತ್ಪತ್ತಿ ಸಂಭವಿಸುತ್ತದೆ. ಈಗ ಈ ಮೊಟ್ಟೆಯು ವೀರ್ಯದಿಂದ ಫಲವತ್ತಾಗಬಹುದು ಅಥವಾ ಇಲ್ಲದಿರಬಹುದು. ಮೊಟ್ಟೆಯು ಫಲವತ್ತಾದರೆ, ನೀವು ಗರ್ಭಿಣಿಯಾಗುತ್ತೀರಿ. ಇದು ಸಂಭವಿಸದಿದ್ದರೆ, ಮೊಟ್ಟೆ ಒಡೆಯುತ್ತದೆ ಮತ್ತು ಅವಧಿಯಲ್ಲಿ, ಗರ್ಭಾಶಯದ ರಕ್ತಸ್ರಾವವು ಮುಟ್ಟಿನ ಅವಧಿಯ ರಕ್ತದ ರೂಪದಲ್ಲಿ ದೇಹದಿಂದ ಹೊರಬರುತ್ತದೆ.

ಪೋಷಕಾಂಶಗಳ ಪೂರೈಕೆ ಅಗತ್ಯ

ಗರ್ಭಧಾರಣೆಗೆ ಅಂಡೋತ್ಪತ್ತಿ ಅವಧಿಯನ್ನು ತಿಳಿದುಕೊಳ್ಳುವುದು ಸಾಕಾಗುವುದಿಲ್ಲ. ಗರ್ಭಧರಿಸಲು ಪ್ರಯತ್ನಿಸುವ ಮೊದಲು, ಆರೋಗ್ಯಕರ ಭ್ರೂಣವನ್ನು ಕಾಪಾಡಿಕೊಳ್ಳಲು ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಪೂರೈಸುವುದು ಮುಖ್ಯವಾಗಿದೆ. ಈ ಪೋಷಕಾಂಶಗಳಲ್ಲಿ ಮೊದಲನೆಯದು ಫೋಲಿಕ್ ಆಮ್ಲ. ಫೋಲಿಕ್ ಆಮ್ಲವು ಆರಂಭಿಕ ಗರ್ಭಾವಸ್ಥೆಯಲ್ಲಿ ಅತ್ಯಂತ ಪ್ರಮುಖವಾದ ವಿಟಮಿನ್ ಆಗಿದೆ. ಏಕೆಂದರೆ ಇದು ಭ್ರೂಣದಲ್ಲಿ ನರ ಕೊಳವೆಯ ದೋಷಗಳನ್ನು ತಡೆಯಲು ಸಹಾಯ ಮಾಡುತ್ತದೆ. ಫೋಲಿಕ್ ಆಮ್ಲದ ಹೊರತಾಗಿ, ಕಬ್ಬಿಣ ಅಂಶವಿರುವ ಮಾತ್ರೆಗಳು, ದಾಳಿಂಬೆ, ಕಾಳು ಮುಂತಾದ ಕಬ್ಬಿಣದ ಭರಿತ ಆಹಾರಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದು ಅತ್ಯಗತ್ಯ.

ದೇಹದ ಜೀವಕೋಶಗಳಿಗೆ ಆಮ್ಲಜನಕವನ್ನು ಸಾಗಿಸುವ ಹಿಮೋಗ್ಲೋಬಿನ್ ಉತ್ಪಾದನೆಗೆ ಕಬ್ಬಿಣವು ಅವಶ್ಯಕವಾಗಿದೆ. ಗರ್ಭಾವಸ್ಥೆಯಲ್ಲಿ, ಮಹಿಳೆಯ ರಕ್ತದ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹೆಚ್ಚಿನ ಕಬ್ಬಿಣದ ಅಗತ್ಯವಿರುತ್ತದೆ. ಹಾಗೆಯೇ, ವಿಟಮಿನ್ ಡಿ ಅಂಶವು ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮೂಳೆ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮಗುವಿನ ಮೂಳೆಗಳ ಬೆಳವಣಿಗೆಗೆ ಇದು ಮುಖ್ಯವಾಗಿದೆ. ವಿಟಮಿನ್ ಡಿ ಮೂಲಗಳು ಸೂರ್ಯನ ಬೆಳಕು, ಡೈರಿ ಉತ್ಪನ್ನಗಳು ಮತ್ತು ವಿಟಮಿನ್ ಡಿ ಪೂರಕಗಳನ್ನು ಒಳಗೊಂಡಿವೆ. ಇವುಗಳಲ್ಲದೆ ವಿಟಮಿನ್ ಸಿ, ವಿಟಮಿನ್ ಬಿ6, ಅಯೋಡಿನ್ ಮತ್ತು ಒಮೆಗಾ-ತ್ರೀ ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳು ಸಹ ಗರ್ಭಾವಸ್ಥೆಯಲ್ಲಿ ಸಹಾಯಕವಾಗಿವೆ.

ಸರಿಯಾದ ಸಮಯದಲ್ಲಿ ಗುರುತಿಸುವಿಕೆ

ತಾಯಿಯಾಗುವುದು ಕೆಲವರ ಕನಸಾಗಿದ್ದರೆ, ಇನ್ನೂ ಕೆಲವರು ಅಂತಹ ಯಾವುದೇ ಯೋಜನೆ ಹೊಂದಿಲ್ಲದಿದ್ದರೂ ಸಹ ಗರ್ಭಿಣಿಯಾಗುತ್ತಾರೆ. ಈ ಗರ್ಭಧಾರಣೆಯನ್ನು ಯೋಜಿಸಲಾಗಿಲ್ಲವಾದ್ದರಿಂದ, ಹೆಚ್ಚಿನ ಸಂದರ್ಭಗಳಲ್ಲಿ ಗರ್ಭಧಾರಣೆಯು ಮೊದಲ ಕೆಲವು ತಿಂಗಳುಗಳಲ್ಲಿ ತಿಳಿದಿಲ್ಲದಿರಬಹುದು. ಗರ್ಭಾವಸ್ಥೆಯನ್ನು ಗುರುತಿಸುವಲ್ಲಿ ವಿಳಂಬವಾದರೆ ಗರ್ಭಿಣಿ ಮತ್ತು ಗರ್ಭದಲ್ಲಿರುವ ಭ್ರೂಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ತಿಂಗಳ ಅವಧಿಯಲ್ಲಿ ಮುಟ್ಟಾಗದಿದ್ದರೆ ಗರ್ಭಧಾರಣೆಯ ಪರೀಕ್ಷಾ ಕಿಟ್‌ ಮೂಲಕ ಪರೀಕ್ಷಿಸಬಹುದು. ಫಲಿತಾಂಶವು ಸಕಾರಾತ್ಮಕವಾಗಿದ್ದರೆ ವೈದ್ಯಕೀಯ ಸಲಹೆಯನ್ನು ಪಡೆಯಬಹುದು. ಮೂತ್ರದ ಹನಿಗಳನ್ನು ಬಳಸಿಕೊಂಡು ಈ ಪರೀಕ್ಷೆಯನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಇದು ಧನಾತ್ಮಕ ಅಥವಾ ಋಣಾತ್ಮಕ ಫಲಿತಾಂಶಗಳನ್ನು ತಕ್ಷಣವೇ ಬಹಿರಂಗಪಡಿಸುತ್ತದೆ. ಪರೀಕ್ಷೆಯಲ್ಲಿ ಏನೂ ಸ್ಪಷ್ಟವಾಗಿಲ್ಲದಿದ್ದರೆ, ಸ್ವಲ್ಪ ಸಮಯ ಕಾದು ಮತ್ತು ಮತ್ತೊಮ್ಮೆ ಪರೀಕ್ಷಿಸಬಹುದು. 35ನೇ ದಿನಕ್ಕೆ ಅಥವಾ 38ನೇ ಪರೀಕ್ಷಿಸಬಹುದು.

Whats_app_banner