ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆಯೇ; ಅದಕ್ಕೆ ಕಾರಣ ಮತ್ತು ಸುಲಭ ಪರಿಹಾರ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆಯೇ; ಅದಕ್ಕೆ ಕಾರಣ ಮತ್ತು ಸುಲಭ ಪರಿಹಾರ ಇಲ್ಲಿದೆ

ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆಯೇ; ಅದಕ್ಕೆ ಕಾರಣ ಮತ್ತು ಸುಲಭ ಪರಿಹಾರ ಇಲ್ಲಿದೆ

ಮನೆಯಲ್ಲಿ ಮಹಿಳೆಯರು ಹೆಚ್ಚಿನ ಸಮಯ ಕಳೆಯುವುದು ಅಡುಗೆ ಮನೆಯಲ್ಲಿ. ಅದರಲ್ಲೂ ಇಂದಿನ ಆಧುನಿಕ ಕಿಚನ್‌ಗಳಲ್ಲಿ ಕುಳಿತುಕೊಂಡು ಅಡುಗೆ ಮಾಡುವ ವ್ಯವಸ್ಥೆ ಇಲ್ಲ, ಅದರ ಬದಲು ನಿಂತುಕೊಂಡೇ ಅಡುಗೆ ಕೆಲಸ ಮಾಡಬೇಕಾಗುತ್ತದೆ. ಹಾಗೆ ದಿನದ ಹೆಚ್ಚಿನ ಸಮಯ ನಿಂತುಕೊಂಡೇ ಇದ್ದರೆ, ಬೆನ್ನು ನೋವು ಬಾಧಿಸಬಹುದು.

ದಿನದ ಹೆಚ್ಚಿನ ಸಮಯ ನಿಂತುಕೊಂಡೇ ಇದ್ದರೆ, ಬೆನ್ನು ನೋವು ಬಾಧಿಸಬಹುದು..
ದಿನದ ಹೆಚ್ಚಿನ ಸಮಯ ನಿಂತುಕೊಂಡೇ ಇದ್ದರೆ, ಬೆನ್ನು ನೋವು ಬಾಧಿಸಬಹುದು.. (Pixabay)

ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಬೆನ್ನು ನೋವಿನಿಂದ ಬಳಲುವುದು ಸರ್ವೇಸಾಮಾನ್ಯ. ಇದರ ಮಧ್ಯೆ ಧೀರ್ಘಕಾಲ ನಿಂತು ಅಡುಗೆ ಮಾಡುವುದು, ಪಾತ್ರೆ ತೊಳೆಯುವುದನ್ನು ಮಾಡುತ್ತಿದ್ದರೆ ನೋವು ಹಿಮ್ಮಡಿಯಾಗುತ್ತದೆ. ಬೆನ್ನು ನೋವಿನಿಂದಾಗಿ ಸೊಂಟನೋವು ಉಂಟಾಗುತ್ತದೆ. ಈ ನೋವನ್ನು ಶಮನಗೊಳಿಸಲು ನಿಮ್ಮ ದೇಹದ ಭಂಗಿಯೇ ಸಹಾಯ ಮಾಡುತ್ತದೆ ಎಂದರೆ ನೀವು ನಂಬುತ್ತೀರಾ? ಸರಿಯಾಗಿ ನಿಂತು ಅಡುಗೆ ಮನೆ ಕೆಲಸಗಳನ್ನು ಮಾಡಿದರೆ ಬೆನ್ನು ನೋವು ಹೇಗೆ ಮಾಯವಾಗುತ್ತದೆ ಎಂಬುದರ ಕುರಿತು ಇಲ್ಲಿ ಮಾಹಿತಿಯಿದೆ.

ಅಡುಗೆಮನೆ ಕೆಲಸದಿಂದ ಬೆನ್ನು ನೋವು ಉಂಟಾಗುತ್ತದೆ: ಅನೇಕ ಮಹಿಳೆಯರು ಧೀರ್ಘಕಾಲದವರೆಗೆ ನಿಂತುಕೊಂಡೆ ಅಡುಗೆ ಮನೆಯ ಕೆಲಸಗಳನ್ನು ಮಾಡುವುದರಿಂದಲೇ ಈ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ಸರಿಯಾದ ಭಂಗಿಯಲ್ಲಿ ನಿಂತು ಕೆಲಸ ಮಾಡದಿರುವುದು. ಚಪಾತಿ ಮಾಡುವಾಗ, ಪಾತ್ರೆ ತೊಳೆಯುವಾಗ ಹೆಚ್ಚು ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಏಕೆಂದರೆ, ಈ ಸಮಯದಲ್ಲಿ ನಿಮ್ಮ ಗಮನ ಕೆಲಸದ ಮೇಲೆ ಇರುತ್ತದೆಯೇ ಹೊರತು, ನೀವು ನಿಂತಿರುವ ಭಂಗಿಯ ಮೇಲಲ್ಲ. ಇದರಿಂದ ನಿಮ್ಮ ಸೊಂಟದ ಸ್ನಾಯುಗಳು ಬಿಗಿಗೊಂಡು ನೋವನ್ನು ಹೆಚ್ಚು ಮಾಡುತ್ತದೆ.

ಈ ಭಂಗಿಯಲ್ಲಿ ನಿಂತು ಪಾತ್ರೆ ತೊಳೆದರೆ ಬೆನ್ನು ನೋವು ಶಮನ: ಪಾತ್ರೆ ತೊಳೆಯುವಾಗ ಬೆನ್ನು ನೋವಿನಿಂದ ನರಳುತ್ತಿದ್ದರೆ ಏನು ಮಾಡಬೇಕು ಎಂದು ಕೆಲ ಸಲಹೆಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಈ ವಿಶೇಷ ಭಂಗಿಯಲ್ಲಿ ನಿಂತು ಪಾತ್ರೆ ತೊಳೆಯುವುದು ಅಥವಾ ಧೀರ್ಘ ಕಾಲದವರೆಗೆ ನಿಂತು ಅಡುಗೆ ಮಾಡಿದರೆ ಬೆನ್ನು ನೋವು ಮತ್ತು ಗರ್ಭಕಂಠಕದ ನೋವು ಬರುವುದಿಲ್ಲ ಎಂದು ಯೋಗ ತರಬೇತುದಾರರಾದ ರಿತು ರುಂಗ್ತಾ ಅವರು ಈ ಕೆಳಗೆ ತಿಳಿಸಿದ್ದಾರೆ. ಅವು ಯಾವುವೆಂದರೆ,

ಬೆನ್ನು ನೋವು ಇದ್ದರೆ ಹೀಗೆ ಮಾಡಿ: ಅಡುಗೆ ಮನೆಗೆಲಸ ಮಾಡುವಾಗ ನಿಮ್ಮ ಪಾದಗಳನ್ನು ಜೋಡಿಸಿ ನಿಲ್ಲುವ ಬದಲು, ನಿಮ್ಮ ಭುಜಕ್ಕೆ ಸಮಾನಂತರವಾಗಿ ಅಗಲಿಸಿ ಇಟ್ಟರೆ ಸೊಂಟ ನೋವು ಕಾಣಿಸುವುದಿಲ್ಲ. ಇದರಿಂದ ಬೆನ್ನು ನೋವು ಬರುವುದಿಲ್ಲ.

ಗರ್ಭಕಂಟದ ನೋವು ಇದ್ದರೆ: ಅನೇಕ ಬಾರಿ ನಿಮ್ಮ ಕಾಲುಗಳನ್ನು ಜೋಡಿಸಿ ನಿಲ್ಲುವುದರಿಂದ ನಿಮ್ಮ ಭುಜವು ಬಾಗುತ್ತದೆ. ಇದರಿಂದ ಬೆನ್ನು ನೋವಿನೊಂದಿಗೆ ಗರ್ಭಕಂಠಕದ ನೋವು ಹೆಚ್ಚಾಗುತ್ತದೆ. ಆದ್ದರಿಂದ, ನೇರವಾಗಿ ನಿಂತು ನಿಮ್ಮ ಪಾದದ ಬಳಿ ಸ್ಟೂಲ್ ಅನ್ನು ಇರಿಸಿ. ನಿಮಗೆ ಅನುಕೂಲವಾಗುವ ಹಾಗೇ ಎಡ ಅಥವಾ ಬಲ ಕಾಲನ್ನು ಬಗ್ಗಿಸಿ ಮೊಣಕಾಲನ್ನು ಸ್ಟೂಲ್ ಮೇಲೆ ಇರಿಸಿ. ಹೀಗೆ ಮಾಡುತ್ತ ಬಂದಲ್ಲಿ ಭಂಗಿ ಬದಲಾವಣೆಯೊಂದಿಗೆ ಗರ್ಭಕಂಠದ ನೋವು ಶಮನವಾಗುತ್ತದೆ.

ಸ್ಲಿಪ್ ಡಿಸ್ಕ್ ಸಮಸ್ಯೆ: ಸಾಮಾನ್ಯವಾಗಿ ಡಿಸ್ಕ್ ಸ್ಲಿಪ್ ಸಮಸ್ಯೆಯು ವಯಸ್ಕರಲ್ಲಿ ಕಾಣಿಸುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರಲ್ಲು ಇದು ಸಾಮಾನ್ಯವಾಗಿದೆ. ಸ್ಲಿಪ್ ಡಿಸ್ಕ್ ಎಂದರೆ, ಬೆನ್ನು ಮೂಳೆಯ ಡಿಸ್ಕ್‌ಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ದುರ್ಬಲಗೊಳಿಸುವ ನೋವು ಮತ್ತು ಅಸ್ವಸ್ಥತೆಗೆ ಕಾರಣವಾಗುತ್ತದೆ.

ಈ ನೋವು ಕಡಿಮೆಯಾಗಲು, ಅಡುಗೆ ಮನೆಯಲ್ಲಿ ಯಾವಾಗಲು ಒಂದು ಸ್ಟೂಲ್ ಅನ್ನು ಇರಿಸಿ. ನೀವು ಅಡುಗೆ ಮಾಡುವಾಗ, ಅಥವಾ ಪಾತ್ರೆ ತೊಳೆಯುವಾಗ ನಿಮ್ಮ ಒಂದು ಪಾದವನ್ನು ಸ್ಟೂಲ್ ಮೇಲೆ ಮತ್ತು ಇನ್ನೊಂದು ಪಾದವನ್ನು ನೆಲದ ಮೇಲೆ ಇರಿಸಿ. ಇದರಿಂದ ಬೆನ್ನು ನೋವು ಮತ್ತು ಸ್ಲಿಪ್ ಡಿಸ್ಕ್‌ನಂತಹ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in