ಉದ್ಯೋಗಸ್ಥ ಮಹಿಳೆಯರಿಗಾಗಿ ತಂತ್ರಜ್ಞಾನ: ಬದುಕು ಮತ್ತು ಕೆಲಸದ ನಡುವೆ ಸಮತೋಲನ ಸಾಧಿಸಲು ಇಲ್ಲಿವೆ ಸುಲಭ ಸಲಹೆ
ಇಂದು ಮಹಿಳೆ ಸಮಾಜದ ಎಲ್ಲ ಸ್ಥರಗಳಲ್ಲೂ ಪುರುಷ ಸಮಾನ ಕೆಲಸಗಳನ್ನು ಮಾಡುತ್ತಾಳೆ. ಅಲ್ಲದೆ, ಮನೆ, ಕುಟುಂಬದ ಜತೆಗೆ ಕೆಲಸವನ್ನು ಕೂಡ ಅಚ್ಚಕಟ್ಟಾಗಿ ನಿಭಾಯಿಸುತ್ತಾಳೆ. ಅಂತಹ ಸಂದರ್ಭದಲ್ಲಿ ತಂತ್ರಜ್ಞಾನದ ಅಗತ್ಯ ಬಳಕೆಯಿಂದ ಕೆಲಸ ಮತ್ತು ಕುಟುಂಬದ ನಡುವೆ ಸಮತೋಲನ ಸಾಧಿಸಲು ಇಲ್ಲಿದೆ ಸಲಹೆ.

ಇಂದಿನ ದಿನಗಳಲ್ಲಿ ಹೊರಗೆ ಹೋಗಿ ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಆಕೆ ಮನೆಯ ಚಟುವಟಿಕೆಗಳಿಗೂ ಹೊಣೆ, ಆಫೀಸ್ ಪ್ರಾಜೆಕ್ಟ್‌ಗಳಿಗೂ ಜವಾಬ್ದಾರಿ ವಹಿಸಿಕೊಳ್ಳುತ್ತಾಳೆ. ಈ ಎರಡನ್ನೂ ಸಮತೋಲನದಿಂದ ನಿರ್ವಹಿಸುವುದು ತುಂಬಾ ಕಷ್ಟದ ಕೆಲಸ. ಆದರೆ ತಂತ್ರಜ್ಞಾನ ಎಂಬುದು ಇಂದು ಅವಳ ನಿತ್ಯದ ಸಹಾಯಕವಾಗಬಲ್ಲದು. ಸಮಯ ಉಳಿಸಲು, ಆಯೋಜನೆ ಮಾಡಿಸಲು, ಆರೋಗ್ಯ ಕಾಪಾಡಲು, ಮಕ್ಕಳ ಕಲಿಕೆಗೆ ಸಹಾಯ ಮಾಡಲು, ಹಾಗು ತಾಳ್ಮೆಯಿಂದ ಬದುಕು ಸಾಗಿಸಲು ಸಹಾಯಕವಾಗುವ ಹಲವು ಆ್ಯಪ್‌ಗಳು ಮತ್ತು ಉಪಕರಣಗಳು ಇವೆ.
ಉಪಯುಕ್ತ ತಂತ್ರಜ್ಞಾನ ಉಪಕರಣಗಳು ಮತ್ತು ಆ್ಯಪ್‌ಗಳು
ಸಮಯ ನಿರ್ವಹಣೆಗಾಗಿ – Google Calendar / Notion / Todoist
ದಿನದ ಟಾಸ್ಕ್‌ಗಳನ್ನು ಪ್ಲಾನ್ ಮಾಡುವುದು ಬಹಳ ಸುಲಭ. ರಿಮೈಂಡರ್‌ಗಳು, ಮೀಟಿಂಗ್‌ಗಳು, ಮಕ್ಕಳ ಶಾಲಾ ಕಾರ್ಯಕ್ರಮಗಳು ಎಲ್ಲವನ್ನೂ ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಎಲ್ಲಾ ಕೆಲಸಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟವಾದ್ದರಿಂದ ಇದನ್ನು ಅನುಸರಿಸಬಹುದು.
ಮನೆ ಕೆಲಸದ ವ್ಯವಸ್ಥೆ – Tody / OurHome
ಮನೆಯ ವ್ಯವಹಾರಗಳನ್ನು ಕುಟುಂಬ ಸದಸ್ಯರ ಜೊತೆ ಹಂಚಿಕೊಳ್ಳಬಹುದು. ಅವರಿಗೆ ಕೆಲಸಗಳನ್ನು ನೆನಪಿಸಬಹುದು. ಅಂದರೆ ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸಿ, ಬಿಲ್ ಪಾವತಿಸಿ, ಇತ್ಯಾದಿ.
ಆಹಾರ ತಯಾರಿ ಮತ್ತು ಪ್ಲಾನಿಂಗ್ – BigBasket, Swiggy Instamart
ಬೆಂಗಳೂರಿನಂತಹ ನಗರಗಳಲ್ಲಿ ತುರ್ತು ದಿನಸಿ ಸಾಮಗ್ರಿಗಳು ನಿಮಿಷಗಳಲ್ಲಿ ಮನೆ ಬಾಗಿಲಿಗೆ ಬರುತ್ತವೆ. ಮಾರುಕಟ್ಟೆಗೆ ಹೋಗಿ ಬರುವಷ್ಟು ಸಮಯವಿಲ್ಲದಿದ್ದಾಗ ಈ ಆಯ್ಕೆಗಳನ್ನು ಆರಿಸಿಕೊಳ್ಳಬಹುದು ಮತ್ತು ಸಮಯ ಉಳಿಸಬಹುದು.
ಆರೋಗ್ಯ ಮತ್ತು ಮನಶಾಂತಿ – Fittr, HealthifyMe, Calm, Headspace
ದಿನದ 10 ನಿಮಿಷ ಧ್ಯಾನದಿಂದ ಒತ್ತಡವನ್ನು ಕಡಿಮೆ ಮಾಡಬಹುದು. ಆತಂಕವನ್ನು ಕಡಿಮೆ ಮಾಡಬಹುದು. ದಿನ ಪೂರ್ತಿ ಸಕ್ರಿಯವಾಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದು. ಡಯಟ್ ಪ್ಲಾನ್, ಫಿಟ್ನೆಸ್ ಟಿಪ್ಸ್, ಧ್ಯಾನಕ್ಕೆ ಸಂಬಂಧಿಸಿದ ಮಾರ್ಗದರ್ಶಿಗಾಗಿ ಈ ಅಪ್ಲಿಕೇಶನ್ ಬಳಸಬಹುದು.
ಮಕ್ಕಳ ಕಲಿಕೆ ಮತ್ತು ಮನರಂಜನೆ – YouTube Kids, Kutuki, BYJU’S, Voot Kids
ಮಕ್ಕಳಿಗೆ ಶಿಕ್ಷಣ ಮತ್ತು ಮನರಂಜನೆಗೆ ಇವುಗಳನ್ನು ಬಳಸಬಹುದು. ಸುರಕ್ಷಿತ ಮತ್ತು ವಯಸ್ಸಿಗೆ ತಕ್ಕ ವಿಷಯವನ್ನು ಮಾತ್ರ ಆರಿಸಬಹುದು. ಮಕ್ಕಳ ಗಮನ ಬೇರೆಡೆಗೆ ಹೋಗದಂತೆ ತಡೆಯಬಹುದು.
ಹಣದ ವ್ಯವಸ್ಥೆ – Walnut, Goodbudget, Google Pay
ಖರ್ಚುಗಳನ್ನು ಟ್ರ್ಯಾಕ್ ಮಾಡಬಹುದು, ಬಜೆಟ್ ಯೋಜಿಸಬಹುದು, ಬಿಲ್ ಪಾವತಿಸಬಹುದು ಹೀಗೆ ಒಂದೇ ಸ್ಥಳದಲ್ಲಿ ಖರ್ಚು ವೆಚ್ಚಗಳ ಬಗ್ಗೆ ನಿಗಾವಹಿಸಬಹುದು.
ಸಣ್ಣ ಟಿಪ್ಸ್:
ಡಿಜಿಟಲ್ ಟೂಲ್‌ಗಳ ಸಹಾಯದಿಂದ ದಿನದ ವೇಳಾಪಟ್ಟಿಯನ್ನು ಮುಂಚಿತವಾಗಿ ರೂಪಿಸಿ.
Do Not Disturb ಮೋಡ್ ಉಪಯೋಗಿಸಿ ಅನಗತ್ಯ ಸಮಯ ಹಾಳಾಗುವುದನ್ನು ತಪ್ಪಿಸಬಹುದು.
ಮಕ್ಕಳೊಡನೆ ಗುಣಮಟ್ಟದ ಸಮಯಕ್ಕಾಗಿ ವೆಲ್ ನೆಸ್ ಆ್ಯಪ್‌ಗಳನ್ನು ಸೇರಿಸಬಹುದು.
ಹೊರಗೆ ಹೋಗಿ ದುಡಿಯುವ ಮಹಿಳೆಯ ಜೀವನವು ಮನೆ ಕೆಲಸ ಎಂದು ಯಾವಾಗಲೂ ಚಲನೆಯಲ್ಲಿರುತ್ತದೆ. ಆದರೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಜೀವನವನ್ನು ಇನ್ನಷ್ಟು ಸುಲಭಗೊಳಿಸಬಹುದು. ದೊಡ್ಡ ಸವಾಲುಗಳಿಗೆ ಸ್ಮಾರ್ಟ್ ಪರಿಹಾರಗಳನ್ನು ಹುಡುಕಿದಾಗ, ನವೀನ ತಲೆಮಾರಿನ ಮಹಿಳೆ ಧೈರ್ಯದಿಂದ ತನ್ನ ಜೀವಿತವನ್ನು ರೂಪಿಸಬಹುದು. ಬದುಕು ಮತ್ತು ಉದ್ಯೋಗದ ನಡುವೆ ಸಮತೋಲನ ಸಾಧಿಸುವುದು ಸ್ವಲ್ಪ ಕಷ್ಟವೇ ಆದರೆ ಸರಿಯಾದ ಉಪಕರಣಗಳಿದ್ದರೆ ಅದು ಕೂಡ ಸಾಧ್ಯ!