Propose Day 2025: ಮದುವೆ ಪ್ರಸ್ತಾಪ ನಿಮಗೆ ಇಷ್ಟವಿಲ್ಲದಿದ್ದರೆ, ಬೇಡ ಎನ್ನಲು ಇಲ್ಲಿವೆ ಹಲವು ದಾರಿಗಳು..
ಪ್ರೇಮಿಗಳ ದಿನಕ್ಕೆ ಕೆಲವೇ ದಿನಗಳು ಬಾಕಿ ಇದೆ. ನಿಮಗೂ ಯಾರಾದರೂ ಮದುವೆ ಪ್ರಸ್ತಾಪ ಇಟ್ಟಿರಬಹುದು, ಅಥವಾ ಪ್ರೀತಿಸೋಣ ಎಂದು ಪೀಡಿಸುತ್ತಿರಬಹುದು. ಹಾಗಿರುವಾಗ ನೀವು ಅವರ ಮದುವೆಯ ಪ್ರಪೋಸಲ್‌ಗೆ ನೋ ಎಂದು ಹೇಳಲು ಹೆದರುತ್ತಿದ್ದರೆ, ಪ್ರಪೋಸಲ್ ಅನ್ನು ಎದುರಿರುವವರಿಗೆ ಮುಜುಗರಗೊಳಿಸದೆ ತಿರಸ್ಕರಿಸಲು ನೀವು ಇಲ್ಲಿ ಹೇಳಿರುವ ಸೃಜನಾತ್ಮಕ ಐಡಿಯಾ ಬಳಸಬಹುದು.

ಫೆಬ್ರವರಿಯ ಮೊದಲ ಎರಡು ವಾರಗಳು ಎಂದರೆ, ಪ್ರೇಮಿಗಳಿಗೆ ಹಬ್ಬವೇ ಸರಿ. ಅದರಲ್ಲೂ ವ್ಯಾಲೆಂಟೈನ್ಸ್ ವೀಕ್ ಹೆಸರಿನಲ್ಲಿ ವಿವಿಧ ರೀತಿಯ ಆಚರಣೆಗೆ, ಸಂಭ್ರಮಕ್ಕೆ ಒಂದು ಕಾರಣವೂ ಇರುತ್ತದೆ. ಆದರೆ, ಎಲ್ಲರಿಗೂ ವ್ಯಾಲೆಂಟೈನ್ಸ್ ಡೇ, ವ್ಯಾಲೆಂಟೈನ್ಸ್ ವೀಕ್ ಆಚರಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಅವರು ಹೇಗೆ ಇದರಿಂದ ತಪ್ಪಿಸಿಕೊಳ್ಳುವುದು ಮತ್ತು ಲವ್ ಪ್ರಪೋಸಲ್‌ಗೆ ಬೇಡ ಎನ್ನುವುದು ಹೇಗೆ ಎಂದು ಯೋಚಿಸುತ್ತಿರುತ್ತಾರೆ. ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಪ್ರಪೋಸಲ್ ಡೇ ದಿನದಂದು ಅನೇಕ ಪ್ರಪೋಸಲ್‌ಗಳನ್ನು ಸ್ವೀಕರಿಸುವುದು ತುಂಬಾ ಒಳ್ಳೆಯದು ಎಂದು ಅನೇಕ ಜನರು ಭಾವಿಸಬಹುದು. ಆದಾಗ್ಯೂ, ಮದುವೆಯಾಗಲು ಅಥವಾ ಯಾರನ್ನಾದರೂ ಡೇಟ್ ಮಾಡಲು ಸಿದ್ಧರಿಲ್ಲದ ಜನರನ್ನು ಕೇಳಿದರೆ ನಮಗೆ ತಿಳಿಯುತ್ತದೆ ಅವರು ಯಾರನ್ನಾದರೂ ತಿರಸ್ಕರಿಸುವುದು ಯಾವಾಗಲೂ ಕಷ್ಟ ಎಂದು ಹೇಳುತ್ತಾರೆ. ಪ್ರೀತಿಗೆ, ಪ್ರಪೋಸಲ್‌ಗೆ ಹೇಗೆ ಬೇಡ ಎನ್ನುವುದು ಎಂಬ ಬಗ್ಗೆ ಅವರು ಒಂದೆಡೆ ಚಿಂತೆಯಲ್ಲಿದ್ದರೆ, ಇನ್ನೊಂದೆಡೆ ಗೊಂದಲಕ್ಕೊಳಗಾಗಿರುತ್ತಾರೆ.
ನಿಮಗೆ ಬಂದಿರುವ ಪ್ರೇಮದ ಪ್ರಪೋಸಲ್ ಅಥವಾ ಮದುವೆ ಪ್ರಸ್ತಾಪ ಇಷ್ಟವಿಲ್ಲದಿದ್ದರೆ, ನೀವು ನೋ ಹೇಳಬಹುದು. ಹಾಗೆ ಬೇಡ ಎಂದು ಹೇಳುವುದು ತಪ್ಪಲ್ಲ. ಅದು ನಿಮ್ಮ ನಿರ್ಧಾರ, ನಿಮ್ಮ ಅಭಿಪ್ರಾಯವೂ ಆಗಿರುತ್ತದೆ. ಹಾಗಿರುವಾಗ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಲು ಕೆಲವು ಆಕರ್ಷಕ ಮಾರ್ಗಗಳನ್ನು ಇಲ್ಲಿ ಸೂಚಿಸಲಾಗಿದೆ. ನೀವೂ ಟ್ರೈ ಮಾಡಬಹುದು.
ನಿಮ್ಮ ಅರ್ಹತೆಗೆ ತಕ್ಕ ವ್ಯಕ್ತಿ ನಾನಲ್ಲ.
ನಿಮ್ಮ ಅರ್ಹತೆಗೆ ತಕ್ಕ ವ್ಯಕ್ತಿ ನಾನಲ್ಲ, ನೀವು ನನಗಿಂತ ಉತ್ತಮರಿಗೆ ಅರ್ಹರು ಎಂದು ಅವರಿಗೆ ಹೇಳಿ. ಈ ರೀತಿಯಾಗಿ ನೀವು ಯಾರನ್ನಾದರೂ ನೇರವಾಗಿ ತಿರಸ್ಕರಿಸುವುದರಿಂದ ಬರುವ ಅಪರಾಧ ಪ್ರಜ್ಞೆಯನ್ನು ಅನುಭವಿಸಬೇಕಾಗಿಲ್ಲ. ಇದಲ್ಲದೆ, ಅವರು ಇಡೀ ವಿಷಯದ ಬಗ್ಗೆ ಕಡಿಮೆ ಕೆಟ್ಟದಾಗಿ ಭಾವಿಸುವ ಸಾಧ್ಯತೆಯಿದೆ. ನೇರವಾಗಿ ಹೇಳಿದರೆ, ಅಲ್ಲಿಗೆ ವಿಷಯವೂ ಸ್ಪಷ್ಟವಾಗುತ್ತದೆ.
ನಾನು ನನ್ನ ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿರಲು ಬಯಸುತ್ತೇನೆ
ಮದುವೆಗೆ ನೋ ಹೇಳಲು ಇದೂ ಕೂಡ ಒಂದು ದಾರಿ, ನೀವು ಅವರ ವಿವಾಹ ಪ್ರಸ್ತಾಪವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಯಾರಿಗಾದರೂ ಹೇಳುವ ಬದಲು, ನೀವು ನಿಮ್ಮ ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿರಲು ಬಯಸುತ್ತೀರಿ ಎಂದು ಅವರಿಗೆ ಹೇಳಬಹುದು. ಇದನ್ನು ಕೇಳಿದ ನಂತರ ಅವರಿಗೆ ಆಶ್ಚರ್ಯ ಉಂಟಾಗಬಹುದು, ಆದರೆ ಅದು ನಿಮ್ಮ ನಿರ್ಧಾರವಾಗಿರುತ್ತದೆ.
ನನಗೆ ಕೆಲವು ವಿಚಿತ್ರವಾದ ಆಸೆಗಳಿವೆ
ಹೀಗೆ ಹೇಳುವ ಮೂಲಕವೂ ನೀವು ಮದುವೆ ಪ್ರಸ್ತಾಪ ನಿರಾಕರಿಸಬಹುದು. ಇಷ್ಟವಿಲ್ಲದ ಮದುವೆಗೆ ಒಪ್ಪುವ ಬದಲು, ನಿಮ್ಮಿಷ್ಟದ ಬದುಕು ಬಾಳಬಹುದು. ನಿಮಗೆ ಕೆಲವು ವಿಚಿತ್ರವಾದ ಲೈಂಗಿಕ ಆಸೆಗಳಿವೆ ಎಂದು ಹೇಳುವ ಮೂಲಕ ನೀವು ಎದುರುಗಡೆ ಇರುವ ವ್ಯಕ್ತಿಗೆ ನೋ ಎಂದು ಹೇಳಲು ಪ್ರಯತ್ನಿಸಬಹುದು. ಇದನ್ನು ಕೇಳಿದ ನಂತರ ಅವರು ಬೆರಗಾಗಬಹುದು. ಆದರೆ ಅವರು ಅದಕ್ಕಾಗಿ ಬೇರೆ ಆಯ್ಕೆಗಳನ್ನು ಹುಡುಕಲು ಸಿದ್ಧರಿದ್ದಾರೆ ಎಂದು ಹೇಳಲು ಪ್ರಯತ್ನಿಸಿದರೂ, ನೀವು ಅದರ ಬಗ್ಗೆ ಸ್ವಲ್ಪ ಹೆಚ್ಚು ಉದಾಸೀನರಾಗಿ ಅವರಿಗೆ ಅದು ಸಾಧ್ಯವಾಗುವುದಿಲ್ಲ ಎಂದು ಹೇಳಬಹುದು. ಈ ಮೂಲಕ ನಯವಾಗಿ ಅವರ ಪ್ರಸ್ತಾಪ ತಿರಸ್ಕರಿಸಬಹುದು.
ನಿಮಗೆ ನಾನು ಸೂಕ್ತ ಜೋಡಿಯಲ್ಲ
ಯಾರಿಗಾದರೂ ಲವ್ ಪ್ರಪೋಸಲ್ ವಿಚಾರದಲ್ಲಿ ಇಲ್ಲ ಎಂದು ಹೇಳಲು ನೀವು ತುಂಬಾ ಮುಜುಗರಕ್ಕೊಳಗಾಗಿದ್ದರೆ, ಅವರಿಗೆ ನೀವು ಹೊಂದಾಣಿಕೆಯಾಗುವುದಿಲ್ಲ ಎಂದು ಎದುರಿಗೆ ಇರುವ ವ್ಯಕ್ತಿಗೆ ನಯವಾಗಿ ಮತ್ತು ಮೃದುವಾಗಿ ಹೇಳಬಹುದು. ಆದಾಗ್ಯೂ, ನಿಮ್ಮ ಅಭಿಪ್ರಾಯದಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಹೆಚ್ಚು ಹೊಂದಿಕೊಳ್ಳುವ ಯಾರನ್ನಾದರೂ ನೀವು ತಿಳಿದಿದ್ದರೂ, ಎರಡನೇ ಆಯ್ಕೆಯನ್ನು ಪರಿಗಣಿಸಲು ಅವರ ಮೇಲೆ ಒತ್ತಾಯ ಹೇರಬೇಡಿ, ಅದು ಅವರಿಗೆ ನೋವುಂಟು ಮಾಡಬಹುದು. ಅದರ ಬದಲು, ನಿಮಗೆ ಇಷ್ಟವಿಲ್ಲ ಎಂದು ಹೀಗೆ ತಿಳಿಸಿಬಿಡಿ.
ನನಗೆ ನನ್ನ ಹೆತ್ತವರು ಮುಖ್ಯ
ಹೌದು! ಮದುವೆಗೆ ನೋ ಹೇಳಲು ಇದೂ ಒಂದು ಮಾರ್ಗ. ಇದು ವಿಚಿತ್ರವಾಗಿದೆ ನಿಜ, ಆದರೆ ಮದುವೆಯ ಪ್ರಸ್ತಾಪಕ್ಕೆ ಇಲ್ಲ ಎಂದು ಹೇಳುವ ಸೃಜನಶೀಲ ಮಾರ್ಗವೆಂದರೆ ನೀವು ನಿಮ್ಮ ಹೆತ್ತವರ ಮನೆಯನ್ನು ಎಂದಿಗೂ ಬಿಡಲು ಸಾಧ್ಯವಿಲ್ಲ ಮತ್ತು ಅವರನ್ನು ನೋಡಿಕೊಳ್ಳಲು ಅವರೊಂದಿಗೆ ಇರಲು ಬಯಸುತ್ತೀರಿ ಎಂದು ನೇರವಾಗಿ ಹೇಳುವುದು. ಇದು ಖಂಡಿತವಾಗಿಯೂ ನಿಮ್ಮ ಎದುರಿನ ವ್ಯಕ್ತಿ, ಅವರ ನಿರ್ಧಾರ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಹೀಗಾಗಿ, ಯಾವುದೇ ಪ್ರಸ್ತಾಪವಾದರೂ ಸರಿ, ಇಷ್ಟವಿಲ್ಲದಿದ್ದರೆ, ನೇರವಾಗಿ ಕೂಡಲೇ ಹೇಳಿಬಿಡಿ, ಅವರನ್ನು ಕಾಯಿಸಬೇಡಿ..
